ಮೂರ್ಛೆ ರೋಗದ ಬಗ್ಗೆ ; ಅಸಡ್ಡೆ ಬೇಡ ಜಾಗೃತಿ ಇರಲಿ
#ಸಂಗ್ರಹ ಲೇಖನ:
✍️ಬಸವರಾಜ ಎಮ್ ಯರಗುಪ್ಪಿ
ಹವ್ಯಾಸಿ ಬರಹಗಾರರು, ಸ ಕಿ ಪ್ರಾ ಶಾಲೆ, ಮುಕ್ತಿನಗರ ಲಕ್ಷ್ಮೇಶ್ವರ.
ನವ್ಹಂಬರ 17-ರಾಷ್ಟ್ರೀಯ ಅಪಸ್ಮಾರ ದಿನ ಅಥವಾ ಮೂರ್ಛೆ ರೋಗ ದಿನ(National Epilepsy Day) ತನ್ನಿಮಿತ್ತ ವಿಶೇಷ ಲೇಖನ.
ಇದು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ನಮ್ಮ ಭಾರತ ದೇಶದಲ್ಲಿ ಅಪಸ್ಮಾರ ಖಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ನವೆಂಬರ್ 17ರಂದು ಈ ದಿನವನ್ನು ಆಚರಿಸಲಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಎಪಿಲೆಪ್ಸಿ(Epilepsy) ಎಂದು ಕರೆಯಲಾಗುತ್ತದೆ. ಜೊತೆಗೆ ಫಿಟ್ಸ್ ಎಂದು ಕೂಡ ಇದನ್ನು ಕರೆಯಲಾಗುತ್ತದೆ.
ಅಪಸ್ಮಾರ ಖಾಯಿಲೆ ಬಗ್ಗೆ ಇರುವ ಮೂಢನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕುವ ಕಾರ್ಯವನ್ನು ‘ರಾಷ್ಟ್ರೀಯ ಅಪಸ್ಮಾರ ಸಂಸ್ಥೆ’ ನಡೆಸುತ್ತಿದೆ. ನವೆಂಬರ್ ತಿಂಗಳನ್ನು ಅಪಸ್ಮಾರ ಜಾಗೃತಿ ತಿಂಗಳು ಎಂದೂ ಆಚರಿಸಲಾಗುತ್ತದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಚ್ 26 ರಂದು ‘ಪರ್ಪಲ್ ದಿನ’ ಎಂದು ಆಚರಿಸಿ ಅಪಸ್ಮಾರದ ಬಗ್ಗೆ ಜಾಗೃತಿಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಇವೆರಡೂ ಆಚರಣೆಯ ಮೂಲ ಉದ್ದೇಶ ಒಂದೇ ಆಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜನರಲ್ಲಿ ಈ ರೋಗದ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳು ಮತ್ತು ಕಪೋಲಕಲ್ಪಿತ ಕಥೆಗಳು ಚಾಲ್ತಿಯಲ್ಲಿದೆ.ಬೆಳೆಯುತ್ತಿರುವ ದೇಶಗಳಲ್ಲಿ ಅಜ್ಞಾನ, ಅನಕ್ಷರತೆ ಮತ್ತು ಬಡತನದ ಕಾರಣದಿಂದ ಈ ರೋಗಕ್ಕೆ ಬಹಳಷ್ಟು ಅಪವಾದ ಅಂಟಿಕೊಂಡಿದೆ. ಈ ಅಪಸ್ಮಾರ ಎನ್ನುವುದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಸರಿ ಸುಮಾರು 50 ಮಿಲಿಯನ್ ಮಂದಿ ವಾರ್ಷಿಕವಾಗಿ ಈ ರೋಗದಿಂದ ಬಳಲುತ್ತಿದ್ದಾರೆ. ಇದರಲ್ಲಿ ಸಿಂಹಪಾಲು ಬೆಳೆಯುತ್ತಿರುವ ರಾಷ್ಟ್ರಗಳಿಗೆ ಸಲ್ಲುತ್ತದೆ. 80 ಶೇಕಡಾ ಮಂದಿ ಈ ದೇಶಗಳಲ್ಲಿ ಕಂಡು ಬರುತ್ತಿದೆ. ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ ಅಪಸ್ಮಾರ ಬರದಂತೆ ಅಥವಾ ಅಪಸ್ಮಾರದ ತೀವ್ರತೆಯನ್ನು ಖಂಡಿತವಾಗಿಯೂ ಕಡಿಮೆ ಮಾಡುವ ಔಷಧಿಗಳು ಲಭ್ಯವಿದೆ. ನಿಯಮಿತವಾಗಿ ವೈದ್ಯರ ಸಲಹೆಯಂತೆ ಔಷಧಿ ಸೇವಿಸಿದಲ್ಲಿ ಅಪಸ್ಮಾರ ರೋಗಿಗಳು ಇತರರಂತೆ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯವಿದೆ.
