ಪಕ್ಷಿ ವೀಕ್ಷಣೆ
ಲೇಖಕರು: ಡಿ.ಕೃಷ್ಣ ಚೈತನ್ಯ.
ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.
ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.
ಕೊಡಗು ಜಿಲ್ಲೆ.
1. ನಮ್ಮ ರಾಜ್ಯ ಪಕ್ಷಿ-
ನೀಲಕಂಠ (Indian Roller)
2. ನೀರಿನ ಮದ್ಯ ಗೂಡು ನರ‍್ಮಾಣ:
ನಾಮದ ಕೋಳಿ (Eurasian Coot)
3. ಗೊರವಂಕ (Common Myna)
4. ಕೆಮ್ಮೀಸೆ ಪಿಕಳಾರ (Red-whiskered Bulbul)
5. ಪಾರಿವಾಳ (Blue Rock Pigeon)
6. ಗುಬ್ಬಚ್ಚಿ (Sparrow)
7. ಗೀಜಗ (Baya Weaver)
ಬನ್ನಿ ಪಕ್ಷಿ
ವೀಕ್ಷಣೆ ಮಾಡೋಣ !!!
ಪರಿಸರ ಎನ್ನುವುದು ಜಗತ್ತಿನಲ್ಲಿರುವ ಎಲ್ಲಾ
ವಿಶ್ವವಿದ್ಯಾನಿಲಯಗಳಿಗೆ ಆಕರ ಎನ್ನಬಹುದು. ಏಕೆಂದರೆ, ಇಲ್ಲಿ ಇರುವ ಜ್ಞಾನ ಸಂಪತ್ತು ಯಾವುದೇ ಗ್ರಂಥಾಲಯದಲ್ಲಾಗಲಿ, ಪುಸ್ತಕ ಭಂಢಾರದಲ್ಲಾಗಲಿ ಸಿಗುವುದಿಲ್ಲ ಎಂದರೆ
ಅತಿಶಯೋಕ್ತಿಯೇನಲ್ಲ. ಪರಿಸರ ಎನ್ನುವುದು ಸಾಗರ, ಸಮುದ್ರ, ಭೂಮಿಯ ಅಂತರಾಳ,
ವಾತಾವರಣ, ಎಲ್ಲಿ ನೋಡಿದರೂ ನಮ್ಮ ಜ್ಞಾನಕ್ಕೆ ನಿಲುಕದ
ಇನ್ನೂ ಎಷ್ಟೋ ಅಸಂಖ್ಯಾತ ವಿಷಯಗಳನ್ನು ಹುದುಗಿಸಿಕೊಂಡಿರುವ ಒಂದು ನಿಧಿಯಾಗಿದೆ. ಪರಿಸರದ ಅವಿಭಾಗ್ಯ ಅಂಗವಾದ ಪ್ರಾಣಿವರ್ಗದಲ್ಲಿ,
ತಮ್ಮ ವರ್ಣವಿನ್ಯಾಸ, ಗರಿವಿನ್ಯಾಸ, ಕೂಗು, ಬೇಟೆಯ ಕ್ರಮ, ಗೂಡು ನಿರ್ಮಾಣ, ಮುಂತಾದ ಅನೇಕ ವಿಚಾರಗಳಲ್ಲಿ ನಮ್ಮ ಕುತೂಹಲ ಕೆರಳಿಸುವ ಖಗರತ್ನಗಳ ಬಗ್ಗೆ ಒಂದಿಷ್ಟು ತಿಳಿದು,
ಪಕ್ಷಿ ವೀಕ್ಷಣೆ ಎಂಬ ಉತ್ತಮ ಹವ್ಯಾಸದ ಬಗ್ಗೆ ಮಾಹಿತಿ
ಪಡೆದುಕೊಳ್ಳೋಣವಲ್ಲವೇ?
