ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, February 3, 2021

ಬೆಳಕನ್ನೇ ಬೇಧಿಸಿದ ರಾಮನ್

ಬೆಳಕನ್ನೇ ಬೇಧಿಸಿದ ರಾಮನ್

ಲೇಖಕರು : ಗುರುದತ್ತ.A

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ 

ದೊಡ್ಡಕಲ್ಲಸಂದ್ರ

 ಬೆಂಗಳೂರು ದಕ್ಷಿಣ ವಲಯ 1


ಇವತ್ತು ನಾನು ನಿಮಗೆ ಪರಿಚಯಿಸಲು ಹೊರಟಿರುವ ಮಹಾನ್ ವಿಜ್ಞಾನಿ. ಭೂತೋ ಭವಿಷ್ಯತಿಎಂಬ ಉಕ್ತಿಗೆ ಸೂಕ್ತರಾದವರು. ಇವರು ಮಾಡಿರುವ ಸಾಧನೆಯನ್ನು ಹಿಂದೆ ಯಾರೂ ಮಾಡಿರಲಿಲ್ಲ ಮುಂದೆ ಯಾರೂ ಮಾಡುವ ಸೂಚನೆಗಳೂ ಕಂಡುಬಂದಿಲ್ಲ. ಯಾಕೆ ಎಂಬ ಯೋಚನೆ ನಿಮ್ಮ ಮನದಲ್ಲಿ ಮೂಡಿರಬಹುದು. ಆದರೆ ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಪ್ರಪ್ರಥಮ ನೋಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಂತಹ ಮಹಾನ್ ಚೇತನ ಸರ್ ಸಿ.ವಿ.ರಾಮನ್. ಇವರ ಹೆಸರು ಚಿರಪರಿಚಿತ  ರಾಮನ್‌ರವರ ಜೀವನಶೈಲಿ ಮತ್ತು ಚಿಂತನೆಗಳು ಇಂದಿಗೂ ಅನುಸರಣೀಯ.


1888 ನೇ ಇಸವಿಯ ನವೆಂಬರ್ 7 ರಂದು ತಿರುಚನಾಪಲ್ಲಿಯಲ್ಲಿ ಚಂದ್ರಶೇಖರ ಅಯ್ಯರ್ ಮತ್ತು ಪಾರ್ವತಿ ಅಂಬಲ್ ದಂಪತಿಗೆ ಹುಟ್ಟಿದರು. ಬಾಲ್ಯದಿಂದಲೇ ಇವರಿಗೆ ಭೌತಶಾಸ್ತ್ರದಲ್ಲಿ ಆಸಕ್ತಿ ಇತ್ತು. ಅನೇಕ ಪುಸ್ತಕಗಳನ್ನು ಓದುತ್ತಿದ್ದರು ಮತ್ತು ಅದರಲ್ಲಿರುವ ಪ್ರಯೋಗಗಳನ್ನು ಮಾಡಿ ಸ್ನೇಹಿತರಿಗೆ ಅದರಲ್ಲಿರುವ ಕುತೂಹಲಕಾರಿ ಅಂಶಗಳನ್ನು ವಿವರಿಸುತ್ತಿದ್ದರು. ಅವರ ವಯಸ್ಸಿನ ಮಕ್ಕಳು ಆಟವನ್ನು ಆಡಿದರೆ, ಇವರು ಅನೇಕ ಪ್ರಯೋಗಗಳನ್ನು ಮತ್ತು ಅದರ ಪಲಿತಾಂಶಗಳನ್ನು ವಿಶ್ಲೇಷಣೆ ಮಾಡುತ್ತಿದ್ದರು.

