ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, April 3, 2021

ರಸಾಯನ ವಿಜ್ಞಾನ ಬೋಧನೆಯ ಮೂಲಕ ಬೆಳೆಸಬಹುದಾದ ಮೌಲ್ಯಗಳು

ರಸಾಯನ ವಿಜ್ಞಾನ ಬೋಧನೆಯ ಮೂಲಕ ಬೆಳೆಸಬಹುದಾದ ಮೌಲ್ಯಗಳು


ಲೇಖಕರು:
    ರಾಮಚಂದ್ರ ಭಟ್ ಬಿ.ಜಿ.
ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ,
ಮೈಸೂರು  ರಸ್ತೆ, ಬೆಂಗಳೂರು

The Meeting of two personalities is like the contact of two chemical substances: if there is any reaction both are transformed.  

-  Carl Jung

 ಸ್ವೀಡನ್ನಿನ ಖ್ಯಾತ ಮನೋವಿಜ್ಞಾನ ವಿಶ್ಲೇಷಕ ಕಾರ್ಲ್ ಜಂಗ್ ಹೇಳುವ ಈ ಮಾತುಗಳು ಎಷ್ಟು ಸತ್ಯ ಅಲ್ವಾ?

 ನಾವು ವಿದ್ಯಾರ್ಥಿಗಳಿಗೆ ಕಲಿಸಿದ್ದಕ್ಕಿಂತ ಕಲಿತದ್ದೇ ಹೆಚ್ಚು !!!  ಅದಕ್ಕೇ ಅಲ್ಲವೇ  ವಿಲಿಯಂ ವರ್ಡ್ಸವರ್ಥ್ ಹೇಳಿದ್ದು    child is the father of man ಅಂತ.  ತರಗತಿಯಲ್ಲಿ ನಡೆಯುವ  ಬೋಧನಾ ಪ್ರಕ್ರಿಯೆ, ನಮಗೆ  ಹಲವಾರು ಒಳನೋಟಗಳನ್ನು ನೀಡುವುದಲ್ಲದೆ, ಹೊಸ ಚಿಂತನಾ ವಿಧಾನಗಳ ಸ್ಫುರಣೆಗೆ ಕಾರಣವಾಗುತ್ತದೆ. ಬೋಧನಾ ವಿಷಯದ ಒಳಹೊಕ್ಕು ನೋಡಿದಾಗ ವಿಷಯ ಸ್ಫುರಣದೊಂದಿಗೆ ಮನಸ್ಸಿನಲ್ಲಿ ಮೂಡುವ ಭಾವ ತರಂಗಗಳು ಮೌಲ್ಯಗಳಾಗಿ ಅರಳುವ ಪ್ರಕ್ರಿಯೆ ಮೊಟ್ಟೆಯೊಡೆದು ಕಂಬಳಿಹುಳು ಲಾರ್ವಾಗಳು ಪಾತರಗಿತ್ತಿಯಾಗಿ ಬದಲಾಗುವ ರೂಪಪರಿವರ್ತನಾ ಪ್ರಕ್ರಿಯೆಯಂತೆ ಅನಿಸದೇ?


 ಪ್ರೀತಿಯ ಗುರುಗಳಾದ ಡಾಕ್ಟರ್ ಬಾಲಕೃಷ್ಣ ಅಡಿಗರ ವಿಜ್ಞಾನ ಪಾಠಗಳ ಮೂಲಕ ಮೌಲ್ಯಶಿಕ್ಷಣ ಎಂಬ ಮೌಲಿಕ ಲೇಖನವನ್ನು ಆಸ್ವಾದಿಸುತ್ತಾ ಹೋದಂತೆ ಅದು ನಿಮ್ಮ ಅನುಭವವವನ್ನು ಕೆದಕಿರಬಹುದು. ಅನೇಕ ಜೀವನ ಮೌಲ್ಯಗಳು ನಿಮ್ಮನ್ನು ಕಾಡಿರಬಹುದು. ಹಾಗೆಯೇ ನಾನು ಇವನ್ನು ಹೇಳಿದ್ದೆನಲ್ಲ!! ಇನ್ನೊಂದಷ್ಟು ನನ್ನ ಅನುಭವಗಳನ್ನು ಸೇರಿಸಿ ಬರೆಯುತ್ತೇನೆ ಎಂದು ನೀವೂ ಬರೆಯುವಂತೆ ನಿಮ್ಮನ್ನು ಪ್ರೇರೇಪಿಸಬಹುದು.