ಪಕ್ಷಿಗಳು ಎಂದರೇನು? ಎಂದು ಯಾರಾದರೂ ಒಂದು ಪ್ರಶ್ನೆಯನ್ನು ಕೇಳಿದರೆ ಬಹಳ ಉಡಾಫೆಯಿಂದ ಅದೇ
ಹೊರಗಡೆ ಹಾರಾಡುತ್ತವೆಯಲ್ಲ ಅವೇ ಅಂತಲೋ, ಮರಗಳ ನಡುವೆ
ಹಾರಾಡುತವೆಯಲ್ಲ ಅವು ಅಂತಲೋ ಸಿದ್ಧ ಉತ್ತರ ಸಿಗುತ್ತದೆ. ಆದರೆ, ಕಶೇರುಕ ಪ್ರಾಣಿಗಳ ಐದು ವರ್ಗಗಳಲ್ಲಿ ಒಂದೊAದಕ್ಕೂ ವಿಶಿಷ್ಟವಾದ ಲಕ್ಷಣಗಳಿವೆ. ಹಾಗೆಯೇ ಪಕ್ಷಿಗಳಿಗೆ ಗರಿಗಳೆಂಬ
ಲಕ್ಷಣ, ಇತರ ಕಶೇರುಕಗಳಿಂದ
ಅವುಗಳನ್ನು ಬೇರ್ಪಡಿಸುತ್ತದೆ. ಇವು ಸರೀಸೃಪಗಳಿಂದ ಉಗಮವಾದವು ಎಂದುಜೀವ ವಿಕಾಸ ಸಿದ್ಧಾಂತ
ಪ್ರತಿಪಾದಿಸುತ್ತದೆ. ಪಾರಿವಾಳದ ಗಾತ್ರದಷ್ಟಿದ್ದ ಆರ್ಕಿಯೋಪ್ಟರಿಕ್ಸ್ ಎಂಬ ಪಳೆಯುಳಿಕೆಯು
ಇದಕ್ಕೆ ಪುಷ್ಠಿ ನೀಡುತ್ತದೆ. ಇಂದು, ಪ್ರಪಂಚದಲ್ಲಿ 10,200ಕ್ಕೂ
ಹೆಚ್ಚು ಹಕ್ಕಿ ಪ್ರಬೇಧಗಳಿದ್ದರೆ, ಭಾರತದಲ್ಲಿ 1,200ಕ್ಕೂ
ಹೆಚ್ಚು ಪ್ರಬೇಧಗಳಿವೆ. ಕರ್ನಾಟಕದಲ್ಲಿ ಎಲ್ಲಾ ರೀತಿಯ ಪರಿಸರವ್ಯವಸ್ಥೆ ಇರುವುದರಿಂದ ಬಹಳಷ್ಟು ಪಕ್ಷಿಗಳನ್ನು ಗುರುತಿಸಿ ಅವುಗಳ ಬಗ್ಗೆ
ಅಧ್ಯಯನ ಮಾಡಬಹುದು.
ಪಕ್ಷಿಗಳು ಎಂದರೆ ಗರಿಗಳನ್ನು ಹೊಂದಿರುವ ದ್ವಿಪಾದಿ
ಎಂದು ನಿರೂಪಿಸಬಹುದು. ಇವುಗಳಲ್ಲಿ, ಗರಿಗಳು ನಿರ್ದಿಷ್ಟ
ರೀತಿಯಲ್ಲಿ ಜೋಡಣೆಯಾಗಿರುತ್ತವೆ. ಸುಮಾರು ಏಳು ವಿಧದ ಗರಿಗಳನ್ನು ಪಕ್ಷಿಗಳಲ್ಲಿ ಕಾಣುತ್ತೇವೆ.
ರೆಕ್ಕೆಗರಿ, ಬಾಲದಗರಿ, ದೇಹದಗರಿ, ತುಪ್ಪಳದ ಗರಿ, ಅರೆ ತುಪ್ಪಳದ ಗರಿ, ರೋಮಗರಿ ಮತ್ತು
ಕುಂಚ ಗರಿ ಎಂಬುದೇ ಆ ಏಳು ವಿಧಗಳು. ರೆಕ್ಕಗರಿಗಳಲ್ಲಿ ಇರುವ ಒಂದೊAದು ಎಳೆಯೂ ಸಹ ಸಣ್ಣ ಸಣ್ಣ ಕೊಕ್ಕೆಯಂತಹ ರಚನೆ(ಬಾರ್ಬ್)ಗಳಿಂದ
ಬಂಧಿತವಾಗಿರುವುದರಿAದ ಗಾಳಿಯನ್ನು
ಬಡಿದು, ಮೇಲಕ್ಕೆ ಮತ್ತು ಮುಂದಕ್ಕೆ
ಹಾರಲು ಸಹಾಯಕವಾಗಿವೆ. ದೇಹದ ಗರಿಗಳು ಪಕ್ಷಿಗಳ ದೇಹದ ಉಷ್ಣತೆಯನ್ನು ಕಾಪಾಡಲು ಸಹಕಾರಿಯಾಗಿವೆ.