ಹೀಗಿರಬೇಕಾದರೆ, ಒಂದು ದಿನ ರಾಮನ್‌ರವರಿಗೆ ಆರೋಗ್ಯದಲ್ಲಿ ಸಮಸ್ಯೆಯುಂಟಾಗಿ ವಿಪರೀತ ಶೀತ ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ. ವೈದ್ಯರು ನಾಲ್ಕು ದಿನದ ವಿಶ್ರಾಂತಿಯನ್ನು ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ. ಅವರ ತಂದೆ ಚಂದ್ರಶೇಖರ ಅಯ್ಯರ್‌ರವರು ವಿಜ್ಞಾನದ ಪ್ರಾಧ್ಯಾಪಕರು ಹಾಗಾಗಿ ಕೆಲವು ಭೌತಶಾಸ್ತ್ರದ ಪುಸ್ತಕಗಳನ್ನು ತಂದಿರುತ್ತಾರೆ. ಪುಸ್ತಕಗಳನ್ನು ನೋಡಿದ ತಕ್ಷಣವೇ ರಾಮನ್‌ರವರು ಪುಸ್ತಕಗಳನ್ನು ಓದುತ್ತಾ ಕುಳಿತುಬಿಡುತ್ತಾರೆ. ಪುಸ್ತಕಗಳಲ್ಲಿ ತಲ್ಲೀನರಾದ ರಾಮನ್‌ರವರಿಗೆ ಜ್ವರ ಯಾವಾಗ ಹೋಯಿತು ಎಂಬುದು ಗೊತ್ತಾಗೋದೆ ಇಲ್ಲಾ. ರೀತಿ ಬೆಳೆದಂತಹ ರಾಮನ್‌ರವರು 11 ನೇ ವಯಸ್ಸಿನಲ್ಲಿಯೇ ಮೆಟ್ರಿಕ್ಯೂಲೇಶನ್ ಮುಗಿಸಿದರೆ, 15 ನೇ ವಯಸ್ಸಿನಲ್ಲಿ ಪದವಿಯನ್ನು ಕೂಡ ತೇರ್ಗಡೆ ಹೊಂದುತ್ತಾರೆ. ಇಷ್ಟು ಹೊತ್ತಿಗೆ ಅವರು ವಿಜ್ಞಾನದ ಅನೇಕ ಪ್ರಯೋಗಗಳನ್ನು ಮಾಡಿ ಮೆಡಲ್ ಗಳನ್ನು ಕೂಡ ಪಡೆದಿರುತ್ತಾರೆ.

ತಂದೆ ತಾಯಿಯ ಬಲವಂತಕ್ಕೆ Finance Administrative departmental exam  ಬರೆದು ಕೋಲ್ಕತ್ತದಲ್ಲಿ Finance Department ನಲ್ಲಿ ಕೆಲಸಕ್ಕೆ ಸೇರುತ್ತಾರೆ. ಆದರೆ ಭೌತಶಾಸ್ತ್ರದ ಪರಿಕಲ್ಪನೆಗಳು, ಪ್ರಯೋಗಗಳು ಮತ್ತು ಪ್ರಯೋಗಾಲಯ ಅವರನ್ನು ಯಾವಾಗಲು ಕೈಬೀಸಿ ಕರೆದಂತೆ ಭಾಸವಾಗುತ್ತಿರುತ್ತದೆ. ಅವರಿಗೆ ವಿಜ್ಞಾನದ ಮೇಲಿನ ಆಸಕ್ತಿ ಕಿಂಚಿತ್ತು ಕೂಡ ಕಡಿಮೆಯಾಗಿರುವುದಿಲ್ಲ. ಹಾಗಾಗಿ ಅಂದಿನ ಸರ್ಕಾರಕ್ಕೆ ಪತ್ರವನ್ನು ಬರೆದು ಪಯೋಗಶಾಲೆಯಲ್ಲಿ ಪ್ರಯೋಗಗಳನ್ನು ಮಾಡಲು ಅನುಮತಿಯನ್ನು ಪಡೆಯುತ್ತಾರೆ.

