ತೆರೆ ಮರೆಯ ಸಾಧಕರು
ಮಧುಗಿರಿಯ ಗಿರಿ - ಶಿಕ್ಷಕ ಗಿರೀಶ್ ಬಿ.ಎಸ್
ಲೇಖಕರು: ಶ್ರೀನಿವಾಸ್.ಎ
‘ಕಾಯಕವೇ ಕೈಲಾಸ’ ಎಂಬ ಉಕ್ತಿಯನ್ನು ವ್ರತವಾಗಿ ಸ್ವೀಕರಿಸಿದ ಅನೇಕ ವ್ಯಕ್ತಿಗಳು ಸಮಾಜವನ್ನು ಅರ್ಥಪೂರ್ಣವಾಗಿ ಕಟ್ಟುವಕಾಯಕ ಮಾಡುತ್ತಲೇ ಬಂದಿದ್ದಾರೆ. ಶಿಕ್ಷಕ ವಿದ್ಯಾರ್ಥಿಗಳ ಬಾಳನ್ನು ಬೆಳಕಾಗಿಸುವ ಸೊಡರು. ಇದೇ ಹಾದಿಯಲ್ಲಿ ನಡೆಯುತ್ತಿರುವ ಎಲೆ ಮರೆಯ ಕಾಯಿಯಂತೆ ಇರುವ ಸಾಧಕ ಶಿಕ್ಷಕ ಮಿತ್ರರೊಬ್ಬರ ಪರಿಚಯ ಮಾಡಿಕೊಡಲು ನನಗೆ ವಿಪರೀತ ಹೆಮ್ಮೆ ಎನಿಸುತ್ತದೆ. ‘ವಿದ್ಯೆಗೆ ವಿನಯವೇ ಭೂಷಣ’ ಎಂಬ ನಾಣ್ಣುಡಿಗೆ ಅನ್ವರ್ಥವೇ ಈ ಮಧುಗಿರಿಯ ಗಿರಿ. ಕೊರಟಗೆರೆ ತಾಲ್ಲೂಕಿನ ಮಧುಗಿರಿ ಶೈಕ್ಷಣೆಕಜಿಲ್ಲೆಯ ವಡ್ಡಗೆರೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಧಕ ಶಿಕ್ಷಕನೇ ಸ್ನೇಹಿತ ಗಿರೀಶ್ ಬಿ.ಎಸ್.
ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರ ವಿಜ್ಞಾನ ಬೋಧನಾ ವಿಧಾನ ಅತ್ಯಂತ ಆಕರ್ಷಕ. ಶಾಲಾ ಫಲಿತಾಂಶವೇ ಅದಕ್ಕೆ ಸಾಕ್ಷಿ. ಸತತವಾಗಿ 8 ವರ್ಷಗಳಿಂದ 10ನೇ ತರಗತಿ ಪರೀಕ್ಚೆಯಲ್ಲಿ 100% ಫಲಿತಾಂಶ ಪಡೆಯುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ರಾಜ್ಯ ಶಿಕ್ಷಕ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ಇವರು ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಅವರು ಬಳಸುವ ಪ್ರಾಯೋಗಿಕ ವಿಧಾನ ನಮ್ಮೆಲ್ಲರಿಗೂ ಅನುಕರಣೀಯ. ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಕಡಿಮೆ ವೆಚ್ಚದಲ್ಲಿ ಉತ್ತಮವಾದ ವಿಜ್ಞಾನ ಪ್ರಯೋಗಾಲಯವನ್ನು ರೂಪಿಸಿದ್ದಾರೆ. ವಿದ್ಯಾರ್ಥಿಗಳನ್ನು ಬಳಸಿಕೊಂಡು ಸ್ಥಳೀಯವಾಗಿ ದೊರೆಯುವ ಸಸ್ಯಗಳ ಹರ್ಬೇರಿಯಂ ಮತ್ತು ಪ್ರಾಣಿ ಪ್ರಭೇದಗಳು, ಮಿದುಳು ಮೊದಲಾದ ಪ್ರಾಣಿ ಅಂಗಗಳನ್ನು ಫಾರ್ಮಲಿನ್ ದ್ರಾವಣದಲ್ಲಿ ಸಂಗ್ರಹಿಸಿ ಪ್ರಯೋಗಾಲಯದಲ್ಲಿಟ್ಟಿದ್ದಾರೆ. ವಸ್ತುಗಳ ಸಂಗ್ರಹ ಎಷ್ಟು ಮುಖ್ಯವೋ ಅದಕ್ಕೂ ಹೆಚ್ಚು ಮುಖ್ಯವಾದದ್ದು ಅವುಗಳ ಸದ್ಬಳಕೆ. ಗಿರೀಶ್ ಅವರು ತಮ್ಮ ಸಂಗ್ರಹವನ್ನು ದೈನಂದಿನ ತರಗತಿಯ ಬೋಧನಾ ಕಾರ್ಯದಲ್ಲಿ ಬಳಸುತ್ತಿದ್ದಾರೆ. ವಿದ್ಯಾರ್ಥಿಗಳು ತಾವೇ ಸ್ವತಃ ಪ್ರಯೋಗಗಳಲ್ಲಿ ತೊಡಗಿಸಿಕೊಂಡು, ‘ಮಾಡಿಕಲಿಯಲು’ ಅನುಕೂಲಿಸುವವರಾಗಿ ಕಲಿಕಾ ಅವಕಾಶಗಳನ್ನು ಸೃಜಿಸಿದ್ದಾರೆ. 