ಇಲ್ಲಿ ಗರಿಗಳ ಮತ್ತೊಂದು ಉಪಯುಕ್ತತೆ ಎಂದರೆ ಹೆಣ್ಣು ಹಕ್ಕಿಗಳನ್ನು ಸಂತಾನೋತ್ಪತ್ತಿಗಾಗಿ
ಆಕರ್ಷಿಸಲು ಸಹಕಾರಿಯಾಗಿರುವುದು. ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಎಷ್ಟೋ ಪಕ್ಷಿಗಳ ಬಣ್ಣಗಳು
ಆಕರ್ಷಕ ರೀತಿಯಲ್ಲಿ ಬದಲಾಗುವುದನ್ನು ನೀವು ಪಕ್ಷಿ ವೀಕ್ಷಣೆಯ ಸಂದರ್ಭದಲ್ಲಿ ಗಮನಿಸಬಹುದು.
ನವಿಲು, ಗೋವಕ್ಕಿ, ಐಯೋರ ಮುಂತಾದವುಗಳನ್ನು ನೋಡಿದಾಗ ನಿಮಗೆ
ತಿಳಿಯುತ್ತದೆ.
ಯೌವನದಲ್ಲಿ ಕೆಲ ಹುಡುಗಿಯರು, ಚೆನ್ನಾಗಿ ಹಾಡುವ, ನರ್ತಿಸುವ ಹಾಗೂ ವೇಷಭೂಷಣ ಧರಿಸಿರುವ ಯುವಕರತ್ತ ಆಕರ್ಷಿತÁಗುವಾಗುವಂತೆ ಗಂಡು ಪಕ್ಷಿಗಳು ವಿವಿಧ ರೀತಿಯಲ್ಲಿ ಹಾಡುವುದನ್ನು,
ನರ್ತಿಸುವುದನ್ನು ಮತ್ತು ವಿವಿಧ ಬಣ್ಣಗಳ ಗರಿಗಳನ್ನು
ಪ್ರದರ್ಶಿಸುವುದನ್ನು ಮೆಚ್ಚಿ, ಅವುಗಳಿಗೆ
ಒಲಿಯುತ್ತವೆ. ಕೆಲವೊಮ್ಮೆ, ಗಂಡುಗಳ ನಡುವೆ
ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ವಿಜೇತವಾದ ಗಂಡಿನಜೊತೆ ಓಡಿ ಹೋಗುವ ಹೆಣ್ಣು ಹಕ್ಕಿಗಳನ್ನೂ
ನೋಡಬಹುದು!!!.
ಪಕ್ಷಿಗಳು ನಾವು ಊಹೆ ಮಾಡಲೂ ಸಾದ್ಯವಿಲ್ಲದ
ಸ್ಥಳಗಳಲ್ಲೆಲ್ಲಾ, ವಿವಿz sÀಆಕಾರ, ಗಾತ್ರದಲ್ಲಿ, ವಿವಿಧ
ವಸ್ತುಗಳನ್ನು ಉಪಯೋಗಿಸಿ ಗೂಡುಗಳನ್ನು ಕಟ್ಟುವ ಪರಿ ಸೋಜಿಗವನ್ನು ಉಂಟುಮಾಡುತ್ತದೆ. ಎತ್ತರz
Àಕಲ್ಲುಬಂಡೆ, ಮರದ ಪೊಟರೆ, ನೆಲ, ನೀರಿನ ಮೇಲೆ,
ಮಣ್ಣಿನ ಬಿಲ ಹಾಗೂ ಗಿಡ-ಮರಗಳ ರೆಂಬೆಗಳ ಮೇಲೆ
ಸಾಮಾನ್ಯವಾಗಿ ಗೂಡುಕಟ್ಟುವುದನ್ನು ನೋಡುತ್ತೇವೆ. ಆದರೆ ಕೆಲ ಹಕ್ಕಿಗಳು ಇರುವೆ ಗೂಡಿನೊಳಗೆ,
ಎಲೆಯನ್ನು ಜೇಬಿನಾಕಾರದಲ್ಲಿ ಹೊಲೆದು ಗೂಡು
ಮಾಡಿಕೊಳ್ಳುವುದನ್ನು ನೋಡಿದರೆ ಆಶ್ಚರ್ಯವಾಗದೇ ಇರದು. ಕೆಲವು ಹಕ್ಕಿಗಳ ಗಂಡು ಮತ್ತು ಹೆಣ್ಣು
ಒಂದೇ ರೀತಿ ಇದ್ದರೆ, ಬಹಳಷ್ಟು
ಹಕ್ಕಿಗಳಲ್ಲಿ ಗಂಡು ವಿಭಿನ್ನ ಬಣ್ಣಗಳನ್ನು ಹೊಂದಿರುತ್ತದೆ. ಪಕ್ಷಿಗಳು ಬೇರೆ ಬೇರೆ
ಸಂದರ್ಭಗಳಲ್ಲಿ ಬೇರೆ ಬೇರೆ ರೀತಿಯಾಗಿ ಹಾಡುತ್ತವೆ, ಕರೆಯುತ್ತವೆ ಮತ್ತು ಎಚ್ಚರಿಕೆಯನ್ನೂ ಕೊಡುತ್ತವೆ. ಅನುಕರಣೆ
ಮಾಡುವುದರಲ್ಲಿ ರಾಕೆಟ್‌ಟೈಲ್ಡ್ಡ್ರೋಂಗೊ ಹೆಸರುವಾಸಿ. ಇದು, ಸುಮಾರು ಇನ್ನೂರಐವತ್ತು ವಿಧಗಳಲ್ಲಿ ಕೂಗುವುದನ್ನು ದಾಖಲಿಸಲಾಗಿದೆ!