1921 ನೇ ಇಸವಿಯಲ್ಲಿ International University of Congress ಗೆ ಭಾರತದ ರಾಯಭಾರಿಯಾಗಿ ಲಂಡನ್‌ಗೆ ತೆರಳುತ್ತಾರೆ. ಅಲ್ಲಿ ಹೋದಾಗ ಸೇಂಟ್ ಪಾಲ್ ಕ್ಯಾಥೆಡ್ರಲ್‌ನ whispering gallery ಯನ್ನು ನೋಡಿ ಬಹಳ ಸಂತೊಷ ಪಟ್ಟಂತಹ ರಾಮನ್ ಅಲ್ಲೇ ಅದರ ಬಗ್ಗೆ ಒಂದು ಲೇಖನವನ್ನು ಬರೆಯುತ್ತಾರೆ. ಆದರೆ, ನಿಜವಾದ ಅಚ್ಚರಿ ಮತ್ತು ವಿಸ್ಮಯಕಾರಿ ಘಟನೆ ನಡೆದಿದ್ದು ಅವರು ಲಂಡನ್ನಿನಿಂದ ಭಾರತಕೆ ಹಡಗಿನಲ್ಲಿ ಪ್ರಯಾಣ ಮಾಡಿದಾಗಅಲ್ಲಿ ನಡೆದ ಘಟನೆ ಮುಂದೆ ಇತಿಹಾಸವನ್ನು ಸೃಷ್ಟಿಮಾಡುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ.


ಹಡಗಿನಲ್ಲಿ
ಪ್ರಯಾಣ ಮಾಡುವಾಗ ಇವರು ಒಂದು ಲೋಟದಲ್ಲಿ ನೀರನ್ನು ಕುಡಿಯಲು ತೆಗೆದೆಕೊಳ್ಳುತ್ತಾರೆ. ಲೋಟದಲ್ಲಿರುವ ನೀರಿನ ಬಣ್ಣ ನೋಡುತ್ತಾರೆ. ನೀರಿಗೆ ಬಣ್ಣ ಇಲ್ಲಾ.. ಆದರೆ ಸಾಗರದ ನೀರನ್ನು ಗಮನಿಸುತ್ತಾರೆ. ಅದರ ಬಣ್ಣ ನೀಲಿ. ಅಲ್ಲಿಂದ ಯೋಚನೆ ಪ್ರಾರಂಭವಾಗುತ್ತದೆ. ”ಲೋಟದಲ್ಲಿರುವ ನೀರಿಗೆ ಬಣ್ಣ ಇಲ್ಲಾಆದರೆ ಸಾಗರದ ನೀರಿಗೇಕೆ ಬಣ್ಣ ನೀಲಿ?” ಎಂದು ಯೋಚಿಸುತ್ತಾ, ಅವರ ಸ್ನೇಹಿತರೊಂದಿಗೆ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ಅನೇಕರು ಆಕಾಶದ ಬಣ್ಣ ನೀಲಿ ಇರುವುದರಿಂದ ಅದರ ಪ್ರತಿಫಲನ ಎಂದು ವಿವರಿಸುತ್ತಾರೆ. ಆದರೆ ರಾಮನ್‌ರವರಿಗೆ ಕಾರಣ ಅಷ್ಟು ಸಮಂಜಸ ಎಂದು ಎನಿಸುವುದಿಲ್ಲ. ಇದಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಹಡಗಿನಲ್ಲೇ ಓದುತ್ತಾರೆ ಮತ್ತು ಪ್ರಾಥಮಿಕ ಹಂತದ ಪ್ರಯೋಗಗಳನ್ನು ಹಡಗಿನಲ್ಲೆ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ಲೇಖನವನ್ನು ಹಡಗಿನಲ್ಲೆ ಬರೆದು ನೇಚರ್ ಎಂಬ ಪತ್ರಿಕೆಗೆ ಡಾಕ್ ಯಾರ್ಡನಿಂದ ನೇರವಾಗಿ ಕಳುಹಿಸಿಕೊಡುತ್ತಾರೆ. ಅವರಲ್ಲಿದ್ದಂತಹ ಆಸಕ್ತಿ, ವೈಜ್ಞಾನಿಕ ಮನೋಭಾವ ಮತ್ತು ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.


