ಸಂಪಾದಕರ ಡೈರಿಯಿಂದ . . . . . . . . .
‘ಸವಿಜ್ಞಾನ’ದ ಸೆಪ್ಟೆಂಬರ್ ತಿಂಗಳ ಸಂಚಿಕೆ ಪ್ರಕಟವಾಗಿದೆ. ಈ ವೇಳೆಗಾಗಲೇ ರಾಷ್ಟ್ರ ಹಾಗೂ ರಾಜ್ಯ ಮಟ್ಟದ “ಅತ್ಯುತ್ತಮ ಶಿಕ್ಷಕರ” ಪಟ್ಟಿ ಬಿಡುಗಡೆಯಾಗಿದೆ. ಪ್ರಶಸ್ತಿಗೆ ಭಾಜನರಾದ ಎಲ್ಲ ಶಿಕ್ಷಕ ಬಂಧುಗಳಿಗೆ ‘ಸವಿಜ್ಞಾನ’ ತಂಡದಿಂದ ಹಾರ್ದಿಕ ಅಭಿನಂದನೆಗಳು. ರಾಷ್ಟ್ರಮಟ್ಟದಲ್ಲಿ ಈ ಬಾರಿಯ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಗೆ ಆಯ್ಕೆಯಾಗಿರುವ ಚಿತ್ರದುರ್ಗದ ಅಮೃತಾಪುರದ ಶಿಕ್ಷಕ ಟಿ.ಪಿ. ಉಮೇಶ್ ಅವರನ್ನು ಈ ಸಂಚಿಕೆಯಲ್ಲಿ ಪರಿಚಯಿಸಿದ್ದಾರೆ, ಚಿತ್ರದುರ್ಗದ ವಿದ್ಯಾ ವಿಕಾಸ ಸಂಸ್ಥೆಯ ಶಿಕ್ಷಕಿ, ಸಿ.ಹೆಚ್,ಎಂ, ಆಶಾ ಅವರು.
ಈ ಸಂಚಿಕೆಯ ಇನ್ನೊಂದು ವಿಶೇಷವೆಂದರೆ, ಇಬ್ಬರು ವಿಜ್ಞಾನ ಶಿಕ್ಷಕಿಯರು ತಮ್ಮ ಲೇಖನಗಳ ಮೂಲಕ
‘ಸವಿಜ್ಞಾನ’ದ ಲೇಖಕಿಯರ ಬಳಗಕ್ಕೆ ಸೇರ್ಪಡೆಯಾಗಿರುವುದು. ಶ್ರೀಮತಿ ಬಿ. ನಾಗವೇಣಿ ಅವರು ಆಶ್ರುವಾಯುವಿನ
ಬಗ್ಗೆ ಬರೆದಿದ್ದರೆ, ಶ್ರೀಮತಿ ಬಿ.ಎನ್.ರೂಪ ಅವರು ಬ್ರಹ್ಮಾಂಡದ ಸೃಷ್ಟಿ ರಹಸ್ಯದ ಬಗ್ಗೆ ಇತ್ತೀಚಿನ
ಸಂಶೋಧನೆಗಳ ಬಗ್ಗೆ ಲೇಖನ ಬರೆದಿದ್ದಾರೆ. ಈ ಇಬ್ಬರು ಶಿಕ್ಷಕಿಯರೂ ಈ ಬಾರಿಯ ಜಿಲ್ಲಾಮಟ್ಟದ “ಅತ್ಯುತ್ತಮ
ಶಿಕ್ಷಕ” ಪ್ರಶಸ್ತಿಗೆ ಆಯ್ಕೆಯಾಗಿರುವುದು ‘ಸವಿಜ್ಞಾನ’ಕ್ಕೆ ಹೆಮ್ಮೆಯ ಸಂಗತಿ.
ಬೈಜಿಕ ಶಕ್ತಿ ಬಳಕೆಗೆ ಬಂದ ಸಂದರ್ಭವನ್ನು ಹಾಗೂ ಅದರ ಪರಿಣಾಮಗಳನ್ನು ವಿವರಿಸುವ ರೋಹಿತ ಸಾಗರ್
ಅವರ ಲೇಖನ, ದಕ್ಷಿಣ ಅಮೆರಿಕಾ ಮೂಲದ ನಮ್ಮ ಆಹಾರ ಸಸ್ಯಗಳ ಪರಿಚಯ ಮಾಡಿಕೊಡುವ ತಾಂಡವಮೂರ್ತಿ ಅವರ ಲೇಖನ,
ಈ ಸಂಚಿಕೆಯ ಇತರ ವೈಶಿಷ್ಟ್ಯಗಳು.
ಇವೆಲ್ಲದರ ಜೊತೆಗೆ, ಸೆಪ್ಟೆಂಬರ್ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ, ವಿಜ್ಞಾನಕ್ಕೆ
ಸಂಂಧಿಸಿದ ನಮ್ಮ ಸ್ಥಿರ ಅಂಕಣಗಳಾದ, ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ.
ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿ
ಪ್ರಧಾನ ಸಂಪಾದಕರು
ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವುದು ಶ್ಲಾಘನೀಯ... ಇದೇ ತರಹ ಇನ್ನೂ ಅನೇಕ ಕೆಲಸವನ್ನು ತಾವು ಮಾಡಬೇಕು..
ReplyDeleteಎಂದಿನಂತೆ ಉತ್ತಮ ಲೇಖನಗಳ ಆಗರ.
ReplyDeleteಧನ್ಯವಾದಗಳು ಸರ್