ವ್ಯಕ್ತಿತ್ವ ಅಪಸಾಮಾನ್ಯತೆಗಳು
ಲೇಖಕರು : ಬಿ .ಎನ್. ರೂಪ,
ಸಹಶಿಕ್ಷಕರು, ಕೆ.ಪಿ.ಎಸ್
ಜೀವನ್ ಭೀಮನಗರ
ಬೆಂಗಳೂರು ದಕ್ಷಿಣ ವಲಯ -4
ವ್ಯಕ್ತಿತ್ವ ಎಂಬುದನ್ನು ವ್ಯಾಖ್ಯಾನಿಸುವುದಾದರೆ ಒಬ್ಬ ವ್ಯಕ್ತಿಯ ವರ್ತನೆ. ಆಲೋಚನೆಗಳು. ನಡುವಳಿಕೆ ಹಾಗೂ ಇತರರೊಂದಿಗೆ ಮತ್ತು ತನ್ನ ಸುತ್ತಮುತ್ತಲಿನ ಪ್ರಪಂಚದೊಂದಿಗಿನ ಆತನ ವರ್ತನೆ ಹಾಗೂ ಸಂವಹನೆಯನ್ನು ಸೂಚಿಸುತ್ತದೆ.
ಮಾನವ ಒಬ್ಬ ಸಂಘಜೀವಿ. ಅವನು ತನ್ನ ಪರಿವಾರ ,ಬಂಧು-ಬಳಗದವರೊಂದಿಗೆ
ಕೂಡಿ ಸಾಮರಸ್ಯ ಜೀವನ ನಡೆಸದವಷ್ಟು ವಿಕಾಸ ಹೊಂದಿದ್ದಾನೆ.
ಇದು ಅವನ ಉಳಿವಿಗೆ ಸಾಮಾಜಿಕ ಬೆಸುಗೆ, ಸಹಕಾರ ಹಾಗೂ ಸಮನ್ವಯದಿಂದ ಇತರರೊಂದಿಗೆ ಜೀವಿಸಲು ಕಾರಣವಾಗಿದೆ.
ಈಸಾಮಾಜಿಕ ಬೆಸುಗೆ. ನೈತಿಕತೆ ಅವನ ಮಾನಸಿಕ, ಶಾರೀರಿಕ,
ಆರೋಗ್ಯಪೂರ್ಣ ಭೌತಿಕ, ಭಾವನಾತ್ಮಕ, ವ್ಯಕ್ತಿತ್ವದ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗಿದೆ. ಈ ಕಾರಣದಿಂದಾಗಿ
ಅವನು ಗುಂಪಿನಲ್ಲಿ ಸಮಾಜದಲ್ಲಿ ಹೊಂದಾಣಿಕೆ ಮಾಡಿಕೊಂಡು ಸಹಬಾಳ್ವೆ ನಡೆಸುವುದನ್ನು ನಾವು ಇತಿಹಾಸ
ಪೂರ್ವದಿಂದಲೂ ನೋಡುತ್ತಾ ಬಂದಿದ್ದೇವೆ. ಭಾಷಾ ಕಲಿಕೆ. ಕೂಡಿಬಾಳುವುದು ಮತ್ತೊಬ್ಬರನ್ನು ಅರ್ಥೈಸಿಕೊಳ್ಳುವುದು
ಸಂಸ್ಕೃತಿ ಆಚರಣೆ, ಮುಂತಾದ ಪದ್ಧತಿಗಳನ್ನು ಮೇಳೈಸಿಕೊಂಡು ಬೆಳೆಯುತ್ತಿದ್ದಾನೆ. ಈ ರೀತಿಯ ಸರ್ವಾಂಗೀಣ
ಬೆಳವಣಿಗೆಯನ್ನು ನಿರೂಪಿಸುವ ಸಾಕಷ್ಟು ನಿದರ್ಶನಗಳಿವೆ.
