ಒರಟು ಚರ್ಮಕ್ಕೆ ವ್ಯಾಸಲೀನ್ ಹಚ್ಚಿ!
ಈ ವಿವರಣೆಯನ್ನು ಕೇಳಿಸಿಕೊಳ್ಳುತ್ತಿದ್ದಂತೆ ಚೆಸ್‌ಬ್ರೊನ ಕಣ್ಣಮುಂದೆ ಡಾಲರ್ ತುಂಬಿದ ಚೀಲಗಳು ಕುಣಿದಾಡುತ್ತ ಹಾದುಹೋದಂತಾಯಿತು. ಅವನ ಮನದಲ್ಲಿ ಸರೆಂಡಿಪಿಟಿಯ ಸಂದೇಶವೊಂದು ಮಿಂಚಿನಂತೆ ಹಾರಿಬಂದು ಅವನ ಹೃದಯವನ್ನು ಬಡಿದೆಬ್ಬಿಸಿತು. ತನ್ನ ಕನಸಿನ ಲೋಕದಲ್ಲಿ ಕ್ಷಣಕಾಲ ತೇಲಾಡುತ್ತಿದ್ದ ಚೆಸ್‌ಬ್ರೊ ಕೂಡಲೇ ಚೇತರಿಸಿಕೊಂಡನು. ‘ಈ ರಾಡ್‌ವ್ಯಾಕ್ಸನ್ನು ನಾನು ಸ್ವಲ್ಪ ತೆಗೆದುಕೊಳ್ಳಲೇ?’ ಎಂದು ಆ ಮೇಸ್ತ್ರಿಯನ್ನು ಕೇಳಿದ. ಅವನು ‘ನಿಮ್ಮ ದೇಹದಲ್ಲಿ ಏನಾದರೂ ಗಾಯವಾಗಿದೆಯೇ?’ ಎಂದು ಸೋಜಿಗದಿಂದ ಇವನತ್ತ ತಿರುಗುತ್ತ ಪ್ರಶ್ನಿಸಿದ. ‘ಹಾಗೇನಿಲ್ಲ. ಇದರ ಬಗ್ಗೆ ನಾನು ಸಂಶೋಧನೆ ಮಾಡೋಣವೆಂದುಕೊಂಡಿದ್ದೇನೆ’ ಎಂದು ಚೆಸ್‌ಬ್ರೊ ಅಳುಕುತ್ತ ಉತ್ತರಿಸಿದ. ‘ನಾನೊಬ್ಬ ರಸಾಯನ ಶಾಸ್ತçಜ್ಞ, ಅದಕ್ಕೇ’ ಎಂದು ಚೇಸ್‌ಬ್ರೊ ಸಮಜಾಯಿಷಿ ನೀಡಿದನು. ಅಷ್ಟರಲ್ಲಿ ಮೇಸ್ತ್ರಿ ಒಂದಷ್ಟು ರಾಡ್‌ವ್ಯಾಕ್ಸನ್ನು ಪೈಪ್‌ನಿಂದ ಕೆರೆದು, ಕೈತುಂಬ ತುಂಬಿಕೊಂಡು, ಚಿಸ್‌ಬ್ರೊನ ಚಾಚಿದ ಕೈಗೆ ಬಳಿದ. ಇದು ಹೇಗಿದೆ ಎಂದು ಚೆಸ್‌ಬ್ರೊ ಅದನ್ನು ತನ್ನ ಮೂಗಿಗೆ ಹಿಡಿದು ವಾಸನೆ ನೋಡಿದನು. ಆದರೆ ಅದರಲ್ಲಿ ಯಾವ ವಾಸನೆಯೂ ಇರಲಿಲ್ಲ. ‘ಇದು ನಿಜಕ್ಕೂ ಗಾಯಗಳನ್ನು ಗುಣಪಡಿಸುತ್ತದೆಯಾ?’ ಎಂದು ಚಿಸ್‌ಬ್ರೊ ಮೇಸ್ತ್ರಿಯನ್ನು ಮತ್ತೊಮ್ಮೆ ಪ್ರಶ್ನಿಸಿದ. ಮೇಸ್ತ್ರಿ ತನ್ನ ಕೈಯ್ಯನ್ನು ಚೆಸ್‌ಬ್ರೊನ ಮುಂದೆ ಚಾಚಿ,