#ಏನಿದು ಅಪಸ್ಮಾರ ಖಾಯಿಲೆ?
ಅಪಸ್ಮಾರ ಎಂದರೆ ಪದೇ ಪದೇ ಮೆದುಳಿನ ನರಕೋಶಗಳು ಅತ್ಯಧಿಕ ಪ್ರಮಾಣದಲ್ಲಿ ಹೊರಹಾಕುವ ವಿದ್ಯುತ್ ಪ್ರಚೋದನೆಯ ಫಲವಾಗಿ ಮೆದುಳಿನ ಕಾರ್ಯದಲ್ಲಿ ಉಂಟಾಗುವ ತಾತ್ಕಲಿಕ ನಿಲುಗಡೆ ಅಥವಾ ವ್ಯತ್ಯಯದ ಪರಿಣಾಮವಾಗಿ ಆ ವ್ಯಕ್ತಿ ಅನುಭವಿಸುವ ಸೃತಿ ಸೆಳತ ಮತ್ತು ಸೆಳೆವು. ಇದನ್ನೇ ಮೂರ್ಛೆ ರೋಗ, ಪಿಟ್ಸ್, ಅಪಸ್ಮಾರ, ಮಲರೋಗ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಎಪಿಲೆಪ್ಸಿ(EPILEPSY) ಎಂದು ಕರೆಯುತ್ತಾರೆ. ಜನಸಾಮಾನ್ಯ ಆಡುಭಾಷೆಯಲ್ಲಿ ‘ಪಿಟ್ಸ್’ ಎನ್ನುತ್ತಾರೆ.
#ರೋಗ ಲಕ್ಷಣಗಳು :
· ತಲೆನೋವು
· ಕಣ್ಣುಗಳು ಮಂಜಾಗುವುದು
· ಸಂವೇದನೆಗಳಲ್ಲಿ ಬದಲಾವಣೆ
· ತಲೆ ತಿರುಗುವಿಕೆ ಮತ್ತು ವಾಕರಿಕೆ
· ಆತಂಕದ ಭಾವನೆಗಳು
· ಮರಗಟ್ಟುವಿಕೆ
· ಅರಿವಿಲ್ಲದಂತಾಗುವುದು
· ಗೊಂದಲ ಮತ್ತು ಸುಪ್ತಾವಸ್ಥೆ
·ಭ್ರಮೆಗಳು
· ಅನಿಯಂತ್ರಿತ ಚಲನವಲನ
· ಸೆಳೆತ · ಅತಿಯಾಗಿ ಬೆವರುವಿಕೆ
· ಉಸಿರಾಟದ ತೊಂದರೆ
#ಕಾರಣಗಳೇನು?
· ಮೆದುಳಿನ ಬೆಳವಣಿಗೆ ಸರಿಯಾಗಿ ಆಗದೇ ಇರುವುದು
· ಮೆದುಳಿನಲ್ಲಿ ಗಡ್ಡೆ ಬೆಳೆಯುವುದು.
· ಮೆದುಳಿಗೆ ನಂಜು ಸೋಕಿದ್ದರೆ
· ಮೆದುಳಿನ ಅಂಗಾಂಶಕ್ಕೆ ಗಾಯವಾದಾಗ
· ದೇಹದಲ್ಲಿ ಲವಣಾಂಶಗಳ ಮಟ್ಟದಲ್ಲಿ ಏರುಪೇರಾದಾಗ
· ಅತಿಯಾಗಿ ಜ್ವರ ಬಂದಾಗ ಇತ್ಯಾದಿ.
· ಆದರೆ ಜಾಗತಿಕವಾಗಿ ಶೇ. 50ರಷ್ಟು ಪ್ರಕರಣಗಳಲ್ಲಿ ಈ ರೋಗಕ್ಕೆ ಕಾರಣ ಇನ್ನೂ ತಿಳಿದಿಲ್ಲ.
1 ಕೋಟಿ ಮಂದಿಗೆ ಅಪಸ್ಮಾರ : ದೇಶದಲ್ಲಿ ಒಂದು ಅಂದಾಜಿನ ಪ್ರಕಾರ 1ಕೋಟಿ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಗ್ರಾಮೀಣರಲ್ಲಿ ಶೇ. 1.9ರಷ್ಟು ರೋಗ
ಗ್ರಾಮೀಣ ಪ್ರದೇಶದ ಶೇ.1.9 ರಷ್ಟು ಪ್ರಮಾಣದ ಜನರಲ್ಲಿ ಈ ರೋಗ ಕಂಡು ಬರುತ್ತಿದೆ.
