ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, August 4, 2023

ಚಂದ್ರಯಾನ – ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ದಿಟ್ಟ ಹೆಜ್ಜೆ

 ಚಂದ್ರಯಾನ – ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ದಿಟ್ಟ ಹೆಜ್ಜೆ


ಲೇಖಕರು

ಬಿ.ಎನ್.ರೂಪ,

ಸಹಶಿಕ್ಷಕರು,

ಕೆ ಪಿ ಎಸ್‌ ಜೀವನ್‌ ಭೀಮಾನಗರ,

ಬೆಂಗಳೂರು ದಕ್ಷಿಣ ವಲಯ-4.

ಕೆಲ ದಿನಗಳ ಹಿಂದಷ್ಟೇ ಉಡಾವಣೆಗೊಂಡ ʼಚಂದ್ರಯಾನ-೩ʼ ಗಗನ ನೌಕೆ ಇನ್ನು ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ಇಳಿಯಲಿದೆ. ಈ ಹಿನ್ನೆಲೆಯಲ್ಲಿ ಲೇಖನವೊಂದನ್ನು ಪ್ರಸ್ತುತ ಪಡಿಸಿದ್ದಾರೆ, ಶಿಕ್ಷಕಿ ಬಿ.ಎನ್.‌ ರೂಪಾ ಅವರು.

 

ಚಂದ್ರಯಾನ’ – ಈ ಪದ ಎಷ್ಟು ರೋಮಾಂಚನ, ಸಂಚಲನವನ್ನು ಸೃಷ್ಟಿ ಮಾಡಿದ್ದು ನೋಡಿದಿರಲ್ಲ ? ಚಂದ್ರನನ್ನು ನಮ್ಮ ಕವಿಗಳು ಸುಂದರ ಹೆಣ್ಣಿನ ಮುಖಾರವಿಂದಕ್ಕೆ ಹೋಲಿಸಲು,ತಾಯಂದಿರು ತಮ್ಮ ಮಕ್ಕಳಿಗೆ ಅಕ್ಕರೆಯಿಂದ ಹಾಗೂ ನಲ್ಮೆಯಿಂದ ಪೋಷಿಸಲು ತೋರಿಸುವರು, ಸಂಪ್ರದಾಯವಾದಿಗಳು ಹಬ್ಬ-ಹರಿದಿನಗಳನ್ನು ಆಚರಿಸಲು ಚಂದ್ರನನ್ನು ಅವಲಂಬಿಸಿದ್ದರೆ,  ಹುಣ್ಣಿಮೆ, ಅಮಾವಾಸ್ಯೆಗಳ ಆಚರಣೆ, ಗ್ರಹಣಗಳ ಆಚರಣೆ ಎಲ್ಲದಕ್ಕೂ ಚಂದ್ರನೇ ನಿಮಿತ್ತ.

ನಮ್ಮ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರ.

ನಮ್ಮ ಭೂಮಿಯ ಕಕ್ಷೆಯನ್ನು ಬಿಟ್ಟು, ಗುರುತ್ವಾಕರ್ಷಣೆಯ ಬಲವನ್ನು ಮೀರಿ ಅನ್ಯಗೃಹಗಳಿಗೆ,  ಬಾಹ್ಯಾಕಾಶಕ್ಕೆ ಜಿಗಿಯಲುಸಾಧ್ಯವೇ ? ಚಂದ್ರನ ಕಕ್ಷೆಗೆ,ಅವನ ಅಂಗಳಕ್ಕೆ ಜಿಗಿತ ಸಾಧ್ಯವೇ ? ಎಂಬ ಪ್ರಶ್ನೆಗೆ ವಿಜ್ಞಾನಿಗಳ ಬಹುವರ್ಷದ ಸತತ ಪ್ರಯತ್ನ, ಸಂಶೋಧನೆ ಅಭಿವೃದ್ಧಿಯಿಂದ ಉತ್ತರ ಸಾಧ್ಯವಾಗಿರುವುದು ಈಗ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ.

ಚಂದ್ರಯಾನವನ್ನು ನಮ್ಮ ಭಾರತ ದೇಶ ಮೂರು ಬಾರಿ ಯಶಸ್ವಿಯಾಗಿ ಸಾಧಿಸಿದ ಹೆಗ್ಗಳಿಕೆಯನ್ನು ಹೊಂದಿದೆ. ಮೊದಲ ಚಂದ್ರಯಾನದ ನೌಕೆಯನ್ನು(ಚಂದ್ರಯಾನ-೧) ನಮ್ಮ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)  22ಅಕ್ಟೋಬರ್  2008 ರಂದು ಉಡಾವಣೆ ಮಾಡಿತು. ಇದು ಭಾರತದ ಮೊದಲ ಚಂದ್ರನ ಶೋಧಕ ಯಾನವಾಗಿದೆ.