ಹಾಗಾದರೆ ತನಗೆ ಈ ವ್ಯಾಕ್ಸ್ ಅಧಿಕ ಪ್ರಮಾಣದಲ್ಲಿ ಬೇಕಾಗುತ್ತದೆ ಎಂದು ಚೆಸ್‌ಬ್ರೊ ಮೇಸ್ತ್ರಿಯನ್ನು ಕೇಳಿಕೊಂಡ. ಈ ಕಸವನ್ನು ಆದಷ್ಟು ವಿಲೇವಾರಿ ಮಾಡಿ ಅದರ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಯೋಚಿಸುತ್ತಿದ್ದ ಮೇಸ್ತ್ರಿಗೆ ಒಳ್ಳೆಯ ಅವಕಾಶ ಸಿಕ್ಕಿತು. ಹತ್ತು ಜಾಡಿಗಳನ್ನು ತರಿಸಿ, ಅವುಗಳಲ್ಲಿ ವ್ಯಾಕ್ಸನ್ನು ತುಂಬಿ ಅವನ್ನು ಚೆಸ್‌ಬ್ರೊಗೆ ಕೊಟ್ಟ. ದೊಡ್ಡ ನಿಧಿಯೇ ಸಿಕ್ಕಷ್ಟು ಹಿರಿಹಿಗ್ಗಿದ ಚೆಸ್‌ಬ್ರೊ, ತನ್ನ ಮೂಲ ಉದ್ದೇಶವನ್ನೂ ಮರೆತು, ಆ ಜಾಡಿಗಳನ್ನು ಹೊತ್ತುಕೊಂಡು ತನ್ನ ಊರಿಗೆ ಹಿಂದಿರುಗಿದ.
ಈ ವಸ್ತುವಿನಲ್ಲಡಗಿರುವ, ಗಾಯಗಳನ್ನು ಗುಣಪಡಿಸ ಬಲ್ಲ ಅಂಶವನ್ನು ಸಂಶೋಧಿಸಿ, ಬೇರ್ಪಡಿಸಿ, ಶುದ್ಧೀಕರಿಸಿ, ಮಾರುಕಟ್ಟೆಗೆ
ಬಿಟ್ಟರೆ ಈ ‘ನಿರುಪಯೋಗ ವಸ್ತು’ ವಿನಿಂದ ತಾನು ಹೇರಳವಾಗಿ ಹಣ ಸಂಪಾದಿಸಿ ಶ್ರೀಮಂತ ನಾಗಬಹುದೆಂದು
ಕನಸುಕಂಡ. ಕೂಡಲೇ ತನ್ನ ಸಂಶೋಧನೆ ಪ್ರಾರಂಭಿಸಿದ. ಸುಮಾರು 10 ವರ್ಷಗಳವರೆಗೆ ವಿಸ್ತರಿಸಿದ ಈ ಶೋಧದಲ್ಲಿ ಹಗಲಿರುಳೆನ್ನದೆ ಚೆಸ್‌ಬ್ರೊ
ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ಅದರಲ್ಲಿರುವ ಔಷಧೀಯ ಅಂಶವನ್ನು ಬೇರ್ಪಡಿಸುವಲ್ಲಿ ತಲ್ಲೀನನಾದ. ತನ್ನ ಪ್ರಯೋಗಾಲಯದಲ್ಲಿ 300ಕ್ಕೂ ಹೆಚ್ಚು ವಿವಿಧ ಪ್ರಯೋಗಗಳನ್ನು ನಡೆಸಿದರೂ ಅವನಿಗೆ ಬೇಕಾಗಿದ್ದ
ವಸ್ತು ದೊರಕಲಿಲ್ಲ. ಛಲಬಿಡದ ಚಿಸ್‌ಬ್ರೊ ಮುಂದುವರಿದು, ಕೊನೆಗೂ ಆ ವಿಶೇಷ ವಸ್ತುವನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದ.
ಇದನ್ನು ಬಿಳಿಯ ಪೆಟ್ರೊಲ್ಯಾಟಂ (Petrolatum) ಎಂದು ಕರೆದ.
