ಮೈಕ್ರೋ ಜಗತ್ತಿನ ಮ್ಯಾಕ್ರೋ ಚಿತ್ರಣ.
ಲೇಖಕರು: ಕೃಷ್ಣ ಸುರೇಶ
ಛಾಯಗ್ರಹಣ ದುಬಾರಿಯಾದರೂ ಒಂದು
ಒಳ್ಳೆಯ ಹವ್ಯಾಸ.
ಜೀವನದ ಒಂದು ರಸಮಯ ಕ್ಷಣವನ್ನು ಶಾಶ್ವತವಾಗಿ ದಾಖಲಿಸುವ ಛಾಯಗ್ರಹಣವು ಕಲಿಯಲು ಮತ್ತು
ಕಲಿತದ್ದನ್ನು ನಿರಂತರವಾಗಿ ಬೆಳೆಸಿಕೊಂಡು ಹೋಗಲು ನಿಷ್ಟೆ, ಪರಿಶ್ರಮ ಮತ್ತು ತಾಳ್ಮೆಯನ್ನು ಬೇಡುವ ಒಂದು ಶಾಸ್ತ್ರವೆಂದರೆ
ತಪ್ಪಲ್ಲ. ಲ್ಯಾಂಡ್ ಸ್ಕೇಪ್, ಭಾವಚಿತ್ರ, ಪ್ರವಾಸ, ಸ್ಮಾರಕಗಳು, ಕ್ಯಾಡಿಡ್ ಛಾಯಾಗ್ರಹಣ, ವನ್ಯಮೃಗ ಛಾಯಾಗ್ರಹಣ, ಅಸ್ಟ್ರೋಫೋಟೋಗ್ರಫಿ, ಪತ್ರಿಕಾ ಛಾಯಗ್ರಹಣ ಹೀಗೆ ಹಲವಾರು
ವಿಧಗಳಲ್ಲಿ ಇದನ್ನು ವಿಂಗಡಿಸ ಬಹುದು.ನಮ್ಮ ಬರಿಗಣ್ಣಿಗೆ ಸ್ಪಷ್ಟವಾಗಿ ಕಾಣದ ಸೌಂದರ್ಯವನ್ನು ಸೂಕ್ಷ
ವಸ್ತುಗಳ ಜಗತ್ತು ಹೊಂದಿರುತ್ತದೆ. ಸಸ್ಯದ ಸಣ್ಣ ಭಾಗಗಳು, ಹೂಗಳು, ಪಾಚಿ, ಕೀಟಗಳು, ಸೂಕ್ಷ್ಮಾಣು ಜೀವಿಗಳು
ಮುಂತಾದವುಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವ
ಕಲೆಯೇ ಮ್ಯಾಕ್ರೋ ಫೋಟೋಗ್ರಫಿ. ಛಾಯಾಗ್ರಹಣದಲ್ಲಿ
ಸಬ್ಜೆಕ್ಟ್ ಅಂದರೆ ನಾವು ಸೆರೆಹಿಡಿಯಲು ಹೊರಟಿರುವ ದೃಶ್ಯದ ಸಂಯೋಜನೆಯಲ್ಲಿ ಅಪರ್ಚರ್ (
ಕ್ಯಾಮರಾದ ಕಿಂಡಿ), ಷಟರ್ ಸ್ಪೀಡು ಮತ್ತು
ಐ ಎಸ್ ಒ, ಇವು ಗುಣಮಟ್ಟವನ್ನು ನಿರ್ಧರಿಸುವ ಬಹಳ ಮುಖ್ಯವಾದ ಅಂಶಗಳು.
ಷಟರ್ ಸ್ಪೀಡ್ ಕಡಿಮೆ ಇದ್ದು ವಸ್ತು ಚಲನೆಯಲ್ಲಿದ್ದರೆ ಚಿತ್ರವು ಮಂಜು ಮಂಜಾಗುತ್ತದೆ (Motion blur). ಜಲಪಾತದಿಂದ ನೀರು ದುಮ್ಮಕ್ಕಿ ಇಳಿಯುವ
ದೃಶ್ಯವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಷಟರ್ ಸ್ಪೀಡಿನಲ್ಲಿ ಚಿತ್ರೀಕರಿಸಿದರೆ ಅದು ಹಾಲಿನ
ಧಾರೆಯಂತೆ ಚಿತ್ರದಲ್ಲಿ ಮೂಡುತ್ತದೆ. ಹಾಗೆಯೆ ರಾತ್ರಿ ಕಾಲದಲ್ಲಿ ವಾಹನ ದಟ್ಟಣೆಯ
ಚಿತ್ರೀಕರಿಸಿದರೆ ರಸ್ತೆಯ ಎಡಕ್ಕೆ ಕೆಂಪು ಗೆರೆಗಳು ಮತ್ತು ಬಲ ಬದಿಯಲ್ಲಿ ಬಳಿಯ ಗೆರೆಗಳಂತೆ
ಚಿತ್ರಿತವಾಗಿ ಚಲನೆಯನ್ನು ಬಿಂಬಿಸುತ್ತದೆ. ಇದೇ ದೃಶ್ಯವನ್ನು ವೇಗದ ಷಟರ್ ಸ್ಪೀಡಿನಲ್ಲಿ
ಚಿತ್ರೀಕರಿಸಿದರೆ, ಎಡಬದಿಯಲ್ಲಿ ವಾಹನಗಳು ಮತ್ತು ಅವುಗಳ
ಹಿಂದಿನ ಕೆಂಪು ದೀಪಗಳು ಹಾಗೆಯೇ ಬಲಬದಿಯಲ್ಲಿ ವಾಹನಗಳು ಅವುಗಳ ಹೆಡ್ ಲೈಟುಗಳು ನಮ್ಮ ಕಣ್ಣಿಗೆ
ಸ್ಥಿರವಾಗಿರುವಂತೆ ಸ್ಪಷ್ಟವಾಗಿ ಚಿತ್ರಿತವಾಗುತ್ತದೆ. ಕ್ಯಾಮರಾ ಕಿಂಡಿ ದೊಡ್ಡದಾದಷ್ಟು ಹೆಚ್ಚು ಬೆಳಕು ಕ್ಯಾಮರವನ್ನು
ಪ್ರವೇಶಿಸುತ್ತದೆ. ಕಡಿಮೆ ಬೆಳಕು ಇರುವೆಡೆ ಇದು ಸಹಾಯಕ. ಆದರೆ ಹೆಚ್ಚಿನ ಬೆಳಕಿನಲ್ಲಿ ಕಿಂಡಿಯ ಗಾತ್ರ ಕಿರಿದಾಗಿರಬೇಕು.
|
ನಿಮ್ಮ ಕ್ಯಾಮರಾದೊಂದಿಗೆ ಬಂದಿರುವ ಕಿಟ್ ಲೆನ್ಸಿನ ರಚನೆಯನ್ನು ನೀವು ಗಮನಿಸಿದರೆ ಅದರ ಹಿಂದಿನ ತುದಿಯಲ್ಲಿ ಕ್ಯಾಮರಾಗೆ ಲೆನ್ಸನ್ನು ಜೋಡಿಸಿ ಲಾಕ್ ಮಾಡುವ ಲೆನ್ಸ್ ಅಡಾಪ್ಟರ್ ಇರುತ್ತದೆ. ಲೆನ್ಸಿನ ಮುಂದಿನ ತುದಿಯಲ್ಲಿ ಒಂದು ಫಿಲ್ಟರ್ ತ್ರೆಡ್ ಇರುತ್ತದೆ. ಈ ತ್ರೆಡ್ಡಿನ ಅಳತೆಗೆ ಸರಿಯಾಗಿ ಹೊಂದುವ ರಿವರ್ಸ್ ರಿಂಗ್ ಒಂದನ್ನು ನೀವು ಖರೀದಿಸಿ ನಿಮ್ಮ ಕಿಟ್ ಲೆನ್ಸಗೆ ಅದನ್ನು ಅಳವಡಿಸಿದರೆ ನಿಮ್ಮ ಲೆನ್ಸಿಗೆ ಮತ್ತೊಂದು ಲೆನ್ಸ್ ಅಡಾಪ್ಟರ್ ದೊರೆಯುತ್ತದೆ. ಈಗ ನಿಮ್ಮ ಕ್ಯಾಮರಾದ ಲೆನ್ಸನ್ನು ಈ ಹೊಸ ರಿಂಗ್ ಅಡಾಪ್ಟರಿನ ಸಹಾಯದಿಂದ ಹಿಂದೆ ಮುಂದಾಗಿ ಕ್ಯಾಮರಾಗೆ ಜೋಡಿಸಿದರೆ ಈ ವ್ಯವಸ್ಥೆಯು ಮ್ಯಾಕ್ರೋ ಲೆನ್ಸಾಗಿ ಕೆಲಸಮಾಡುತ್ತದೆ! |
|
|
|
ಸೊಳ್ಳೆ ಮತ್ತು ಅದರ ಪ್ಯೂಪ |
||
2 mm ಇರುವೆ ಜಗತ್ತು
ಇಂತಲ್ಲಿ ಲೆನ್ಸಿನಲ್ಲಿ
ಅಪರ್ಚರನ್ನು ನಿಯಂತ್ರಿಸುವ ತಿರುಪು ಇದ್ದರೆ ಅದನ್ನು ತಿರುಗಿಸಿ ಅಪರ್ಚರನ್ನು ನಮಗೆ ಬೇಕಾದ
ಗಾತ್ರಕ್ಕೆ ಇರಿಸಿಕೊಳ್ಳಬಹುದು. ಅದು
ಇಲ್ಲದಿದ್ದರೆ ಲೆನ್ಸಿನಲ್ಲಿರುವ ಅಪರ್ಚರನ್ನು ನಿಯಂತ್ರಿಸುವ ಲಿವರ್‌ಗೆ ಒಂದು ಅಂಚಿ ಕಡ್ಡಿಯನ್ನು
ಅಳವಡಿಸಿದರೆ ಮ್ಯಾಕ್ರೋ ಫೋಟೋಗ್ರಫಿಗೆ
ಅಪೇಕ್ಷಣೀಯವಾದಷ್ಟು (f/̆̆೧೧ ಮತ್ತು f/೨೨ ನಡುವೆ ) ಅಪರ್ಚರನ್ನು ನಾವು
ನಿಗದಿಗೊಳಿಸಬಹುದು. ಹಾಗೂ ಸ್ಟಾಂಡ್‌ಗೆ ಕ್ಯಾಮರ ಅಳವಡಿಸಿ ಮತ್ತು
ರಿಮೋಟ್ ಬಳಸಿ ಕ್ಲಿಕ್ ಮಾಡುವುದರಿಂದ
ಕ್ಯಾಮರಾದ ಕಂಪನವನ್ನು ತಡೆಯಬಹುದು.(ಎಚ್ಚರಿಕೆ: ಉತ್ತಮ ಗುಣಮಟ್ಟದ ಮತ್ತು ನಿಮ್ಮ ಲೆನ್ಸಿಗೆ
ಕರಾರುವಕ್ಕಾದ ರಿವರ್ಸ್ ರಿಂಗ್ ಕೊಳ್ಳುವುದು ಬಹಳ ಮುಖ್ಯ ಕಳಪೆ ಮಾಲನ್ನು ಕೊಂಡು ಕ್ಯಾಮರಾದ ;ಲೆನ್ಸ್ ಹೋಲ್ಡರ್ ಮತ್ತು ನಿಮ್ಮ ಲೆನ್ಸ್ ಎರಡನ್ನೂ ಹಾಳು
ಮಾಡಿಕೊಳ್ಳದಿರಿ!)
|
|
|
|
|
|
|
ಡೇಮ್ಸ್ ಫ್ಲೈ |
ನಿದ್ರಿಸುತ್ತಿರುವ ಡ್ರಾಗನ್ ಫ್ಲೈ |
|
ಮ್ಯಾಕ್ರೋ ಫೋಟೋಗ್ರಫಿಗೆ
ಕ್ಯಾಮರಾ ಮತ್ತು ಲೆನ್ಸ್ ರೆಡಿ !!! ಆದರೆ ಬೆಳಕು?! ಹವ್ಯಾಸಿ ಫೋಟೋಗ್ರಾಫರಗಳು ಬೆಳಕನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು
ಎನ್ನುವ ಒಂದು ಮಾತಿದೆ. ಬೇಳಕಿನ ವಿನ್ಯಾಸದಿಂದಲೇ ಹೆಸರುವಾಸಿಯಾದ ವಿ ಕೆ ಮೂರ್ತಿಯವರಂತಹ ಅನೇಕ
ಫೋಟೋಗ್ರಾಫರ್ ಮಹನೀಯರಿದ್ದಾರೆ. ಹಗಲಿನಲ್ಲಿ ಹೊರಾಂಗಣದಲ್ಲಿ ನೈಸರ್ಗಿಕ ಬೆಳಕನ್ನು ಬಳಸಿಕೊಳ್ಳಬಹುದು.
ಇರುವ ಲಭ್ಯ ಬೆಳಕಿನಲ್ಲಿ ಸರಿಯಾದ ISOಹೊಂದಿಸಿ ಚಿತ್ರೀಕರಣ ಮಾಡಬಹುದು.
ವಸ್ತುವಿಗೆ ತುಂಬಾ ಸಮೀಪದಲ್ಲಿ ಕ್ಯಾಮರವನ್ನು ಇರಿಸಿ ಮ್ಯಾಕ್ರೋ ಚಿತ್ರೀಕರಣ ಮಾಡಬೇಕಾಗುವುರಿಂದ
ಫ್ಲಾಷನ ಗುರಿಗಿಂತ ಲೆಂಸ್ ವಸ್ತುವಿಗೆ ಸಮೀಪವಿರುತ್ತದೆ. ಹೀಗಾಗಿ ಎಷ್ಟೋ ಸಲ ಕ್ಯಾಮರಾಗೆ
ಜೋಡಿಸಿದ ಫ್ಲಾಷ್‌ನ ಬೆಳಕು ವಸ್ತುವಿನ ಮೇಲೆ
ಕೇಂದ್ರೀಕರಿಸದೆಯೇ ಹೋಗತ್ತದೆ. ಇಲ್ಲವೇ ಲೆನ್ಸಿನ ನೆರಳು ವಸ್ತುವಿನ ಮೇಲೆ ಬೀಳುತ್ತಿರುತ್ತದೆ.
ಆದ್ದರಿಂದ ಫ್ಲಾಷ್ ಬಳಸುವುದಾದರೆ ಫ್ಲಾಷ್ ಸ್ಪ್ರೆಡ್ಡರುಗಳನ್ನು ಬಳಸಿಕೊಳ್ಳಬಹುದು. ಕ್ಯಾಮರಾಗೆ
ರಿಮೋಟ್ ಅಳವಡಿಸಿ ನಮಗೆ ಅಗತ್ಯವಾದ ಕೋನದಲ್ಲಿ ಮತ್ತು ಅಂತರದಲ್ಲಿ ಫ್ಲಾಷ್ ಇರಿಸಿ
ಚಿತ್ರೀಕರಿಸಬಹುದು.
