ನೀರ ಒಲೆ !!!
ವಿಜಯಕುಮಾರ್ ಹುತ್ತನಹಳ್ಳಿ.
ಸಹ ಶಿಕ್ಷಕರು.
ಸ.ಪ್ರೌ.ಶಾಲೆ. ಕಾವಲ್ ಭೈರಸಂದ್ರ.
ಬೆಂಗಳೂರು ಉತ್ತರ ವಲಯ – 3.
ಕಟ್ಟಿಗೆ ಒಡೆದು ಒಲೆ ಉರಿಸುತ್ತಿದ್ದ ಕಾಲ ಒಂದಿತ್ತು, ಕೈಗಾರಿಕೀಕರಣ, ನಗರೀಕರಣದ ಫಲವಾಗಿ ಮರಗಳೇ ಮಾಯವಾಗುತ್ತಿರುವಾಗ ಇಂದು ಅದು ಸಾಧ್ಯವೂ ಅಲ್ಲ, ಸಾಧುವೂ ಅಲ್ಲ. ಏಕೆಂದರೆ ಕಟ್ಟಿಗೆ ಉರಿಸುವುದು ಮಾಲಿನ್ಯಕಾರಿ,ಜಾಗತಿಕ ತಾಪಮಾನಕ್ಕೂ ಕಾರಣವಾಗುತ್ತದೆ, ಆದ್ದರಿಂದ ನಾವು ಇಂದು ಅಸಾಂಪ್ರದಾಯಿಕ, ಪರಿಸರ ಸ್ನೇಹಿ ಇಂಧನಗಳನ್ನು ಹುಡುಕಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಹಗಲಿರುಳು ಪ್ರಯೋಗಗಳಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳಿಗೆ ಹೊಸ ಸಾಧ್ಯತೆಯಾಗಿ ಕಂಡದ್ದು ಸಮುದ್ರದ ನೀರು. ಏನು ? ನೀರನ್ನು ಇಂಧನವಾಗಿ ಬಳಸುವುದೆ ? ಎಂದು ಆಶ್ಚರ್ಯಪಡಬೇಡಿ. ಹೌದು ಇನ್ನು ಮುಂದೆ ನೀರನ್ನು ಒಡೆದು ಒಲೆ ಉರಿಸಲು ಸಂಶೋಧನೆಗಳು ಮುಂದುವರೆಯುತ್ತಿವೆ.
ಆಶ್ಚರ್ಯವೆಂದರೆ
ವಿಜ್ಞಾನಿಗಳಿಗೆ ಈ ದಾರಿ
ತೋರಿಸಿರುವುದೂ ಪ್ರಕೃತಿಯೇ. ಹೇಗೆಂದರೆ
ಸಸ್ಯಗಳಲ್ಲಿನ ಪತ್ರಹರಿತ್ತು ದ್ಯುತಿಸಂಶ್ಲೇಷಣಾ
ಕ್ರಿಯೆಯಲ್ಲಿ ಇದೇ ರೀತಿ
ನೀರನ್ನು ವಿಭಜಿಸಿಕೊಂಡೇ ಆಹಾರವನ್ನು
ತಯಾರಿಸುವುದು.ಹಾಗಾಗಿ
ವಿಜ್ಞಾನಿಗಳೂ ಕೂಡ ಅದೇ
ರೀತಿ ಕೃತಕ ಕ್ಲೋರೋಫಿಲ್
(ಪತ್ರಹರಿತ್ತು) ನ್ನು
ವಾಹಕ ಪ್ಲಾಸ್ಟಿಕ್ ಹಾಳೆಗಳ
ಮೇಲೆ ಬಳಸಿ ನೀರನ್ನು
ವಿಭಜಿಸಿ ಹೈಡ್ರೋಜನ್ ಪಡೆಯುವ
ಮೊದಲ ಹಂತದ ಕಾರ್ಯದಲ್ಲಿ
ಯಶಸ್ವಿಯಾಗಿದ್ದಾರೆ.
