ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, August 4, 2022

ವಿದ್ಯುತ್ ಎಂಬ ಮಹದುಪಕಾರಿ ಯಾಮಾರಿದರೆ ಬಲು ಅಪಾಯಕಾರಿ !

ವಿದ್ಯುತ್ ಎಂಬ ಮಹದುಪಕಾರಿ ಯಾಮಾರಿದರೆ ಬಲು ಅಪಾಯಕಾರಿ !

ಲೇಖನ: ರೋಹಿತ್ ವಿ ಸಾಗರ್ 

ಪ್ರಾಂಶುಪಾಲರು,

ಹೊಂಗಿರಣ ಸ್ವತಂತ್ರ ಪದವಿಪೂರ್ವ ಕಾಲೇಜು

ಸಾಗರ

ಇಂದು ವಿದ್ಯುತ್‌ಅನ್ನು ಅವಲಂಬಿಸದೇ ನಮ್ಮ ಜೀವನವೇ ಸಾಗುವುದಿಲ್ಲ ಎಂಬ ಸ್ಥಿತಿಗೆ ನಾವು ತಲುಪಿದ್ದೇವೆ. ವಿದ್ಯುತ್ನ ಉಪಯುಕ್ತತೆ ಮತ್ತು ಅಪಾಯಗಳ ಬಗ್ಗೆ ಸೂಕ್ತ ಮಾಹಿತಿ ನೀಡುವ ಈ ಲೇಖನವನ್ನು ಬರೆದವರು ʼಸವಿಜ್ಞಾನʼ ತಂಡದ ಶಿಕ್ಷಕ ರೋಹಿತ್‌ ಸಾಗರ್‌ ಅವರು.

ಕರೆಂಟ್ ಅಥವಾ ವಿದ್ಯುತ್ ಎಂಬ ಶಬ್ದ ಯಾರಿಗೆ ತಾನೆ ಗೊತ್ತಿಲ್ಲ? ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ತರಹೇವಾರಿ ವಿಧಗಳಲ್ಲಿ ನಾವು ಅವಲಂಬಿಸಿರುವ, ಅದಿಲ್ಲದ ಜೀವನವನ್ನು ಊಹಿಸಲೂ ಹೆದರಬೇಕಾಗಿರುವಂತಹ ಅಪೂರ್ವ ಶಕ್ತಿಯ ಆಕರವೇ ಈ ‘ವಿದ್ಯುತ್’ ಅಥವಾ ‘ಕರೆಂಟ್’.    ಹಗಲು ರಾತ್ರಿಗಳೆನ್ನದೆ ಸೂರ್ಯ, ಚಂದ್ರರನ್ನೂ ನಾಚಿಸುವ ಬೆಳಕಿನ ದೀಪಗಳು, ಬೆಳಗ್ಗೆ ಎದ್ದಕೂಡಲೇ “ಸುಪ್ರಭಾತ” ಹಾಡುವ ರೇಡಿಯೋ, ಎಫ್.ಎಮ್ ಕೇಂದ್ರಗಳು, ಮುಂದೆ ಕುಳಿತವರ ಕಾಲವನ್ನೇ ಕರಗಿಸಬಲ್ಲ ‘ಮೂರ್ಖರ ಪೆಟ್ಟಿಗೆ ಎಂದೇ ಖ್ಯಾತಿ ಪಡೆದ ಟಿ.ವಿ.ಗಳು, ಜಾಣರ ಪೆಟ್ಟಿಗೆಯಂತಿರುವ ನಮ್ಮ ಕಂಪ್ಯೂಟರ್‌ಗಳು, ಇವೆಲ್ಲವೂ ಕೆಲಸ ಮಾಡಬೇಕಾದರೆ ಮತ್ತು ತಯಾರಾಗಬೇಕಾದರೆ ಈ ಕರೆಂಟು ಬೇಕೇ ಬೇಕು. ಬರೀ ಉಪಯೋಗ ಮಾತ್ರ ಅಲ್ಲ ಮಳೆಗಾಲದ ಮೊದಲಿನಲ್ಲಿ ದಿನವೂ ಪತ್ರಿಕೆಗಳಲ್ಲಿ ಓದುತ್ತೇವಲ್ಲ “ಗಾಳಿಗೆ ಬಿದ್ದ ವಿದ್ಯುತ್ ಕಂಬ, ವ್ಯಕ್ತಿಗೆ ವಿದ್ಯುತ್ ಸ್ಪರ್ಶ,  ಕೆಳಕ್ಕೆ ಬಿದ್ದ ವಿದ್ಯುತ್‌ತಂತಿ ತುಳಿದು ವ್ಯಕ್ತಿ ಸಾವು” ಎಂದೆಲಾ.್ಲ ಇದು ವಿದ್ಯುತ್ತಿನ ಇನ್ನೊಂದು ರೂಪ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ವಿದ್ಯುತ್ತಿನ ಬಗ್ಗೆ ತಿಳಿದು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಸಾಕಿದ ನಾಯಿಯಂತೆ ಮಹದುಪಕಾರಿ, ಯಾಮಾರಿ ಆಟವಾಡಿದರೆ ಬೇಟೆನಾಯಿಯಂತೆ ಬಲು ಅಪಾಯಕಾರಿ!