ನಮ್ಮ ಸುತ್ತಲಿನ ಪರಿಸರದಲ್ಲಿಯೇ ಲೆಕ್ಕವಿಲ್ಲದಷ್ಟು ಅಗತ್ಯವಾದ ಸಬ್ಜೆಕ್ಟಗಳು ಇರುವುದಾದರೂ ಮ್ಯಾಕ್ರೋ ಫೋಟೋಗ್ರಫಿಯು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವ ಮನೋಭಾವ, ತಾಳ್ಮೆ ಪರಿಶ್ರಮ, ಅನ್ವೇಷಣೆಯ ಗುಣಗಳು ಬಹಳ ಅಗತ್ಯವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹೂಗಳು, ಕೀಟಗಳು, ಜೇಡಗಳು ಮುಂತಾದ ಸಂದಿಪದಿಗಳು,ಪಾಚಿ ಮುಂತಾದ ಸೂಕ್ಷ್ಮಾಣು ಜೀವಿಗಳು ಇವುಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿ ಚಿತ್ರೀಕರಿಸುವುದು
ಉತ್ತಮ. ಯಾವುದೆ ಪ್ರಾಣಿ, ಪಕ್ಷಿ, ಕೀಟ, ಚಿಟ್ಟೆ, ಸೂಕ್ಷ್ಮಾಣು ಜೀವಿ ಎಲ್ಲದಕ್ಕೂ ಪ್ರಕೃತಿಯಲ್ಲಿ ನಮ್ಮಂತೆ ಬದುಕುವ ಹಕ್ಕಿರುತ್ತದೆ. ನಮ್ಮ ಹವ್ಯಾಸಕ್ಕಿಂತ ಅವುಗಳ ಬದುಕು ಅಮೂಲ್ಯವೆನ್ನುವುದನ್ನು ಮನಸ್ಸಿನಲ್ಲಿರಿಸಿಕೊಳ್ಳುವುದು ಉತ್ತಮ. ಅವುಗಳನ್ನು ಹಿಡಿಯುವುದು, ಹಿಡಿದು ಹಿಂಸಿಸಿ ಚಿತ್ರಿಕರಿಸುವುದು ಅನೈತಿಕ, ಅಮಾನವೀಯ ಮತ್ತು ಕಾನೂನುಬಾಹಿರ. ನಾವು ಚಿತ್ರೀಕರಿಸುವ ವಸ್ತು ಅವು ಏನೇ ಅಗಿರಲಿ ಪ್ರಕೃತಿಯಲ್ಲಿ ಒಂದು ಅಪರೂಪದ ಮಾದರಿ ಇದ್ದರೂ ಇರಬಹುದು, ಆದ್ದರಿಂದ ಅವುಗಳನ್ನು ಅವುಗಳ ಪಾತ್ರ ನಮಗಿಂತ ಹೆಚ್ಚಿನದಾಗಿರುತ್ತದೆ. ಅವುಗಳ ಪಾಡಿಗೆ ಬಿಟ್ಟು ಅವುಗಳಿಗೆ ತೊಂದರೆ ಆಗದಂತೆ ಗೌರವ ಭಾವದಿಂದ ಚಿತ್ರೀಕರಿಸುವುದು ಒಳ್ಳೆಯದು. ಚಿತ್ರೀಕರಣದ ವೇಳೆ ನಮ್ಮ ಸುರಕ್ಷತೆಯೂ ಬಹಳ ಮುಖ್ಯ. ಕೀಟಗಳು ಮುಂತಾದವುಗಳಿಂದ ಆಗುವ ದಾಳಿ, ಕಡಿತಗಳಿಂದ ನಮ್ಮನ್ನು ನಾವು ಸುರಕ್ಷಿತವಾಗಿರಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ವಹಿಸುವುದು ಸಹ ಅತಿ ಮುಖ್ಯ. ಪ್ರಾಣಿಗಳ, ಪಕ್ಷಿ, ಕೀಟಗಳ ಸ್ವಭಾವ ವರ್ತನೆ, ಜೀವನ ಕ್ರಮದ ಅಲ್ಪವಾದರೂ ಅರಿವು ವನ್ಯಜೀವಿ ಛಾಯಗ್ರಾಹಕನಿಗೆ ಇರಬೇಕಾದ ಕನಿಷ್ಟ ಅರ್ಹತೆಯಾಗಿರುತ್ತದೆ. ಜೊತೆಗೆ ಅಪಾರವಾದ ತಾಳ್ಮೆಯೂ ಬಹಳ ಮುಖ್ಯ.
