ಇದೇನು ಮನೆಯೋ ? ವಾಚನಾಲಯವೋ ? ವಸ್ತು ಸಂಗ್ರಹಾಲಯವೋ? ಕಲಾ ಕುಟೀರವೋ?
ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ,
ಮೈಸೂರು ರಸ್ತೆ, ಬೆಂಗಳೂರು
ಕೋಲಾರದ ವಿ.ಎಸ್.ಎಸ್. ಶಾಸ್ತ್ರಿಯವರನ್ನು
ಈಗಾಗಲೇ ಪರಿಚಯಿಸಿದ್ದೇವಲ್ವಾ? ಸವಿಜ್ಞಾನ ತಂಡ ಶಾಸ್ತ್ರೀಜೀಯವರ ಮನೆಯ
ಒಳಗೆ ಕಾಲಿಡುತ್ತಿದ್ದಂತೆ ಅವರಿಗೆ ಗೊತ್ತಿಲ್ಲದ ವಿಷಯವೇ ಇಲ್ಲ ಎನ್ನುವ ಸತ್ಯದ ಅನಾವರಣವಾಯಿತು. ಆಗ ನಮಗೆ
ಅನಿಸಿದ್ದು ನಾವು ಬಂದಿದ್ದೆಲ್ಲಿಗೆ? ಇದೇನು ಮನೆಯೋ ? ವಾಚನಾಲಯವೋ? ವಸ್ತುಸಂಗ್ರಹಾಲಯವೋ? ಕಲಾಕುಟೀರವೋ? ಒಬ್ಬ ಮಾದರಿ
ಆಚಾರ್ಯೋತ್ತಮನಾಗಬೇಕಾದರೆ ನಾವು ಏನೆಲ್ಲ ಮಾಡಬೇಕೋ
ಅವೆಲ್ಲವೂ ಅಲ್ಲಿದ್ದವು. ಬ್ಯಾಂಕ್ ಉದ್ಯೋಗಿಯಾಗಿದ್ದ ಶಾಸ್ತ್ರೀಜಿಯವರು ಶಿಕ್ಷಣಕ್ಷೇತ್ರದ
ಸೆಳೆತಕ್ಕೆ ಸಿಕ್ಕಿ ಅದನ್ನು
ತಮ್ಮ ಮೈಯಲ್ಲಿ ಆವಾಹಿಸಿಕೊಂಡಿದ್ದು ಹೇಗೆ? ಅದೊಂದು
ರೋಚಕ ಕಥೆ. ಅದನ್ನು ಅವರ ಬಾಯಲ್ಲೇ ಕೇಳುವಿರಂತೆ. ಈಗ ನಾನು ಹೇಳ ಹೊರಟಿರುವುದು ವಸ್ತು
ಸಂಗ್ರಹಾಲಯದಂತಿರುವ ಅವರ ಮನೆಯ ಬಗ್ಗೆ !!! ಹಾಗೆಯೇ ಅಲ್ಲಿ ನಾವು
ನೋಡಿ, ನಲಿದು ಕಲಿತು ಸ್ವಾಂಗೀಕರಿಸಿದ ನಮ್ಮ ಅನುಭವಗಳ
ಬಗ್ಗೆ. ತಮ್ಮ ಜ್ಞಾನವನ್ನು ಇತರರಿಗೆ ಉಣಿಸಬೇಕೆಂಬ ಶಾಸ್ತ್ರೀಜಿಯವರ
ಹಪಾಹಪಿ, ಕಾಳಜಿ ಬಹುಷಃ ನಮ್ಮೆಲ್ಲರಿಗೂ ಅನುಕರಣೀಯ.
ವಿವಿಧ ಬಗೆಯ ಸಸ್ಯ
ಮತ್ತು ಪ್ರಾಣಿಗಳ ಫಾಸಿಲ್ಗಳು, ಖನಿಜಗಳು, ಗಣಿತ ಮಾದರಿಗಳು. ಹರ್ಬೇರಿಯಂ, ಬೋನ್ಸಾಯ್
ಮರಗಳು, ಅಪರೂಪದ ಪುಸ್ತಕಗಳು, ತಾಳೆಗರಿಗಳು, ಹರಪ್ಪ ನಾಗರಿಕತೆಯ
ಜನರು ಬಳಸುತ್ತಿದ್ದ ವಿವಿಧ ವಸ್ತುಗಳ ಪ್ರತಿಕೃತಿಗಳು, ಉತ್ಖನನದಲ್ಲಿ
ದೊರೆತ ಇಟ್ಟಿಗೆ, ಹೀಗೆ ಒಂದೇ ಎರಡೇ ನೂರಾರು ಅಮೂಲ್ಯ ವಸ್ತುಗಳ ಸಂಗ್ರಹ, ಕತ್ತರಿ, ವಿವಿಧ ಬಣ್ಣದ
ಕಾಗದಗಳಿದ್ದರೆ ಅವರ ಕೈಚಳಕದಿಂದ
ಮೂಡುವ ಕಿರಿಗಾಮಿ, ಓರಿಗಾಮಿ ಕಲಾಕೃತಿಗಳು ನೂರಾರು. ಬ್ಯಾಂಕ್
ಉದ್ಯೋಗ ಮಾಡುತ್ತಿದ್ದ ಶಾಸ್ತ್ರಿಯವರು ಯಾವುದೇ ಆದಾಯವಿಲ್ಲದ, ಖರ್ಚಿನ
ಬಾಬತ್ತಿನ ಶೈಕ್ಷಣಿಕ ಕೈಂಕರ್ಯವನ್ನೇ ಹವ್ಯಾಸವಾಗಿಸಿ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಶೈಕ್ಷಣಿಕಕ್ಷೇತ್ರಕ್ಕೆ ದೊರೆತ ಲಾಭವೇ ಸರಿ. ಈಗ ಅವರ
ಸಂಗ್ರಹದಲ್ಲಿದ್ದ ಅಮೂಲ್ಯ ನಿಧಿಯಂತಹ ಒಂದಷ್ಟು ವಸ್ತುಗಳನ್ನು ನೋಡೋಣ.
ವಂಶ : ಬ್ರಾಕಿಯೋಪೋಡಾ
ವರ್ಗ : ಆರ್ಟಿಕ್ಯುಲೇಟಾ
ಕುಟುಂಬ : ಟೆರಿಬ್ರಾಟುಲಿಡೇ
ಮೊಲಸ್ಕ (ಮೃದ್ವಂಗಿ) ವಂಶಕ್ಕೆ ಸೇರಿದ ಈ ಅಕಶೇರುಕ ೧೫೦ ಮಿಲಿಯನ್ ವರ್ಷಗಳ ಹಿಂದಿನ ಜುರಾಸಿಕ್ ಯುಗದ ಫಾಸಿಲ್. ಇದು ಅಪ್ಸಿಡೋಸೆರಸ್ ಜಾತಿಯ ಅಕ್ಯಾಂಥಿಕಂ ಪ್ರಭೇದ. ಸುಮಾರು 6cm ವ್ಯಾಸವನ್ನು ಹೊಂದಿದೆ.
ಕ್ಯಾಲಿಮೀನ್
ವಂಶ : ಕೀಲ್ಗಾಲಿಗಳು ( ಆರ್ಥ್ರೋಪೋಡಾ )
ವರ್ಗ : ಟ್ರೈಲೋಬೈಟಾ
ಗಣ : ಫ್ಯಾಕೋಪಿಡಾ
ಕುಟುಂಬ : ಕ್ಯಾಲಿಮೆನಿಡೇ
ಫೈಮಾಟೋಸೆರಸ್
ವಂಶ: ಮೊಲಸ್ಕ
ವರ್ಗ : ಸೆಫಲೋಪೋಡ
ಉಪವರ್ಗ : ಅಮೋನೋಯ್ಡಿಯ
ಕುಟುಂಬ : ಫೈಮ್ಯಾಟೋಸೆರಟಿಡೇ
ವಂಶ: ಮೊಲಸ್ಕ
ವರ್ಗ : ಸೆಫಲೋಪೋಡ
ಉಪವರ್ಗ : ಅಮೋನೋಯ್ಡಿಯ
ಕುಟುಂಬ : ಓಲ್ಕೋಸ್ಟೆಫಾನಿಡೇ
ವಂಶ : ಮೊಲಸ್ಕ
ವರ್ಗ : ಸೆಫಲೋಪೋಡ
ಉಪವರ್ಗ : ಅಮೋನೋಯ್ಡಿಯ
ಕುಟುಂಬ : ಹಿಲ್ಡೋಸೆರಾಟಿಡೇ
ಫೈಮಾಟೋಸೆರಸ್
ವಂಶ: ಮೊಲಸ್ಕ
ವರ್ಗ : ಸೆಫಲೋಪೋಡ
ಉಪವರ್ಗ : ಅಮೋನೋಯ್ಡಿಯ
ಕುಟುಂಬ : ಗೊನಿಯಾಟೈಟಿಡೇ
ವಂಶ: ಮೊಲಸ್ಕ
ವರ್ಗ : ಸೆಫಲೋಪೋಡ
ಉಪವರ್ಗ : ಅಮೋನೋಯ್ಡಿಯ
ಟೈರನೋಸಾರಸ್ ಡೈನೋಸಾರ್‌ಗಳ ಹಲ್ಲುಗಳು!!
ಜುರಾಸಿಕ್ ಪಾರ್ಕ್ ಸಿನಿಮಾವನ್ನು ನೋಡದಿರುವವರೇ ಇಲ್ಲವೇನೋ. ವಿಶ್ವದಾದ್ಯಂತ ಅದ್ಭುತ ಸಂಚಲನವನ್ನು ಉಂಟುಮಾಡಿದ ಸಿನಿಮ. ಸುಮಾರು 15ಮೀಟರ್ ಉದ್ದದ, 6ಮೀಟರ್‌ಎತ್ತರದ, 10ಟನ್ ಭಾರವಿದ್ದ ಟೈರನೋಸಾರಸ್ ಮಾಂಸಾಹಾರಿ. ಈ ಮಹೋರಗಗಳ ಕತೆಯೇ ಅಚ್ಚರಿ ಹುಟ್ಟಿಸುವಂತದ್ದು !!!
75 ಮಿಲಿಯನ್ ವರ್ಷಗಳ ಹಿಂದೆ ಭೂಮಿಯನ್ನು ಆಳುತ್ತಿದ್ದ ಈ ಡೈನೋಸಾರ್ ವಂಶಜ ಟೈರನೋಸಾರಸ್ನ ಹಲ್ಲುಗಳನ್ನು ಕೈಯಲ್ಲಿ ಹಿಡಿಯುವುದೇ ಒಂದು ರೋಚಕ ಅನುಭವ !!! ಅಬ್ಬಾ 2 ಇಂಚುಗಳಷ್ಟು ಉದ್ದದ ಹಲ್ಲುಗಳು !!! ಅವುಗಳನ್ನು ಕೈಯಲ್ಲಿ ಹಿಡಿದಾಗ ಊಹೆಗೂ ನಿಲುಕದ ಅನಿರ್ವಚನೀಯ ಆನಂದವೇ ಬೇರೆ !!! ಶಾಸ್ತ್ರಿಯವರ ಸಂಗ್ರಹ ನಮ್ಮಲ್ಲೂ ವಾವ್ ಅನ್ನುವ ಅನುಭೂತಿಯನ್ನು ಉಂಟುಮಾಡಿತು.
ವಿವಿಧ ಸಸ್ಯ ಫಾಸಿಲ್ಗಳು ಜೀವ ವಿಕಾಸಕ್ಕೆ ಅತ್ಯಮೂಲ್ಯ ಸಾಕ್ಷ್ಯಾಧಾರಗಳಾಗಿವೆ. ಇವುಗಳನ್ನು ಅಧ್ಯಯನ ಮಾಡುವ ವಿಧಾನವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಅತಿ ಪ್ರಮುಖ ಕಲಿಕಾ – ಬೋಧನಾ ತಂತ್ರವಾಗಿದೆ.
ಇಂಗಳದಾಳುವಿನ ತಾಮ್ರದ ಅದುರು
ಚಿತ್ರದುರ್ಗ ಜಿಲ್ಲೆ ಒನಕೆ ಓಬವ್ವ, ಮದಕರಿನಾಯಕನ ಕಲ್ಲಿನಕೋಟೆಗಷ್ಟೇ ಪ್ರಖ್ಯಾತವಲ್ಲ, ಇಲ್ಲಿ ಇಂಗಳದಾಳು ತಾಮ್ರದಗಣಿ ಇದೆ. ಇಂಗಳದಾಳಿನ ಗಣಿಯಿಂದ ಪಡೆದ ತಾಮ್ರದ ಅದುರು.
ಗತಕಾಲದ ವೈಭವವನ್ನು ಸಾರುವ ಭೂರ್ಜ್ವಪತ್ರ ಇತಿಹಾಸದ ಪುಟ ಸೇರಿದೆ. ಬರವಣಿಗೆಯ ವಿಕಾಸವೊಂದು ರೋಚಕ ಕಥೆ. ಆರಂಭದಲ್ಲಿ
ಮನುಷ್ಯ ಅಕ್ಷರ ಮೂಡಿಸಲು, ಇದರಲ್ಲಿ ಬರೆಯಲು ಪಡುತ್ತಿದ್ದ ಪಾಡು ಕಣ್ಣ ಮುಂದೆ
ಹಾದು ಹೋದಂತಾಯಿತು. ಆ ಜನರಲ್ಲಿ
ಅಕ್ಷರ ಪ್ರೀತಿಯ ಆಸ್ಥೆ ಅದೆಂತಹದಿದ್ದಿರಬೇಕು ?
ಟಿಬೇಟಿನ ಹಾಡುವ ಬೌಲ್ !!!
ಹಾಡುವ ಬಟ್ಟಲನ್ನು ಉಜ್ಜಿದಾಗ ಉಂಟಾಗುವ ಘರ್ಷಣೆ ಕಂಪನಗಳನ್ನು ಸೃಷ್ಟಿಸುತ್ತದೆ. ಈ ಕಂಪನಗಳು ಇಂಪಾದ ಸಂಗೀತ ರವವನ್ನು ಉಂಟುಮಾಡುತ್ತವೆ. ಬೌಲಿನ ರಿಮ್ ಅನ್ನು ಉಜ್ಜುವುದನ್ನು ಮುಂದುವರಿಸಿದಾಗ, ಘರ್ಷಣೆಯಿಂದ ಶಬ್ದೋತ್ಪತ್ತಿ ಮುಂದುವರೆಯುತ್ತದೆ. ಇದನ್ನು ಅನುರಣನ ಅಥವಾ ರೆಸೊನೆನ್ಸ್ ಎನ್ನುತ್ತಾರೆ. ಈ ಹಾಡುವ ಬೌಲ್ ಟಿಬೇಟಿನ ಬೌದ್ಧ ಭಿಕ್ಷುಗಳು ಧಾರ್ಮಿಕ ಕಾರ್ಯಗಳಲ್ಲಿ ಇದನ್ನು ಬಳಸುವುದನ್ನು ಕಾಣಬಹುದು. ಇದೊಂದು ಆಡುತ್ತಾ ನಲಿಯುತ್ತಾ ಕಲಿಯುವ ಕಲಿಕಾಸಾಮಗ್ರಿಯೂ ಹೌದು. ಇದರ ಮೋಜನ್ನು ನೀವು ಪ್ರಾಯೋಗಿಕವಾಗಿಯೇ ಕಂಡುಕೊಳ್ಳಬೇಕು. ನಾವಂತೂ ಈ ಕ್ಷಣಗಳನ್ನು ಪುಟ್ಟ ಮಕ್ಕಳಂತೆ ಆಸ್ವಾದಿಸುತ್ತಾ ನಮ್ಮ ಕುತೂಹಲವನ್ನು ತಣಿಸಿಕೊಂಡೆವು.
ಮೂರ್ಖರ ಚಿನ್ನ - ಕಬ್ಬಿಣದ ಸಲ್ಫೈಡ್̧ ಚಿನ್ನದ ಅದುರು, ಮೊದಲಾದ ಅದುರುಗಳ ಸಂಗ್ರಹ ಕಲಿಕಾರ್ಥಿಗಳಲ್ಲಿ ಕಲಿಕೆಯ ಹೊಸ ಮಜಲನ್ನು ಪರಿಚಯಿಸಿ ಹೊಸ ಲೋಕಕ್ಕೆ ಕರೆದೊಯ್ಯಬಲ್ಲದು. ನಾವೂ ಇಂತಹ ಕಲಿಕಾ ಸಾಮಗ್ರಿಗಳ ಸಂಗ್ರಹವನ್ನು ಹವ್ಯಾಸವಾಗಿಸಿಕೊಂಡಲ್ಲಿ ಎಷ್ಟು ಚೆನ್ನ ಎಂದೆನಿಸಿತು.
