ವಿಜ್ಞಾನದ ಒಗಟುಗಳು - ಮೇ ೨೦೨೧
ಕಣ ಕಣದಲೂ ನಾನಿರುವೆ
ಡೆಮಾಕ್ರೈಟಸ್ ಕಣಾದರಿಗೋ ನನ್ನದೇ ಕನವರಿಕೆ
ನಿರ್ಜೀವವೆಂದು ಹೇಳುವರು ನನ್ನ
ಆದರೆ ನನ್ನೊಳಗೋ ಚೈತನ್ಯದಾ ರಾಶಿ
ಈಗ ಹತ್ತಿತೋ ನನ್ನ ಗುರುತು?
ಉ: ಪರಮಾಣು
ನಮ್ಮ ನಡುವಿನೊಂದು ವಿಶಿಷ್ಟ ಬಲ
ಬಂಡೆಗಳ ಸೀಳಿ ಪುಡಿಗಟ್ಟಬಲ್ಲುದು
ನಾನಿಲ್ಲದೆ ತಿರೆ ಜೀವಗ್ರಹವಲ್ಲ
ಜೀವೋತ್ಪತ್ತಿಗೋ ನಾನೇ ಮಹಾ ಮಾಧ್ಯಮ
ಸುಳಿವು ಹಿಡಿದು ಹೇಳಿರಿ ಜಾಣ ಜಾಣೆಯರೇ ಈ ಬಲವ
ಉ: ನೀರಿನ ಅಣುಗಳ ನಡುವಣ ಹೈಡ್ರೋಜನ್ ಬಂಧ
ಪ್ರತಿ ಧಾತುವಿನ ವಿಶಿಷ್ಟ ಬೆರಳಚ್ಚು ನಾ
ನನ್ನ ಮನೆಯೋ ಅತಿ ಕಿರಿದು ನನ್ನೊಳಗಿನಾಟವೋ ಮಹಾಸ್ಪೋಟ
ನನ್ನ ಲೆಕ್ಕವೇ ಆವರ್ತ ಕೋಷ್ಟಕಕೆ ಮಹಾಭಾಷ್ಯ
ವರ್ಣಮಾಲೆಯೊಂದರ ಕೊನೆಯ ಅಕ್ಷರವೇ ನಾ
ಈಗ ಹೇಳು ನೀ ನಾನ್ಯಾರೆಂಬುದನು ?
ಉ: ಪರಮಾಣು ಸಂಖ್ಯೆ
ಜೀವಿ ಎಂಬರೋ ಜನರೆನ್ನ
ಜೀವಕೋಶದ ಹಂಗೆನಗಿಲ್ಲ
ಉಸಿರಾಡದೆ ಇರಬಲ್ಲೆ ನಾ ವರುಷ
ನನ್ನ ಗೊಡವೆಗೆ ಬಂದಿರೋ ಸೋಂಕನ್ನುಂಟುಮಾಡುವೆ
ಬಲ್ಲಿದರು ಬಿಡಿಸೀ ಒಗಟ
ಉ: ವೈರಸ್
Virus.
ReplyDeleteFine sir
1. ಪರಮಾಣು. 2.ನೀರು.3.? 4.ವೈರಸ್
ReplyDeleteSuperb