ಸವಿಜ್ಞಾನ
ಲೇಖಕರು -ಬಿ.ಎನ್.ರೂಪ,
ಸಹ ಶಿಕ್ಷಕರು, ಕೆ.ಪಿ.ಎಸ.
ಜೀವನ್ ಬಿಮಾ ನಗರ ಬೆಂಗಳೂರು ದಕ್ಷಿಣ ವಲಯ -4
ಆಸಕ್ತರಿಗೆ ಜ್ಞಾನವನ್ನು ಕಟ್ಟಿಕೊಡುವ,
ವಿಜ್ಞಾನದ ವಿಚಾರಧಾರೆಗಳನ್ನು ನೀಡುವ ,
ನಮ್ಮ ಸವಿಜ್ಞಾನಕ್ಕೆ ಈಗ ಐದು ವರ್ಷ .
ವಿಜ್ಞಾನದ ವೈವಿಧ್ಯಮಯ ಬರಹಗಳು ,
ವೈಜ್ಞಾನಿಕ ಮನೋಭಾವವನ್ನು ಎತ್ತಿ ಹಿಡಿಯುವ ಲೇಖನಗಳು,
ವಿಜ್ಞಾನಿಗಳ ಪರಿಚಯವನ್ನು ನೀಡುವ ,
ನಮ್ಮ ಸವಿಜ್ಞಾನಕ್ಕೆ ಈಗ ಐದು ವರ್ಷ
ವೈಜ್ಞಾನಿಕ ಚಿಂತನೆಗಳು,
ವಿಜ್ಞಾನದ ಒಗಟುಗಳು, ಪದಬಂಧಗಳು ,
ವಿಜ್ಞಾನದ ಸೈಟೂನ್ ಗಳು , ವ್ಯಂಗ್ಯ ಚಿತ್ರಗಳ ರಸದೂತಣ ನೀಡುವ ,
ನಮ್ಮ ಸವಿಜ್ಞಾನಕ್ಕೆ ಈಗ ಐದು ವರ್ಷ.
ಗ್ರಹಣವೆಂಬ ಕತ್ತಲೆಯ ಬೆಳಕಿನಾಟದಿಂದ,
ಹುಣ್ಣಿಮೆ ಎಂಬ ಬೆಳಕಿನ ಚಂದ್ರನ ಮೇಲೆ,
ಚಂದ್ರಯಾನದವರೆಗೂ ,
ವೈವಿಧ್ಯಮಯ ವಿನೋದಮಯ,
ಸಂಶೋಧನೆಯ ಲೇಖನಗಳನ್ನು ಒಳಗೊಂಡ.
ನಮ್ಮ ಸವಿಜ್ಞಾನಕ್ಕೆ ಈಗ ಐದು ವರ್ಷ.
No comments:
Post a Comment