ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Thursday, September 4, 2025

ರೇಬೀಸ್ ಬಗ್ಗೆ ವಾಸ್ತವದ ಅರಿವಿರಲಿ; ಆದರೆ ಭಯಬೇಡ

 

ರೇಬೀಸ್ ಬಗ್ಗೆ ವಾಸ್ತವದ ಅರಿವಿರಲಿ; ಆದರೆ ಭಯಬೇಡ

ಲೇಖನ : ಬಸವರಾಜ ಎಮ್ ಯರಗುಪ್ಪಿ 

ಶಿಕ್ಷಕರು, ಹವ್ಯಾಸಿ ಬರಹಗಾರರು

ಸಾ.ಪೊ ರಾಮಗೇರಿ, ತಾಲೂಕು ಲಕ್ಷ್ಮೇಶ್ವರ, ಜಿಲ್ಲಾ ಗದಗ. 

ದೂರವಾಣಿ 9742193758 

ಮಿಂಚಂಚೆ basu.ygp@gmail.com.


ಸೆಪ್ಟೆಂಬರ್ 28-ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತದೆ; ತನ್ನಿಮಿತ್ತ ವಿಶೇಷ ಲೇಖನ. 

ವಿಲಿಯಂ ಓಸ್ಲರ್ ಹೇಳಿದಂತೆ "ಒಳ್ಳೆಯ ವೈದ್ಯನು ರೋಗವನ್ನು ಗುಣಪಡಿಸುತ್ತಾನೆ; ಮಹಾನ್ ವೈದ್ಯರು ರೋಗ ಹೊಂದಿರುವ ರೋಗಿಗೆ ಚಿಕಿತ್ಸೆ ನೀಡುತ್ತಾರೆ" ಅಂದರೆ ಮಹಾನ್ ವೈದ್ಯರು ರೋಗಿಯನ್ನು ಮತ್ತು ಆ ರೋಗಿಯ ಅನಾರೋಗ್ಯದ ಸಂದರ್ಭವನ್ನು ಅರ್ಥಮಾಡಿಕೊಳ್ಳಬಹುದು. ಅವರು ಹೇಳಿದಂತೆ ಸವಾಲನ್ನು ತೆಗೆದುಕೊಳ್ಳಿ. ಮಹಾನ್ ವೈದ್ಯರಾಗಿರಿ. ಪೂರ್ಣ ರೋಗದ ಕಥೆಯನ್ನು ಅರ್ಥಮಾಡಿಕೊಳ್ಳಿ. ಸರಿಯಾದ ರೋಗ ನಿರ್ಣಯವನ್ನು ಮಾಡಿ. ಆ ರೋಗಿಗೆ ಸೂಕ್ತವಾದ ಚಿಕಿತ್ಸಾ ಯೋಜನೆಗಳನ್ನು ವಿನ್ಯಾಸಗೊಳಿಸಲು ರೋಗಿಯನ್ನು ಸಂಪರ್ಕಿಸಿ.

ಸ್ಥಿರತೆ ಮತ್ತು ಸಹಾನುಭೂತಿಯೊಂದಿಗೆ ಫಲಿತಾಂಶಗಳನ್ನು ಅನುಸರಿಸಿ. ಹಾಗೆ ಮಾಡುವುದರಿಂದ, ನೀವು ಅತ್ಯುನ್ನತ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಮಾತ್ರ ಒದಗಿಸಲು ಸಾಧ್ಯ ಎನ್ನುವುದು ಅಭಿಪ್ರಾಯ. ಅಂತೆಯೇ ರೇಬೀಸ್, ಕ್ಯಾನ್ಸರ್ ಹಾಗೂ ಇತರ ರೋಗಗಳಿಗೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇದ್ದರೆ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ..! ಹಾಗೇಯೇ ರೇಬೀಸ್ ಕೂಡಾ ಇದಕ್ಕೆ ಹೊರತಾಗಿಲ್ಲ. ಹೌದು ಓದುಗರೆ ನಾನು ಹೇಳ ಹೊರಟಿರುವುದು ರೇಬೀಸ್ ಬರದಂತೆ ನೋಡಿಕೊಳ್ಳಬೇಕು, ಕಾಳಜಿ ವಹಿಸಬೇಕು ಎಂದು. 