ಕಚ್ಚಾವಸ್ತುವಿನಲ್ಲಿದ್ದ ತಿಳಿಯಾದ, ತೆಳುವಾದ, ಹಗುರವಾದ ಉತ್ಪನ್ನಗಳನ್ನು ಭಟ್ಟಿಯಿಳಿಸಿ, ಅರೆಘನ ದ್ರಾವಣವನ್ನು (ಜೆಲ್–gel) ತಯಾರಿಸಿದನು. ಈ ಉತ್ಪನ್ನ ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ತೈಲಗಳಂತೆ
ಕೊಳೆತು ನಾರದೆ, ವಾಸನಾರಹಿತವಾಗಿತ್ತು.
ಜನ ಮೈಗೆ ಹಚ್ಚಿಕೊಳ್ಳುತ್ತಿದ್ದ ಆಲಿವ್ ಎಣ್ಣೆ, ಸಾಸಿವೆಯೆಣ್ಣೆ ಮುಂತಾದವುಗಳಿಗಿಂತ ಭಿನ್ನವಾಗಿಯೂ ಅಪೂರ್ವವಾಗಿಯೂ ಇತ್ತು. ಈ ಉತ್ಪನ್ನವನ್ನು ಮಾರಾಟಕ್ಕೆ ಬಿಡುವ ಮುನ್ನ
ಅದರ ಸಾಮರ್ಥ್ಯವನ್ನರಿಯಬೇಕಲ್ಲ? ಇದಕ್ಕಾಗಿ ಚೆಸ್‌ಬ್ರೊ ತನ್ನನ್ನೇ ಬಲಿಪಶುವಾಗಿಸಿಕೊಂಡ. ಕಣ್ಣುಮುಚ್ಚಿಕೊಂಡು, ಹಲ್ಲು ಕಚ್ಚಿಕೊಂಡು, ತನ್ನ ಎರಡೂ ಕೈ ಗಳನ್ನು ಬೆಂಕಿಯಿಂದ
ಸುಟ್ಟುಕೊಂಡು, ಚಾಕುವಿನಿಂದ
ಗೀರಿಕೊಂಡು, ಆ್ಯಸಿಡ್
ಸುರಿದುಕೊಂಡ. ಎರಡು ಕೈಗಳಲ್ಲೂ ಒಂದೇ ತರಹದ ಗಾಯಗಳನ್ನು ಮಾಡಿಕೊಂಡ. ಒಂದು ಕೈ ಗಾಯಕ್ಕೆ ತಾನು
ತಯಾರಿಸಿದ್ದ ಮಾಂತ್ರಿಕ ಜೆಲ್ಲನ್ನು ಲೇಪಿಸಿಕೊಂಡ. ಇನ್ನೊಂದು ಕೈಗೆ ಔಷಧ ಲೇಪಿಸದೆ ಹಾಗೇ ಬಿಟ್ಟ.
ಔಷಧ ಲೇಪಿಸಿಕೊಂಡ ಗಾಯಗಳು ತಂಪಾಗಿದ್ದು ಉರಿತ, ನೋವುಗಳಿಲ್ಲದೆ, ಹಿತಕರ ವಾಗಿದ್ದವು.
ಮೂರು ಮೂರು ದಿನಗಳ ನಂತರ ಎರಡು ಕೈಗಳ ಗಾಯಗಳನ್ನು ಹೋಲಿಸಿ ಕೊಂಡಾಗ ಔಷಧ ಲೇಪಿಸಿ ಕೊಂಡಿದ್ದ
ಗಾಯಗಳು ಬಲುಬೇಗ ಗುಣವಾಗಿದ್ದವು.
ಹೀಗೆ ಕೆಲವು ವಾರಗಳು ಸ್ವಯಂಪ್ರಯೋಗಗಳು ನಡೆದವು. ಚೆಸ್‌ಬ್ರೊನ ಮುಂದಿನ ಗುರಿ ಹೊಸ ಮನೆಗಳ ನಿರ್ಮಾಣದತ್ತ ಕೇಂದ್ರೀಕೃತವಾಯಿತು. ಮನೆ ಕಟ್ಟುವ ನಿವೇಶನಗಳನ್ನು ಹುಡುಕಿಕೊಂಡು ಹೋಗಿ, ಅಲ್ಲಿಯ ಗಾರೆಕೆಲಸಗಾರರು ಕೆಲಸದ ವೇಳೆ ಗಾಯ ಮಾಡಿಕೊಂಡಾಗ ತನ್ನ ಜೆಲ್ಲನ್ನು ಅವರ ಗಾಯಗಳ ಮೇಲೆ ಲೇಪಿಸಿ ಪರಿಣಾಮವನ್ನು ಕುತೂಹಲದಿಂದ ಕಾದು ನೋಡುತ್ತಿದ್ದ. ತನ್ನ ಜೆಲ್ ಇವರ ಗಾಯಗಳ ನೋವನ್ನು ಶಮನ ಮಾಡುವುದಲ್ಲದೆ ಬಲುಬೇಗ ಅವನ್ನು ಗುಣಪಡಿಸಿದ್ದನ್ನು ಕಂಡು ಮನದಲ್ಲೇ ಹಿಗ್ಗಿದನು.
ಇದರಿಂದ ಉತ್ತೇಜಿತನಾದ ಚೆಸ್‌ಬ್ರೊ 1870ರಲ್ಲಿ ಬ್ರೂಕ್ಲಿನ್‌ನಲ್ಲಿ ಒಂದು ಕಾರ್ಖಾನೆಯನ್ನು ಸ್ಥಾಪಿಸಿದನು.
ಬಳಿಕ, ತನ್ನ ಉತ್ಪನ್ನಕ್ಕೆ, ಜನರ ಮನಮುಟ್ಟುವ ಆಕರ್ಷಕ ಹೆಸರೊಂದನ್ನು ಹುಡುಕ ತೊಡಗಿದ. ಜರ್ಮನ್
ಭಾಷೆಯಲ್ಲಿ ವಾಸರ್ (wasser) ಎಂದರೆ ನೀರು; ಗ್ರೀಕ್ ಭಾಷೆಯಲ್ಲಿ ಇಲೇನ್ (elain) ಎಂದರೆ
ಎಣ್ಣೆ ಎಂದು ಹೆಸರು. ಇವೆರಡನ್ನೂ ಜೋಡಿಸಿ, ನೀರೆಣ್ಣೆ ಅಥವ ವಾಸಲೈನ್ (wasserelain–vaseline) ಎಂದು ನಾಮಕರಣ ಮಾಡಿದನು. ಇಂದು ವಾಸಲೈನ್ ನಮ್ಮ ದೇಶದಲ್ಲೂ
ಮನೆಮಾತಾಗಿದೆ. ವೈದ್ಯರಿಗೂ ಮತ್ತು ಔಷಧ ವ್ಯಾಪಾರಿಗಳಿಗೂ ಸ್ಯಾಂಪಲ್‌ಗಳನ್ನು ಮುಕ್ತವಾಗಿ ಕೊಟ್ಟು, ಅದರ ಬಗ್ಗೆ ಜನರಲ್ಲಿ ಪ್ರಚಾರ ಮಾಡುವಂತೆ ಅವರನ್ನು ವಿನಂತಿಸಿಕೊಂ
ಡ. ಜನರಿಂದ ಬರಬಹುದಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತ ಕುಳಿತನು.
ದಿನಗಳುರುಳಿದರೂ ಅವನಿಗೆ ಒಂದು ಆರ್ಡರ್ ಕೂಡ ಬರಲಿಲ್ಲ. ಬೇಸರಗೊಂಡ ಚೆಸ್‌ಬ್ರೊ ಒಂದು
ಕುದುರೆಗಾಡಿಯ ತುಂಬ ತನ್ನ ಹೊಸ ಔಷಧವನ್ನು ಹೇರಿಕೊಂಡು ನ್ಯೂಯಾರ್ಕ್ ಗೆ
ಪ್ರಯಾಣಿಸಿದನು. ಅಲ್ಲಿ ಎಲ್ಲರಿಗೂ ತನ್ನ ಔಷಧದ ಪ್ರಭಾವವನ್ನು ವಿವರಿಸಿ, ಒಂದು ಕಿರುಸೀಸೆ ಔಷಧವನ್ನು ಮುಕ್ತವಾಗಿ ವಿತರಿಸಿದನು. ಜನ ಈ
ಔಷಧವನ್ನು ಬಳಸಿ ಅದರ ಪ್ರಭಾವವನ್ನರಿತರು.