ವಾಸ್ತವವಾಗಿ ಇಂಗ್ಲೀಷಿನ ‘ಕರೆಂಟ್’ ಎಂದರೆ ‘ಪ್ರವಾಹ’ ಎಂದು ಅರ್ಥ, ಆದ್ದರಿಂದಎಲೆಕ್ಟ್ರಿಕ್ ಕರೆಂಟ್’ ಎಂಬ ಪದವನ್ನು ನಾವು ಕನ್ನಡದಲ್ಲಿ ‘ವಿದ್ಯುತ್ ಪ್ರವಾಹ’ ಎಂದು ಕರೆಯುತ್ತೇವೆ. ಒಂದು ಸೆಕೆಂಡಿನಲ್ಲಿ ಒಂದು ವಾಹಕದಲ್ಲಿ ಹರಿಯಬಹುದಾದ ಎಲೆಕ್ಟ್ರಾನ್‌ಗಳ ಒಟ್ಟು ವಿದ್ಯುದಾವೇಶದ ಪ್ರಮಾಣವನ್ನು ವಿದ್ಯುತ್ ಪ್ರವಾಹದ ಒಂದು ಪರಿಮಾಣ (ಆಂಪಿಯರ್) ಎಂದು ಕರೆಯಲಾಗುತ್ತದೆ.

ನಮಗೆಲ್ಲರಿಗೂ ಅರಿವಿರುವಂತೆ ವಿಶ್ವದಲ್ಲಿರುವ ಎಲ್ಲಾ ವಸ್ತುಗಳೂ ಅತೀ ಚಿಕ್ಕ ಪರಮಾಣುಗಳಿಂದ ಕೂಡಿವೆ. ಆ ಪ್ರತಿಯೊಂದು ಪರಮಾಣುವೂ ಇಲೆಕ್ಟಾçನ್‌ಗಳೆಂಬ ಋಣ, ಅದಕ್ಕೆ ಸಮಾನ ಸಂಖ್ಯೆಯ ಪ್ರೋಟಾನ್‌ಗಳೆಂಬ ಧನ ವಿದ್ಯುತ್ ಅಂಶಗಳೊಂದಿಗೆ ಹಾಗೂ ಅವುಗಳ ಜೊತೆ ಕೆಲವಷ್ಟು ವಿದ್ಯುದಾವೇಶರಹಿತ ನ್ಯೂಟ್ರಾನ್‌ಗಳಿಂದ ಕೂಡಿರುತ್ತದೆ. ವಾಹಕಗಳೆಂದು ಕರೆಯಲಾಗುವ ಕೆಲವು ವಸ್ತುಗಳಲ್ಲಿ ಈ ಇಲೆಕ್ಟಾçನ್‌ಗಳು ಹೆಚ್ಚು ಸ್ವತಂತ್ರವಾಗಿರುತ್ತವೆ ಹಾಗೂ ಅಲ್ಲಿ ಇವುಗಳ ಸಾಂಘಿಕ ಚಲನೆಯನ್ನೇ ನಾವು ‘ವಿದ್ಯುತ್ ಪ್ರವಾಹ’ ಎಂದು ಕರೆಯುವುದು.