ವಿಶ್ವ ರೇಬೀಸ್ ದಿನವನ್ನು ಪ್ರತಿವರ್ಷ ವಿಶ್ವದಾದ್ಯಂತ ಸೆಪ್ಟೆಂಬರ್ 28ರಂದು ಆಚರಿಸಲಾಗುತ್ತದೆ. ಅಂದು ರೇಬೀಸ್ ಖಾಯಿಲೆಗೆ ಮೊಟ್ಟ ಮೊದಲು ಲಸಿಕೆ ಕಂಡು ಹಿಡಿದು, ಅದರ ತಡೆಗಟ್ಟುವಿಕೆಗೆ ಅಡಿಪಾಯ ಹಾಕಿದ "ಸರ್ ಲೂಯಿಸ್ ಪಾಶ್ಚರ್" ಮರಣ ಹೊಂದಿದ ದಿನ. ಈ ದಿನದಂದು ರೇಬೀಸ್ ಖಾಯಿಲೆ  ಮತ್ತು ಅದರ ತಡೆಗಟ್ಟುವಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ವಿಶ್ವ ರೇಬೀಸ್ ದಿನವು ಮಾನವರು ಮತ್ತು ಪ್ರಾಣಿಗಳ ಮೇಲೆ ರೇಬೀಸ್ನ ಪ್ರಭಾವದ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಅಪಾಯದಲ್ಲಿರುವ ಸಮುದಾಯಗಳಲ್ಲಿ ರೋಗವನ್ನು ತಡೆಗಟ್ಟುವುದು ಹೇಗೆ ಎಂಬುದರ ಕುರಿತು ಮಾಹಿತಿ ಮತ್ತು ಸಲಹೆಯನ್ನು ಒದಗಿಸುತ್ತದೆ.

#ಈ ದಿನದ ಇತಿಹಾಸ:

ವಿಶ್ವ ರೇಬೀಸ್ ದಿನವನ್ನು ಮೊದಲ ಬಾರಿಗೆ  ಸೆಪ್ಟೆಂಬರ್ 28,2007ರಂದು ಮೊದಲ ಬಾರಿಗೆ ಆಚರಿಸಲಾಯಿತು. ಗ್ಲೋಬಲ್ ಅಲೈಯನ್ಸ್ ಫಾರ್ ರೇಬೀಸ್ ಕಂಟ್ರೋಲ್ ಮತ್ತು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಮತ್ತು ವಿಶ್ವ ಆರೋಗ್ಯ ಸಂಘಟನೆ ಜೊತೆಗೂಡಿ ಮೊದಲ ಬಾರಿಗೆ ರೇಬೀಸ್ ದಿನವನ್ನು ಆಚರಿಸಲಾಯಿತು.

#ರೇಬೀಸ್ ಎಂದರೆ..

ರೇಬೀಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗವಾಗಿದೆ. ರೇಬೀಸ್ ವೈರಸ್  ರಾಬ್ಡೋ ವಿರಿಡೇ ವರ್ಗಕ್ಕೆ ಸೇರಿದೆ. ರೇಪಿಡ್ ಎಂದರೆ ಲ್ಯಾಟಿನ್​​ನಲ್ಲಿ ಹುಚ್ಚು ಎಂಬ ಅರ್ಥವಿದೆ. ಇದೇ ಕಾರಣದಿಂದಾಗಿ ಈ ರೋಗಕ್ಕೆ ರೇಬೀಸ್ ಎಂಬ ಹೆಸರು ಬಂದಿದೆ. ಸೋಂಕಿತ ಪ್ರಾಣಿಗಳಲ್ಲಿ ಬೇರೆ ಪ್ರಾಣಿಗಳಿಗೆ ಕಚ್ಚಿದಾಗ ಅಥವಾ ಸೋಂಕಿತ ಪ್ರಾಣಿಗಳ ಜೊಲ್ಲು ಬೇರೊಂದು ಪ್ರಾಣಿಗೆ ಯಾವುದಾದರೂ ರೀತಿ ರವಾನೆಯಾದಾಗ ಈ ಕಾಯಿಲೆ ಹರಡುತ್ತದೆ. ಮನುಷ್ಯನಿಗೆ ಸಾಮಾನ್ಯವಾಗಿ ನಾಯಿಯಿಂದ ಈ ಸೋಂಕು ಹರಡುತ್ತದೆ.

