ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, June 4, 2025

ಪ್ರಕೃತಿ ಮಾತೆ

 ಪ್ರಕೃತಿ ಮಾತೆ


ರಚನೆ : ಬಿ.ಎನ್.ರೂಪ,  
ಸಹ ಶಿಕ್ಷಕರು
ಕೆ.ಪಿ.ಎಸ್ ಜೀವನ್ ಬಿಮಾ ನಗರ 

ಬೆಂಗಳೂರು ದಕ್ಷಿಣ ವಲಯ -4          

                      




ಮುಗಿಲೆತ್ತರದ ಮರ,

 ಬಾನೆಲ್ಲ ನೀಲಿ  ಓಕುಳಿಯ  ಅಬ್ಬರ,

 ಧರೆಗಿಳಿಯುವ ನೇಸರದ ಕಿರಣ ,

ಹಾರಾಡುವ  ತಂಗಾಳಿಯ ಅಲೆ,

ಇದುವೇ ಪ್ರಕೃತಿ ಮಾತೆಯ ಕೊಡುಗೆ.

 

ವೈವಿದ್ಯತೆಯ ಹಸಿರು ಸಸ್ಯಗಳು,

 ಹರಿಯುವ ಜೀವನದಿಗಳು,

 ವಿವಿಧ ಪರಿಸರ ವ್ಯವಸ್ಥೆಯಲ್ಲಿನ ಅದ್ಭುತ ಜೀವಿಗಳು,

 ಇದುವೇ ಪ್ರಕೃತಿ ಮಾತೆಯ ಕೊಡುಗೆ.

 

ಪ್ರಕೃತಿ ಮಾತೆಯ ಸೀರೆಯ  ಚೆಂಗನ್ನು ಹಿಡಿದು,

 ನಡೆಯುವ ಜೀವಿಗಳು,

  ಭೂಮಾತೆಯ ಒಡಲಿನಲ್ಲಿರುವ ಖನಿಜ ಲವಣಗಳು,

  ಅದ್ಭುತಕ್ಕೆ ಸಾಟಿ ಉಂಟೆ ?

 ಇದೆ ಪ್ರಕೃತಿ ಮಾತೆಯ ಕೊಡುಗೆ.

 

ಬಂದೇ ಬಿಟ್ಟಿತು  ಮತ್ತೊಂದು ಪರಿಸರ ದಿನ,

 ಪರಿಸರ ಸಂರಕ್ಷಣೆಯ  ದ್ಯೋತಕದ  ದಿನ,

 ಜನಮನಗಳಲ್ಲಿ ಜಾಗೃತಿ ಮೂಡಿಸುವ ದಿನ,

 ಜೂನ್ 5ರ ಜಾಗತಿಕ ಆಚರಣೆ ದಿನ,

 

ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ (World Environment Day in 2025 will focus on ending plastic pollution) ಥೀಮ್ ನೊಂದಿಗೆ ಆಚರಿಸೋಣ.


1 comment: