ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, April 4, 2021

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಏಪ್ರಿಲ್ ತಿಂಗಳು ಬಂತೆಂದರೆ ನಾಡಿನಲ್ಲೆಲ್ಲಾ ಉಗಾದಿಯ ಸಂಭ್ರಮ. ವಸಂತ ಋತುವಿನ ಆಗಮನದೊಂದಿಗೆ ವನಗಳೆಲ್ಲ ಚಿಗುರಿ ಹಸಿರಾಗಿ ನಳ ನಳಿಸುತ್ತಿರುತ್ತವೆ. ಹೂ ಬಿಟ್ಟ ಗಿಡ, ಮರ ಬಳ್ಳಿಗಳಿಂದ ವರ್ಣರಂಜಿತವಾಗಿ ಕಾಣುವ ನಿಸರ್ಗದ ಸೌಂದರ್ಯವನ್ನು ಆಸ್ವಾದಿಸುತ್ತಾ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿ ಬೇವು, ಬೆಲ್ಲವನ್ನು

ತಿಂದು ನವ ಸಂವತ್ಸರವನ್ನು ಬರಮಾಡಿಕೊಳ್ಳೋಣ. ಸವಿಜ್ಞಾನದ ಎಲ್ಲ ಆತ್ಮೀಯ ಓದುಗರಿಗೆ ಸಂಪಾದಕ ಮಂಡಳಿಯ ಹಾರ್ದಿಕ ಶುಭಾಶಯಗಳು.

ಪರಿಸರದ ದೃಷ್ಟಿಯಿಂದಲೂ ಏಪ್ರಿಲ್ ಮಹತ್ವದ ತಿಂಗಳು. ಭೂಮಿಗೆ ಬಂದೊದಗಿರುವ ಆಪತ್ತನ್ನು ಗಮನದಲ್ಲಿಟ್ಟುಕೊಂಡು, ಭೂಮಿಯ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಚಿಂತನೆ ನಡೆಸುವ  ನಿಟ್ಟಿನಲ್ಲಿ, ಈ ತಿಂಗಳ ೨೨ರಂದು ‘ವಿಶ್ವ ಭೂ ದಿನ'ವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ‘ಸವಿಜ್ಞಾನ”ದ ಈ ಸಂಚಿಕೆಯಲ್ಲಿ ನಮ್ಮನ್ನು ಆತ್ಮಾವಲೋಕನಕ್ಕೆ ಪ್ರೇರೇಪಿಸುವ

“ಭೂಮಿ ಎಂದರೆ ಏನರ್ಥ?” ಎಂಬ ವಿಶೇಷ ಲೇಖನವಿದೆ. ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ. ಜೊತೆಗೆ, ನಿಸರ್ಗದಲ್ಲಿ ಕಂಡು ಬರುವ ಅಚ್ಚರಿಯ ಸುವರ್ಣ ಅನುಪಾತದ ಬಗ್ಗೆ, ಇ-ತ್ಯಾಜ್ಯ ನಿರ್ವಹಣೆಯ ಬಗ್ಗೆ, ಹಾಗೂ ರಸಾಯನಶಾಸ್ಟ್ರ ಬೋಧನೆಯಲ್ಲಿರುವ ಮೌಲ್ಯಗಳ ಬಗ್ಗೆ ಲೇಖನಗಳಿವೆ. ಅಲ್ಲದೆ, ಮೆಗ್ನೀಷಿಯಂ ಬಗ್ಗೆ, ಸಿಗರೇಟಿನ ಬಗ್ಗೆ ಕುತೂಹಲಕಾರಿ

ಲೇಖನಗಳಿವೆ. ಇನ್ನೊಂದು ವಿಶೇಷವೆಂದರೆ, ಕಳೆದಸಂಚಿಕೆಯಲ್ಲಿ ನಾವು ಪರಿಚಯಿಸಿದ ವಿಶಿಷ್ಟ ವ್ಯಕ್ತಿ, ವಿ.ಎಸ್.ಎಸ್.ಶಾಸ್ತ್ರಿ ಅವರ ಕ್ರಿಯಾಶೀಲತೆಗೆ ಸಾಕ್ಷಿಯಾದ ‘ ಗಣಿತವನ ‘ ದ ಪರಿಚಯ ಲೇಖನವಿದೆ. ಎಂದಿನಂತೆ, ವಿಜ್ಞಾನಕ್ಕೆ ಸಂಬಂಧಿಸಿದ ಒಗಟುಗಳು ಮತ್ತು ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ.

‘ಸವಿಜ್ಞಾನ ’ ಕ್ಕೆ ನೀವು ಕಳೆದ ಮೂರು ತಿಂಗಳಿನಿಂದ ತೋರಿಸುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆ, ಅಭೂತಪೂರ್ವ. ಮುಂದಿನ ಸಂಚಿಕೆಗಳು ಇನ್ನಷ್ಟು ಕುತೂಹಲಕಾರಿ, ಹಾಗೂ ಸತ್ವಯುತ ಲೇಖನಗಳಿಂದ ಕೂಡಿರುತ್ತದೆ ಎಂಬ ಭರವಸೆ ನಮ್ಮದು. ನಿಮ್ಮ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ. 


ಡಾ. ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು 

1 comment:

  1. Thank you sir, ನಿಮ್ಮ ಮಾರ್ಗದರ್ಶನದಲ್ಲಿ ಸವಿಜ್ಞಾನ, ಸವಿ-ಜ್ಞಾನವಾಗಿ ಮೂಡಿಬರುತ್ತಿದೆ. ನಮ್ಮಂತಹವರಿಗೂ ಪ್ರೋತ್ಸಾಹ , ಕಲಿಕೆಗೆ ವಿಷಯ ಸಿಗುತ್ತಿದೆ.

    ReplyDelete