ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, February 3, 2021

ಫ್ಲೋರೀನ್ ಹುತಾತ್ಮರು

 ಫ್ಲೋರೀನ್ ಹುತಾತ್ಮರು

ಲೇಖಕರು :

ಶಿವಕುಮಾರಕೆಟಿ., 

ಸಹಶಿಕ್ಷಕರು

ಬಾಲಕಿಯರ ಸ.ಪ.ಪೂಕಾಲೇಜು (ಪ್ರೌ.ಶಾ.ವಿ)

ಸಿರಾತುಮಕೂರು ಉತ್ತರ (ಮಧುಗಿರಿ ಶೈಜಿ).



ಪ್ರಿಯ ಓದುಗ ಮಿತ್ರ

ನಮ್ಮಲ್ಲಿ ಒಂದು ನುಡಿ ಮುತ್ತು ಇದೆ- ಸವಿದವನೇ ಬಲ್ಲ, ಬೆಲ್ಲದ ರುಚಿಯ. ಮಾತು ಏಕೆ ಬಳಕೆಯಲ್ಲಿದೆ ಅಂದರೆ, ಬೆಲ್ಲ ತುಂಬಾ ಸಿಹಿಯಾಗಿರಬಹುದು, ಉಪ್ಪುಪ್ಪಾಗಿರಬಹುದು, ಹುಳಿ ರುಚಿ ಸಹ ಇರಬಹುದು. ಹಾಗಾಗಿ ಬೆಲ್ಲವನ್ನ ನೋಡಿದವರು ಅದರ ರುಚಿಯನ್ನ ಹೇಳೋಕಾಗಲ್ಲ. ಆದರೆ ತಿಂದವರಿಗೆ ಮಾತ್ರ ಅದರ ರುಚಿ ಗೊತ್ತಾಗುತ್ತೆ.

ಅರೆ, ವಿಜ್ಞಾನ ಲೇಖನದಲ್ಲಿ ಏಕಪ್ಪಾ ಬೆಲ್ಲದ ರುಚಿ ಕುರಿತು ಹೇಳ್ತಾ ಇದಾರೆ ಅಂದ್ಕೊಂಡ್ರಾ? ಅದಕ್ಕೆ ಕಾರಣ ಇದೆ.


ವಿಜ್ಞಾನ, ವಿ-ಜ್ಞಾನ, ಸವಿ-ಜ್ಞಾನ, , , ಹಾ, ಹಾಪದ ಸಂಶ್ಲೇಶಕ ಸಾಫ್ಟ್ವೇರ್ನಿಮ್ಮದು, ಟೈಪ್ಮಾಡೋರು ನೀವು ಹೇಗ್ಬೇಕೋ ಹೇಳಿ ಅಂತೀರಾ. ಹಾಗೆಲ್ಲಾ ಮಿತಿಗಳನ್ನ ಬಿಟ್ಟು ಹೊರ ಹೋಗೋಲ್ಲ, ವಿಷಯಕ್ಕೆ ಬರ್ತೇನೆ. ವಿಜ್ಞಾನ ಪ್ರಪಂಚದಲ್ಲಿ, ಅನ್ವೇಷಣೆಗಳೆಂಬ ಕುದುರೆಗಳನ್ನೇರಿ, ಕೆಲವೊಮ್ಮೆ ಬೆತ್ತಲೆ ಕುದುರೆಗಳನ್ನೇರಿ ಹೊರಟವರ ಕಷ್ಟ ಸುಖಗಳ ಬಗ್ಗೆ ನಾನು ನಿಮಗೆ ಹೇಳ ಹೊರಟಿದ್ದೇನೆ ಲೇಖನದಲ್ಲಿ ಕೆಲವೇ ಕೆಲವು ಪ್ರಮುಖ ವಿಜ್ಞಾನಿಗಳ ಕುರಿತು.