ಹಳೆಯ ಶಿಲಾಯುಗದಿಂದ ನೂತನ ಶಿಲಾಯುಗದವರೆಗಿನ ಮಾನವ ವಿಕಾಸದ ಹಾದಿ ದುರ್ಗಮವಾದದ್ದು. ತೆವಳುತ್ತಾ ಸಾಗಿ ಬಂದ ನಾಗರೀಕತೆಗೆ ವಿಜ್ಞಾನ ಆಧುನಿಕತೆಯ ಸ್ಪರ್ಶ ನೀಡಿದೆ. ಈ ಉಪಕರಣಗಳ ಸೂಕ್ಷ್ಮ ಅವಲೋಕನ ಮಿಲಿಯಾಂತರ ವರ್ಷಗಳಲ್ಲಿ ಮಾನವನ ಬೌದ್ಧಿಕ ಬೆಳವಣಿಗೆಯನ್ನು ಅರಿಯಲು ಸಹಾಯಕ. ನಾವೂ ಅನೇಕ ವಸ್ತುಗಳನ್ನು ಕಲಿಕಾ ಸಾಮಗ್ರಿಗಳಾಗಿ ಬಳಸುತ್ತೇವೆ. ಅವುಗಳ ಸಂಗ್ರಹ, ಬಳಕೆ ಮತ್ತು ಮತ್ತು ವೈಜ್ಞಾನಿಕ ನಿರ್ವಹಣೆಗಳನ್ನು ಹವ್ಯಾಸವಾಗಿಸಬೇಕಿದೆ. ಇವುಗಳನ್ನು ನೋಡುತ್ತಿದ್ದಂತೆ ಕನ್ನಡದ ಹೊಸ ಮೂವಿ Birth 10000 BC ಟೀಸರ್ ನೋಡಿದ ನೆನಪು ಮರುಕಳಿಸಿತೇ?
ಶಾಸ್ತ್ರಿಯವರು ತಮ್ಮ ಮನೆಯ ತಾರಸಿಯಲ್ಲಿ ಬಹಳ ಅಕ್ಕರೆಯಿಂದ ಬೆಳೆಸಿದ ಬೋನ್ಸಾಯ್ ಮರಗಳು. ಜಪಾನಿನ ಕಲೆ- ಓರಿಗಾಮಿ ಕಿರಿಗಾಮಿಗಳ ಜೊತೆಗೆ ಅಲ್ಲಿನ ಮರಬೆಳೆಸುವ ಕಲೆಯೂ ಇವರಿಗೆ ಕರಗತ !!
ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು
ಇಲ್ಲಿ ಕ್ಲಿಕ್ ಮಾಡಿ 👉 ಇದೇನು ಮನೆಯೋ? ವಾಚನಾಲಯವೇ ? ವಸ್ತು ಸಂಗ್ರಹಾಲಯವೋ? ಕಲಾ ಕುಟೀರವೋ?
ತುಂಬಾ ಚೆನ್ನಾಗಿ ಮೂಡಿಬಂದಿದೆ.... ಸರ್.....
ReplyDeleteನಿಮ್ಮ ಬರವಣೆಗೆಯ ವಾಚನಾಲಯ.
ಉತ್ತಮವಾದ ಲೇಖನ ನಮ್ಮ ರಾಜ್ಯದಲ್ಲಿಯು ಇಂತಹ ಗತಕಾಲದ ಪಳಿಯುಳಿಕೆಗಳ ಸಂಪನ್ಮೂಲಗಳ ಗಣಿ ಇದೆ ಎಂದು ನೋಡಿದ ಮೇಲೆ ಹೆಮ್ಮೆ ಅನಿಸುತ್ತಿದೆ.
ReplyDeleteಲೇಖನವೇ ಹೀಗೆ ಮನಸ್ಸಂತೋಷ ನೀಡುವಾಗ, ನೈಜ ಸನ್ನಿವೇಶ ಇನ್ನೆಷ್ಟು ರಮಣೀಯತೆ ಹೊಂದಿರಬಹುದು.
ReplyDeleteಲೇಖನವೇ ಹೀಗೆ ಮನಸ್ಸಂತೋಷ ನೀಡುವಾಗ, ನೈಜ ಸನ್ನಿವೇಶ ಇನ್ನೆಷ್ಟು ರಮಣೀಯತೆ ಹೊಂದಿರಬಹುದು.