ರೇಬೀಸ್ ರೋಗಲಕ್ಷಣಗಳು:

ರೇಬೀಸ್‌ನ ಮೊದಲ ರೋಗಲಕ್ಷಣಗಳು ಫ್ಲೂಗೆ ಹೋಲುತ್ತವೆ. ರೇಬಿಸ್ ವೈರಾಣುವಿನ ಸೋಂಕಿನಿಂದ ಬರುವ ರೇಬಿಸ್ ಮುಖ್ಯವಾಗಿ ಮೆದುಳಿನ ಜೀವಕೋಶಗಳಿಗೆ ಊತವನ್ನುಂಟು  ಮಾಡಬಹುದು. ಮೊದಲು ಜ್ವರ ಬರಬಹುದು. ಬಳಿಕ ಗಾಯದ ಬಳಿ ಸಂವೇದನೆ, ವಾಕರಿಕೆ, ವಾಂತಿ, ತಳಮಳ, ಆತಂಕ, ಗೊಂದಲ, ಹೈಪರ್ ಆಕ್ಟಿವಿಟಿ, ತಡೆದುಕೊಳ್ಳಲಾಗದ ಉದ್ರೇಕ, ನಿಯಂತ್ರಣವಿಲ್ಲದ ಚಲನವಲನಗಳು, ನೀರಿನ ಭಯ, ದೇಹದ ಭಾಗಗಳ ಮೇಲೆ ನಿಯಂತ್ರಣ ತಪ್ಪುವಿಕೆ, ಪ್ರಜ್ಞೆ ತಪ್ಪುವುದು, ಇವೆಲ್ಲವೂ ರೋಗದ ಲಕ್ಷಣಗಳಾಗಿವೆ.

ರೇಬೀಸ್ ಹರಡಬಲ್ಲ ಪ್ರಾಣಿಗಳು:

ಕಾಡು ಪ್ರಾಣಿಗಳು, ಅದೇ ರೀತಿಯಾಗಿ ಸಾಕು ಪ್ರಾಣಿಗಳು ಕೂಡ ರೇಬೀಸ್ ಹಬ್ಬಿಸುತ್ತವೆ. ಇವುಗಳಲ್ಲಿ ಮುಖ್ಯವಾಗಿ ನಾಯಿ, ಬಾವಲಿ, ಬೆಕ್ಕು, ದನ, ಆಡು, ಕುದುರೆ, ನೀರ್ನಾಯಿಗಳು, ನರಿ, ಮಂಗ ಇತ್ಯಾದಿಗಳು.

ರೇಬೀಸ್ ಹರಡುವಿಕೆ:

ರೇಬೀಸ್ ರೋಗವು ರೇಬೀಸ್ ವೈರಸ್ ಸೋಂಕಿತ ಪ್ರಾಣಿಗಳು, ಮನುಷ್ಯರನ್ನು ಕಚ್ಚುವುದರಿಂದ ಹರಡುತ್ತದೆ.‌ ರೇಬೀಸ್ ವೈರಸ್ ರೇಬೀಸ್ ಸೋಂಕನ್ನು ಉಂಟುಮಾಡುತ್ತದೆ. ಸೋಂಕಿತ ಪ್ರಾಣಿಗಳ ಲಾಲಾರಸದ ಮೂಲಕ ವೈರಸ್ ಹರಡುತ್ತದೆ. ಸೋಂಕಿತ ಪ್ರಾಣಿಗಳು ಮತ್ತೊಂದು ಪ್ರಾಣಿ ಅಥವಾ ವ್ಯಕ್ತಿಯನ್ನು ಕಚ್ಚುವ ಮೂಲಕ ವೈರಸ್ ಹರಡಬಹುದು. ಅಪರೂಪದ ಸಂದರ್ಭಗಳಲ್ಲಿ, ಸೋಂಕಿತ ಪ್ರಾಣಿಯು ನಿಮ್ಮ ಚರ್ಮದ ಮೇಲಿನ ತೆರೆದ ಗಾಯವನ್ನು ನೆಕ್ಕಿದಾಗ ಸೋಂಕಿತ ಲಾಲಾರಸವು ತೆರೆದ ಗಾಯದ ಮೂಲಕ  ಅಥವಾ ಬಾಯಿ ಅಥವಾ ಕಣ್ಣುಗಳ ಲೋಳೆಯ ಪೊರೆಗಳನ್ನು ಪ್ರವೇಶಿಸಿದಾಗ ರೇಬೀಸ್ ಹರಡಬಹುದು.