ರಸಾಯನ ವಿಜ್ಞಾನ ಬೋಧನೆ ಮೌಲ್ಯಗಳ ಅಕ್ಷಯ ಪಾತ್ರೆ. ಅದು ಹಲವು ಜೀವನಮೌಲ್ಯಗಳ ರಸಾಯನ. ಕಾರ್ಲ್ಜಂಗ್  ಹೇಳಿದಂತೆ ಗುರು-ಶಿಷ್ಯರ ನಡುವಿನ ಪ್ರೀತಿ ಗೌರವಗಳ  ಆಕರ್ಷಣ ಬಲವು ಬದಲಾವಣೆಯ ಮಹಾಪರ್ವಕ್ಕೆ ನಾಂದಿಯಾಗುತ್ತದೆ.

ಇಲೆಕ್ಟ್ರಾನ್ಗಳ ಹಂಚಿಕೆಯಿಂದಾಗುವ ಕಾರ್ಬನ್  ಸಂಯುಕ್ತಗಳ ಬೋಧನೆ ಎಂತಹ ಉದಾತ್ತ ಮೌಲ್ಯಗಳ ಗುಣ ದರ್ಶಿನಿ.  ಹಂಚಿಕೊಂಡು ಬದುಕಿ ಎನ್ನುವ ಬದುಕಿನ ಸತ್ಯದ ಪ್ರಾತ್ಯಕ್ಷಿತೆಯನ್ನು ಕೋವಲೆಂಟ್ ಬಂಧ ನೀಡಿದರೆ, ಅಯಾನಿಕ ಬಂಧ ಹೆಚ್ಚುವರಿಯಾದದ್ದನ್ನು ಅಗತ್ಯವಿದ್ದವರಿಗೆ ಹಂಚಿ ಎನ್ನುವುದನ್ನು ಕಲಿಸುವುದಿಲ್ಲವೇ?

ಹೈಡ್ರೋಜನ್ ಹೊತ್ತಿ ಬೊಬ್ಬಿರಿದರೆ ಆಕ್ಸಿಜನ್ ಉರಿಯುವಿಕೆಗೆ ಆಜ್ಯವೆರೆಯುತ್ತದೆ. ಆದರೆ ಇವುಗಳ ಸಂಯೋಗದಿಂದ ಉಂಟಾಗುವ ಹೊಸವಸ್ತು ಬೆಂಕಿಯನ್ನು ಆರಿಸುವ ಜೀವಜಲವಾಗುತ್ತದೆ.   ಗಲಾಟೆ ಸಂಸಾರವನ್ನು ನೇರ್ಪುಗೊಳಿಸಿದ ಈ  ಶಿಶುವಿನ ಪ್ರತಾಪ ಕಡಿಮೆಯೇ? ನೀರಿನ ಅಣುಗಳ ನಡುವಿನ ಹೈಡ್ರೋಜನ್ ಬಂಧ ಎಂಬ ಆಕರ್ಷಣ ಬಲ ಸ ಕಲ ಜೀವಿಗಳ ಉಗಮ ಮತ್ತು ಉಳಿವಿಗೆ ಕಾರಣವಾಗಿದೆ. ಅಣುಗಳ ನಡುವಿನ  ಈ ಬಂಧದಿಂದಾಗಿಯೇ ನೀರು ಮರಳ ಕಣಗಳಂತೆ ಉದುರುದುರಾಗಿ ಬಿಡಿಬಿಡಿಯಾಗಿಲ್ಲದಿರಲು ಕಾರಣವಾಗಿದೆ, ಇಲ್ಲದಿದ್ದರೆ ಜೀವಿ ಸಂಕುಲಗಳಿರುತ್ತಿದ್ದವೇ? ಮಾರ್ಚ್ 22 ರಂದು ವಿಶ್ವಜಲದಿನದ ಆಚರಣೆಯ ಮೂಲಕ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇವೆಯೇ?  ನಮ್ಮಲ್ಲಿ ಒಗ್ಗಟ್ಟಿದ್ದರೆ ಯಾರೇನು ಮಾಡುವರು ಎನ್ನುತ್ತಾ ಒಗ್ಗಟ್ಟಿನ ಪಾಠ ಹೇಳುತ್ತವೆ.