8ನೇ ತರಗತಿಯಿಂದಲೇ ವಿಜ್ಞಾನದ ಮೂಲ ಪ್ರಕ್ರಿಯೆಗಳ ಅರಿವು ಮೂಡಿಸಿ ಮಕ್ಕಳನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಆ ಮೂಲಕ, ವಿಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸುತ್ತಿದ್ದಾರೆ. ಇದೇ 10ನೇ ತರಗತಿಯಲ್ಲಿ ಉತ್ತಮ ಪಲಿತಾಂಶ ಪಡೆಯಲು ಕಾರಣ ಎಂದು ಗಿರೀಶ್ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳನ್ನು ಹಲವಾರು ವಸ್ತುಪ್ರದರ್ಶನಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದ್ದಾರೆ. ರಾಜ್ಯಸಂಪನ್ಮೂಲ ವ್ಯಕ್ತಿಯಾಗಿ ಹಲವು ಶಿಕ್ಷಕ ತರಬೇತಿಗಳಲ್ಲಿ ಭಾಗವಹಿಸಿ ತಮ್ಮ ಅನುಭವವನ್ನು ಇತರ ಶಿಕ್ಷಕರೊಂದಿಗೆ ಹಂಚಿಕೊಂಡು ಶಿಕ್ಷಕರಿಂದ, ಶಿಕ್ಷಣ ಇಲಾಖೆಯಿಂದ ಪ್ರಶಂಸೆ ಪಡೆದಿದ್ದಾರೆ. ‘ಪರೀಕ್ಷಾವಾಣಿʼ-DSERTಯಿಂದ ತಯಾರಿಸಿದ ವೀಡಿಯೋ ಸಂಪನ್ಮೂಲ ರಚನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ರಾಜ್ಯಾದ್ಯಂತ ವಿದ್ಯಾರ್ಥಿಗಳ ಶ್ಲಾಘನೆಗೊಳಗಾಗಿದ್ದಾರೆ. ಅವರ ಸೇವಾತತ್ಪರತೆಗೆ ಹಲವು ಪ್ರಶಸ್ತಿಗಳು ಬಂದಿವೆ. - ರೋಟರಿಕ್ಲಬ್ 2017ರಲ್ಲಿ ‘‘THE NATION BUILDER AWARD’ ನೀಡಿ ಗೌರವಿಸಿದೆ. 2018ರಲ್ಲಿ ಶಿಕ್ಷಣ ಇಲಾಖೆಯ, “ವಿಶೇಷ ವಿಜ್ಞಾನ ಶಿಕ್ಷಕ” ಪ್ರಶಸ್ತಿಗೆ ಭಾಜನರಾಗಿದ್ದಾರೆ. 2019ರಲ್ಲಿ ಪ್ರತಿಷ್ಠಿತ ಸಂಸ್ಥೆ “JNCASR and CNR RAO EDUCATION FOUNDATION” ವತಿಯಿಂದ ನೀಡಲಾಗುವ “OUTSTANDING SCIENCE TEACHER” ಪ್ರಶಸ್ತಿಗೆ ಆಯ್ಕೆಗೊಂಡು ಪೊ||ಸಿ.ಎನ್.ಆರ್.ರಾವ್ ಅವರಿಂದಲೇ ಸನ್ಮಾನಕ್ಕೆ ಭಾಜನರಾಗಿದ್ದಾರೆ. ಮಧುಗಿರಿ DIETನಲ್ಲಿ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಧನೆ ಎಲ್ಲ ವಿಜ್ಞಾನ ಶಿಕ್ಷಕರಿಗೂ ಪ್ರೇರಣಾದಾಯಕ ಹಾಗೂ ಅನುಕರಣೀಯ.
ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು
ಇಲ್ಲಿ ಕ್ಲಿಕ್ ಮಾಡಿ 👉 ಮಧುಗಿರಿಯ ಗಿರಿ - ಶಿಕ್ಷಕ ಗಿರೀಶ್ ಬಿ. ಎಸ್.