*ಸುಮಾರು ಶೇಕಡಾ 96ರಷ್ಟು ನಾಯಿ ಕಡಿತವು ಬೀದಿ ನಾಯಿಗಳಿಂದ ಸಂಭವಿಸುತ್ತವೆ.

*ರೇಬೀಸ್ ತಡೆಗಟ್ಟುವಿಕೆಯ ಒಂದು ಪ್ರಮುಖ ಸಮಸ್ಯೆಯೆಂದರೆ ಅಪಾಯದಲ್ಲಿರುವ ಜನರಲ್ಲಿ ಮೂಲಭೂತ ಜೀವ ಉಳಿಸುವ ಜ್ಞಾನದ ಕೊರತೆ.

ತಡೆಗಟ್ಟುವಿಕೆಯ ಕ್ರಮಗಳು:

*ನಿಮ್ಮ ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸಿರಿ.

*ಕಾಡು ಪ್ರಾಣಿಗಳ ಹತ್ತಿರ ಹೋಗಬೇಡಿ.ಆದ್ದರಿಂದ ರೇಬೀಸ್ ಹೊಂದಿರುವ ಕಾಡು ಪ್ರಾಣಿಗಳು ಜನರಿಗೆ ಹೆದರುವುದಿಲ್ಲ. 

*ನಿಮ್ಮ ಸಾಕುಪ್ರಾಣಿಗಳನ್ನು ಸೀಮಿತವಾಗಿ ಇರಿಸಿ. ನಿಮ್ಮ ಸಾಕುಪ್ರಾಣಿಗಳನ್ನು ಒಳಗೆ ಇರಿಸಿ ಮತ್ತು ಹೊರಗೆ ಇರುವಾಗ ಅವುಗಳನ್ನು ಮೇಲ್ವಿಚಾರಣೆ ಮಾಡಿ.

*ನಿಮ್ಮ ಸಾಕುಪ್ರಾಣಿಗಳು ಕಾಡು ಪ್ರಾಣಿಗಳೊಂದಿಗೆ ಸಂಪರ್ಕಕ್ಕೆ ಬರದಂತೆ ಇದು ಸಹಾಯ ಮಾಡುತ್ತದೆ.

*ಸ್ಥಳೀಯ ಅಧಿಕಾರಿಗಳಿಗೆ ದಾರಿತಪ್ಪಿರುವ ಪ್ರಾಣಿಗಳ ಮಾಹಿತಿಯ ವರದಿ ಮಾಡಿ. 

*ಬಾವಲಿಗಳನ್ನು ನಿಮ್ಮ ಮನೆಯಿಂದ ಹೊರಗಿಡಿ. 

*ಸಾಕುಪ್ರಾಣಿಗಳ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸಿ. 

*ಸಮಾಜದ ಎಲ್ಲಾ ಹಂತಗಳಲ್ಲಿ ರೇಬೀಸ್ ಅನ್ನು ಹೇಗೆ ತಡೆಯುವುದು ಎಂಬುದರ ಕುರಿತು ಶೈಕ್ಷಣಿಕ ಜಾಗೃತಿಯನ್ನು ಸುಧಾರಿಸುವುದು.

*ರೋಗ ನಿರ್ವಹಣೆಯ ಸಮಗ್ರ ಮಾದರಿಯ ಬಳಕೆಯನ್ನು ಉತ್ತೇಜಿಸುವುದು.

*ರೇಬೀಸ್‌ನಿಂದ ಜೀವಗಳನ್ನು ತಡೆಗಟ್ಟುವುದು ಕಷ್ಟವೇನಲ್ಲ, ನಾವು ಕಾರ್ಯನಿರ್ವಹಿಸಬೇಕು ಅಷ್ಟೇ.