ನಂತರ ಕೋಲ್ಕತ್ತಾಗೆ ಬಂದ ಮೇಲೆ ಅನುಭವವನ್ನು ತಮ್ಮ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ಇದರ ಬಗ್ಗೆ ಹೆಚ್ಚಿನ ಪ್ರಯೋಗಗಳನ್ನು ಮಾಡುವಂತೆ ಪ್ರೇರೇಪಿಸುತ್ತಾರೆ. ಸಂದರ್ಭದಲ್ಲಿ ಬ್ರಿಟಿಷ್ ಆಳ್ವಿಕೆಯಿದ್ದಿದ್ದರಿಂದ ಭಾರತೀಯರಿಗೆ ವೈಜ್ಞಾನಿಕ ಸಂಶೋಧನೆಗಳನ್ನು ಮಾಡಲು ಅನುಮತಿ ಇರಲಿಲ್ಲ. ಆದರೂ ಕೂಡ ತಮ್ಮ ವಿದ್ಯಾರ್ಥಿಗಳೊಂದಿಗೆ ಪ್ರಯೋಗಗಳನ್ನು ಮುಂದುವರಿಸುತ್ತಾರೆ.


ನಿಜವಾದ ಬ್ರೇಕ್ ಥ್ರೂ ಸಿಕ್ಕಿದ್ದು 28 ಫೆಬ್ರವರಿನಲ್ಲಿ. ಅವರ ಒಬ್ಬ ವಿದ್ಯಾರ್ಥಿ ಕೆ.ಎಸ್. ಕೃಷ್ಣನ್ರವರು ಓಡಿ ಬಂದು ಒಂದು ಪ್ರಯೋಗದಲ್ಲಿ ಕಂಡ ಅಚ್ಚರಿಯನ್ನು ರಾಮನ್ರವರಿಗೆ ತಿಳಿಸುತ್ತಾರೆ. ಅದು ಗ್ರೀನೀಷ್ ಗ್ಲೋ ಗ್ಲಿಸರಿನ್ನಲ್ಲಿ ಬರುತ್ತಾ ಇದೆ.  ಅದು ಏಕೆ ಹೀಗೆ ಕಾಣಿಸುತ್ತಿದೆ ? ಎಂದು ರಾಮನ್‌ರವರಿಗೆ ಕೇಳುತ್ತಾರೆ. ಅದಕ್ಕೆ ಒಟ್ಟಾಗಿ ಪರೀಕ್ಷೆ ಮಾಡಲು ಮುಂದಾಗುತ್ತಾರೆ. ಅಲ್ಲಿ ಕಂಡ ಅಂಶಗಳನ್ನು ಮತ್ತುಷ್ಟು ಪ್ರಯೋಗಗಳೊಡನೆ ಸಮ್ಮಿಳಿತ ಮಾಡಿ ಬೆಳಕಿನ ಚದರುವಿಕೆ (Spreading Of Light) ನ್ನು ವಿವರಿಸುತ್ತಾರೆ. ಸಾಗರದ ನೀರಿನ ಬಣ್ಣ ನೀಲಿಯಾಗಿರಲು ಕಾರಣ ಬೆಳಕಿನ ಚದರುವಿಕೆ ಎಂಬುದನ್ನು ಖಾತ್ರಿ ಪಡಿಸುತ್ತಾರೆ. ಇವರ ಸಂಶೋಧನೆಯನ್ನು ಲೇಖನ ರೂಪದಲ್ಲಿ ರಾಯಲ್ ಸೊಸೈಟಿಗೂ ಕೂಡ ಕಳುಹಿಸಿ ಕೊಡುತ್ತಾರೆ. 