ವಿದ್ಯುತ್ ಪ್ರವಾಹವನ್ನು ಮುಖ್ಯವಾಗಿ ಎರಡು ರೀತಿಗಳಲ್ಲಿ ವಿಂಗಡಿಸಬಹುದು. ಮೊದಲನೆಯದು, ನಾವು ಶೆಲ್ಲುಗಳಲ್ಲಿ ಮತ್ತು ಮೊಬೈಲ್ ಬ್ಯಾಟರಿಗಳಲ್ಲಿ ಸಂಗ್ರಹಿಸಿಡುವ ನೇರ ವಿದ್ಯುತ್ (ಡಿ.ಸಿ.) ಮತ್ತೊಂದು ನಾವು ಮನೆಗಳಲ್ಲಿ ಗೃಹೋಪಯೋಗಿ ಅಥವಾ ಯಾಂತ್ರಿಕ ವಸ್ತುಗಳಲ್ಲಿ ಬಳಸುವ ಪರ್ಯಾಯ ವಿದ್ಯುತ್(ಎ.ಸಿ.). ನೇರ ವಿದ್ಯುತ್ ಅಥವಾ ಏಕಮುಖ ವಿದ್ಯುತ್‌ನಲ್ಲಿ ವಿದ್ಯುದಾವೇಶಗಳು ಯಾವಾಗಲೂ ಒಂದೇ ದಿಕ್ಕಿನಲ್ಲಿ ಪ್ರವಹಿಸಿದರೆ, ಪರ್ಯಾಯ ವಿದ್ಯುತ್‌ನಲ್ಲಿ ಇವು ನಿಯತಕಾಲಿಕವಾಗಿ ತಮ್ಮ ದಿಕ್ಕನ್ನು ಬದಲಾಯಿಸುತ್ತಿರುತ್ತವೆ ಎಂದು ವೈಜ್ಞಾನಿಕವಾಗಿ ವಿವರಿಸಬಹುದು.

 