ನಗರಗಳಲ್ಲಿ ಶೇ. 0.6ರಷ್ಟು ರೋಗ
ನಗರಗಳಲ್ಲಿ ಶೇ. 0.6ರಷ್ಟು ಜನರಿಗೆ ಮೂರ್ಛೆ ರೋಗವಿದೆ.
#ತಾರತಮ್ಯ:
ವಿಶ್ವಸಂಸ್ಥೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಪ್ರಪಂಚದ ಅನೇಕ ಭಾಗಗಳಲ್ಲಿ ಅಪಸ್ಮಾರ ರೋಗಕ್ಕೆ ತುತ್ತಾದವರು ಮತ್ತು ಅವರ ಕುಟುಂಬದವರು ಕಳಂಕ ಮತ್ತು ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಜತೆಗೆ ಗ್ರಾಮೀಣರು ಇದಕ್ಕೆ ಅತಿಮಾನುಷ ಶಕ್ತಿಗಳು ಕಾರಣ ಎಂದು ವೈದ್ಯಕೀಯ ಚಿಕಿತ್ಸೆ ನೀಡದೆ ಇರುವುದೂ ಈ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗುತ್ತಿದೆ.
#ಅಸಡ್ಡೆ ಬೇಡ:
ಪದೇ ಪದೇ ಮೂರ್ಛೆ ಹೋಗುವುದರಿಂದ ಮೆದುಳು ಹಾಗೂ ನರಮಂಡಲಕ್ಕೆ ಅಪಾಯ ಉಂಟಾಗುತ್ತದೆ. ಹಾಗಾಗಿ ಅಸಡ್ಡೆ ಮಾಡದೆ ತತ್ಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಈ ಕಾಯಿಲೆ ನಿವಾರಣೆಗೆ ಕಿಟೋಜೆನಿಕ್ ಆಹಾರ ಪದ್ಧತಿ, ಮೆದುಳಿನ ಶಸ್ತ್ರ ಚಿಕಿತ್ಸೆ ಮತ್ತು ಔಷಧಗಳು ಲಭ್ಯವಿವೆ.
#ಪರಿಹಾರವೇನು..? ಅಂದರೆ ತಡೆಗಟ್ಟಲು ಕ್ರಮಗಳು....
>>ಕೆಲವೊಂದು ಗಿಡಮೂಲಿಕೆಗಳು ಮೆಗ್ನಿಸಿಯಮ್ ಪೂರಕ ಆಹಾರಗಳು, ಬಿ6 ಜೀವ ಸತ್ವ ವಿಟಮಿನ್ ಆಹಾರಗಳು, ವಿಟಮಿನ್ ಇ, ಬೂದಿ ಅಥವಾ ಕರಿ ಕುಂಬಳಕಾಯಿ, ವಿಟಮಿನ್ ಡಿ, ಫೋಲಿಕ್ ಆಮ್ಲ, ತುಳಸಿ ಮತ್ತು ಎಪ್ಸಮ್ ಉಪ್ಪು ಅಂಶಗಳಿರುವ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಈ ರೋಗವನ್ನು ನಿಯಂತ್ರಿಸಬಹುದು.
>>ಜೀವನಶೈಲಿ ಮತ್ತು ಪೂರಕ ನಿರ್ವಹಣೆ:
ಜೀವನಶೈಲಿಯ ಮಾರ್ಪಾಡುಗಳು ಮತ್ತು ಪೂರಕ ಚಿಕಿತ್ಸೆಗಳು ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಅಪಸ್ಮಾರವನ್ನು ನಿರ್ವಹಿಸಲು ಸಹಾಯ ಮಾಡಬಹುದು.
>>ಪ್ರಚೋದಕಗಳನ್ನು ಗುರುತಿಸಿ ಮತ್ತು ತಪ್ಪಿಸಿ: ಸಾಮಾನ್ಯ ಪ್ರಚೋದಕಗಳಲ್ಲಿ ನಿದ್ರೆಯ ಕೊರತೆ, ಒತ್ತಡ, ಮದ್ಯಪಾನ ಮತ್ತು ಮಿನುಗುವ ದೀಪಗಳು ಸೇರಿವೆ. ರೋಗಗ್ರಸ್ತವಾಗುವಿಕೆ ದಿನಚರಿಯನ್ನು ಇಟ್ಟುಕೊಳ್ಳುವುದು ವೈಯಕ್ತಿಕ ಪ್ರಚೋದಕಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
>>ಸಾಕಷ್ಟು ನಿದ್ರೆ ಪಡೆಯಿರಿ: ಸಾಕಷ್ಟು, ನಿಯಮಿತ ನಿದ್ರೆ (ರಾತ್ರಿಗೆ 7-9 ಗಂಟೆಗಳು) ಮುಖ್ಯ, ಏಕೆಂದರೆ ನಿದ್ರಾಹೀನತೆಯು ರೋಗಗ್ರಸ್ತವಾಗುವಿಕೆಗೆ ಸಾಮಾನ್ಯ ಪ್ರಚೋದಕವಾಗಿದೆ.