ಅನುರೂಪ ಶ್ರೇಣಿಗಳಿಗೊಂದು ಸಾಮಾನ್ಯ ಅಣುಸೂತ್ರವಿದೆ. ಯಾವುದೇ ಅಣು ಈ ನಿಯಮವನ್ನು ಮುರಿದಿದೆಯೇ? ಪ್ರತಿಯೊಬ್ಬ ಸದಸ್ಯರೂ ಈ ನಿಯಮವನ್ನು ಅದೆಷ್ಟು ನಿಖರವಾಗಿ ಪಾಲಿಸುತ್ತಿವೆ!!! ನಿಯಮಪಾಲನೆಯ ಮೌಲ್ಯದ ಅನುಷ್ಠಾನಕ್ಕೆ  ಇದು ಜ್ವಲಂತ ನಿದರ್ಶನವಾಗದೆ?  ಸೋಡಿಯಂ ಕ್ಲೋರೈಡ್ ನಂತಹ ಹರಳುಗಳು  ಹಲವು ಧನ ಮತ್ತು ಋಣ ಅಯಾನುಗಳು ಇರುವ ರಚನೆಗಳಾಗಿದ್ದರೆಗ್ರಾಫೈಟ್, ಫುಲರೀನ್, ವಜ್ರಗಳು ಅನೇಕ ಕಾರ್ಬನ್ಪರಮಾಣುಗಳ ಸಹಬಾಳ್ವೆಯ ಸಮುಚ್ಛಯ!! ಲೋಹಗಗಳ ಪರಮಾಣುಗಳ ವಿಶಿಷ್ಟ ಜೋಡಣೆಯಿಂದಾಗಿ ಅವುಗಳನ್ನು ಅಲೋಹಗಳಂತೆ ಸುಲಭವಾಗಿ ಪುಡಿಮಾಡಲಾಗದು. ಇದರಿಂದ ಸಂಘಜೀವನದ ಅಪ್ಯಾಯಮಾನತೆಯನ್ನು ಕಲಿಯಬಹುದಲ್ಲವೇ?

18ನೆಯ ಗುಂಪಿನ ಹೀಲಿಯಂ ನಿಯಾನ್ ಮೊದಲಾದ ಜಡಾನಿಲಗಳದ್ದಂತೂ ರಾಜ ಗಾಂಭೀರ್ಯ!!!  ನಾವ್ಯಾರ ತಂಟೆಗೂ ಹೋಗೆವು. ಯಾವ ಎಲೆಕ್ಟ್ರಾನ್ ಆಮಿಷಕ್ಕೂ ಬಲಿಯಾಗದೆ ಜಿತೇಂದ್ರಿಯರಂತೆ ಬದುಕುವ  ಗುಣವನ್ನು ಕಲಿಸುತ್ತವೆ.

 ವಿದ್ಯುದ್ವಿಭಜನೆ ಕ್ರಿಯೆಯಲ್ಲಿ ಅಯಾನುಗಳು ನಿಕ್ಷೇಪಗೊಳ್ಳುವ ಪ್ರಕ್ರಿಯೆ- ನಮ್ಮ ಗಮ್ಯ ಗುರಿ ತಲುಪಲು ಮಾಡಬೇಕಾದ ನಮ್ಮ ಛಲದ ಹೋರಾಟ ಮತ್ತು ಯಶಸ್ಸಿನ ಸೂತ್ರವನ್ನು ಕಲಿಸುತ್ತವೆ. ಪ್ರತಿ ದಿನ ನಮ್ಮ ಮನೆಬೆಳಗುವ ಇಲೆಕ್ಟ್ರಾನುಗಳು ಪರೋಪಕಾರಂ ಇದಂ ಶರೀರಂ ಎಂಬ ಮೌಲ್ಯವನ್ನು ಕಲಿಸುತ್ತವೆಯಲ್ಲವೇ?

