ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Saturday, April 3, 2021

ಅಪೇಕ್ಷೆ

ಅಪೇಕ್ಷೆ

ಹಾಡುತಿಹಳು ಧರಿತ್ರಿ

ನೊಂದು ಬೆಂದು ಬಸವಳಿದ

ಬಾಳಗೀತೆ

ಕೇಳದೇನು ಅವಳ ಬತ್ತಿದೆದೆಯ

ಭಾವಗೀತೆ...?

ಅವಳೊಡಲ ಜೀವನಾಳಗಳಾಗಿ

ಜೀವಜಂತುಗಳಿಗೆ

ಅಮೃತಸಿಂಚನಗೈವ

ಜಾಲನಿಧಿಗಳು

ಬಳಲಿ ಬಾಯರಿವೆಯಲ್ಲ...

ಒಣಗಿ ಸೊರಗಿ ಕಾದಿವೆ

ನೀರ ಹನಿಗಳ ಸ್ಪರ್ಶಕ್ಕೆ

ಎರೆಯಬಹುದಲ್ಲ ಆಗಸವೆ

ಎರಡು ಹನಿ ನೀರ...?

ಒಣಗಿದ ಅವನೀ ಹೃದಯವ

ತಣಿಸ ಬಾರ.

- ಜಯಶ್ರೀ ಶರ್ಮ




4 comments:

  1. ಭೂಮಿಯ ಅಳಲನ್ನು ಕೇಳುವವರು ಯಾರೋ? ಅವನಿಯ ದಿನದಂದು ಭಾಷಣಕ್ಕೆ ಸೀಮಿತಗೊಳಿಸಿದ್ದೇವೆಯೇ? ನೈಸ್‌ ಮೇಡಂ

    ReplyDelete
  2. ನಿಮ್ಮ ಕರೆಗೆ ಓಗೊಟ್ಟು ವರ್ಷಧಾರೆ ಸುರಿಯಲಿ. ಇಳೆ ತಂಪಾಗಲಿ ಮೇಡಂ. ಧನ್ಯವಾದಗಳು

    ReplyDelete