ಫ್ಲೋರೀನ್ಧಾತುವಿನ ಸಂಯುಕ್ತಗಳಾದ ಹೈಡ್ರೊಕ್ಲೋರೋಫ್ಲೋರೋಕಾರ್ಬನ್ಗಳನ್ನ ರೆಫ್ರಿಜರೇಟರ್ಗಳಲ್ಲಿ, ಯುರೇನಿಯಮ್ಹೆಕ್ಸಾಫ್ಲೋರೈಡ್ಸಂಯುಕ್ತವನ್ನ ಯುರೇನಿಯಮ್‌-೨೩೫ ಉದ್ಧರಣೆಯಲ್ಲಿ, ಫಾಲಿಟೆಟ್ರಾಫ್ಲೋರೋಇಥಿಲೀನ್ಸಂಯುಕ್ತವನ್ನ ಪೈಪ್ಗಳು, ಪಾತ್ರೆಗಳ ನಾನ್ಸ್ಟಿಕ್ಲೇಪನದಲ್ಲಿ ಬಳಸುತ್ತೇವೆ. ಇವು ನಮಗೆ ಅತ್ಯುಪಯುಕ್ತ ಅಲ್ಲವೇ? ಆದರೆ ಸಂಯುಕ್ತಗಳ ಒಂದು ಘಟಕವಾದ ಫ್ಲೋರೀನ್ಅನ್ವೇಷಣೆಯಲ್ಲಿ ಎಷ್ಟು ಕಷ್ಠವಿತ್ತು ಗೊತ್ತಾ?

ವಿಜ್ಞಾನದ ಯಾವ ವಿದ್ಯಾರ್ಥಿಗೆ ಫ್ಲೋರೀನ್ಧಾತುವಿನ ಸರ್ವಭಕ್ಷಕ ಗುಣ ತಿಳಿದಿಲ್ಲ ಹೇಳಿ. ಇದು ಎಷ್ಟು ಕ್ರಿಯಾಶೀಲವೆಂದರೆ, ರಾಸಾಯನಿಕ ಜಡತ್ವದಿಂದಾಗಿಯೇ ರಾಜಾನಿಲಗಳು ಅಂತ ಕರೆಯಲ್ಪಡುವಂತಹಆಧುನಿಕ ಆವರ್ತ ಕೋಷ್ಟಕದ ೧೮ನೇ ಗುಂಪಿನ ಧಾತುಗಳ ಜೊತೆ ಕೂಡ ಫ್ಲೋರೀನ್ವರ್ತಿಸಿ ಸಂಯುಕ್ತಗಳನ್ನ ಕೊಡುತ್ತೆ. ಇಂತಹ ಫ್ಲೋರೀನ್ಧಾತುವನ್ನ ಪ್ರತ್ಯೇಕಿಸುವುದು ಆರಂಭದಲ್ಲಿ ತುಂಬಾ ಕಷ್ಠವಾಗಿತ್ತು. ಫ್ಲೋರಿನ್‌ ಉಂಟು ಮಾಡುವ ಪ್ರಬಲ ರಾಸಾಯನಿಕ ಬಂಧ ಮತ್ತು ಹೈಡ್ರೋಜನ್ ಫ್ಲೋರೈಡ್‌ನ ವಿಷಕಾರಿ ಗುಣದಿಂದಾಗಿ, ಈ ಧಾತುವನ್ನ ಪ್ರತ್ಯೇಕಿಸುವ ಅನೇಕ ಪ್ರಯತ್ನಗಳು ವಿಫಲವಾದವು.