 ಪರಮಾಣು ಚಿಕ್ಕದಾದ್ರು ಪರಮಾಣು ಶಕ್ತಿ ಚಿಕ್ಕದೇ?  ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದನ್ನು ಇವು ಕಲಿಸಿಕೊಡುತ್ತವೆ. ಯಾರನ್ನೂ ಕಡೆಗಣಿಸಬಾರದು ಎನ್ನುವ ಮೌಲ್ಯದ ಪ್ರಾತ್ಯಕ್ಷಿಕೆಯನ್ನು ಇವು ಒದಗಿಸುತ್ತವೆ. ಶಿಸ್ತಿನ ಬದುಕನ್ನು ಕಟ್ಟುವ ಕಲೆಯನ್ನು ಘನ ವಸ್ತುಗಳಲ್ಲಿರುವ ಕಣಗಳು ಕಲಿಸಿದರೆ,  ದ್ರವಗಳು ಸೀಮಿತ ವ್ಯಾಪ್ತಿಯ  ಸ್ವಾತಂತ್ರ್ಯವನ್ನು ತಿಳಿಸುತ್ತವೆ. ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಜೀವನ ಮೌಲ್ಯವನ್ನು ಅನಿಲ ಸ್ಥಿತಿಯು ಕಲಿಸಿಕೊಡುತ್ತದೆ. ಅಡ್ಡಾದಿಡ್ಡಿ ಚಲಿಸುವ ಅನಿಲಗಳನ್ನು ತಂಪು ಮಾಡಿದರೆ ಅಥವಾ ಶಿಸ್ತಿನ ಒತ್ತಡ ಹೇರಿದರೆ ಅಡ್ಡಾದಿಡ್ಡಿ ಚಲನೆಯನ್ನು ನಿಯಂತ್ರಿಸಬಹುದು ಎನ್ನುವ ಮೌಲ್ಯವನ್ನು ಅನಿಲ ಸ್ಥಿತಿ ತಿಳಿಸಿಕೊಡುತ್ತದೆ. ಸಂಕ್ಷಾರಣವನ್ನು ತಡೆಯುವ ವಿವಿಧ ಕ್ರಮಗಳು ಅಪಾಯಕ್ಕೊಳಗಾಗದಂತೆ ಪುಟ್ಟ ಮಕ್ಕಳನ್ನು ಎಷ್ಟು ಮುಚ್ಚಟೆಯಿಂದ ಸಂರಕ್ಷಿಸಬಹುದೆಂಬ ಗುಣವನ್ನು ತಿಳಿಸಿ ಕೊಡದೆ?

ಅಬ್ಬಾ !!! ಒಂದೇ ಎರಡೇ ನೂರಾರು ಪರಿಕಲ್ಪನೆಗಳು !!!! . 

ಉಪ್ಪಿಷ್ಟು ಹುಳಿಯಿಷ್ಟು ಖಾರ ಸಿಹಿಯಷ್ಟಿಟ್ಟು |

ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ||

ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |

ಯಿಪ್ಪತ್ತು ಸೇರೆ ರುಚಿ ಮಂಕುತಿಮ್ಮ ||

ಮೌಲ್ಯಗಳನ್ನು ಮರೆತ ಬೋಧನೆಯುಂಟೆ? ವಿಷಯ ಬೋಧನೆಯೊಂದಿಗೆ ತರಗತಿಯ ಪ್ರಕ್ರಿಯೆಯಲ್ಲಿ ಡಿ.ವಿ.ಗುಂಡಪ್ಪನವರು ಕಗ್ಗದಲ್ಲಿ ಹೇಳಿದಂತೆ  ವಿದ್ಯಾರ್ಥಿಗಳ ವರ್ತನೆಗಳಲ್ಲಿ ತಿಲಮಾತ್ರ ಬದಲಾವಣೆಗಳನ್ನು ಉಂಟುಮಾಡಲು ಜೀವನ ಮೌಲ್ಯಗಳನ್ನು ಮಿಳಿತಗೊಳಿಸಿ ಬೋಧಿಸಿದಲ್ಲಿ ಅತಿಶಯದ ಫಲದೊರೆಯದಿರದು. ವರ್ತನೆಯಲ್ಲಾಗುವ ತಿಲಮಾತ್ರ ಬದಲಾವಣೆಗಳು ವಿಕಸನಗೊಂಡು ಸಮಷ್ಟಿಯಾಗಿ ತಿಲೋತ್ತಮೆಯಂತಾಗವೇ?   ವಿಷಯದ ಅಂತಃಸತ್ವ ಹೊರಹೊಮ್ಮುವಾಗ ಜೀವನ ಮೌಲ್ಯಗಳ ಸಾಕ್ಷಾತ್ಕಾರವಾಗದೆ? ಸಮರಸವೇ ಜೀವನ. ಅದೇ ಬದುಕಿನ ಸುಜ್ಞಾನ.  ಬದುಕಿನ ರಸಾನುಭೂತಿಯನ್ನು ರಸಾಯನಶಾಸ್ತ್ರಪ್ರೇಮಿಯೊಬ್ಬರು ಹೀಗೆ  ಕಟ್ಟಿಕೊಟ್ಟಿದ್ದಾರೆ.

