ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, February 4, 2024

2024 ಫೆಬ್ರವರಿ ತಿಂಗಳ ಒಗಟುಗಳು

2024 ಫೆಬ್ರವರಿ ತಿಂಗಳ ಒಗಟುಗಳು

ರಚನೆ :  ರಾಮಚಂದ್ರ ಭಟ್‌ ಬಿ.ಜಿ.

 1. ನಾನ್ಯಾರು???

ಅತಿ ಸೂಕ್ಷ್ಮ ಕಣದೊಳಿರುವೆ 

ನಾ ರುದರ್ ಫೋರ್ಡರ ಆವಿಷ್ಕಾರದೊಳವಿತಿರುವೆ

 ಅಲ್ಫಾ ಕಣಗಳ ಒದೆತದಿಂದ ಹೊರ ಬಂದೆ 

ಜೇಮ್ಸ್ ಚಾಡ್ವಿಕರ ಕಣ್ಣಿಗೆ ಬಿದ್ದೆ ಆಕಸ್ಮಿಕವಾಗಿ !!

ಧನ ಋಣಗಳ ಗೊಡವೆ ಎನಗಿಲ್ಲ 

ಹೈಡ್ರೋಜನ್ ನಲ್ಲಿ ಇಲ್ಲದಿದ್ದರೇನಂತೆ? 

ಐಸೋಟೋಪ್ ಗಳಿಗೆ ಕಾರಣ ನಾ 

ದ್ರವ್ಯದ ಸ್ಥಿರತೆಗೆ ನನ್ನದಿದೆ ಕೊಡುಗೆ   

ಸುಳಿವರಿತು ಕಂಡುಹಿಡಿಯಿರಿ ನೀವು 

2. ಈ ಆಮ್ಲ ಯಾವುದು?

ಕಾರ್ಲ್ ವಿಲ್ ಹೆಲ್ಮ್ ಮೊದಲ ಬಾರಿಗೆ ಸಂಸ್ಕರಿಸಿದ,

ಬಿಳಿ ಬಣ್ಣದ, ವಾಸನೆ ಇಲ್ಲದ ಸಾವಯವ ಸಂಯುಕ್ತನಾ

 ಸ್ವಾದಕಾರಕನೂ ಹೌದು ಆಹಾರ ಸಂರಕ್ಷಕನೂ ಹೌದು 

C6H7O8 ಅಣುಸೂತ್ರ ಇರುವ ನನ್ನಲಿ 

 ಎಸ್ಟರೀಕರಣದಲ್ಲಿ ಪಾಲ್ಗೊಳ್ಳುವ ಕ್ರಿಯಾ ಗುಂಪುಗಳಿವೆ .

 ಉಸಿರಾಟದ ಕ್ರೆಬ್ಸ್ ಚಕ್ರದಲ್ಲೂ ನಾನಿರುವೆ

ಹುಳಿ ಹಣ್ಣುಗಳಲ್ಲಿರುವ ದುರ್ಬಲ ಆಮ್ಲ ನಾ 

 ಕರಿ ಶಿಲೀಂಧ್ರ ಆಸ್ಪರ್ ಜಿಲ್ಲಸ್ ನಿಂದಲೂ ಸಂಸ್ಕರಿಸುವರು 

 ಜಾಣ ಜಾಣಿಯರೇ ಸುಳಿವರಿತು ಥಟ್ಟನೆ ಯಾರೆಂದು ಹೇಳಿಬಿಡಿ ನೀವು!!!  


3.ನೀರೊಳಗಿನ ಬುದ್ಧಿವಂತ 

 ನೀರೊಳಿದ್ದರೂ ಮೀನಲ್ಲ 

ಈಜುರೆಕ್ಕೆ, ಕಿವಿರುಗಳಿಲ್ಲ ಸ್ಲಿಪ್ಪರ್ ಶ್ವಾಸಕೋಶಗಳೇ ಇವೆಯಲ್ಲ.

 ಕೋರೆ ಬಾ ಚಳಿಯಲ್ಲೂ ಕೊಬ್ಬಿನ ಬಬ್ಲರ್ ಗಳಿಂದ ರಕ್ಷಣೆ 

ಮಿದುಳು- ದೇಹಗಳ ರಾಶಿಯನುಪಾತದಲ್ಲಿ ಮಾನವನ ನಂತರದ ಸ್ಥಾನ 

 ಈ ಮಾನವ ಸ್ನೇಹಿಯ ಪಳಗಿಸಬಹುದು.

 ಥಟ್ ಎಂದು ಹೆಸರಿಸಬಲ್ಲಿರೇ ಈ ಬುದ್ಧಿವಂತ ಸ್ತನಿಯ?

4.ಸ್ವಾವಲಂಬಿ ಕಣದಂಗ

ಇಪ್ಪದರದ ದುಂಡಗಿನ ಕಣದಂಗ ನಾ

ಜೀವಮಂಡಲಕ್ಕೆ ಶಕ್ತಿಯ ಒದಗಿಸಬಲ್ಲೆ.

 ರುಬಿಸ್ಕೊ ಕಿಣ್ವಕ್ಕೆ ಧನ್ಯ ನಾ 

 ಹಸಿರು ಬಿಳಿ ಬಗೆ ಬಗೆಯ ವರ್ಣದಲ್ಲಿರಬಲ್ಲೆ,

ನನ್ನದೇ ಡಿಎನ್ಎ ಹೊಂದಿರುವೆ.  

 ಇರುಳು ಬೆಳಕಿನಾಟದಿ ಜೀವಿಗಳಿಗೆ ಉಸಿರು ನೀಡುವೆ 

 ಸುಳಿವರಿತು  ಹೇಳಿಬಿಡಿ ನನ್ನ ಹೆಸರ 


 5.ಈ ಸ್ಪಟಿಕ ಘನದ ಕೋನವೆಷ್ಟು 

 ಷಡ್ಭುಜಾಕೃತಿಯ ಸ್ಪಟಿಕ ಘನ

 ಗ್ರಾಫೈಟಿನಾಕಾರದ ಹರಳೊಳು ಉದ್ದ ಅಗಲಗಳು  ಸಮವಿದ್ದರೂ ಎತ್ತರವು ಸಮವಲ್ಲ

ಆಲ್ಫಾ ಬೀಟಾ ಕೋನಗಳು 90° ಇದ್ದರೆ ಗ್ಯಾಮಾ ಕೋನವೆಷ್ಟು?


6.ಇದಾವ ಗಣಿತಾಕೃತಿ?

 ಶೃಂಗರಹಿತ ಈ ಆಕೃತಿಗೆ ಬಾಗಿದ ಮೇಲ್ಮೈ ಒಂದಿದ್ದರೆ

ಎರಡಂಚುಗಳಿವೆ

ರೋಡ್ ರೋಲರ್ ನಲ್ಲೂ ಈ ಆಕೃತಿ ಇದೆ

ಸುಳಿವು ಬಳಸಿ ಹೇಳಿ ಬೇಗ.

No comments:

Post a Comment