    ನೇರ ಅಥವಾ ಏಕಮುಖ ವಿದ್ಯುತ್ತಿಗಿಂತ, ನಾವು ನಿತ್ಯಜೀವನದಲ್ಲಿ ಹೆಚ್ಚಾಗಿ ಯಾಂತ್ರಿಕ ಅಥವಾ ಗೃಹ ಕಾರ್ಯಗಳಿಗೆ ಬಳಸುವ ಪರ್ಯಾಯ ವಿದ್ಯುತ್ತಿನ ಬಗ್ಗೆ ತುಸು ಹೆಚ್ಚು ತಿಳಿಯಲೇ ಬೇಕಾಗುತ್ತದೆ. ಹೆಚ್ಚಿನ ಗೃಹೋಪಯೋಗಿ ವಸ್ತುಗಳು ಬಳಸುವು ಪರ್ಯಾಯ ವಿದ್ಯುತ್ತಿನ ವೊಲ್ಟೇಜ್. ಅಂದರೆ, ವಾಹಕದೊಳಗಿನ ವಿದ್ಯುತ್ತಿನ ಒತ್ತಡ ಸರಾಸರಿ ೨೨೦ ವೋಲ್ಟ್ಗಳಷ್ಟಿರುತ್ತದೆ ಮತ್ತು ಅದರ ಆವರ್ತನವು ೫೦0  ಗಳಷ್ಟಿರುತ್ತದೆ. ದೂರದ ಸ್ಥಳಗಳಿಗೆ ಸಾಗಿಸುವಾಗ ಪರ್ಯಾಯ ವಿದ್ಯುತ್ ಏಕಮುಖೀ ವಿದ್ಯುತ್‌ಗಿಂತ ಕಡಿಮೆ ನಷ್ಟವನ್ನುಂಟು ಮಾಡುತ್ತದೆ  ಪರ್ಯಾಯ ವಿದ್ಯುತ್ತಿನ ವೋಲ್ಟೇಜನ್ನು ಸುಲಭವಾಗಿ ಹೆಚ್ಚಿಸಬಹುದು ಮತ್ತು ಕಡಿಮೆಗೊಳಿಸಬಹುದು, ಹಾಗೂ ಸಾಗಿಸುವ ದೂರ ಹೆಚ್ಚಾದಷ್ಟೂ ವೋಲ್ಟೇಜ್ ಹೆಚ್ಚುತ್ತಾ ಹೋದರೆ ವಿದ್ಯುತ್ತಿನ ನಷ್ಟ ಕಡಿಮೆಯಾಗುತ್ತದೆ ಎಂಬ ಅಂಶಗಳು ಪರ್ಯಾಯ ವಿದ್ಯುತ್ತಿಗೆ ಬೇಡಿಕೆಯನ್ನು ಹೆಚ್ಚಿಸುತ್ತವೆ. ದಾರಿ ಬದಿಗಳಲ್ಲಿ ಐಫೆಲ್ ಟವರ್‌ನಂತಹ ಲೋಹದ ಕಂಬಗಳ ಮಧ್ಯೆ ಸಾಗಿರುವ ಹೈಟೆನ್ಷನ್ ವೈರ್‌ಗಳನ್ನು ನೋಡಿರಬಹುದಲ್ಲವೆ? ಅವುಗಳಲ್ಲಿ ಈ ಪರ್ಯಾಯ ವಿದ್ಯುತ್‌ನ್ನ ದೂರದೂರುಗಳಿಗೆ ಹರಿಬಿಡಲಾಗಿರುತ್ತದೆ. ಆದರೆ, ನೆನಪಿರಲಿ ಆ ವೈರ್‌ಗಳಲ್ಲಿ ಹರಿಯುವ ವಿದ್ಯುತ್ತಿನ ವೋಲ್ಟೇಜು ಸುಮಾರು ೩೦೦೦೦ ದಿಂದ ೬೦೦೦೦ ವೋಲ್ಟ್ಗಳವರೆಗೆ ಇರುತ್ತವೆ. ಅವುಗಳನ್ನು  ಉತ್ತಮ ವಾಹಕಗಳಾದ ಅಲ್ಯುಮಿನಿಯಮ್ ಅಥವಾ ತಾಮ್ರದಿಂದ ಮಾಡಿರುತ್ತಾರೆ. ನೀವು ಮನೆಯಲ್ಲಿ ಎಂದಾದರೂ ಅಕಸ್ಮಾತ್ತಾಗಿ ಕರೆಂಟ್ ಶಾಖ್ ಹೊಡೆಸಿಕೊಂಡಿದ್ದೀರಾದರೆ ನಿಮಗೆ ೨೨೦ ವೋಲ್ಟ್ನ ಬೆಲೆ ಗೊತ್ತಾಗಿದೆ ಎಂದರ್ಥ. ಈಗ ಯೋಚಿಸಿ, ಹೈಟೆನ್ಷನ್ ವೈರ್ ತಾಗಿ ಶಾಖ್ ಹೊಡೆದರೆ ಏನಾಗಬಹುದೆಂದು..? ಅದಕ್ಕಾಗಿಯೇ ನಗರಗಳ ಹೊರ ವಲಯಗಳಲ್ಲಿ  ಈ ಹೈಟೆನ್ಷನ್ ವೈರುಗಳನ್ನು ಎಳೆಯಲಾಗಿರುತ್ತದೆ. ನಂತರ, ನಗರದೊಳಕ್ಕೆ ಅದನ್ನು ಬಳಸುವಾಗ ಕಾರ್ಖಾನೆ ಮುಂತಾದವುಗಳಿಗಾಗಿ ಆ ವೋಲ್ಟೇಜನ್ನು ಸಾವಿರಗಳಿಂದ ೪೪೦ ವೋಲ್ಟಿಗೆ ಇಳಿಸಿಕೊಳ್ಳಲಾಗುತ್ತದೆ. ಇನ್ನು ಮನೆಗಳಿಗೆ ಬಳಸುವಾಗ ಅದನ್ನು ೨೨೦ ವೋಲ್ಟಿಗೆ ಇಳಿಸಿಕೊಳ್ಳಲಾಗುತ್ತದೆ. ಹೀಗೆ, ಬೇಕಾದಾಗ ವೋಲ್ಟೇಜನ್ನು ಕಡಿಮೆ ಮಾಡಲು ಅಥವಾ ಕಡಿಮೆಯಿದ್ದದ್ದನ್ನು ಹೆಚ್ಚು ಮಾಡಲು ಟ್ರಾನ್‌ಫಾರ್ಮರ್ ಅಥವಾ ಪರಿವರ್ತಕಗಳು ಎಂಬ ರಚನೆಗಳನ್ನು ಬಳಸುತ್ತಾರೆ (ಟಿ. ಸಿ. ಎನ್ನುತ್ತಾರಲ್ಲ, ಅದು).