ReplyDeleteಲೇಖನವೇ ಹೀಗೆ ಮನಸ್ಸಂತೋಷ ನೀಡುವಾಗ, ನೈಜ ಸನ್ನಿವೇಶ ಇನ್ನೆಷ್ಟು ರಮಣೀಯತೆ ಹೊಂದಿರಬಹುದು.
ReplyDeleteಇಂತಹ ವ್ಯಕ್ತಿಗಳು ನಮ್ಮ ಪರಂಪರೆಯ ಕೊಂಡಿಗಳು.. ಕಲಿತಿರುವುದು ಹನಿಯಷ್ಟು ಕಲಿಯಬೇಕಾದದ್ದು ಸಾಗರದಷ್ಟು.. ನಮ್ಮ ಜ್ಞಾನಕ್ಕೆ ನಿಮ್ಮ ವಿಷಯಗಳು ಸೇರ್ಪಡೆಯಾದರೆ ಮತ್ತು ಇಂತಹ ಯಾವುದಾದರೂ ಒಂದು ಹವ್ಯಾಸವನ್ನು ಅಳವಡಿಸಿಕೊಂಡರೆ ನಾವೂ ಬದುಕಿದ್ದೂ ಸಾರ್ಥಕ
ReplyDeleteಅದ್ಭುತ ಲೋಕದ ಅನಾವರಣ ಸರ್.
ReplyDeleteSuper
ReplyDeleteWonderful sir
ReplyDeleteWonderful work
ReplyDeleteವಿಜ್ಞಾನ - ಜ್ಞಾನ : ಬಿಂದು - ಸಿಂಧು
ReplyDeleteಕಲಿಕೆ ನಿರಂತರ!....
ರಾಮಚಂದ್ರ ಸರ್,ಅಪೂರ್ವವಾದ ವಿಜ್ಞಾನ ರತ್ನವೊಂದನ್ನು ಪರಿಚಯಿಸಿದ್ದೀರಿ.ಧನ್ಯವಾದಗಳು ಸರ್.
ReplyDeleteವಿಎಸ್ಎಸ್ ಶಾಸ್ತ್ರಿಯವರು ಬರೆದ ಓರಿಗಾಮಿ ಪುಸ್ತಕಗಳನ್ನು ಮತ್ತು ಅರವಿಂದ ಗುಪ್ತರವರ ಪುಸ್ತಕಗಳ ಅನುವಾದವನ್ನು ಓದಿದ್ದೆ. ಈ ಲೇಖನದಿಂದ ಅವರ ಬಹುಮುಖ ಆಸಕ್ತಿ ಹಾಗೂ ಸಾಧನೆಯ ಪರಿಚಯವಾಯಿತು. ಅನಂತ ಧನ್ಯವಾದಗಳು ರಾಮಚಂದ್ರ ಭಟ್ ಸರ್.
ReplyDeleteGood bhatta.Wonderful personality (Shasthriji) and wonderful article. Very Informative bhatta.Congrats.Keep it up.
ReplyDeleteVery nice sir hatts up
ReplyDeleteVery nice information sir
ReplyDeleteUttamavaad sangrahalay
ReplyDeleteThank you very much for your extraordinary experience sir
ReplyDeleteWonderful collection and rare personality. Thank you very much sir.
ReplyDeleteNimma odanaata namma adrushta...
ReplyDelete@Bhat Sir, Shastryji Is very Rare DIAMOND in our Teaching fraternity, Congratulations @Shastry and Thank you for valuable ideas and thoughts in bringing him very closer us.