1928 ನೇ ಇಸವಿಯಲ್ಲಿ ಯಾವುದೇ ವಿಜ್ಞಾನದ ವಿಸ್ಮಯಗಳ ಸಂಶೋಧನೆಗಳು ನಡೆದಿರದ ಕಾರಣ ರಾಮನ್‌ರವರಿಗೆ ನೋಬೆಲ್ ಪ್ರಶಸ್ತಿ ಬರುತ್ತದೆ ಎಂದು ಎಲ್ಲರೂ ಭಾವಿಸಿರುತ್ತಾರೆ. ಕಾರಣಾಂತರಗಳಿಂದ ಅವರಿಗೆ ವರ್ಷ ಅವರಿಗೆ ನೋಬೆಲ್ ಪ್ರಶಸ್ತಿ ಸಿಗುವುದಿಲ್ಲ. ಇದರಿಂದ ಅವರ ಆತ್ಮವಿಶ್ವಾಸ ಏನೂ ಕಡಿಮೆಯಾಗುವುದಿಲ್ಲ. ತಮ್ಮ ವಿದ್ಯಾರ್ಥಿಗಳೊಂದಿಗೆ ಪ್ರಯೋಗಗಳನ್ನು ಮುಂದುವರೆಸುತ್ತಾರೆ. 1929 ನೇ ಇಸವಿಯಲ್ಲಿ ಅವರಿಗೆ ನೈಟ್ ಹುಡ್ ಪ್ರಶಸ್ತಿಯನ್ನು ಬ್ರಿಟಿಷ್ ಸರ್ಕಾರ ನೀಡುತ್ತದೆ. 1930 ನೇ ಇಸವಿಯಲ್ಲಿ ಅವರಿಗೆ ಖಂಡಿತವಾಗಿ ನೋಬೆಲ್ ಪ್ರಶಸ್ತಿ ಸಿಗುತ್ತದೆ ಎಂದು ಮೂರು ತಿಂಗಳು ಮುಂಚಿತವಾಗಿ ಟಿಕೇಟ್ ಬುಕ್ ಮಾಡಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿರುತ್ತಾರೆ. ಅವರ ಆತ್ಮವಿಶ್ವಾಸ ಮತ್ತು ಧೃಡ ನಂಬಿಕೆಗೆ ಇದು ಸಾಕ್ಷಿಯಾಗಿರುತ್ತದೆ. ನೋಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಪ್ರಯೋಗದಲ್ಲಿ ಬ್ರೇಕ್ ಥ್ರೂ ಸಿಕ್ಕ ದಿನ ಫೆಬ್ರವರಿ 28. ನಮ್ಮ ದೇಶದಲ್ಲಿ ರಾಷ್ತ್ರೀಯ ವಿಜ್ಞಾನ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ರಾಮನ್ರವರು ಯಾವಗಲೂ ಒಂದು ಮಾತನ್ನು ಹೇಳುತ್ತಿರುತ್ತಾರೆ. “Ask the right question and nature will open the doors to her secrets”.

ಏನಂತೀರಿ……


ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು 

ಇಲ್ಲಿ ಕ್ಲಿಕ್ ಮಾಡಿ 👉 ಬೆಳಕನ್ನೇ ಬೇಧಿಸಿದ ರಾಮನ್


22 comments:

  1. Very nice & rare information sir.

    ReplyDelete
  2. ಸವಿಸ್ತಾರವಾದ ಮಾಹಿತಿಗೆ ಧನ್ಯವಾದಗಳು.