“Dilute your sorrow, Evaporate your worries, Filter your mistakes, Boil your ego, you will get "The crystal of happiness”

ಎಷ್ಟೊಂದು ಅರ್ಥಗರ್ಭಿತ ಅಲ್ವಾ? ಏನಂತೀರಿ? ನಿಮ್ಮ ಅನುಭವದ ಮೂಸೆಯಿಂದ ಈಗ ಮೌಲ್ಯಗಳ ಮಹಾಪೂರವೇ ಹರಿಯತೊಡಗಿತಲ್ವೇ?  ನಮ್ಮ ವಿಭಿನ್ನ  ಆಲೋಚನಾ ಲಹರಿ ಹೊಸಬಗೆಯ ಶೈಕ್ಷಣಿಕ ದೃಷ್ಟಿಕೋನಕ್ಕೆ ಕಾರಣವಾಗುತ್ತದೆಯಲ್ವೇ? ಮತ್ತೇಕೆ ತಡ? ಕಾಮೆಂಟ್ಗಳ ರೂಪದಲ್ಲಿ ನಿಮ್ಮ ಅನುಭವ ಮಥನದ ಕೋವೆಲೆಂಟ್ ಬಂಧ ಏರ್ಪಡಲಿ. ನಮ್ಮ ಅನುಭವದ ಕ್ಷಿತಿಜವನ್ನು ಹಿಗ್ಗಿಸೋಣ.



63 comments:

  1. Very nice article Sir, so many values in science...Always fascinated by MY subject

    ReplyDelete
  2. ರಸಾಯನ ಶಾಸ್ತ್ರದಲ್ಲಿ ಜೀವನಮೌಲ್ಯಗಳನ್ನು ಅನಾವರಣಗೊಳಿಸಿದ್ದೀರಿ, ನಿಮ್ಮ ಒಳನೋಟಕ್ಕೆ ಅಭಿನಂದನೆಗಳು. ಲೇಖನ ಚಿನ್ನಾಗಿದೆ

    ReplyDelete
  3. This comment has been removed by the author.

    ReplyDelete
  4. ಶ್ಲಾಘನೀಯ ಕಾರ್ಯ
    ಅಅಭಿನಂದನೆ

    ReplyDelete
  5. ಅದ್ಭುತ ಲೇಖನ ಭಟ್. ಬರವಣಿಗೆ ಶೈಲಿ ತುಂಬಾ ಚೆನ್ನಾಗಿದೆ

    ReplyDelete
  6. ಉತ್ತಮ ಭಾವನಾತ್ಮಕ ಬರಹದ ಸಿಹಿ ರಸಾಯನ

    ReplyDelete
  7. ಮೌಲ್ಯ ಗಳನ್ನು ಮರೆತು ಬೋಧನೆಯನ್ನು ಮಾಡಿದರೆ ಒಬ್ಬ ಕುರುಡ ಮತ್ತೊಬ್ಬ ಕುರುಡನಿಗೆ ದಾರಿ ತೋರಿದಂತೆ.... ವಿಜ್ಞಾನದಲ್ಲಿ ಅಡಗಿರುವ ಮೌಲ್ಯ ಗಳನ್ನು ಹೊರಗೆಡವಿದ್ದಿರಿ.. ಅದ್ಬುತ ವಾದ ಲೇಖನ ಸರ್..... ಧನ್ಯವಾದಗಳು..

    ReplyDelete
  8. ಅದ್ಭುತವಾಗಿದೆ ನಿಜವಾಗ್ಲೂ ರಸಾಯನಶಾಸ್ತ್ರದಲ್ಲಿ ಅಡಗಿರುವ ಮೌಲ್ಯಗಳನ್ನು ತುಂಬಾ ಚೆನ್ನಾಗಿ ಹೊರ ಹಾಕಿದ್ದೀರಿ ಧನ್ಯವಾದಗಳು ಸರ್

