2023 ನೇ ಸಾಲಿನಲ್ಲಿ ವಿವಿಧ ಹಂತದ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕರಿಗೆ ಸವಿಜ್ಞಾನ ತಂಡದ ಪರವಾಗಿ ಹಾರ್ದಿಕ ಅಭಿನಂದನೆಗಳು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ
ಶ್ರೀಮತಿ ಸಪ್ನಾ ಶ್ರೀಶೈಲ ಅನಿಗೋಳ
ರಾಷ್ಟ್ರಪತಿಗಳಿಂದ ಶಿಕ್ಷಕ ದಿನಾಚರಣೆಯಂದು 2023ರ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಸಪ್ನಾ ಶ್ರೀಶೈಲ ಅನಿಗೋಳರವರಿಗೆ ಸಮಸ್ತ ಸವಿಜ್ಞಾನ ಓದುಗ ಬಂಧುಗಳ ಪರವಾಗಿ ಅಭಿನಂದನೆಗಳು.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸಪ್ನಾ ಶ್ರೀಶೈಲ ಅನಿಗೋಳ ಎಂ.ಎಸ್ಸಿ. ಬಿ.ಇಡಿ ಪದವಿಧರರು. ಕಳೆದ 19 ವರ್ಷಗಳಿಂದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಧುನಿಕತೆಗೆ ತಕ್ಕಂತೆ ಹೊಸ ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಂಡು ಬೋಧಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ (2021) ರಾಜ್ಯ ಸರ್ಕಾರದಿಂದ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದರು. ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರೋನ ಸಂದರ್ಭದಲ್ಲಿ ದೂರದ ಮಹಾಲಿಂಗಪುರದಿಂದ ಬೆಂಗಳೂರಿಗೆ ಬಂದು ದೂರದರ್ಶನದ ಸಂವೇದ ತರಗತಿಗಳನ್ನೂ ನಡೆಸಿಕೊಟ್ಟಿದ್ದರು. ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು .
ಪ್ರೊ. ಸಿ.ಎನ್. ಆರ್. ರಾವ್ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದ ಶ್ರೀಯುತ ಶಶಿಕುಮಾರ್ ಬಿ.ಎಸ್
ಜೂನ್ ೨೮ರಂದು ವಿಜ್ಞಾನ ಶಿಕ್ಷಕರಿಗೆ ನೀಡುವ ಪ್ರೊ. ಸಿ.ಎನ್ ಆರ್ ರಾವ್ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದ ಸವಿಜ್ಞಾನ ಮಾಸ ಪತ್ರಿಕೆಯ ಬಳಗದ ಶ್ರೀಯುತ ಶಶಿಕುಮಾರ್ ಬಿ.ಎಸ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು
No comments:
Post a Comment