ಇಂತಹ ನೂರಾರು ಕೌತುಕಗಳನ್ನು ತಮ್ಮದಾಗಿಸಿಕೊಳ್ಳಬೇಕೆ? ಹಾಗಾದರೆ, ಬನ್ನಿ, ಪಕ್ಷಿ ವೀಕ್ಷಣೆಗೆ ಹೊರಡೋಣ! ಓಹ್, ಅದಕ್ಕೆ ಏನೇನನ್ನು ತೆಗೆದುಕೊಳ್ಳಬೇಕು? ಮೊದಲು ಹೇಳುತ್ತೇನೆ.
1.ನೋಟ್(ಟಿಪ್ಪಣಿ)
ಪುಸ್ತಕ: ಹಕ್ಕಿಯಗಾತ್ರ, ಬಣ್ಣ ಮುಂತಾದ
ಲಕ್ಷಣಗಳನ್ನು ಗುರುತು ಮಾಡಿಕೊಳ್ಳಲು ಅರ್ಧ ಹಸ್ತದಷ್ಟಿರುವ ಸಣ್ಣ ನೋಟ್ ಪಸ್ತಕ,. ಮನೆಯ ಬಳಿಯೇ ಬರುವ ಸುಮಾರು 30 - 35 ಹಕ್ಕಿಗಳನ್ನು
ನೋಡಿ ಗುರುತಿಸುವುದನ್ನು ಕಲಿತುಕೊಳ್ಳಬಹುದು, ದಿನಾಂಕ ಮತ್ತು ಸ್ಥಳಗಳನ್ನು ಹೆಡ್ಡಿಂಗ್‌ನAತೆ ಮೇಲುಗಡೆ ಗುರುತು ಮಾಡಿಕೊಳ್ಳಿ. ಪಕ್ಷಿಗಳ
ಗಾತ್ರಗಳನ್ನು ಬರೆದುಕೊಳ್ಳುವಾಗ ನಮಗೆ ಚಿರಪರಿಚಿತವಾದ ಎಂಟು ಹಕ್ಕಿಗಳಿಗೆ ಹೋಲಿಕೆ
ಮಾಡಿಕೊಳ್ಳುವುದರಿಂದ ಪ್ರಾರಂಭಿಸೋಣ.
1.
ಗುಬ್ಬಚ್ಚಿ: ಇದಕ್ಕಿಂತ ಸಣ್ಣ
ಪಕ್ಷಿಯಾದರೆ–(ಮೈನಸ್) ಗುಬ್ಬಚ್ಚಿಎಂತಲೂ, ಗುಬ್ಬಚ್ಚಿಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಿರುವ ಪಕ್ಷಿಗೆ + ಗುಬ್ಬಚ್ಚಿ ಎಂದೂ
ಗುರುತಿಸಿಕೊಳ್ಳಿ. ಹೀಗೆ 2. ಬುಲ್‌ಬುಲ್, 3. ಮೈನ, 4. ಪಾರಿವಾಳ, 5. ಕಾಗೆ, 6. ಹದ್ದು, 7. ಕೋಳಿ ಮತ್ತು 8. ನವಿಲುಗಳಿಗೆ
ಹೋಲಿಕೆ ಮಾಡಿಕೊಂಡು, ಗುರುತು
ಮಾಡಿಕೊಳ್ಳಿ.