    ReplyDelete
  3. ಉತ್ತಮ ಲೇಖನ . ಆದರೆ ಅವರ ಬಗ್ಗೆ ತಿಳಿಯದ ಬೇರೆ ವಿಶೇಷ ಮಾಹಿತಿ ತಿಳಿಸಿದ್ದರೆ ಇನ್ನು ಉತ್ತಮವಾಗಿರುತ್ತಿತ್ತು. ಏಕೆಂದರೆ ಗುರುದತ್ ಎಂದಾಕ್ಷಣ ನೀರೀಕ್ಷೆಯ ಮಟ್ಟ ಬೇರೆ

    ReplyDelete
  4. ಸತ್ಯ....ನಿಮ್ಮ ನಿರೀಕ್ಷೆಗೆ ತಕ್ಕಂತೆ ಬರೆಯುವ ಪ್ರಯತ್ನ ಮಾಡುವೆ...ವಂದನೆಗಳು

    ReplyDelete
  5. ಸಾಮಾನ್ಯರಿಗೂ ರಾಮನ್ ಕುರಿತಂತೆ ಪರಿಚಯಿಸುವ ಈ ಲೇಖನ ಸೊಗಸಾಗಿದೆ ಸರ್.

    ReplyDelete
  6. ವಿಜ್ಞಾನದ ವಿಷಯವನ್ನು ಸರಳ ಸುಲಲಿತವಾಗಿ ಬರೆದ ಶ್ರೀ ಗುರುದತ್ತವರಿಗೆ ಅಭಿನಂದನೆಗಳು

    ReplyDelete
  7. ತುಂಬಾ ಅದ್ಭುತವಾಗಿ ಮೂಡಿಬಂದಿದೆ ಸರ್ ಅಭಿನಂದನೆಗಳು

    ReplyDelete
  8. ಸೊಗಸಾದ ನಿರೂಪಣೆ , ಲೇಖನ ಚೆನ್ನಾಗಿ ಬಂದಿದೆ ಸರ್

    ReplyDelete
  9. ತುಂಬಾ ಚೆನ್ನಾಗಿ ವಿಸ್ತರಿಸಿದ್ದಿರ ಸರ್. ಹೀಗೆ ಹಲವು ವಿಜ್ಞಾನದ ವಿಷಮಯಗಳನ್ನ ತಿಳಿಸಿ ನಿಮ್ಮಿಂದ ಕಲಿಯುವುದು ಎಂದರೆ ಬಹಳ ಇಷ್ಟ.🙏

    ReplyDelete
  10. ಸುಂದರವಾಗಿ ವಿವರಿಸಿದ್ದೀರಿ ಸರ್..ಧನ್ಯವಾದಗಳು ಸರ್.

    ReplyDelete
  11. ತುಂಬಾ ಸುಲಭವಾಗಿ ಅರ್ಥವಾಗುವ ಹಾಗಿದೆ ಲೇಖನ. ನಮಗೆ ಇಷ್ಟು ವಿಷಯಗಳು ಗೊತ್ತಿರಲಿಲ್ಲ. ಹೀಗೆ ತಿಳಿಸಿ ಕೊಡುವ ಕಾರ್ಯ ನಿರಂತರವಾಗಿ ಸಾಗಲಿ. ಮಾಹಿತಿಗಾಗಿ ಧನ್ಯವಾದಗಳು.

    ReplyDelete
  12. Very nice sir. Beegarige abhinandanegalu.

    ReplyDelete
  13. ಆತ್ಮವಿಶ್ವಾಸದ ಪ್ರತೀಕ ಸರ್ ಸಿ ವಿ ರಾಮನ್, ಉತ್ತಮ ಲೇಖನ ಸರ್ . . .

    ReplyDelete
  14. Super sir ತುಂಬಾ ಚೆನ್ನಾಗಿ ಸಂಗ್ರಹಿಸಿ, ಬಹಳ ಅಥ೯ಪೂರ್ಣವಾಗಿ ಬರೆದಿದ್ದೀರಿ.ತುಂಬಾ ಖುಷಿಯಾಯಿತು ಓದಿದ್ದೇನೆ.

    ReplyDelete
  15. ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ಅರ್ಥ ವಾಗುವಂತ ತುಂಬಾ ಸರಳವಾದ ಅದ್ಭುತ ವಾದ ಲೇಖನ.... ಅಭಿನಂದನೆಗಳು

    ReplyDelete