ಒಗಟುಗಳು ೨೦೨೪ ಮಾರ್ಚ್
ರಚನೆ : ರಾಮಚಂದ್ರ ಭಟ್ ಬಿ.ಜಿ.
ನಾನು ಯಾರು?
೧) ೧೮ ಇಂಚುಗಳಷ್ಟು ನೀಳವಾಗಿರುವೆ ಆದರೆ, ಹಾವಲ್ಲ
ಕೊಳವೆಯಂತಿರುವೆ ಆದರೆ ಕೊಳಲಲ್ಲ
31 ಜೊತೆ ನರಗಳ ಸಂಪರ್ಕ
ಪರಾವರ್ತಿತ ಪ್ರತಿಕ್ರಿಯೆ ಕೇಂದ್ರ ನಾ
33 ಮೂಳೆಗಳ ಜೊತೆ ಮೆನೆಂಜಿಸ್‌ಗಳಿಂದಲೂ ಇದೆ ರಕ್ಷಣೆ
ಕೇಂದ್ರ ನರವ್ಯೂಹದ ಭಾಗವಾಗಿರುವ ನನ್ನ ಸುಳಿವು ಸಿಕ್ಕಿತೆ???
೨) ಮಿದುಳಿನ ಒಟ್ಟು ತೂಕದ 10% ತೂಕವಿದೆ
150 ಗ್ರಾಂ ತೂಗುವ ಈ ರಚನೆ ನಾಲ್ಕೂವರೆ ಇಂಚು ಅಗಲವಿದೆ
ಮಿದುಳಿನ ಅರ್ಧಕ್ಕೂ ಹೆಚ್ಚು ನರಕೋಶಗಳ ಸಂಪರ್ಕವಿದೆ
ದೇಹದ ಸಮತೋಲನವ ನಿರ್ವಹಿಸುವ ಮೆದುಳಿನ ಈ ಭಾಗ ಯಾವುದು?
೩) L3 ಎಂಬ ಹೆಸರಿನ ಸೂಕ್ಷ್ಮ ಆಲ್ಗೆಗಳುಳ್ಳ ದ್ಯುತಿ ಜೈವಿಕ ಸ್ಥಾವರ
2021ರ ನೂತನ ತಂತ್ರಜ್ಞಾನವಿದು
ಮಲಿನಗೊಂಡ ಗಾಳಿಯ ಶುದ್ಧೀಕರಿಸಬಲ್ಲದು
ರಸ್ತೆ, ಮನೆ , ಬಸ್ ಸ್ಟ್ಯಾಂಡ್ , ಮಾಲ್...
ಹೀಗೆ ಎಲ್ಲೆಡೆಗೂ ಇದನ್ನು ಸ್ಥಾಪಿಸಬಹುದು
ತಿರೆಗೆ ತಂಪೆರೆದು ಉಸಿರ ನೀಡುವ
ಹವಾಮಾನ ಬದಲಾವಣೆಗೆ ಪ್ರತ್ಯಸ್ತ್ರವಿದು
ಬೆಲ್ ಗ್ರೇಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರ ಶೋಧವಿದು
ಗುರುತಿಸಬಲ್ಲಿರೇ ಈ ಸರ್ಬಿಯಾದ ಸಂಶೋಧಕನ?
No comments:
Post a Comment