ಆಂಧ್ರಪ್ರದೇಶದ ಶ್ರೀಹರಿ ಕೋಟಾದ ಸತೀಶ್‌ ಧಾವನ್‌ ಬಾಹ್ಯಾಕಾಶ ಕೇಂದ್ರದಿಂದ PSLV_XL ರಾಕೆಟ್ ಅನ್ನು ಬಳಸಿಕೊಂಡು ಈ ನೌಕೆಯನ್ನು ಉಡಾವಣೆ ಮಾಡಲಾಯಿತು.  ಇದು ಚಂದ್ರನ ಕಕ್ಷೆ ಮತ್ತು ಇಂಪಾಕ್ಟರ್ರನ್ನು ಒಳಗೊಂಡಿದೆ.  ಆಗಸ್ಟ್ 2009ರಂದು ಚಂದ್ರಯಾನ-1  ನೌಕೆ ತನ್ನ ಸಂವಹನವನ್ನು ಆರ್ಬಿಟರ್‌ ಸ್ಟಾರ್‌  ವೈಫಲ್ಯದಿಂದ ನಿಲ್ಲಿಸಿತು.

ಚಂದ್ರಯಾನ-1ರ ನಂತರ ಇಸ್ರೋ ಅಭಿವೃದ್ಧಿಪಡಿಸಿದ ಚಂದ್ರಯಾನ-2 ಚಂದ್ರನತ್ತ ಎರಡನೇ ಕಾರ್ಯಚರಣೆಯಾಗಿದೆ. ಇದು ಚಂದ್ರನ ಆರ್ಬಿಟರ್‌ ಲ್ಯಾಂಡರ್‌ ಮತ್ತು ಪ್ರಾಗನ್‌ರೋವರ್‌ ಅನ್ನು ಒಳಗೊಂಡಿತ್ತು. ಮುಖ್ಯವಾಗಿ. ಚಂದ್ರನ ಮೇಲ್ಮೈ ಸಂಯೋಜನೆಯನ್ನು ಅಧ್ಯಯನ ಮಾಡುವುದು, ನೀರಿನ ಆಕರ ಹಾಗೂ ಪ್ರಮಾಣದ ಬಗ್ಗೆ ಅನ್ವೇ಼ಣೆಯನ್ನು ಒಳಗೊಂಡಿತ್ತು. ಆದರೆ, ಕೆಲವು ತಾಂತ್ರಿಕದೋಷಗಳಿಂದ ತನ್ನ ಪಥದಿಂದ ಪತನಗೊಂಡಿತು.

ಚಂದ್ರಯಾನ- 2 ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ನಂತರ ಕೆಲ ತಂತ್ರಾಂಶಗಳ ದೋಷದಿಂದ ಲ್ಯಾಂಡರ್‌ ಅಪಘಾತಕ್ಕೆ ಈಡಾಯಿತು. ಹೀಗಾಗಿ, ಈ ಬಗ್ಗೆ  ಮತ್ತೊಂದು ಕಾರ್ಯಾಚರಣೆಯನ್ನು ಪ್ರಸ್ತಾಪಿಸಲಾಯಿತು.ಇದರ ಫಲವೇ ಚಂದ್ರಯಾನ-3.  ಈಗಾಗಲೇ ತಿಳಿದಿರುವಂತೆ, ಚಂದ್ರಯಾನ-3 ದಿನಾಂಕ 14- 7-2023 ರಂದು ಉಡಾವಣೆಯಾಗಿದೆ. ಇದು ಲ್ಯಾಂಡರ್‌ ಅನ್ನುಮತ್ತು ಪ್ರಾಗನ್‌ ರೋವರ್‌ ಅನ್ನು ಹೊಂದಿದೆ. ಆದರೆ, ಆರ್ಬಿಟರ್‌ ಅನ್ನು ಹೊಂದಿಲ್ಲ. ಈ ನೌಕೆ ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವ ನಿರೀಕ್ಷೆಯಿದೆ.

 


ಅನೇಕ ರಾಷ್ಟ್ರಗಳು ಚಂದ್ರನ ದಕ್ಷಿಣ ಭಾಗದಲ್ಲಿ ತಮ್ಮ ಬಾಹ್ಯಾಕಾಶ ನೌಕೆಯನ್ನು ಇಳಿಸಲು ಪ್ರಯತ್ನಿಸಿವೆ. ಆದರೆ, ಈ ಕಾರ್ಯಾಚರಣೆಯಲ್ಲಿ ಇನ್ನೂ ಯಾವ ದೇಶವೂ ಯಶಸ್ವಿಯಾಗಿಲ್ಲ. ಚಂದ್ರಯಾನ-3 ದಿಟ್ಟ, ಮಹತ್ವಾಕಾಂಕ್ಷೆಯ ಹೆಜ್ಜೆಯಾಗಿದೆ ಮತ್ತು ತಾಂತ್ರಿಕ ಅಭಿವೃದ್ಧಿಯನ್ನುಹೊಂದಿದೆ.