ಉತ್ತಮ ಸಾಧಕರಾದ ಗಿರೀಶ್ ಸರ್ ಗೆ ಹೃತಪೂರ್ವಕ ಅಭಿನಂದನೆಗಳು.
ReplyDeleteಅನುಕರಣೀಯ ವ್ಯಕ್ತಿತ್ವ ಪರಿಚಯ ಅಚ್ಚುಕಟ್ಟಾಗಿ ಮೂಡಿರುವುದಕ್ಕೆ ಅಭಿನಂದನೆಗಳು
ReplyDeleteIt is proudness of koratagere taluk. Thank u Girish sir....
ReplyDeleteCongratulations sir.
ReplyDeleteBeing his classmate,we have seen him being very inspirational and explorer,and verygood human being too.He deserves to be called as great Teacher.we are proud of him.
ReplyDeleteಅಭಿನಂದನೆಗಳು ಗಿರೀಶ್ ಸರ್.....
ReplyDeleteಅವರನ್ನು ನಾನು ಪಾವಗಢದಲ್ಲಿ ಶಿಕ್ಷಕರಾಗಿ ಇದ್ದಾಗಿನಿಂದ ಪರಿಚಿತರಾಗಿದ್ದಾರೆ ಕೊರಟಗೆರೆಗೆ ಬಂದಾಗಿನಂದ ವಿಜ್ಞಾನದ ಬೋಧನೆಯಲ್ಲಿ ಹೆಚ್ಚು ಕ್ರಿಯಾಶೀಲ್ಅಗಿ ಸಂಪನ್ಮೂಲ ವ್ಯಕ್ತಿಯಾಗಿ ಬಹಳಷ್ಟು ಕಾರ್ಯಾಗಾರಗಳಲ್ಲಿ ತರಭೇತಿ ನೀಡಿದ್ದಾರೆ. ಉತ್ತಮ ಸ್ನೇಹಜೀವಿಯೂ ಹೌದು. ನಮ್ಮ ಜೊತೆಗೆ ಹಲವಾರು ರಾಜ್ಯ ಮಟ್ಟದ ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
ReplyDeleteಗಿರೀಶ್ ಸರ್ ರವರು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನೀಡಿರುವ ಸೇವೆ ಅಪಾರವಾದದ್ದು ಅವರ ಕೊಡುಗೆ ಮತ್ತು ಸೇವೆಗಳನ್ನು ವರ್ಣಿಸಲು ಪದಗಳೇ ಸಾಲದು
ReplyDeleteಅಭಿನಂದನೆಗಳು ಗಿರೀಶ್ ಸರ್
ReplyDeleteಶ್ರೀನಿವಾಸ್ ಸರ್ ನನ್ನ ಬಗ್ಗೆ ಬರೆದಿರುವ ಲೇಖನವು ಅರ್ಥ ಪೂರ್ಣವಾಗಿದೆ. ಇನ್ನು ಹೆಚ್ಚಿನ ಕೆಲಸವನ್ನು ವೈಜ್ಞಾನಿಕ ಕ್ಷೇತ್ರದಲ್ಲಿ ಮಾಡಲು ಸ್ಫೂರ್ತಿಯಾಗಿದೆ
ReplyDeleteಧನ್ಯವಾದಗಳು ಸರ್
Thank you sir
Deleteತೆರೆ ಮರೆಯ ಸಾಧಕರು ಅಂಕಣದ ಮೂಲಕ ಶ್ರೀ ಬಿ.ಎಸ್ ಗಿರೀಶ್ ರವರನ್ನು ಪರಿಚಯಿಸಿದ ಲೇಖಕರಿಗೆ ಧನ್ಯವಾದಗಳು. ಸಂಪನ್ಮೂಲ ವ್ಯಕ್ತಿಯಾಗಿ. ಉತ್ತಮ
ReplyDeleteಶಿಕ್ಷಕರಾಗಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಗಿರೀಶ್ ರವರ
ಮುಂದಿನ ಕಾರ್ಯಗಳಿಗೆ ಈ ಲೇಖನ ಪ್ರೇರಣೆಯಾಗಲಿದೆ. ಅಭಿನಂದನೆಗಳು ಗಿರೀಶ್. ಕಟ್ಟಾ ನರಸಿಂಹಮೂರ್ತಿ, ಕಾರ್ಯದರ್ಶಿ. ಮಧುಗಿರಿ ವಿಜ್ಞಾನ ಕೇಂದ್ರ.
Congratulations sir
ReplyDeleteGood work sir.keep it up and wish you all the best. Good article also.
ReplyDeleteGood work sir.keep it up and wish you all the best. Good article also.
ReplyDelete