ಕೆಲವೊಮ್ಮೆ ಹಲವಾರು ಕಾರಣಗಳಿಂದಾಗಿ ಮಾನವನ ಭಾವನೆ,
ಮಾನಸಿಕ, ಶಾರೀರಿಕ, ಹಾಗೂ ಭೌತಿಕ ಬದಲಾವಣೆಗಳಿಗೆ ಧಕ್ಕೆಯನ್ನು ಉಂಟುಮಾಡುವ ಪ್ರಸಂಗಗಳು ಬಾಲ್ಯಾವಸ್ಥೆಯಲ್ಲಿ
ಅಥವಾ ಪ್ರೌಢಾವಸ್ಥೆಯಲ್ಲಿ ನಡೆದು, ಅದು ಅವನು ಜೀವಿಸಿರುವವರೆಗೂ ಅವನನ್ನು ಬಾಧಿಸಬಹುದು. ಈ ಕಾರಣದಿಂದಾಗಿ
ಅವನ ಬೆಳವಣಿಗೆಗೆ ಮಾರಕವಾಗಿ ಆತ ವಿಭಿನ್ನ ರೀತಿಯ ವ್ಯಕ್ತಿತ್ವವನ್ನು ಹೊಂದಿರಬಹುದು. ಕೆಲವರೊಂದಿಗೆ
ನಾವು ತೀರ ಹತ್ತಿರ ಹೋದಾಗ ಮಾತ್ರ ಅವರ ವ್ಯಕ್ತಿತ್ವ, ದ್ವಂದ್ವನೀತಿ, ಅವರ ವಿಕೃತಿಗಳ ಪರಿಚಯವಾಗಬಹುದು.
ಅವರು ಏಕೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ನಮಗೆ ಆಶ್ಚರ್ಯ ಉಂಟಾಗಿ ನೋವು ಮಾನಸಿಕಘಾಸಿ ಉಂಟಾಗಬಹುದು.
ಈ ರೀತಿಯ ಕೆಲವು ವಿಭಿನ್ನ ವ್ಯಕ್ತಿತ್ವ ಹೊಂದಿರುವ ವ್ಯಕ್ತಿತ್ವಗಳ ವಿಕಾರತೆಯನ್ನುಪರಿಚಯ ಮಾಡಿಕೊಳ್ಳೋಣ.
ಕ್ಲಸ್ಟರ್-A ವ್ಯಕ್ತಿತ್ವದ ಅಪಸಾಮಾನ್ಯತೆಗಳು:-
ಪ್ಯಾರನಾಯಿಡ್ ವ್ಯಕ್ತಿತ್ವ ಅಪಸಾಮಾನ್ಯತೆ
ಈ ಸ್ಥಿತಿಯ ಪ್ರಮುಖ ಲಕ್ಷಣವೆಂದರೆ, ಕಾರಣವಿಲ್ಲದೆ
ಇತರರ ಮೇಲೆ ಅನುಮಾನಪಡುವುದು.. ತಮ್ಮನ್ನು ಇತರರು ಕೀಳಾಗಿ ಕಾಣುತ್ತಾರೆ, ಹಾನಿಮಾಡಲು ಅಥವಾ ಬೆದರಿಸಲು
ಪ್ರಯತ್ನಿಸುತ್ತಿದ್ದಾರೆ ಎಂದು ನಿರಂತರ ನಂಬುತ್ತಾರೆ.
ಸ್ಕಿಜಾಯ್ಡ್ ವ್ಯಕ್ತಿತ್ವ
ಅಪಸಾಮಾನ್ಯತೆ
ಈ ಸ್ಥಿತಿಯಲ್ಲಿ ವ್ಯಕ್ತಿಗಳಲ್ಲಿ ಸ್ಥಿರವಾದ ಬೇರ್ಪಡುವಿಕೆ
ಮತ್ತು ನಿರಾಸಕ್ತಿಯನ್ನು ಕಾಣಬಹುದಾಗಿದೆ. ಅವರು ಸಂವಹನ ನಡೆಸುವಾಗ ಸೀಮಿತ ವ್ಯಾಪ್ತಿಯ ಭಾವನೆಯನ್ನು
ಹೊಂದಿರುತ್ತಾರೆ.
ಸ್ಕಿಜೋಟೈಪಾಲ ವ್ಯಕ್ತಿತ್ವ ಅಪಸಾಮಾನ್ಯತೆ
ಈಸ್ಥಿತಿ ಇರುವ ಜನರು ನಿಕಟ ಸಂಬಂಧಿಗಳೊಂದಿಗೆ ತೀವ್ರವಾದ
ಅಸ್ವಸ್ಥತೆ ಪ್ರದರ್ಶಿಸುತ್ತಾರೆ. ಅವರ ವಿಕೃತ ದೃಷ್ಟಿಕೋನಗಳು, ಮೂಢನಂಬಿಕೆಗಳು ಮತ್ತು ಅಸಾಮಾನ್ಯ
ನಡುವಳಿಕೆಗಳಿಂದ ಸಂಬಂಧಗಳಿಗೆ ಅಡ್ಡಿಯಾಗಬಹುದು.
ಕ್ಲಸ್ಟರ್-B ವ್ಯಕ್ತಿತ್ವದ ಅಪಸಾಮಾನ್ಯತೆಗಳು:-
ಸಮಾಜ ವಿರೋಧಿ ವ್ಯಕ್ತಿತ್ವ ಅಪಸಾಮಾನ್ಯತೆ
ಈ ಸ್ಥಿತಿ ಇರುವ ಜನರು ಇತರರಿಗೆ ಗೌರವ ಸೂಚಿಸುವುದಕ್ಕೆ
ಹಿಂಜರಿಕೆ ಹೊಂದಿರುತ್ತಾರೆ ಸಾಮಾಜಿಕವಾಗಿ ಅಂಗೀಕರಿಸಲಾಗಿರುವರೂಡಿಗಳುಅಥವಾನಿಯಮಗಳನ್ನುಪಾಲಿಸುವುದಿಲ್ಲ.ಇವರುಕಾನೂನನ್ನುಮುರಿಯಬಹುದುಅಥವಾತಮ್ಮಸುತ್ತಲಿನಇತರರಿಗೆದೈಹಿಕಅಥವಾಭಾವನಾತ್ಮಕಹಾನಿಯನ್ನುಂಟುಮಾಡಬಹುದು.ತಮ್ಮನಡವಳಿಕೆಗೆಜವಾಬ್ದಾರಿಯನ್ನುತೆಗೆದುಕೊಳ್ಳಲುನಿರಾಕರಿಸುವರು.
ಗಡಿರೇಖೆಯ ವ್ಯಕ್ತಿತ್ವ ಅಪಸಾಮಾನ್ಯತೆ
ಈ ಸ್ಥಿತಿಯನ್ನು ಭಾವನಾತ್ಮಕ ನಿಯಂತ್ರಣದಲ್ಲಿನ ತೊಂದರೆಗಳಿಂದ
ಗುರುತಿಸಲಾಗುತ್ತದೆ .ಪರಿಣಾಮವಾಗಿ, ಇವರಲ್ಲಿ ಕಡಿಮೆ ಸ್ವಾಭಿಮಾನ, ಹಠಾತ್ ಪರಿವರ್ತನೆಗಳು, ಮನಸ್ಥಿತಿಯಲ್ಲಿ
ಬದಲಾವಣೆ ಮತ್ತು ಸಂಬಂಧದಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಹಿಸ್ಟ್ರಿಯೋನಿಕ್ ವ್ಯಕ್ತಿತ್ವ
ಅಪಸಾಮಾನ್ಯತೆ
ಈ ಸ್ಥಿತಿಯ ಜನರು ತೀವ್ರವಾದ ಅಸ್ಥಿರ ಭಾವನೆಗಳು ಮತ್ತು
ವಿಕೃತ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇಂಥವರು ಇತರರಿಂದ ಸದಾ ಗಮನಿಸಲ್ಪಡಬೇಕೆಂಬ ಅಗಾಧ ಬಯಕೆಯನ್ನು
ಹೊಂದಿರುತ್ತಾರೆ. ಗಮನ ಸೆಳೆಯಲು ನಾಟಕೀಯ ಅಥವಾ ಅನುಚಿತ ನಡವಳಿಕೆಗಳನ್ನು ಪ್ರದರ್ಶಿಸುತ್ತಾರೆ.