ಈ ಸಂಶೋಧಕ ತಂಡದ ಪ್ರಮುಖ
ವಿಜ್ಞಾನಿಗಳಾದ ಪ್ರೊ.ಜುನ್ ಚೆನ್ ಮತ್ತು ಗೆರ್ರಿ ಸ್ವೀಗರ್ ರವರ ಪ್ರಕಾರ ಈ ರೀತಿಯ ಕೃತಕ ಪ್ಲಾಸ್ಟಿಕ್
ಹಾಳೆಗಳನ್ನು ತಯಾರಿಸುವುದು, ಇಂದು
ವ್ಯಾಪಕವಾಗಿ ಬಳಕೆಯಲ್ಲಿರುವ ಅರೆವಾಹಕಗಳ
ತಯಾರಿಕೆಗಿಂತಲೂ ಸುಲಭವಂತೆ.
ಮತ್ತು ಒಮ್ಮೆ ಸಮುದ್ರದ
ನೀರನ್ನು ಹೀಗೆ ಸುಲಭವಾಗಿ
ವಿಭಜಿಸಲು ಸಾಧ್ಯವಾದರೆ ಅದರಿಂದ
ಇನ್ನೂಅನೇಕ ಉಪಯೋಗಗಳನ್ನು ಪಡೆಯುವುದು
ಸಾಧ್ಯ ಎಂಬುದು ಅವರ
ಆಭಿಪ್ರಾಯ.
ಹಾಗಾಗಿ ಕೃತಕ ಎಲೆಗಳಂತಹ ಉಪಕರಣಗಳು ಇನ್ನು ಮುಂದೆ ಹೈಡ್ರೋಜನ್ ಅನಿಲದ ಪ್ರಮುಖ ಉತ್ಪಾದಕಗಳಾಗಿ ಬಳಕೆಗೆ ಬಂದರೆ ಆಶ್ಚರ್ಯವಿಲ್ಲ. ಈ ವಿಧಾನದಲ್ಲಿ ಕೇವಲ 5 ಲೀಟರ್ ಸಮುದ್ರದ ನೀರಿನಿಂದ ಒಂದು ಸಣ್ಣ ಕುಟುಂಬದ ಒಂದು ದಿನದ ಅನಿಲವನ್ನು ಸುಲಭವಾಗಿ ಪಡೆಯಬಹುದು ಅಥವಾ ಒಂದು ಎಲೆಕ್ಟ್ರಿಕ್ ಕಾರನ್ನು ಒಂದು ದಿನ ಆರಾಮವಾಗಿ ಓಡಿಸಬಹುದು. ಹಾಗಾಗಿ ನೀರಿನಿಂದ ಬೆಂಕಿ ಪಡೆಯುವುದು ಇನ್ನು ಮುಂದೆ ಯಕ್ಷಿಣಿಯಲ್ಲ.
ಇಲ್ಲಿ ಕ್ಲಿಕ್ ಮಾಡಿ 👉 ನೀರ ಒಲೆ
ವಿಜ್ಞಾನದ ಕೌತುಕ.
ReplyDeleteಅಸಕ್ತಿಯುತವಾಗಿದೆ.
Very interesting!!
ReplyDeleteಕುತೂಹಲ ಸೃಷ್ಟಿಸುವ ನಿಮ್ಮ ಲೇಖನವನ್ನು ಓದಿ ತುಂಬಾ ಸಂತೋಷವಾಯಿತು ಅತ್ಯುತ್ತಮವಾಗಿ ಮೂಡಿಬಂದಿದೆ
ReplyDeleteThank you Sir
Deleteಆಸಕ್ತಿದಾಯಕ ಲೇಖನ ಸರ್.
ReplyDeleteವಿಜಯ್ ಕುಮಾರ್ ಸರ್
ReplyDeleteತುಂಬಾ ಚೆನ್ನಾಗಿದೆ ನಿಮ್ಮ ಲೇಖನ.
ಧನ್ಯವಾದಗಳು ಇಂಥಾ ಒಳ್ಳೆಯ ಮಾಹಿತಿಗಾಗಿ.
Thank you sir
DeleteHydrogen economy ಎಂದೇ ಕರೆಯಲಾಗುವ ಭವಿಷ್ಯದ ತಂತ್ರಜ್ಞಾನವಿದು.
ReplyDelete😊👍🙏
Deleteಬಹಳ ಕುತೂಹಲದಿಂದ ಓದಿದೆ. ಬಹಳಷ್ಟು ಜನರಿಗೆ ಇದು ಹೊಸ ವಿಷಯ. ಧನ್ಯವಾದಗಳು ವಿಜಯ್ ಕುಮಾರ್ ಸರ್
ReplyDeleteThank you madam
Delete