1886 ರಲ್ಲಿ, ಫ್ರೆಂಚ್ ರಸಾಯನಶಾಸ್ತ್ರಜ್ಞ ಹೆನ್ರಿ ಮೊಯಿಸನ್, ಪೊಟ್ಯಾಸಿಯಮ್ ಫ್ಲೋರೈಡ್ ಮತ್ತು ಹೈಡ್ರೋಜನ್ ಫ್ಲೋರೈಡ್ ಮಿಶ್ರಣವನ್ನು ವಿದ್ಯುದ್ವಿಭಜನೆ ಮಾಡುವ ಮೂಲಕ ಧಾತುರೂಪದ ಫ್ಲೋರೀನ್ ತಯಾರಿಸುವಲ್ಲಿ ಯಶಸ್ವಿಯಾದರು. ಇದಕ್ಕು ಮೊದಲು, ಈ ಪ್ರಯತ್ನದಲ್ಲಿ ಅನೇಕ ವಿಜ್ಞಾನಿಗಳು ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡರೆ, ಕೆಲವರು ಜೀವ ಕಳೆದುಕೊಂಡರು, ಕೆಲವರ ಜೀವಿತಾವಧಿ ಕಡಿಮೆಯಾಯ್ತು. ಇಂತಹವರನ್ನ ಫ್ಲೋರೀನ್ಹುತಾತ್ಮರು ಅಂತಾನೆ ಕರೆಯಲಾಗುತ್ತೆ. ಅಂತಹ ಕೆಲವು ವಿಜ್ಞಾನಿಗಳ ಕುರಿತು ನಾವು ತಿಳಿ
ಯೋಣ
.

ಪ್ರಸಿದ್ಧ ರಸಾಯನ ಶಾಸ್ತ್ರಜ್ಞರಾದ ಹಂಫ್ರಿ ಡೇವಿ, ಜೋಸೆಫ್ ಲೂಯಿಸ್ ಗೇ-ಲುಸಾಕ್ ಮತ್ತು ಲೂಯಿಸ್ ಜಾಕ್ವೆಸ್ ಥೆನಾರ್ಡ್, ಹೈಡ್ರೋಜನ್ ಫ್ಲೋರೈಡ್ ಅನಿಲವನ್ನು ಉಸಿರಾಡುವುದರಿಂದ ತೀವ್ರ ನೋವು ಅನುಭವಿಸಿದರು; ಡೇವಿಯ ಕಣ್ಣುಗಳು ಹಾನಿಗೊಳಗಾದವು. ಐರಿಶ್ ರಸಾಯನ ಶಾಸ್ತ್ರಜ್ಞರಾದ ಥಾಮಸ್ ಮತ್ತು ಜಾರ್ಜ್ ನಾಕ್ಸ್ ಹೈಡ್ರೋಜನ್ ಫ್ಲೋರೈಡ್‌ನೊಂದಿಗೆ ಕೆಲಸ ಮಾಡೋದಿಕ್ಕಾಗಿಯೇ ಫ್ಲೋರೈಟ್ ಉಪಕರಣವನ್ನು ಅಭಿವೃದ್ಧಿಪಡಿಸಿದರೂ ಸಹ ತೀವ್ರವಾಗಿ ವಿಷದ ಪ್ರಭಾವಕ್ಕೊಳಗಾಗಿದ್ದರು. ಥಾಮಸ್ ಅವರು  ಬಹುತೇಕ ಸಾವಿನ ಸಮೀಪ ತಲುಪಿದ್ದರೆ,  ಜಾರ್ಜ್ ಅವರು ಸುಮಾರು ಮೂರು ವರ್ಷಗಳ ಕಾಲ ತೀವ್ರ ಅಸ್ವಸ್ಥರಾಗಿ ಹಾಸಿಗೆ ಹಿಡಿದಿದ್ದರು. ಬೆಲ್ಜಿಯಂನ ರಸಾಯನಶಾಸ್ತ್ರಜ್ಞ ಪಾಲಿನ್ ಲೂಯೆಟ್ ಮತ್ತು ಫ್ರೆಂಚ್ ರಸಾಯನಶಾಸ್ತ್ರಜ್ಞ ಜೆರೋಮ್ ನಿಕಲ್ಸ್ ಅವರು ನಾಕ್ಸ್ ಅವರ ಕೆಲಸವನ್ನು ಅನುಕರಿಸುವ ಮೂಲಕ ಯಶಸ್ಸು ಕಾಣಲು  ಪ್ರಯತ್ನಿಸಿದರೂ ಸಹ, ಫ್ಲೋರೀನ್ನ ಅಪಾಯಗಳ ಬಗ್ಗೆ ತಿಳಿದಿದ್ದರೂ ಸಹ ಹೈಡ್ರೋಜನ್ಫ್ಲೋರೈಡ್ನ ವಿಷಕಾರೀ ಗುಣದಿಂದ ಸಾವನ್ನಪ್ಪಿದರು. ಫ್ರಾನ್ಸ್‌ನ ಜೆರೋಮ್ ನಿಕಲ್ಸ್  ಸಾವನ್ನಪ್ಪುತ್ತಾರೆ. ಇಂಗ್ಲೆಂಡ್‌ನ ಜಾರ್ಜ್ ಗೋರ್, ಫ್ಲೋರಿನ್  ಸ್ಫೋಟದಿಂದಾದ  ಗಾಯಗಳಿಂದ ಸಾವನ್ನ ಸಮೀಪಿಸಿ ಪಾರಾಗುತ್ತಾರೆ. 