>>ಒತ್ತಡವನ್ನು ನಿರ್ವಹಿಸಿ: ಯೋಗ , ಧ್ಯಾನ ಮತ್ತು ಆಳವಾದ ಉಸಿರಾಟದ ವ್ಯಾಯಾಮಗಳಂತಹ ತಂತ್ರಗಳು ಸೆಳವು ಪ್ರಚೋದಕವಾದ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
>>ಆರೋಗ್ಯಕರ ಆಹಾರ: ಸಮತೋಲಿತ ಆಹಾರವನ್ನು ಸೇವಿಸಲು ಶಿಫಾರಸು ಮಾಡಲಾಗಿದೆ. ಔಷಧ-ನಿರೋಧಕ ಅಪಸ್ಮಾರದ ಕೆಲವು ಸಂದರ್ಭಗಳಲ್ಲಿ, ತಜ್ಞರ ಮೇಲ್ವಿಚಾರಣೆಯ ಕೀಟೋಜೆನಿಕ್ ಆಹಾರ (ಹೆಚ್ಚಿನ ಕೊಬ್ಬು, ಕಡಿಮೆ ಕಾರ್ಬೋಹೈಡ್ರೇಟ್) ಅಥವಾ ಮಾರ್ಪಡಿಸಿದ ಅಟ್ಕಿನ್ಸ್ ಆಹಾರವನ್ನು ಶಿಫಾರಸು ಮಾಡಬಹುದು.
>>ನಿಯಮಿತವಾಗಿ ವ್ಯಾಯಾಮ ಮಾಡಿ: ನಿಯಮಿತ ದೈಹಿಕ ಚಟುವಟಿಕೆಯು ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ, ಆದರೆ ವ್ಯಾಯಾಮದ ಸಮಯದಲ್ಲಿ ಸರಿಯಾದ ಜಲಸಂಚಯನ ಮತ್ತು ವಿಶ್ರಾಂತಿ ಮುಖ್ಯ.
>>ವಿಟಮಿನ್‌ಗಳು ಮತ್ತು ಪೂರಕಗಳು: ಕೆಲವು ಸೆಳವು ನಿರೋಧಕ ಔಷಧಿಗಳು ವಿಟಮಿನ್ ಕೊರತೆಗಳಿಗೆ ಕಾರಣವಾಗಬಹುದು (ಉದಾ, ಫೋಲೇಟ್ , ಬಯೋಟಿನ್ , ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳು ಡಿ, ಇ , ಬಿ6). ಹೆಚ್ಚಿನ ಪ್ರಮಾಣಗಳು ಔಷಧಿಗಳ ಪರಿಣಾಮಕಾರಿತ್ವವನ್ನು ಅಡ್ಡಿಪಡಿಸುವುದರಿಂದ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರ ಪೂರಕಗಳನ್ನು ತೆಗೆದುಕೊಳ್ಳಬೇಕು.
#ಗಿಡಮೂಲಿಕೆ ಚಿಕಿತ್ಸೆ:
ಬಾಕೊಪಾ ಎನ್ನುವ ಗಿಡಮೂಲಿಕೆಯು ಅಪಸ್ಮಾರ ಅಥವಾ ಮೂರ್ಛೆ ರೋಗದ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಆಯುರ್ವೇದ ಔಷಧದಲ್ಲಿ ಬಳಸಲಾಗುವ ಅತ್ಯುತ್ತಮ ಗಿಡಮೂಲಿಕೆ ಇದು ಎಂದು ಹೇಳಲಾಗುತ್ತದೆ.
>>ವೈದ್ಯಕೀಯ ಐಡಿ ಧರಿಸಿ: ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಐಡಿ ಬ್ರೇಸ್ಲೆಟ್ ಅಥವಾ ಕಾರ್ಡ್ ನಿಮ್ಮ ಸ್ಥಿತಿಯ ಬಗ್ಗೆ ಇತರರಿಗೆ ಎಚ್ಚರಿಕೆ ನೀಡಬಹುದು.


.jpeg)

No comments:
Post a Comment