ReplyDeleteತುಂಬಾ ಉಪಯುಕ್ತ ಮಾಹಿತಿ.ಅದೆಲ್ಲವನ್ನೂ ಅರ್ಥಪೂರ್ಣವಾಗಿ ವಿವರಿಸಿರುವ ನಿಮ್ಮ ಬರವಣಿಗೆ ಓದಿಸಿಕೊಂಡು ಹೋಗುತ್ತದೆ
ReplyDeleteB G R ಸರ್ ತುಂಬಾ ಚೆನ್ನಾಗಿ ಪದಗಳನ್ನು ಜೋಡಿಸಿ ಅಥ೯ಪೂಣ೯ವಾಗಿ ಬರೆದ್ದಿದ್ದೀರಿ. ಉತ್ತಮ ವ್ಯಕ್ತಿಯನ್ನು ಪರಿಚಯ ಮಾಡಿದ್ದೀರಿ.ಬರವಣಿಗೆಯ ಶೈಲಿ ಅದ್ಬುತ ಭಟ್ಟರೇ.ಧನ್ಯವಾದಗಳು
ReplyDeleteB G R ಸರ್ ತುಂಬಾ ಚೆನ್ನಾಗಿ ಪದಗಳನ್ನು ಜೋಡಿಸಿ ಅಥ೯ಪೂಣ೯ವಾಗಿ ಬರೆದ್ದಿದ್ದೀರಿ. ಉತ್ತಮ ವ್ಯಕ್ತಿಯನ್ನು ಪರಿಚಯ ಮಾಡಿದ್ದೀರಿ.ಬರವಣಿಗೆಯ ಶೈಲಿ ಅದ್ಬುತ ಭಟ್ಟರೇ.ಧನ್ಯವಾದಗಳು
ReplyDeleteಸರ್ ನಮಸ್ಕಾರಗಳು, ನಾನು ಇದನ್ನು ಓದುತ್ತಿದ್ದಂತೆ ನಾನು ಬಿಎಸ್ಸಿ ಓದುತ್ತಿರುವ ನೆನಪಾಯಿತು.ಈ ಲೇಖನಗಳು ನಮ್ಮನ್ನು ಚೆನ್ನಾಗಿ ಓದಿಸಿಕೊಂಡು ಹೋಗುತ್ತವೆ.ಒಳ್ಳೆಯ ಮಾಹಿತಿಗಳನ್ನು ತಾವುಗಳು ನೀಡಿರುತ್ತೀರಿ.ತಮಗೆ ಧನ್ಯತಾಪೂರ್ವಕ ಅಭಿನಂದನೆಗಳು.
ReplyDeleteಶ್ರೀ ಆರ್ ಬಿ ಪಾಟೀಲ ವಿಜ್ಞಾನ ಶಿಕ್ಷಕರು. ನಗರಸಭಾ ಪ್ರೌಢಶಾಲೆ ರಾಣೇಬೆನ್ನೂರು ಜಿ: ಹಾವೇರಿ. 8861110765ವಾಟ್ಸಪ್, 8660740193ಸಂಪರ್ಕ.
Amazing Talent.
ReplyDeleteಲೇಖನ ಚನ್ನಾಗಿದೆ ಇದನ್ನ ದಿನಪತ್ರಿಕೆಯಲ್ಲಿ ಪ್ರಕಟಿಸಿದರೆ ಹೆಚ್ಚು ಜನರನ್ನು ತಲುಪುತ್ತದೆ
ReplyDeleteಸರ್,,,, ಒಳ್ಳೆಯ ಮಾಹಿತಿಗಳನ್ನು ತಾವುಗಳು ನೀಡಿರುತ್ತೀರಿ.ತಮಗೆ ಧನ್ಯತಾಪೂರ್ವಕ ಅಭಿನಂದನೆಗಳು.
ReplyDeleteಸರ್ ನಿಮ್ಮ article ತುಂಬ ಚೆನ್ನಾಗಿದೆ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದೀರಾ ,ಧನ್ಯವಾದಗಳು
ReplyDeleteಸಂಗ್ರಹ ಯೋಗ್ಯ ಲೇಖನ ಸರ್.
ReplyDeleteಎಲ್ಲಾ ಓದುಗ ಸ್ನೇಹಿತರಿಗೂ ಹೃತ್ಪೂರ್ವಕ ಧನ್ಯವಾದಗಳು
ReplyDeleteಅವರ ವಿವಿಧ ರೀತಿಯ ಸಂಗ್ರಹ ಆಸಕ್ತಿಯನ್ನು ಕೆರಳಿಸಿತು.ಹವ್ಯಾಸಗಳು ಜ್ಞಾನ ತುಂಬಿಸುತ್ತವೆ ಎನ್ನುವುದಕ್ಕೆ ಉತ್ತಮ ಉದಾಹರಣೆ. ಅದ್ಭುತ ರಸದೌತಣ ಬಡಿಸಿದ ನಿಮಗೆ ಧನ್ಯವಾದಗಳು ಸರ್.
ReplyDelete