ತಮ್ಮಲ್ಲಿದ್ದ ಸ್ಯಾಂಪಲ್ ಮುಗಿಯುತ್ತಿದ್ದಂತೆ ಜನ ಔಷಧ ಅಂಗಡಿ ಗಳಿಗೆ ಲಗ್ಗೆಯಿಟ್ಟರು. ಆದರೆ ಅಲ್ಲಿ ಈ ಔಷಧ ಇರಲಿಲ್ಲ. ಜನರ ಪರದಾಟವನ್ನು ಕಂಡ ಔಷಧ ವ್ಯಾಪಾರಿಗಳು ಚೆಸ್‌ಬ್ರೊನನ್ನು ಹುಡುಕಿಕೊಂಡು ಬಂದು ವಾಸಲೈನ್ ಔಷಧಕ್ಕೆ ಬೇಡಿಕೆಯಿಡಲು ಪ್ರಾರಂಭಿಸಿದರು. ದಿನೇ ದಿನೇ ಬೇಡಿಕೆಗಳು ಸುರಿಯಲಾರಂಭಿಸಿದವು. ಕೂಡಲೇ ಚೆಸ್‌ಬ್ರೊ ತನ್ನ ಉತ್ಪಾದನೆಯನ್ನು ಹೆಚ್ಚಿಸಿದನು. ಕುದುರೆ ಗಾಡಿಗಳಲ್ಲಿ ತನ್ನ ಸರಕನ್ನು ತುಂಬಿ ಕೊಂಡು ಸುತ್ತಮುತ್ತಲಿನ ನಗರಗಳಿಗೂ ಪ್ರಯಾಣಿಸಿ, ಅಲ್ಲಿಯ ಜನರಿಗೆ ಈ ಔಷಧಿಯನ್ನು ಮುಕ್ತವಾಗಿ ಹಂಚಿ ಪರಿಚಯಿಸಿದನು.
ಚೆಸ್‌ಬ್ರೊ ಕಂಡಿದ್ದ ಹಗಲುಗನಸು ಕುದುರಿ
ನನಸಾಯಿತು. 1874ರ ಹೊತ್ತಿಗೆ ಅವನ ಔಷಧ ಕಡಲೆಪುರಿಯಂತೆ ನಿಮಿಷಕ್ಕೆ ಒಂದು ಬಾಟಲಿನಂತೆ ಮಾರಾಟವಾಗಲಾರಂಭಿಸಿತು. 1876ರಲ್ಲಿ ಲ್ಯಾನ್ಸೆಟ್ ಎಂಬ ಬ್ರಿಟಿಷ್ ವೈದ್ಯಕೀಯ ನಿಯತಕಾಲಿಕದಲ್ಲಿ
ವಾಸಲೈನ್‌ನ ಗುಣಗಾನ ಮಾಡಿ ಅದನ್ನು ವೈಭವೀಕರಿಸುವ ಒಂದು ವಿಶ್ಲೇಷಣಾ ಲೇಖನ ಪ್ರಕಟವಾಯಿತು. ಇದರಿಂದ, 1878ರಲ್ಲಿ ಪ್ಯಾರಿಸ್‌ನಲ್ಲೂ ಇದು ಅತ್ಯಂತ ಜನಪ್ರಿಯವಾಗಿ ಹೆಚ್ಚು
ಸಂಖ್ಯೆಯಲ್ಲಿ ಮಾರಾಟವಾಯಿತು.