ನಾರ್ಸಿಸಿಸ್ಟಿಕ್ ವ್ಯಕ್ತಿತ್ವ ಅಪಸಾಮಾನ್ಯತೆ
ಈ ಸ್ಥಿತಿಯ ವ್ಯಕ್ತಿ ಸ್ವಯಂಕೇಂದ್ರಿತ ವ್ಯಕ್ತಿತ್ವವನ್ನು ಹೊಂದಿದ್ದು ತನ್ನ ಬಗ್ಗೆ
ವಿಪರೀತ ಮೆಚ್ಚುಗೆ, ಅಹಂಕಾರ, ತಾನೇ ಶ್ರೇಷ್ಠ ಎಂಬ ಭಾವನೆ, ಇತರರ ಬಗ್ಗೆ ಸಹಾನುಭೂತಿಯ ಕೊರತೆ ಹೊಂದಿರುವ
ಮಾನಸಿಕ ಸ್ಥಿತಿ ಪ್ರದರ್ಶಿಸುತ್ತಾರೆ ತಾನು ಎಲ್ಲರಿಗಿಂತ ಉತ್ತಮ ಎಂದುಕೊಂಡು ನಿರಂತರ ಮೆಚ್ಚುಗೆಯನ್ನು
ಬಯಸುತ್ತಾನೆ. ತನ್ನ ಬಗ್ಗೆ ಅತಿಯಾದ ಅಭಿಮಾನ, ಅಹಂಕಾರ ಮತ್ತು ಉದ್ದಟತನ,ಸಹಾನುಭೂತಿಯ ಕೊರತೆ, ಸೂಕ್ಷ್ಮ
ಟೀಕೆಗಳನ್ನು ಸಹಿಸಲಾಗದಿರುವುದು, ಸಂಬಂಧಗಳಲ್ಲಿ ಸಮಸ್ಯೆ,ದುರಹಂಕಾರ,ಸ್ವಾರ್ಥಪರ ವ್ಯಕ್ತಿತ್ವ,ಅಸೂಯಪಡುವುದು,ಇತರರನ್ನುಶೋಷಿಸುವ
ಇಚ್ಛೆ., ಇವು ಪ್ರಮುಖ ಲಕ್ಷಣಗಳು.
ಕ್ಲಸ್ಟರ್-C- ವ್ಯಕ್ತಿತ್ವದ ಅಪಸಾಮಾನ್ಯತೆಗಳು-
ವ್ಯಕ್ತಿತ್ವಅಪಸಾಮಾನ್ಯತೆಯನ್ನು ಮರೆಮಾಚುವುದು:-
ಈ ಸ್ಥಿತಿಯ ಜನರು ದೀರ್ಘಕಾಲದ ಅಸಮರ್ಪಕ ಭಾವನೆಗಳನ್ನು
ಹೊಂದಿರುತ್ತಾರೆ. ಇತರರಿಂದ ನಕಾರಾತ್ಮಕವಾಗಿ ನಿರ್ಣಯಿಸಲ್ಪಡುವುದಕ್ಕೆ ಹೆಚ್ಚು ಸಂವೇದನಾಶೀಲರಾಗಿರುತ್ತಾರೆ.
ಇತರರೊಂದಿಗೆ ಸಂವಹನ ನಡೆಸಲು ಬಯಸಿದರೂ ರು ತಿರಸ್ಕಾರಕ್ಕೊಳಗಾಗುವ ತೀವ್ರ ಭಯದಿಂದಾಗಿ ಅವರು ಸಾಮಾಜಿಕ
ಸಂವಹನವನ್ನು ತಪ್ಪಿಸುತ್ತಾರೆ.
ಅವಲಂಬಿತ ವ್ಯಕ್ತಿತ್ವ ಅಪಸಾಮಾನ್ಯತೆ
ಈ ಜನರು ಬೇರೊಬ್ಬರಿಂದ ನಿರಂತರ ಆರೈಕೆ ಅಗತ್ಯವಿರುವ
ಸ್ಥಿತಿಯನ್ನು ಪ್ರದರ್ಶಿಸುತ್ತಾರೆ. ನಿಷ್ಕ್ರಿಯ ಮತ್ತು ಅಂಟಿಕೊಳ್ಳುವ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ.
ಒಬ್ಸೆಸಿವ್ ಇಂಪಲ್ಸಿವ್ ಅಪಸಾಮಾನ್ಯತೆ :-
ಈ ಸ್ಥಿತಿಯನ್ನು ಕ್ರಮಬದ್ಧತೆ ಪರಿಪೂರ್ಣತೆ ಮತ್ತು
ನಿಯಂತ್ರಣದ ತೀವ್ರವಾದ ಅಗತ್ಯದಿಂದ ಗುರುತಿಸ ಲಾಗುತ್ತದೆ.ಕೆಲಸವನ್ನು ಪೂರ್ಣಗೊಳಿಸುವುದನ್ನು ನಿಧಾನಗೊಳಿಸುತ್ತದೆ
ಮತ್ತು ಅಡ್ಡಿಪಡಿಸುತ್ತದೆ. ಇದು ಸಂಬಂಧಗಳಿಗೂ ಅಡ್ಡಿಪಡಿಸಬಹುದು.ಇದು ಒಂದು ರೀತಿಯ ಗೀಳು. ಈ ಜನರು
ತಮ್ಮ ನಡುವಳಿಕೆಗೆ ಕಾರಣ ತಿಳಿದಿರುತ್ತಾರೆ ಮತ್ತು ಬದಲಾಗಬೇಕಾದ ಅಗತ್ಯವನ್ನು ಒಪ್ಪಿಕೊಳ್ಳುತ್ತಾರೆ.