    ReplyDelete
  9. ರಸಾಯನ ಪದವೇ ಅದ್ಭುತ ಅಲ್ಲವೇ ಅದರ ತಯಾರಿಗೆ ಬೇಕಾದ ಅನುಭವ ಕಲಿಕೆ ಸಿದ್ಧಿಸಿದಾಗ ಸಿಗುವ ರುಚಿ ಅನುಭವಿಸಿದಾಗ ಆಗುವ ಆನಂದ ಇದಕ್ಕೆಲ್ಲ ವಿಜ್ಞಾನ ಕೊಡುವ ವಿವರಣೆ ಸಾಗಿದಷ್ಟು ಸಾಗರ

    ReplyDelete
  10. ನಿಮ್ಮ ಅದ್ವಿತೀಯ ಜ್ಞಾನಕ್ಕೆ ನನ್ನ ಸಾವಿರ ಪ್ರಣಾಮಗಳು ಸರ್

    ReplyDelete
  11. Sir really from my heart nice super

    ReplyDelete
  12. ವಿಜ್ಞಾನ ಶಿಕ್ಷಕರನ್ನು ಚಿಂತನೆಯ ಒರೆಗೆಹಚ್ಚುವ ಲೇಖನ. ಧನ್ಯವಾದಗಳು ಸರ್

    ReplyDelete
  13. ರಸಾಯನ ಶಾಸ್ತ್ರ ಭೋಧನೆಯಲ್ಲಿ ತಮ್ಮ ಅನುಭವದ ಸಿಹಿ ಹೂರಣ ಲೇಖನದಲ್ಲಿ ಅದ್ಬುತವಾಗಿ ಮೂಡಿಬಂದಿದೆ.ಮೌಲ್ಯರಹಿತ ಭೋಧನೆಯು ಅರ್ಥಹೀನ ಎನ್ನುವುದರ ಜೊತೆಗೆ ದ್ರವ್ಯದ ಸ್ಥಿತಿಗಳು ರಾಸಾಯನಿಕ ಬಂಧಗಳು, ನೀರಿನ ವೈಶಿಷ್ಟ್ಯಗುಣಧರ್ಮ, ರಾಜಾನಿಲಗಳ ರಾಜಗಾಂಭೀರ್ಯ, ಇನ್ನೂ ಮುಂತಾದ ವೈಜ್ಞಾನಿಕ ಪರಿಕಲ್ಪನೆಗಳನ್ನು ನಮ್ಮ ನಿತ್ಯ ಜೀವನದ ಕ್ರಿಯೆಗಳಿಗೆ ಮೇಳೈಸಿ ವಿವರಿಸಿರುವ ಪರಿ ನಿಜಕ್ಕೂ ಅವರ್ಣನೀಯ. ಮುಂದಿನ ಲೇಖನಗಳ ನಿರೀಕ್ಷೆಯಲ್ಲಿ....

    ReplyDelete
  14. ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್

    ReplyDelete
  15. Awesome! article sir.
    V surely like to share the values of chemistry.

    ReplyDelete
  16. ಜೀವನಾನುಭವವನ್ನು ವಿಜ್ಞಾನ ದೊಂದಿಗೆ ಜೋಡಿಸಿದ್ದು ನಿಮ್ಮ ಉತ್ತಮ ಕೌಶಲ್ಯವೇ ಸರಿ .... ಅಭಿನಂದನೆಗಳು...

    ReplyDelete
  17. This comment has been removed by the author.

    ReplyDelete
  18. ರಸಾಯನ ಶಾಸ್ತ್ರದ ಅಧ್ಯಾಯಗಳಲ್ಲಿ ಜೀವನ ಮೌಲ್ಯಗಳನ್ನು ಅನಾವರಣಗೊಳಿಸಿದ ಒಳನೋಟಕ್ಕೆ ಧನ್ಯವಾದಗಳು ಸರ್. ತುಂಬಾ ಚೆನ್ನಾಗಿದೆ.

    ReplyDelete
  19. ಪ್ರತಿಯೊಬ್ಬ ಶಿಕ್ಷಕ ಪ್ರತಿ ಪಾಠದಲ್ಲೂ ಮೌಲ್ಯಗಳನ್ನು ತುಂಬಲು ಸಾಧ್ಯವಾದರೆ, ಮೌಲ್ಯ-ಕೇಂದ್ರಿತ ಶಿಕ್ಷಣವು ಪ್ರತ್ಯೇಕ ವಿಷಯವಾಗದೆ ವಿದ್ಯಾರ್ಥಿಗಳ ಜೀವನದಲ್ಲಿ ತಾನಾಗಿಯೇ ಅಳವಡಿಸಲ್ಪಡುತ್ತದೆ.ಉತ್ತಮ ಬರಹ.🙏