ರೇಬೀಸ್ ಲಸಿಕೆ ಅಭಿವೃದ್ಧಿ:

ರೇಬೀಸ್ ಲೂಯಿಸ್ ಪಾಶ್ಚರ್ ಅವರು ತಮ್ಮ ಸಹೋದ್ಯೋಗಿಗಳ ಸಹಯೋಗದೊಂದಿಗೆ ಮೊದಲ ಪರಿಣಾಮಕಾರಿ ರೇಬೀಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದರು. ಅವರೊಬ್ಬ ಫ್ರೆಂಚ್ ರಾಸಾಯನಿಕ ಶಾಸ್ತ್ರಜ್ಞ ಮತ್ತು ಸೂಕ್ಷ್ಮಜೀವಿ ವಿಜ್ಞಾನ ಶಾಸ್ತ್ರಜ್ಞ. ಅವರು ಕಾಯಿಲೆಗಳ ಕಾರಣ ಮತ್ತು ಅವುಗಳ ಪರಿಹಾರಕ್ಕಾಗಿ ಅವರು ಶ್ರಮಿಸಿರುವುದನ್ನು ಮತ್ತು ಸಂಶೋಧನೆ ಮಾಡಿರುವುದನ್ನು ಯಾವಾಗಲೂ ನೆನೆಯಲಾಗುತ್ತದೆ. ಅವರ ಸಂಶೋಧನೆಗಳು ಮಗುವಿನ ಮಾರಕ ಜ್ವರದ ಪತ್ತೆಯ ಮೂಲಕ ಚಿಕ್ಕಮಕ್ಕಳ ಸಾವು ಕಡಿಮೆಯಾಗಿದೆ. ಅಲ್ಲದೇ ರೇಬೀಸ್ ರೋಗಕ್ಕೆ ಅವರು ಮೊದಲ ಬಾರಿಗೆ ಲಸಿಕೆಯನ್ನು ಕಂಡುಹಿಡಿದರು. ಅವರ ಪ್ರಯೋಗಗಳಿಂದ  ಕ್ರಿಮಿಗಳ ಮೂಲಕ ರೋಗ ಹರಡುವ ವಿಧಾನವನ್ನು ಕಂಡು ಹಿಡಿದರು. ಹಾಲು ಮತ್ತು ವೈನ್ (ಮದ್ಯಸಾರ)ಗಳಿಂದ ಉಂಟಾಗುವ ಸಾವು ನೋವುಗಳನ್ನು ಆತ ಪಾಶ್ಚರೈಸೇಶನ್ ಮೂಲಕ ಕಡಿಮೆ ಮಾಡಿದ ಸೂಕ್ಷ್ಮ ಜೀವಿ ವಿಜ್ಞಾನದ ಸ್ಥಾಪಕರು ಹೌದು. 

ಒಟ್ಟಾರೆಯಾಗಿ ವಿಶ್ವ ಮಟ್ಟದಲ್ಲಿ ರೇಬಿಸ್ ಕಾಯಿಲೆಗೆ ಚುಚ್ಚುಮದ್ದು ಲಭ್ಯವಿದ್ದರೂ ಜನರು ಇದರ ಬಗ್ಗೆ ನಿರ್ಲಕ್ಷ್ಯ ವಹಿಸುವ ಪರಿಣಾಮವಾಗಿ ರೆಬೀಸ್ ಕಾಯಿಲೆಯು ಮಾರಣಾಂತಿಕವಾಗುತ್ತಿದೆ.ಆದ್ದರಿಂದ

ರೇಬೀಸ್ ಅನ್ನು ನಿರ್ಲಕ್ಷಿಸಬೇಡಿ ಏಕೆಂದರೆ ಇದು ಅನೇಕ ಜೀವಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ರೇಬೀಸ್ ರೋಗದ ಬಗ್ಗೆ ಜಾಗರೂಕರಾಗಿರಿ, ಜಾಗೃತರಾಗಿರಿ ಮತ್ತು ಜೀವಂತವಾಗಿರಿ.

ಕೊನೆಯ ಮಾತು:

ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಸಮಯಕ್ಕೆ  ಸರಿಯಾಗಿ ಅದರ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವಿಶ್ವದ ಭೂಪಟದಿಂದ ರೇಬೀಸ್ ಅನ್ನು ಅಳಿಸಿಹಾಕಿರಿ.ಈ ವಿಶ್ವ ರೇಬೀಸ್ ದಿನದಂದು ಕಾಳಜಿ ವಹಿಸಿ, ಆರೋಗ್ಯವಾಗಿರಿ ಮತ್ತು ಸುರಕ್ಷಿತವಾಗಿರಿ.

No comments:

Post a Comment