ಗಣಿತ ಮತ್ತು ವಿಜ್ಞಾನ ಒಗಟುಗಳು (Riddles)
ರಚನೆ : ರಾಮಚಂದ್ರ ಭಟ್ ಬಿ.ಜಿ.
1. ಎರಡು ಅವ್ಯಕ್ತ ಸಂಖ್ಯೆಗಳ ಮೊತ್ತದ ವರ್ಗವೇ ನಾನು.
ವಿವರಣೆಯಲ್ಲಿನ ಮೊದಲಿನ ವರ್ಗ, ಎರಡನೆಯ ವರ್ಗ ಮತ್ತು
ಎರಡರ ಗುಣಲಬ್ಧದ ದುಪ್ಪಟ್ಟು ಇದೆ. ನಾನು ಯಾರು?
2 .
ನಾನು ವೃತ್ತದ ಪರಿಧಿ ಮತ್ತು ವ್ಯಾಸದ ನಡುವಿನ ಒಂದು ಸ್ಥಿರಾಂಕ
ನನ್ನ ಮೌಲ್ಯವು ಅನಂತ ಮುಂದುವರಿಕೆ
ಐನ್ಸ್ಟೀನರ ಹುಟ್ಟುಹಬ್ಬಕ್ಕೂ ನನಗೂ ಇದೆ ಸಂಬಂಧ
ಸುಳಿವರಿತು ಹೇಳಿ ನಾನು ಯಾರು?
3.
ನನ್ನ ಎಡಭಾಗದ ಸಂಖ್ಯೆಯನ್ನು ಹತ್ತು ಪಟ್ಟು ಹೆಚ್ಚಿಸುವೆ
ಆದರೆ ನನ್ನನ್ನು ಯಾವುದೇ ಸಂಖ್ಯೆಗೆ ಸೇರಿಸಿದರೂ
ಆ ಸಂಖ್ಯೆಯನ್ನು ಬದಲಾಯಿಸಲಾರೆ
ಈಗ ಹೇಳಿ ನಾನು ಯಾರು?
4.
ಚಪ್ಪಟೆ ಆಧಾರವಿದೆ , ನನ್ನ ಎಲ್ಲಾ ಮುಖಗಳು
ಒಂದೇ ತುದಿಯಲ್ಲಿ ತ್ರಿಕೋನಾಕಾರದಲ್ಲಿ ಸೇರುತ್ತವೆ.
ನಾನು ಪ್ರಾಚೀನ ಈಜಿಪ್ಟ್‌ನಲ್ಲೂ ಪ್ರಸಿದ್ಧ. ನಾನು ಯಾರು?
5.
ನನಗೆ ಕೇವಲ ಗಾತ್ರ (Magnitude) ಮಾತ್ರವಿದೆ,
ಆದರೆ ದಿಕ್ಕಿನ (Direction) ಹಂಗಿಲ್ಲ.
ಕಾಲ, ದೂರ ಮತ್ತು ದ್ರವ್ಯರಾಶಿ ನನ್ನವರು
ಸುಳಿವರಿತು ಹೇಳಿ ನಾನು ಯಾರು?
6.
ಸೂರ್ಯನ ಸುತ್ತ ಭೂಮಿಯನ್ನು ಸುತ್ತಿಸುವೆ
ಭೂಮಿಯ ಸುತ್ತ ಚಂದ್ರನನ್ನೂ ತಿರುಗಿಸುವೆ
ನನ್ನಿಂದಲೇ ಇಳೆಗೆ ಮಳೆ ಹನಿಗಳು ಬೀಳುತ್ತಿವೆ
ಗುರುತು ಹೇಳಿ ನಾನು ಯಾರು?
7.
ಪರಮಾಣುವಿನ ಕೇಂದ್ರದಲ್ಲಿರುವೆ
ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳು ನನ್ನೊಳಗಿವೆ,
ಎಲೆಕ್ಟ್ರಾನ್‌ಗಳು ನನ್ನ ಸುತ್ತ ಸುತ್ತುತ್ತಿವೆ
ಹೇಳಿ ನಾನು ಯಾರು?
8.
ಸೂರ್ಯನ ಶಕ್ತಿಯನ್ನು ಬಳಸಿ,
ಕಾರ್ಬನ್ ಡೈಆಕ್ಸೈಡ್ ಮತ್ತು ನೀರಿಲ್ಲದೆ ಕೆಲಸ ಮಾಡೆನು
ಅದಿಲ್ಲದೆ ನಿಮಗೆ ಆಹಾರ, ಪ್ರಾಣ ವಾಯು ಸಿಗದು
ಈ ಕ್ರಿಯೆ ಇಲ್ಲದೆ ಭೂಮಿಯಲ್ಲಿ ಹಸಿರುಳಿಯದು.
ಹೇಳ ಬಲ್ಲಿರಾ ನಾನು ಯಾರು?
9.
ಶಕ್ತಿಯನ್ನು ಹೊತ್ತೊಯ್ಯಬಲ್ಲೆ ,
ನನ್ನ ಚಲನೆಗೆ ಮಾಧ್ಯಮವು ಬೇಕಿಲ್ಲ
ನನ್ನ ವೇಗಕ್ಕೆ ಸರಿಸಾಟಿಯಿಲ್ಲ.
ಹೇಳು ನೀ ನಾನು ಯಾರು?
10.
ರಾಸಾಯನಿಕ ಕ್ರಿಯೆಯಲ್ಲಿ ನನಗಿಲ್ಲ ಆಸಕ್ತಿ
ನನಗೋ ಎಂಟರ ನಂಟು
ನಾನು ಆವರ್ತಕ ಕೋಷ್ಟಕದಲ್ಲಿ ಕೊನೆಯಲ್ಲೇ ನನ್ನ ಮನೆ
ಈಗ ಹೇಳುವಿರೆ ನನ್ನ ಗುರುತು?
No comments:
Post a Comment