    ReplyDelete
  20. ಅಬ್ಬಾ!!! ನಮ್ಮ ನಿಮ್ಮ ನಡುವಿನ ಮಹಾಬಂಧವೊಂದರ ಅನಾವರಣವಾಯಿತು. ಈ ಬಂಧ ಹೀಗೆ ಮುಂದುವರಿಯಲಿ. ಹೊಸ ಕಲಿಕಾಸೇತುಬಂಧವಾಗಲಿ. ಎಲ್ಲಾ ಸವಿಜ್ಞಾನ ಓದುಗ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
    ಅಷ್ಟೇ ಅಲ್ಲ ನಿಮ್ಮ ಲೇಖನಿಯಿಂದಲೂ ನಿರ್ದಿಷ್ಟ ಚೌಕಟ್ಟಿಗೊಳಪಟ್ಟು ಲೇಖನಗಳ ಮಹಪೂರವೇ ಹರಿದು ಬರಲಿ.

    ReplyDelete
  21. ಶಿಕ್ಷಣ ಸಾಹಿತ್ಯ, ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಮಾಧರಿ ಪ್ರಯತ್ನ ಮತ್ತು ವಿನೂತನ ತಮ್ಮ ಕ್ರಿಯಾಶೀಲ ಪ್ರಯತ್ನ ಇನ್ನಷ್ಟು ಎತ್ತರಕ್ಕೆ ಏರಲಿ ಅಭಿನಂದನೆ 👑🎓
    ಚಿಕ್ಕ ದೇವೇಗೌಡ

    ReplyDelete
  22. Wow! Beautifully explained. Very nice article. This kind of article increases our affinity towards chemistry.

    ReplyDelete
  23. ರಸಾಯನ ಶಾಸ್ತ್ರ ಬೋಧನೆಯ ಜೊತೆಗೆ ಮೌಲ್ಯಗಳ ಅರಿವು ಮೂಡಿಸುವ ನಿಮ್ಮ ಪ್ರಯತ್ನ ಉತ್ತಮವಾಗಿ ಮೂಡಿಬಂದಿದೆ. 👌👌👌🌸🙏🌸

    ReplyDelete
  24. ಸೂಪರ್ ಆಗಿದೆ ಸರ್, ರಸಾಯನ ಶಾಸ್ತ್ರ ಭೋದನೆಯಲ್ಲಿ ಜೀವನದ ಮೌಲ್ಯಗಳ ಭೋದನೆ ಉತ್ತಮವಾಗಿದೆ.

    ReplyDelete
  25. Very nicely written, Sir!! You have made science come alive with your graphical explanations!!

    ReplyDelete
  26. Very interesting sir. Helps me to understand one thing each concept in science teaches us values. Thank you for this valuable insight sir.

    ReplyDelete
  27. ಇಂತಹ ಮೌಲ್ಯಗಳು ನಮಗೆ ಪ್ರಸ್ತುತ ಬಹಳ ಅವಶ್ಯಕತೆಯಾಗಿದೆ ಅದನ್ನು ತಾವು ರಸಾಯನಶಾಸ್ತ್ರದ ಮುಲಕ ಮನಮುಟ್ಟುವಂತೆ ಮಾಡಿದ್ದಿರಿ ತಮಗೆ ಧನ್ಯವಾದಗಳು...

    ReplyDelete
  28. ನಿಜವಾಗಲೂ ಸಹವೆಲೆನ್ಸೀಯ ಬಂಧ ಜೀವನದಲ್ಲಿ ನಾವು ಹೇಗೆ ಸಹಬಾಳ್ವೆಯಿಂದ ಬದುಕಬೇಕೆಂಬುದನ್ನು ಕಲಿಸುತ್ತದೆ ಅಲ್ಲವಾ ಸಾರ್...ನಿಮ್ಮ ಲೇಖನ ಅತ್ಯುತ್ತಮವಾಗಿದೆ...