ಚಂದ್ರನ ಭೂವಿಜ್ಞಾನ, ವಾತಾವರಣ, ವಾಯುಗುಣ, ಮಂಜುಗಡ್ಡೆಯ ಉಪಸ್ಥಿತಿ, ನೀರಿನ ಪ್ರಮಾಣ, ಅಲ್ಲಿರುವ ಖನಿಜ ಲವಣಗಳ ಪರಿಸ್ಥಿತಿ, ಇವುಗಳ ಬಗ್ಗೆ ಅಧ್ಯಯನವೇ ಇದರ ಪ್ರಮುಖ ಉದ್ದೇಶವಾಗಿದೆ. ಒಟ್ಟಾರೆ, ಚಂದ್ರಯಾನ ನಮ್ಮ ಭಾರತದ ವೈಜ್ಞಾನಿಕ ಯಶೋಗಾಥೆಯಾಗಿದ್ದು ಚಂದ್ರನ ಶೋಧನೆಯ ಬಹುಮುಖ್ಯ ಪರಿಶೋಧಕ ಸೂಚಿಯಾಗಿದೆ. ಹೀಗೇ ಮುಂದುವರೆದಲ್ಲಿ ಭಾರತದ ವಿಜ್ಞಾನಿಗಳು ಚಂದ್ರನಲ್ಲಿ ಮನೆ ಮಾಡುವ ದಿನಗಳು ದೂರವಿಲ್ಲ ಅನ್ನಿಸುತ್ತದೆ.

ಸೋಲೇ ಗೆಲುವಿನ ಸೋಪಾನ ಎಂಬ ಹೇಳಿಕೆ ಎಷ್ಟು ಸಮಂಜಸವಾಗಿದೆ ಅಲ್ಲವೇ?

ನಮ್ಮ ಬಾಹ್ಯಾಕಾಶ‌ ವಿಜ್ಞಾನಿಗಳ ಎದೆಗುಂದದ ಸತತ ಪ್ರಯತ್ನಕ್ಕೆ ಈ ಚಂದ್ರಯಾನ-೩ ಮುನ್ನುಡಿಯಂತಿದೆ. ಸತತಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಯಾವುದೇ ರೀತಿಯ ಸಾಧನೆ ಸಾಧ್ಯ ಎಂಬುದಕ್ಕೆ ಈ ಚಂದ್ರಯಾನ-3 ನಿದರ್ಶನದಂತಿದೆ.

ಚಂದ್ರಯಾನ-3 ರ ಪ್ರಮುಖ ರೂವಾರಿಗಳಾದ “ರಾಕೆಟ್‌ ವುಮನ್ ಆಫ್ ಇಂಡಿಯಾ” ಎಂದು ನಾಮಾಂಕಿತರಾಗಿರುವ ಡಾಕ್ಟರ್‌ ರಿತು ಕರಿಧಾಲ್‌ ಅವರು ಈ  ಚಂದ್ರಯಾನ-3ರ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದಾರೆ. ಡಾ. ರಿತುಕರಿಧಾಲ್‌ ಶ್ರೀವಾಸ್ತವ  ಅವರು  ಇಸ್ರೋದಲ್ಲಿ ಕೆಲಸಮಾಡುತ್ತಿರುವ ವಿಜ್ಞಾನಿ.  ಅವರು ಭಾರತದ ಮಹತ್ವಾಕಾಂಕ್ಷೆಯ ಮಾರ್ಸ್ ಆರ್ಬಿಟಲ್‌ ಮಿಷನ್ನ, (ಮಂಗಳಯಾನ) ಉಪಕಾರ್ಯಾಚರಣೆ ನಿರ್ದೇಶಕರಾಗಿದ್ದರು . ಅವರು ಭಾರತದ ಅನೇಕ ಖ್ಯಾತ  "ರಾಕೆಟ್ ಮಹಿಳೆಯರಲ್ಲಿ”  ಒಬ್ಬರು ಎಂದು ಉಲ್ಲೇಖಿಸಲ್ಪಟ್ಟಿದ್ದಾರೆ.  

ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ನಮಗೆ ಸ್ಪೂರ್ತಿದಾಯಕರಾಗಿದ್ದಾರೆ. ಅವರ ಸತತ ಪರಿಶ್ರಮ, ಕಠಿಣ ಪ್ರಯತ್ನಕ್ಕೆ ಅವರಿಗೆಎಷ್ಟು ನಮನ ಸಲ್ಲಿಸಿದರೂ ಸಾಲದು. ನೀವೇನೆನ್ನುತ್ತೀರಿ ?

 ಹೆಚ್ಚಿನ ವಿವರಗಳಿಗಾಗಿ, ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ಡಾಕ್ಟರ್ ಗುರುಪ್ರಸಾದ್ ಇಸ್ರೋ ನಿವೃತ್ತ ವಿಜ್ಞಾನಿಗಳು ನೀಡಿದ ಮಾಹಿತಿ

ಲಿಂಕ್‌    : https://www.clubhouse.com/room/MzaB80pw?utm_medium=ch_room_lr&utm_campaign=S_eco8gEd3XhM_HrurLonw-831208 


No comments:

Post a Comment