ಒಗಟುಗಳು - ಆಗಸ್ಟ್ ೨೦೨೩
- ರಾಮಚಂದ್ರ ಭಟ್ .ಬಿ.ಜಿ.
೧. ಇವರು ಯಾರು ಬಲ್ಲಿರೇನು?
ಫ್ಯಾಟ್ ಬಾಯ್ ,ಲಿಟಲ್ ಬಾಯ್ ಗಳ ಜನಕ
ಅಮೇರಿಕ ಸಂಜಾತ ಯಹೂದ್ಯನೀತ
ಭಗವದ್ಗೀತೆಯೂ ಈತನಿಗೆ ಸ್ಫೂರ್ತಿಯಂತೆ
ಅಣುಬಾಂಬಿನ ಪಿತಾಮಹನೆಂಬ ಖ್ಯಾತಿ ಇದೆಯಂತೆ
ಕ್ರಿಸ್ಟೋಫರ್ ನೋಲನ್ ರ ಸಿನಿಮದಲ್ಲೂ ಜಗವ ಸೆಳೆದಿದ್ದಾನೆ
ಸುಳಿವರಿತು ಹೆಸರಿಸಬಲ್ಲಿರೇ ಈ ವಿಜ್ಞಾನಿಯ?
ಓಪನ್ಹೈಮರ್
೨. ಬಿಡ್ಸ್ರೀ ಈ ಒಗಟು
ಇದನು ತಿನ್ನಬಹುದು ನೀವು ಆದರೂ ಎಲ್ಲವನೂ ತಿನ್ನಲಾಗದು!!!
ಅದು ತಿನಿಸ ರುಚಿಯಾಗಿಸಲು ಬರ್ಪುದು ಅಭ್ಯಾಗತನಂತೆ
ಉಸಿರಾಡಿ ನೀಡುವುದು ಬದಲಿ ಇಂಧನ
ಭವಿಷ್ಯದಿ ಕಬ್ಬು ಬೆಳೆಗಾರರ ಖಜಾನೆಯಾದೀತು
ಜಾಣ ಜಾಣೆಯರೆ ಸುಳಿವರಿತು ಈ ಪೂರ್ಣ ಒಗಟ ಬಿಡಿಸಿ ಹೇಳಿ
ಶಿಲೀಂಧ್ರಗಳು
೩. ಜಾಣ ಗಿಳಿ ಪ್ರಶ್ನೇಗುತ್ರ ಕೊಡ್ತೀರಾ?
ಹೊಲದಾಗ ಒಂದು ಗಿಡದಾಗ ಒಂದಷ್ಟು ಗಿಳಿಗಳು ಕುಂತಿದ್ವು.
ದಾರಿ ಹೋಕ ಉಸಾಬರಿ ಮಂಗ್ಯಾ ಕೇಳ್ತು ನೀವೆಷ್ಟು ಮಂದಿ ಅಂತ
ಜಾಣ ಗಿಳಿ ಲೆಕ್ಕ ಕೊಡ್ತು - ನಾವು , ನಮ್ಮಷ್ಟು, ನಮ್ಮರ್ಧ, ನಮಗೀರ್ದ,
ನೀನೊಬ್ಬ ಕೂಡಿದ್ರೆ 100 ಆಗ್ತಿವಿ. ನೀನೇ ಲೆಕ್ಕ ಹಾಕ್ಕೋ
ಹಂಗಾದ್ರೆ ಗಿಡದಾಗಿನ ಗಿಳಿ ಎಷ್ಟು? ನೀವೇಳಿ ಈಗ
(ನಮಗೀರ್ದ = ಕಾಲುಭಾಗ)
36
೪. ನಂದೂ ಒಂದೈತೆ ದೊಡ್ಸವಾಲು
ಒಬ್ಬ ರೈತಂಗೆ ೪ ಜನ ಮಕ್ಳು
ಅವನತ್ರ ಒಂದು ಚೌಕಾಕಾರದ ಜಮೀನಿತ್ತು
ಒಂದು ಮೂಲೆಯ ಕಾಲು ಭಾಗ ಜಮೀನು ತಾನಿಟ್ಕೊಂಡ
ಉಳಿದ ಜಮೀನನ್ನು ೪ ಜನರಿಗೂ ಒಂದೇ ಆಕಾರದಲ್ಲಿರುವಂತೆ
ಹಂಚಿದ . ಹೇಗೆ ಹಂಚಿದ ಅಂತ ತಲೆ ಉಪಯೋಗ್ಸಿ
ಬರ್ದು ತೋರ್ಸಿ ನೋಡೋಣ?
No comments:
Post a Comment