ಹೆನ್ರಿ ಮೊಯಿಸನ್: ಹಲವಾರು ಬಾರಿ ವಿಷಮಯಗೊಂಡರೂ, ಫ್ಲೋರೀನ್ಧಾತುವನ್ನ ಯಶಸ್ವಿಯಾಗಿ ಪ್ರತ್ಯೇಕಿಸ್ತಾರೆ, ಆದರೆ ಅವರ ಜೀವಿತಾವಧಿ ಕಡಿಮೆಯಾಗುತ್ತೆ. ಅವರ ಈ ಸಾಧನೆಗಾಗಿ ೧೯೦೬ ರ ನೋಬಲ್ಪುರಸ್ಕಾರ ಅವರನ್ನರಸಿ ಬರುತ್ತೆ. ಆದರೆ ದುರಂತ ಏನಂದ್ರೆ, ಈ ಖುಷಿಯನ್ನ ಅವರು ಬಹಳ ಕಾಲ ಅನುಭವಿಸೋಕಾಗೊಲ್ಲ. ಅವರಿಗೆ ನೋಬಲ್ಘೋಷಣೆಯಾದ ಎರಡು ತಿಂಗಳಲ್ಲಿ ಸಾವನ್ನಪ್ಪುತ್ತಾರೆ.

ಹೀಗೆ ವಿಜ್ಞಾನ ಕ್ಷೇತ್ರದಲ್ಲಿ ಕಹಿಯುಂಡ, ನೋವುಂಡ ಅನೇಕ ಮಹನೀಯರ ಅನ್ವೇಷಣೆಗಳಿಂದ ನಾವು ಸಿಹಿ ಫಲಗಳನ್ನ ಅನುಭವಿಸ್ತಾ ಇದ್ದೇವೆ. ಅಂತಹ ಮಹನೀಯರಿಗೆ ನಮ್ಮ ನಮನಗಳನ್ನ ಸಲ್ಲಿಸೋಣ. ಅವರ ಆದರ್ಶಗಳನ್ನ ಈಗಿನ ತಲಮಾರಿಗೆ ತಿಳಿಸಿಕೊಡೋಣ. ಸಮಾಜದ ಏಳ್ಗೆಗೆ ನಮ್ಮಿಂದ ಏನೆಲ್ಲ ಸಾಧ್ಯವೋ, ಅದನ್ನೆಲ್ಲ ಕೊಡೋಣ.

ಇದುವರೆಗೆ ಆಸಕ್ತಿಯಿಂದ ಓದಿದ ತಮಗೆ ನಮನಗಳು.


ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು 

ಇಲ್ಲಿ ಕ್ಲಿಕ್ ಮಾಡಿ 👉 ಫ್ಲೋರೀನ್ ಹುತಾತ್ಮರು

15 comments:

  1. Very ನೈಸ್ ಸರ್.. fluirine ಅನ್ವೇಷಣೆ ಹಿಂದಿನ ರೋಚಕ ಸತ್ಯ ಖಂಡಿತವಾಗಿಯೂ ಅರಗಿಸಿಕೊಳ್ಳಲಾಗದ ಸತ್ಯ...

    ReplyDelete
    Replies
    1. ದನ್ಯವಾದಗಳು ಸರ್,ಇದೊಂದು ಅನ್ವೇಷಣೆಗಳ ಹಿಂದಿನ ಶ್ರಮವನ್ನ ಪರಿಚಯಿಸುವ ಕಿರು ಪ್ರಯತ್ನ ಸರ್.

      Delete
  2. ಶಿವಕುಮಾರ್ ತಾವು ಬರೆದಿರುವ ಫ್ಲೋರಿನ್ ಪುರಾಣ ಅತ್ಯುತ್ತಮವಾಗಿದೆ ..ಅಭಿನಂದನೆಗಳು

    ReplyDelete
  3. ದನ್ಯವಾದಗಳು ಸರ್

    ReplyDelete
  4. ಉತ್ತಮ ಲೇಖನ ಸರ್‌ .

    ReplyDelete
  5. Thank you for great information sir....,

    ReplyDelete
  6. ಉಪಯುಕ್ತವಾದ ಲೇಖನ ಸರ್. ಪ್ರತಿಯೊಂದು ಹೊಸ ಅನ್ವೇಷಣೆಯ ಹಿಂದೆ ಎಷ್ಟೊಂದು ಪರಿಶ್ರಮವಿರುತ್ತದೆ ಎಂಬುದನ್ನು ಉತ್ತಮವಾಗಿ ನಿರೂಪಿಸಿದ್ದೀರಾ.sir

    ReplyDelete
    Replies
    1. ದನ್ಯವಾದಗಳು ಮೇಡಮ್‌.

      Delete
  7. ಯುದ್ಧದಲ್ಲಷ್ಟೇ ಅಲ್ಲ, ವಿಜ್ಞಾನಕ್ಕಾಗಿಯೂ ಹುತಾತ್ಮರಾದವರಿದ್ದಾರೆ ಎಂಬ ಕಹಿ ಸತ್ಯ ಅರಹುವ ಲೇಖನ, ನಿಮ್ಮ ಕಳಕಳಿಗೆ ಧನ್ಯವಾದಗಳು

    ReplyDelete
  8. ದನ್ಯವಾದಗಳು ಸರ್

    ReplyDelete
  9. ಫ್ಲೂರೊಸಿಸ್‌ ಸಂಕಟಗಳನ್ನು ಈಗಿನ ಸಮಾಜ ಹೇಗೆ ನಿಭಾಯಿಸುತ್ತಿದೆ; ಶಾಲಾ ಮಕ್ಕಳಿಗೆ ಯಾವ ರೀತಿಯಲ್ಲಿ ಅದರ ಬಗ್ಗೆ ಶಿಕ್ಷಣ ನೀಡಲಾಗುತ್ತಿದೆ ಎಂಬುದರ ಬಗೆಗೂ ಲೇಖನಗಳು ಬರಬೇಕು. ವಿಜ್ಞಾನದ ಸರ್ವೋನ್ನತ ಪ್ರಶಸ್ತಿಗಳಿಗೆ ʼನೊಬೆಲ್‌ʼ ಎಂದು ಬರೆಯಬೇಕು. ʼನೋಬಲ್‌ʼ ಎಂದರೆ ಬೇರೆಯದೇ ಅರ್ಥ ಇದೆ. ಚೆಕ್‌ ಮಾಡಿ ನೋಡಿ)

    ReplyDelete