    ReplyDelete
  29. ಅದ್ಭುತವಾದ ಲೇಖನ ಸರ್‌, ಉತ್ತಮವಾಗಿ ಮೂಡಿ ಬಂದಿದೆ. ರಸಾಯನ ಶಾಸ್ತ್ರದ ಬೋಧನೆಯಿಂದ ಇಷ್ಟೆಲ್ಲಾ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬಹುದಾಗಿದೆ ಎಂಬ‌ ನಿಮ್ಮ ಅನುಭವ ಕ್ಷಿತಿಜವನ್ನು ಹಂಚಿಕೊಳ್ಳುವುದರೊಂದಿಗೆ ನಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿದಿರಿ.ಇಂತಹ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡು ಕೊವೇಲೆಂಟ್‌ ಬಂಧ ಏರ್ಪಡಿಸಿದ್ದಕ್ಕೆ ಧನ್ಯವಾದಗಳು ಸರ್.

    ReplyDelete
  30. ನಿಜವಾಗಲೂ ಸಹವೆಲೆನ್ಸೀಯ ಬಂಧ ಜೀವನದಲ್ಲಿ ನಾವು ಹೇಗೆ ಸಹಬಾಳ್ವೆಯಿಂದ ಬದುಕಬೇಕೆಂಬುದನ್ನು ಕಲಿಸುತ್ತದೆ ಅಲ್ಲವಾ ಸಾರ್...ನಿಮ್ಮ ಲೇಖನ ಅತ್ಯುತ್ತಮವಾಗಿದೆ...

    ReplyDelete
  31. Very nice sir... ಸೊಗಸಾಗಿ ವಿವರಿಸಿದ್ದೀರಿ.ಎಲ್ಲ ವಿಷಯ ಬೋಧಕರು ಈ ರೀತಿಯ ಮನೋಭಾವ ಹಾಗೂ ಹೊಸ ಚಿಂತನೆಗಳನ್ನು ಅಳವಡಿಸಿಕೊಂಡಲ್ಲಿ ನಮ್ಮ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವದ ಜೊತೆಗೆ ಜೀವನದ ಮೌಲ್ಯಗಳನ್ನು ಸುಲಭವಾಗಿ ಬೆಳೆಸಲು ಸಾಧ್ಯ.students will also love this approach and chemistry will never be considered as undedog of science during secondary level👍

    ReplyDelete
  32. Very nice article sir. This type of approach is very much needed to inculcate scientific thinking and to create interest in basic science.

    ReplyDelete
  33. ಲೇಖನ ಬಹಳಷ್ಟು ಚೆನ್ನಾಗಿದೆ ಸರ್... Whenever I teach my students about Exceptions in Chemistry, I will always say, Chemistry accepts the Exceptions with open arms... ನಾವು ಮನುಜರೂ ಎಲ್ಲರ ಭಿನ್ನತೆಗಳನ್ನು ಮನಬಿಚ್ಚಿ ಮೆಚ್ಚಿದರೆ ಎನಿತು ಚಂದ ಬಾಳು....?!?

    ReplyDelete
  34. ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು ಸರ್🙏🙏

    ReplyDelete
  35. Great initiative sir, congratulations.
    Also Please take the glimpses from a great book on chemistry "Understanding Chemistry" by bharatna Ratna CNR RAO

    ReplyDelete
  36. Excellent correlation chemistry with life...Nice sir....

    ReplyDelete
  37. ಉತ್ತಮವಾಗಿದೆ...
    ಜೀವನದ ರಸನಿಮಿಷಗಳನ್ನು ರಸಾಯನಶಾಸ್ತ್ರದಲ್ಲಿ ಬಹಳ ಅರ್ಥಪೂರ್ಣವಾಗಿ ಮೇಳೈಸಿದ್ದೀರಿ....
    ಧನ್ಯವಾದಗಳು

    ReplyDelete
  38. This comment has been removed by the author.

    ReplyDelete
  39. ಆತ್ಮೀಯರೇ, ನಿಮ್ಮ ಅದ್ಭುತ ಪ್ರೋತ್ಸಾಹದ ನುಡಿಗಳು, ನಿರೀಕ್ಷೆಗಳು ಜವಾಬ್ದಾರಿಯನ್ನು ಹೆಚ್ಚಿಸಿವೆ. ನಮ್ಮ- ನಿಮ್ಮ ಬಾಂಧವ್ಯ ಅನವರತ ಹೀಗೇ ಮುಂದುವರೆಯಲಿ. ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು

    ReplyDelete
  40. Very useful to everyone.it gives better perspective

    ReplyDelete
  41. Very nice information sir 👌👌

    ReplyDelete
  42. This comment has been removed by the author.

    ReplyDelete