1880ರ ವೇಳೆಗೆ ಅಮೆರಿಕದ ಮನೆಮನೆಯಲ್ಲೂ ಇದೊಂದು ಸಿದ್ಧೌಷಧವಾಗಿ ಬೀಡುಬಿಟ್ಟಿತು. ಈ ಔಷಧ ಕನಿಷ್ಠ ಉಷ್ಣತೆಯಲ್ಲೂ ಹೆಪ್ಪುಗಟ್ಟದೆ ಇರುವುದರಿಂದ ಉತ್ತರಧ್ರುವಕ್ಕೆ ಮೊದಲು ಪ್ರಯಾಣಿಸಿದ ಸೈನ್ಯದ ಕಮ್ಯಾಂಡರ್ ರಾಬರ್ಟ್ ಪಿಯರಿ (Robert Piery) ವಾಸಲೈನನ್ನು ತಮ್ಮೊ ಡನೆ ಕೊಂಡೊಯ್ದರೆಂದು ಹೇಳಲಾಗಿದೆ. ವಾಸಲೈನ್ ಒಂದು ಜಿಡ್ಡು ಪದಾರ್ಥ. ಪೆಟ್ರೋಲಿಯಂನಿಂದ ಶುದ್ಧೀಕರಿಸಿದ ಈ ಹೈಡ್ರೊಕಾರ್ಬನ್ ಮಿಶ್ರಣ ನೀರನ್ನು ವಿಕರ್ಷಿಸಬಲ್ಲದು (repel). ಇದರಿಂದಲೇ ಇದು ಗಾಯಗಳನ್ನು ಗುಣಪಡಿಸುವಲ್ಲಿ ಅತ್ಯಂತ ಯಶಸ್ವಿಯಾಗಿದೆ. ಚರ್ಮವನ್ನು ಮೃದುವಾಗಿಸುವಲ್ಲಿ ಇದಕ್ಕೆ ಸರಿಸಾಟಿಯಾದ ಮತ್ತೊಂದು ಔಷಧವಿಲ್ಲವೆಂದು ಜನ ಅಭಿಪ್ರಾಯ ಪಡುತ್ತಾರೆ. ಇದಲ್ಲದೆ, ವ್ಯಾಸಲೈನ್ ಎಲ್ಲ ರೀತಿಯ ತೊಗಲುಗಳ ತೈಲಲೇಪನಗಳಿಗೆ ಅತ್ಯಂತ ಸೂಕ್ತವಾಗಿದೆ. ಇದನ್ನು ಒಳ್ಳೆಯ ಜಾರಿಕ (lubricant )ವಾಗಿ ಬಳಸುತ್ತಾರೆ. ಅತಿ ಶುದ್ಧೀಕರಿಸಿದ ವಾಸಲೈನನ್ನು ಕೇಶಶೃಂಗಾರಕ್ಕಾಗಿ ಬಳಸುತ್ತಾರೆ. ಕಟ್ಟಿದ ಮೂಗಿಗೆ
ಕೆಲಸವನ್ನು ಕಳೆದುಕೊಂಡು, ನಡುಬೀದಿಗೆ ಬರುವ ಚಿಂತಾಜನಕ ಸ್ಥಿತಿಯಲ್ಲಿದ್ದ ಚೆಸ್‌ಬ್ರೊ ಪರ್ಯಾಯ ಕೆಲಸವನ್ನರಸಿ ಅಲೆಯುತ್ತಿದ್ದಾಗ ಆಕಸ್ಮಿಕವಾಗಿ ರಾಡ್‌ವ್ಯಾಕ್ಸ್‌ನ ಪರಿಚಯವಾಯಿತು.
ಆದರೆ ಅದರ ವಿವರಗಳನ್ನು ತಿಳಿದ ಅವನ ಮನಸ್ಸನ್ನು ಪ್ರಚೋದಿಸಿ ಸರೆಂಡಿಪಿಟಿ ತನ್ನ ಪವಾಡವನ್ನು ಪ್ರದರ್ಶಿಸಿಬಿಟ್ಟಿತು. ಆ ಕಸವನ್ನು ಅನೇಕರು ಗಮನಿಸಿದ್ದರೂ ಆ ಕಸದಿಂದ ರಸವನ್ನು ಉತ್ಪಾದಿಸಬಹುದೆಂಬ ಯೋಚನೆ ಚೆಸ್‌ಬ್ರೊಗೇ ಹೊಳೆದಿದ್ದು ವೈಜ್ಞಾನಿಕ ಆಕಸ್ಮಿಕ.
No comments:
Post a Comment