೨೨೦ ವೋಲ್ಟ್ ವಿದ್ಯುತ್ ಒತ್ತಡದೊಂದಿಗೆ ಪ್ರತಿ ಸೆಕೆಂಡಿಗೆ ೫೦ ಬಾರಿ ದಿಕ್ಕು ಬದಲಿಸುವ ಈ ಪರ್ಯಾಯ ವಿದ್ಯುತ್ತು, ವಿದ್ಯುತ್ ಕಂಬದಿAದ ಎರೆಡು ತಂತಿಗಳ ಮೂಲಕ ನಿಮ್ಮ ಮನೆಯ ಮೀಟರ್ ಬೋರ್ಡಿಗೆ ಬಂದು ಸೇರುತ್ತದೆ. ಅಲ್ಲಿಂದ, ನಿಮ್ಮ ಮನೆಯೊಳಗೆ ಫೇಸ್(ಲೈವ್), ನ್ಯೂಟ್ರಲ್ ಮತ್ತು ಗ್ರೌಂಡ್ ಎಂಬ ಮೂರು ತಂತಿಗಳ ಮೂಲಕ ನಿಮಗೆ ಲಭ್ಯವಾಗುತ್ತದೆ.  ವಿದ್ಯುತ್ ಕಂಬದಿಂದ ಲೈವ್ ಅಥವಾ ಫೇಸ್‌ತಂತಿಯ ಮೂಲಕ ಮನೆಯ ವಿದ್ಯುತ್ ಮಂಡಲದ ಒಳಬರುವ ಕರೆಂಟು ನ್ಯೂಟ್ರಲ್ ತಂತಿಯ ಮೂಲಕ ಹೊರ ಹೋಗಿ ಮತ್ತೆ ಕಂಬವನ್ನು ಸೇರುತ್ತದೆ. ಅಂದರೆ ನಿಮ್ಮ ವಿದ್ಯುತ್ ಉಪಕರಣಗಳನ್ನು ಫೇಸ್(ಲೈವ್) ಮತ್ತು ನ್ಯೂಟ್ರಲ್ ತಂತಿಗಳ ಮಧ್ಯೆ ಸೇರಿಸಿದಾಗ ಮಾತ್ರ, ಅದರೊಳಗೆ ಪ್ರವಹಿಸುವ ವಿದ್ಯುತ್ ಅದು ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಇನ್ನು, ಗ್ರೌಂಡ್ ಎಂಬ ತಂತಿಯು ಮನೆಯೊಳಗಿನ ವಿದ್ಯುತ್ ಮಂಡಲದಲ್ಲಿ ಕೆಲವೊಮ್ಮೆ ಆಘಾತಕಾರಿಯಾಗಿ ಹೆಚ್ಚಾದ ಪರಿಮಾಣದಲ್ಲಿ ಹರಿಯಬಹುದಾದ ವೋಲ್ಟೇಜನ್ನು ಆ ಮಂಡಲದಿಂದ ಹೊರದಬ್ಬಿ ನೆಲದಾಳದಲ್ಲಿ ಏಳೆಂಟು ಅಡಿಗಳ ಆಳದಲ್ಲಿ ತಾಮ್ರದ ತಗಡು, ಉಪ್ಪು, ಇದ್ದಿಲು ಮತ್ತು ಮರಳಿನಿಂದ ಮಾಡಿದ ಗ್ರೌಂಡಿಂಗ್  ಎಂಬ ರಚನೆಯಲ್ಲಿ ಕರಗಿಹೋಗುವಂತೆ ಮಾಡಲು ಬಳಕೆಯಾಗುತ್ತದೆ. ಈ ಗ್ರೌಂಡಿಂಗ್ನಲ್ಲಿ ಏನಾದರೂ ದೋಷವಿದ್ದರೆ, ಆ ಮನೆಯಲ್ಲಿರುವ ಪ್ರತಿ ವಸ್ತುವಿನಲ್ಲಿರುವ ಲೋಹದ ಭಾಗಗಳೆಲ್ಲವೂ ವಿದ್ಯುತ್ ಶಾಕ್ ಹೊಡೆಯತೊಡಗುತ್ತವೆ, ಅದು ಕೆಲವೊಮ್ಮೆ ಮಾರಣಾಂತಿಕವಾಗಿರುತ್ತದೆ. ಕರೆಂಟ್ ಓಕೆ ಈ ಶಾಕ್ ಹೊಡೆಯುವುದು ಏಕೆ ಎಂದು ಯೋಚಿಸಿದ್ದೀರಾ ?