ಕಲಾವಿದನ ಕುಂಚದಿಂದ ಮೂಡಿದ ಚಿತ್ರ ಕಲೆಯನ್ನಾಗಲಿ, ಛಾಯಗ್ರಾಹಕನಿಂದ ಚಿತ್ರತವಾದ
ಚಿತ್ರವನ್ನಾಗಲಿ ನೋಡಿ ಪ್ರಶಂಸಿಸಲು ನೋಡುಗನಿಗೆ ಕೆಲವು ಮೂಲಭೂತ
ವಿಚಾರಗಳು ತಿಳಿದಿದ್ದರೆ ಉತ್ತಮ. ಅಂದ ಮೇಲೆ ಛಾಯಾಗ್ರಾಹಕನೂ ಛಾಯಾಗ್ರಹಣದ ನಿಯಮಗಳಿಗೆ ಅನುಸಾರವಾಗಿ ಚೌಕಟ್ಟನ್ನು ಹಾಕಿಕೊಂಡು ಚಿತ್ರೀಕರಣ ಮಾಡಬೇಕಾದ್ದು ಅಪೇಕ್ಷಣೀಯ ಎಂದಾಯಿತು. ಆ
ನಿಯಮಗಳಲ್ಲಿ ಮೊದಲನೆಯದು ಮೂರನೇ ಒಂದರ ನಿಯಮ. ನಾವು ತೆಗೆಯಬೇಕಾದ ಛಾಯಚಿತ್ರದ ಚೌಕಟ್ಟನ್ನು
ಅಡ್ಡವಾಗಿ ಮೂರು ಭಾಗಗಳು
ಪಾಚಿಯ ಮೊಗ್ಗಿನ ಚಿತ್ರ: ಮೂರನೇ ಒಂದರ ನಿಯಮ ( Rule of 1th third)
ಮತ್ತು ಉದ್ದನಾಗಿ ಮೂರು
ಭಾಗಗಳಾಗಿಸಿ ಚೌಕಟ್ಟಿನ ಮೂರನೆಯ ಒಂದು ಭಾಗದಲ್ಲಿ
ಚಿತ್ರದ ಮುಖ್ಯ ವಸ್ತು ಇರುವಂತೆ ಕ್ಲಿಕ್ಕಿಸುವುದರಿಂದ ಚಿತ್ರಕ್ಕೆ ಸಮತೋಲನ ದೊರೆತು
ಮುಖ್ಯ ವಸ್ತುವಿನ ಮಹತ್ವ ಹೆಚ್ಚುತ್ತದೆ.
ಮುನ್ನೆಡೆಸುವ ರೇಖೆಗಳು ( Leading Lines)
ಎರಡನೆಯದು ಮುನ್ನೆಡೆಸುವ
ರೇಖೆಗಳು. ನಾವು ನೋಡುವ ಯಾವುದೇ ದೃಶ್ಯವನ್ನು ಗಮನಿಸಿದರೆ ಅದರಲ್ಲಿನ ರಸ್ತೆಯ ಅಂಚುಗಳು, ರೈಲು ರಸ್ತೆಯ ಕಂಬಿಗಳು, ಹೊಲದ ಬದುಗಳು, ಬೆಟ್ಟಗುಡ್ಡಗಳ ಅಂಚುಗಳು-ತುದಿಗಳು, ಮರಳುಗಾಡಿನ ದಿಣ್ಣೆಗಳು, ಮೋಡದ ಅಂಚುಗಳು, ಸೂರ್ಯ, ಬೆಳಕಿನ ಕಿರಣಗಳು, ಬೀದಿಯ ಅಂಚುಗಳು ಮುಂತಾದವುಗಳು
ಚಿತ್ರದಲ್ಲಿ ಗೆರೆಗಳನ್ನು ಮೂಡಿಸುತ್ತವೆ. ನಮಗೆ ತಿಳಿಯದಂತೆಯೆ ಈ ಗೆರೆಗಳು ನಮ್ಮ ಕಣ್ಣುಗಳನ್ನು
ಚಿತ್ರದ ಮುಖ್ಯ ಅಥವಾ ಆಕರ್ಷಕ ವಸ್ತುವಿನ
ಕಡೆಗೆ ಪದೇ ಪದೇ ಸೆಳೆಯುತ್ತವೆ. ಇದು
ಒಂದು ರೀತಿಯ ಬಲವಾದ ಮತ್ತು ಆಳವಾದ ಚಲನೆಯನ್ನು
ಮೂಡಿಸುವುದರಿಂದ ನೋಡುಗನ ನೋಟವನ್ನು ಮುಖ್ಯ ವಸ್ತುವಿನ ಕಡೆಗೆ ಸೆಳೆಯುತ್ತದೆ.
