ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, April 4, 2024

ಎಪ್ರಿಲ್‌ ತಿಂಗಳ ಒಗಟುಗಳು


ಎಪ್ರಿಲ್‌ ತಿಂಗಳ ಒಗಟುಗಳು 

ರಚನೆ : ರಾಮಚಂದ್ರ ಭಟ್‌ ಬಿ.ಜಿ

 ೧. ನಾನು ನಿಮ್ಮ ದೇಹದ ಚಯಾಪಚಯ ಕ್ರಿಯೆಗಳ ಕಲ್ಮಶಗಳ ನಿವಾರಿಸುವೆ

 ಸುಮಾರು 150 ಗ್ರಾಂ ತೂಗುವೆ 12 ಸೆಂಟಿಮೀಟರ್ ಉದ್ದ 

ಏಳುವರೆ ಸೆಂಟಿಮೀಟರ್ ಅಗಲವಿರುವೆ 

ನನ್ನಲ್ಲಿ ಒಂದು ಮಿಲಿಯನ್ ಅಷ್ಟು ಸೂಕ್ಷ್ಮ ಸೋಸು ಘಟಕಗಳಿವೆ 

ಮೂರು ಹಂತಗಳಲ್ಲಿ ನೈಟ್ರೋಜನ್ ತ್ಯಾಜ್ಯ ಪ್ರತ್ಯೇಕಿಸುವೆ 

ಸುಳಿವರಿತು ಹೇಳಬಲ್ಲಿರೆ ನೀವು?


೨. ಬೆಳಕ ಕಂಡರೆ ನಾಚುವೆ ಕತ್ತಲೆಯೆಡೆಗೆ ಓಡುವೆ 

ಕುಡಿಬಳ್ಳಿಗಳು ಆಧಾರದ ಸುತ್ತ ಬೆಳೆಯುವಂತೆ ಮಾಡುವೆ 

ಸಸ್ಯದ ತುದಿ ಭಾಗಗಳ ಉದ್ದ ಹೆಚ್ಚಿಸಬಲ್ಲೆ 

ರಾಸಾಯನಿಕ ಸಂಕೇತಗಳ ಮೂಲಕ ಸಹಭಾಗಿತ್ವ ಉಂಟುಮಾಡಬಲ್ಲೆ ‌

ಸುಳಿವಿಂದ ನಾನ್ಯಾರೆಂದು ತಿಳಿಯಿತೇ ನಿಮಗೆ ?


೩. ನಾ ವಿಶಿಷ್ಟ!!  ಎಲ್ಲೆಂದರಲ್ಲಿ ನಾ ಕಾಣೆನು 

 ಪ್ರಜನನ‌ ಕೋಶಗಳಲ್ಲಿ ಲಿಂಗಾಣುಗಳಾಗಿಸುವೆ 

ನಿಮ್ಮ ತಂದೆ ತಾಯಿಯರಿಬ್ಬರ ಪೋಷಕರ ಗುಣಗಳೂ 

ನಿಮ್ಮಲ್ಲಿ ಕಾಣಿಸುವಲ್ಲಿ ನನ್ನ ಪಾತ್ರವಿದೆ 

ಒಂದು ಕೋಶವ ನಾಲ್ಕು ಮರಿ ಕೋಶಗಳಾಗಿಸುವ 

ರಹಸ್ಯವ ಬಯಲು ಮಾಡಬಲ್ಲಿರೇ?


೪. ಸರ್ ಹಂಫ್ರಿ ಡೇವಿ ಮಹಾನ್ ಆವಿಷ್ಕಾರ ಈತ 

ಜಗತ್ತನ್ನು ಪ್ರಭಾವಿಸಿದ ಸರ್ವ ಶ್ರೇಷ್ಠ ಸಂಶೋಧಕನೀತ

ಕಾಲೇಜು ಮೆಟ್ಟಲೇರದಿದ್ದರೇನಂತೆ ? ಬೆಂಜಿನ್ ಕಂಡುಹಿಡಿದ!!

ವಿದ್ಯುತ್‌ ವಿಭಜನೆಯ ನಿಯಮಗಳ ನೀಡಿದ 

ವಿದ್ಯುತ್ ಕಾಂತಿಯ ಪ್ರೇರಣೆಯ ಕಂಡುಹಿಡಿದ ಪ್ರೇರಣಾ ಸ್ರೋತ ‌

ಸುಳಿವರಿತು ಹೆಸರಿಸಬಲ್ಲಿರೇ ಈ ಸಾಧಕನ? 


೫. ಆಮ್ಲ ಪ್ರತ್ಯಾಮ್ಲಗಳೆರಡರ ಗುಣವಿರುವ ಬಹುರೂಪಿ ನಾ

ಎರಡರ ಜೊತೆಗೂ ವರ್ತಿಸಿ ನೀರು ಲವಣಗಳ ಉಂಟುಮಾಡಬಲ್ಲೆ 

ನನ್ನಲ್ಲಿರುವ ಲೋಹ ಇತ್ತಾಳೆಯನ್ನು ಉಂಟುಮಾಡಬಲ್ಲದು 

ಗ್ಯಾಲ್ವನಿಕರಣದಲ್ಲೂ ಪಾಲುಂಟು 

ಸುಳಿವರಿತು ವಿವರಿಸಬಲ್ಲಿರೇ ನನ್ನ ಮಹಿಮೆಯ?


೬. ನಾನೊಂದು ಸಾವಯವ ದ್ರಾವಕ 

ರಾಸಾಯನಿಕಗಳ ರಾಜನೊಂದಿಗೆ ಸೇರಿದರೆ ನಿರ್ಜಲೀಕರಣಗೊಳ್ಳುವೆ 

ಉತ್ಕರ್ಷಿಸಿದರೆ ನನ್ನ ನೀವು ಉಪ್ಪಿನಕಾಯಿ ತಯಾರಿಕೆಗೆ ಬಳಸಬಲ್ಲಿರಿ

ನಾ ಭವಿಷ್ಯದ ಇಂಧನವು ಹೌದು 

ಸೋಡಿಯಂ ನನ್ನಿಂದ ಹೈಡ್ರೋಜನ್ ಅನಿಲವನ್ನು ಕಸಿದೀತು

ಇಷ್ಟು ಸುಳಿವುಗಳು ಸಾಲವೇ ಈ ಒಗಟು ಒಡೆಯಲು?



No comments:

Post a Comment