ನಿಮಗೇ ತಿಳಿದಿರುವಂತೆ ಮಾನವನೂ ಸೇರಿದಂತೆಎಲ್ಲಾ ಪ್ರಾಣ  ಪಕ್ಷಿಗಳ ದೇಹರಚನೆಯ ಬಹುಭಾಗ ನೀರು ಮತ್ತು ಖನಿಜಾಂಶಗಳಿಂದ ಕೂಡಿದೆ, ಈ ಖನಿಜಂಶಗಳಿಂದ ಕೂಡಿದ ನೀರು ವಿದ್ಯುತ್ತಿನ ಉತ್ತಮ ವಾಹಕಗಳಲ್ಲೊಂದು. ಅಂದರೆ, ಪ್ರಾಣಿ, ಪಕ್ಷಿಗಳ ದೇಹ ವಿದ್ಯುತ್ ಪ್ರವಾಹಕ್ಕೆ ರಾಜ್ಯ ಹೆದ್ದಾರಿಯಿದ್ದಂತೆ. ಅಲ್ಲದೆ, ಈ ನಮ್ಮ ಭೂಮಿಗೆ ಕೊಟ್ಟಷ್ಟೂ ವಿದ್ಯುತ್ತನ್ನು ಹೀರಿಕೊಳ್ಳುವ ಗುಣವಿದೆ ಎಂಬುದೂ ಮತ್ತೊಂದು ತಿಳಿಯಲೇಬೇಕಾದ ವಿಷಯ. ಈಗ ಯೋಚಿಸಿ, ನೀವೇನಾದರೂ ಬರೀ ಕಾಲಿನಲ್ಲಿ ನೆಲದ ಮೇಲೆ ನಿಂತು ವಿದ್ಯುತ್ ಹರಿಯುತ್ತಿರುವ ತಂತಿಯ ತುದಿಯನ್ನು ಹಿಡಿದುಕೊಂಡರೆ ಏನಾಗಬಹುದು ಎಂದು ? ತಂತಿಯಲ್ಲಿ ಹರಿಯುತ್ತಿರುವ ವಿದ್ಯುತ್ ಈಗ ನಿಮ್ಮ ದೇಹವನ್ನು ವಿದ್ಯುತ್ ಮಂಡಲ ಎಂದು ಭಾವಿಸಿ ಅದರ ಮೂಲಕ ಸತತವಾಗಿ ಹರಿದು ಭೂಮಿಯನ್ನ ಸೇರತೊಡಗುತ್ತದೆ, ಅದರ ರಭಸಕ್ಕೆ ನಮ್ಮ ನರಮಂಡಲಗಳು ಛಿಧ್ರವಾಗಿ, ರಕ್ತ ಪ್ರವಾಹದೊಡನೆ ಹರಿವ ವಿದ್ಯುತ್ತನ್ನ ಕಂಡ ಹೃದಯ ಕಂಗಾಲಾಗಿ ಕೆಲಸ ನಿಲ್ಲಿಸಿಬಿಡುತ್ತದೆ. ಅದೇ ನೀವೇನಾದರೂ ರಬ್ಬರ್ ಚಪ್ಪಲಿಯನ್ನೋ, ಒಣಗಿದ ಮರದ ಹಲಗೆಯನ್ನೋ ನಿಮ್ಮ ಕಾಲಡಿಗೆ ಇಟ್ಟುಕೊಂಡಿದ್ದಿದ್ದರೆ, ವಿದ್ಯುತ್ ಹರಿಯಲು ಅಡ್ಡಿಯಾಗುವುದರಿಂದ ಆಗ ಶಾಕ್ ಹೊಡೆಯುತ್ತಿರಲಿಲ್ಲ. ಅದಕ್ಕೆ ತಾಮ್ರದಿಂದ ಮಾಡಿದ ವಿದ್ಯುತ್ ತಂತಿಗಳನ್ನು ಪ್ಲಾಸ್ಟಿಕ್‌ನಂತಹ ಅತ್ಯುತ್ತಮ ಅರೆವಾಹಕಗಳಿಂದ ಸುತ್ತಿರುತ್ತಾರೆ. ಇದರ ಹೊರತಾಗಿಯೂ ಕೆಲವೊಮ್ಮೆ ಆ ಸುತ್ತಿರುವ ಅರೆವಾಹಕದಲ್ಲಿ ಸೀಳು ಅಥವಾ ರಂಧ್ರಗಳಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಆದ್ದರಿಂದಲೇ ದೊಡ್ಡವರು ಹೇಳಿದ್ದು,  ವಿದ್ಯುತ್ತಿನೊಂದಿಗೆ ಚೆಲ್ಲಾಟ, ಗ್ರಹಚಾರ ಕೆಟ್ಟರೆ ಪ್ರಾಣಕ್ಕೇ ಸಂಕಟ’ ಎಂದು.

No comments:

Post a Comment