ಮೂರನೆಯದು ಫೆಬನಾಚಿ ಸುರಳಿ . ಕೆಲವು ಚಿತ್ರಗಳನ್ನು
ನೋಡುತ್ತಿದ್ದರೆ ನಮ್ಮ ಕಣ್ಣುಗಳು ನಮಗೆ ಅರಿವಿಲ್ಲದಂತೆಯೆ ಚಿತ್ರದ ಒಂದು ಯಾವುದೋ ಕೇಂದ್ರ
ಭಾಗದಿಂದ ಆರಂಭಿಸಿ ಸುರಳಿಯಂತೆ ಸುತ್ತುತ್ತಾ ಚಿತ್ರವನ್ನು ಸ್ಕಾನ್ ಮಾಡುತ್ತಾ ಪದೇ ಪದೇ
ತನ್ನಷ್ಟೆ ತಾನೆ ಚಿತ್ರದ ಒಳಗೆ ಸೆಳೆದುಕೊಂಡು ಹೋಗುತ್ತದೆ. ಫೆಬನಾಚಿ ಸುರಳಿಗೆ ಇಂತಹ ಚಿತ್ರಗಳು
ಉದಾಹರಣೆಯಾಗುತ್ತವೆ.
|
|
|
ಹಾಗೆ ನೋಡಿದರೆ ನಾವು ದಿನ ನಿತ್ಯ ಮೊಬೈಲ್ ಫೋನ್ ಹಿಡಿದು ಯಾವುದೇ ನಿಯಮವನ್ನು ಪಾಲಿಸದೇ ತೆಗೆದ ಫೋಟೋಗಳು ಎಲ್ಲವೂ ಕಲಾಕೃತಿಗಳಾಗುವುದಿಲ್ಲವೇ? ಹಾಗಂತ ಹೇಳಲಾಗದು, ಸಾಧಾರಣ ಕ್ಯಾಮರದಲ್ಲಿ ಅಚಾನಕ್ಕೆ ಕ್ಲಿಕ್ಕಿಸಿದ ಅನೇಕ ಛಾಯಾಚಿತ್ರಗಳು ಕಲಾಕೃತಿಗಳಾಗಿ ಉಳಿದಿರುವ ಉದಾಹರಣೆಗಳು ಅನೇಕ ಇವೆ.. ಉತ್ತಮವೆನಿಸಿದ ಕ್ಯಾಮರದಲ್ಲಿ ನೂರಾರು ಚಿತ್ರಗಳನ್ನು ತೆಗೆದರೂ ಅವುಗಳಲ್ಲಿ ಕಲಾಕೃತಿಗಳಾಗುವುದಿರಲಿ ಸಾಧಾರಣ ಚಿತ್ರಗಳು ಅನ್ನಿಸುವುದು ಒಂದೋ ಎರಡೋ. ಅಂತಿರುವಾಗ ನಾನು ಚಿತ್ರಸಿರುವ ಅಂತಹ ಸಾವಿರಗಟ್ಟಳೆ ಚಿತ್ರಗಳು ನನ್ನ ಟ್ರಾಶ್ ಬಿನ್ನಿನಲ್ಲಿವೆ!!!









No comments:
Post a Comment