ವಿಜ್ಞಾನ ಒಗಟುಗಳು
1) ನಾನು ಒಂದು ವಿಧದ ಅಂಗಾಂಶ,
ವ್ಯಕ್ತಿಯ ಜೀವಿತಾವಧಿಯವರೆಗೂ
ಬಿಡುವಿಲ್ಲದ ಲಯಬದ್ಧ ಸಂಕೋಚನ ಮತ್ತು ವಿಕಸನ
ಬಿಡುವು ತೆಗೆದುಕೊಡಲ್ಲಿ ಎಲ್ಲವೂ ಲಯ
ಹಾಗಿದ್ದಲ್ಲಿ ನಾನು
ಯಾರು?
2) ಹೆಚ್ಚು ಪ್ರಭೇದದ ಪ್ರಾಣಿಗಳುಳ್ಳ ಗುಂಪು ,
ದ್ವಿಪಕ್ಷ ಸಮಮಿತಿ,
ಖಂಡ ವಿಂಗಡನೆಯುಳ್ಳ ದೇಹ
ತೆರೆದ ರಕ್ತಪರಿಚಲನಾ ವ್ಯವಸ್ಥೆಹೊಂದಿರುವ
ಈ ಗುಂಪು ಯಾವುದು?
3) ವರ್ಗೀಕರಣ ಬದುಕಿನ
ಹಾಸುಹೊಕ್ಕು,
ಕರೋಲಸ್ ಲಿನೇಯಸ್ ರ
ಅಧ್ಯಯನದ ಫಲ
೭ ಮಜಲುಗಳಲಿ ಸರಳತೆಯಿಂದ ಸಂಕೀರ್ಣತೆಯೆಡೆಗೆ
ಇಲ್ಲಿ ಸರಳ ಮೂಲ ಘಟಕ ಮಜಲ ತಿಳಿಸುವಿರೇ ?
4) ಜೀವಿ ಸಾಮ್ರಾಜ್ಯದ
ತುಲನಾತ್ಮಕ ಅಧ್ಯಯನವು ಜೀವಿಗಳ ವಿಕಸನ , ಅವು ನಡೆದು ಬಂದ ಹಾದಿಯನ್ನು ಸಾದರಪಡಿಸುತ್ತದೆ,
ಹಾಗೂ ವಿಕಸನ ಆಗಿರುವುದಕ್ಕೆ ದೈಹಿಕ ಮಾರ್ಪಾಟುಗಳೊಂದಿಗೆ ಪುರಾವೆಗಳನ್ನು
ಒದಗಿಸುತ್ತದೆ .
ಈ ಖಾಲಿ ಜಾಗದಲ್ಲಿರುವ ಸಾಮ್ರಾಜ್ಯವನ್ನು ಗುರುತಿಸಿ ;
5) ನಾ ಪ್ರಾಣಿಗಳ ಗುಂಪಿನಲ್ಲಿ ಕಂಡುಬರುವ ಪ್ರಮುಖ
ಲಕ್ಷಣ ವಾಗಿರುವೆ,
ದೇಹದ ತೂಕವನ್ನು ಕಡಿಮೆಮಾಡಲು,
ರಕ್ಷಣೆ, ದೇಹದ ಸ್ಥಿರ ತಾಪಮಾನವನ್ನು ಕಾಪಾಡಲು
ನಾನು ಸಹಾಯ ಮಾಡುತ್ತೇನೆ
ಹಾಗಿದ್ದಲ್ಲಿ ನಾನು
ಯಾರು ?
ಗೋರಿಪಾಳ್ಯ
ಬೆಂಗಳೂರು ದಕ್ಷಿಣ ವಲಯ 2
No comments:
Post a Comment