ವ್ಯಕ್ತಿತ್ವ ಅಪಸಾಮಾನ್ಯತೆಗಳು ಮಾನಸಿಕ ಅನಾರೋಗ್ಯ
ಸ್ಥಿತಿಗಳಾಗಿವೆ. ವಿಜ್ಞಾನಿಗಳು ಇದಕ್ಕೆ ಇನ್ನೂ ಕಾರಣಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ.
ಈ ಅಪಸಾಮಾನ್ಯತೆ ಯಾರಿಗಾದರೂ ಇರಬಹುದು. ವಿಭಿನ್ನ ರೀತಿಯ ಅಸ್ವಸ್ಥತೆಗಳು ವಿಭಿನ್ನ ರೀತಿಯಲ್ಲಿ ಪರಿಣಾಮವನ್ನು
ಬೀರುತ್ತದೆ. ವ್ಯಕ್ತಿತ್ವ ವಿಕಸನವಾಗಿ ಪ್ರಬುದ್ಧರಾಗುವ ಸಂದರ್ಭದಲ್ಲಿ ಈ ಅಪಸಾಮಾನ್ಯತೆಗಳು ಪ್ರಾರಂಭವಾಗಬಹುದು. ಈ ರೀತಿಯ ಅಪಸಾಮಾನ್ಯತೆಗಳನ್ನು ಹೊಂದಿರುವ ಮಂದಿ 18 ವರ್ಷಕ್ಕಿಂತ
ಮೇಲ್ಪಟ್ಟವರಾಗಿರುತ್ತಾರೆ.
ಈ ಅಪಸಾಮಾನ್ಯತೆಗಳಿಗೆ ಪ್ರಮುಖ ಕಾರಣೀಕರ್ತ ಅಂಶಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಲಾಗಿದೆ.
· ಬಾಲ್ಯದ ನಕಾರಾತ್ಮಕ ಅನುಭವಗಳು
· ನರವಿಜ್ಞಾನಕ್ಕೆಸಂಬಂಧಪಟ್ಟಂತೆ ಅಂಶಗಳು
· ಪೋಷಕರಿಂದ ಅನುಕರಣ ವರ್ತನೆ
· ಸಂಸ್ಕೃತಿ
· ಪೋಷಕರ ಜೀವನ ಶೈಲಿ
· ಸಾಂಸ್ಕೃತಿಕ ಅಂಶಗಳು
· ಬಾಲ್ಯದಲ್ಲಿ ಮೌಖಿಕ ನಿಂದನೆ
· ಬಾಲ್ಯದ ಆಘಾತ ಹಾಗೂ
· ಮೆದುಳಿನ ಬದಲಾವಣೆಗಳು.
ಸಮಾಜದಲ್ಲಿ ಎಲ್ಲಾ ರೀತಿಯ ವ್ಯಕ್ತಿತ್ವವನ್ನ
ಹೊಂದಿರುವ ಜನರನ್ನು ನಾವು ವೀಕ್ಷಿಸುತ್ತೇವೆ. ಈ ಕೆಲವು ಅಪಸಾಮಾನ್ಯತೆಗಳ ಬಗ್ಗೆ ತಿಳಿದುಕೊಂಡು ಜಾಗರೂಕತೆಯಿಂದ
ವರ್ತಿಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದಾಗಿದೆ. ಕೆಲವೊಮ್ಮೆ ಸಹಾನುಭೂತಿ, ಅರ್ಥೈಸಿಕೊಳ್ಳುವುದು,
ಕೆಲವರ ವರ್ತನೆಯನ್ನು ವಿಶ್ಲೇಷಿಸಿ ಅವರ ನಡವಳಿಕೆಗೆ ಕಾರಣ ಕಂಡುಕೊಂಡು ಸೂಕ್ತ ಮಾರ್ಗದರ್ಶನವನ್ನ ನೀಡುವುದರಿಂದ
ಸಾಮಾಜಿಕ ಘಾತಕ ಕಾರ್ಯಗಳಲ್ಲಿ ಇಂಥವರು ಪಾಲ್ಗೊಳ್ಳದಂತೆ ತಡೆಯಬಹುದಾಗಿದೆ.

No comments:
Post a Comment