ಬಾಲದ ಉದ್ಧ,
ರೆಕ್ಕೆ, ಎದೆ, ಹೊಟ್ಟೆ ಬೆನ್ನು,
ಕಾಲು, ಕುತ್ತಿಗೆ, ಬೆರಳುಗಳ ಮತ್ತು
ಕೊಕ್ಕುಗಳ ಬಣ್ಣಗಳನ್ನು ಬರೆದುಕೊಳ್ಳಬೇಕು. ತದನಂತರ, ನಿಮಗೆ ಹೆಸರು ಗೊತ್ತಿಲ್ಲದ ಹಕ್ಕಿಯಾದರೆ ಯಾರಾದರು ತಜ್ಞರನ್ನೋ,
ಅಥವಾ ಮಾರ್ಗದರ್ಶಿ ಪುಸ್ತಕಗಳ ಸಹಾಯಪಡೆದೋ ಹೆಸರಿಸುವುದನ್ನು
ಕಲಿತುಕೊಳ್ಳಬೇಕು.
2.ಲೇಖನಿ: ಪಕ್ಷಿಗಳ
ಲಕ್ಷಣಗಳನ್ನು ಗುರುತು ಮಾಡಿಕೊಳ್ಳಲು ಚೆನ್ನಾಗಿ ಬರೆಯುವ ಪೆನ್ನು ಅಥವಾ ಪೆನ್ಸಿಲ್ ತೆಗೆದುಕೊಂಡು
ಹೋಗುವುದನ್ನು ಮರೆಯಬೇಡಿ.
3.ಡ್ರೆಸ್ ಕೋಡ್: ಮನೆಯಿಂದ ಹೊರಗಡೆ ಪಕ್ಷಿವೀಕ್ಷಣೆಗೆ ತೆರಳುವುದಾದರೆ ಪರಿಸರಕ್ಕೆ ಹೊಂದಿಕೊಳ್ಳುವ ಬಟ್ಟೆಯನ್ನು ಧರಿಸಿ. ಲೈಟ್‌ಕಲರ್ ಬಟ್ಟೆಗಳು ಬೇಡ. ಕಡು ಬಣ್ಣದ ಬಟ್ಟೆಗಳು ಅಂದರೆ ಕಡು ಹಸಿರು, ಕಂದು, ನೀಲಿ, ಕಾಕಿ, ಕಪ್ಪು ಅಥವಾ ಕ್ಯಾಮೊಫ್ಲೇಜ಼್ ಸೂಕ್ತವಾದವು. ತಿಳಿಬಣ್ಣದ ಬಟ್ಟೆಗಳಾದರೆ ದೂರದಿಂದಲೇ ಗುರುತಿಸುವ ಪಕ್ಷಿಗಳು ದೂರಕ್ಕೆ ಹಾರಿಹೋಗುತ್ತವೆ. ಅವುಗಳನ್ನು ಗುರುತಿಸುವುದರಿಂದ ನೀವು ವಂಚಿತರಾಗುವ ಸಾಧ್ಯತೆಯೇ ಹೆಚ್ಚು.
4.ಶೂ: ವೀಕ್ಷಣೆಗೆ
ತೆರಳುವಾಗ ನಿಶ್ಯಬ್ಧವಾಗಿ ನಡೆಯುವುದು ಅವಶ್ಯಕ. ಚಪ್ಪಲಿಗಳನ್ನು ಧರಿಸಿದರೆ ಹಿಮ್ಮಡಿಗೆ ಹೊಡೆದು
ಬರುವ ಶಬ್ದ, ಚಪ್ಪಲಿ ಎಳೆಯುವ
ಶಬ್ದವು ಪಕ್ಷಿಗಳಿಗೆ ನಾವು ಬರುವ ಮುನ್ಸೂಚನೆಯನ್ನು ಕೊಡುತ್ತದೆ. ಹಾಗಾಗಿ, ಶೂ ಧರಿಸಿ
ನಿಶ್ಯಬ್ದವಾಗಿ ನಡೆಯುವುದು ಅತೀ ಅವಶ್ಯ. ದಾರಿಯಲ್ಲಿ ನಡೆಯುವಾಗ ಒಣಗಿದ ಎಲೆಗಳಿದ್ದರೆ ಇನ್ನೂ
ಎಚ್ಚರಿಕೆಯಿಂದ ಕಾಲಿಡುವುದು ಮುಖ್ಯ.
5.ದುರ್ಬೀನು:
ನಿಮ್ಮ ಹಣದ ಪರಿಮಿತಿ ನೋಡಿಕೊಂಡು ಒಂದು ಉತ್ತಮ ಬೈನಾಕ್ಯುಲರ್ ಹೊಂದಿಸಿಕೊAಡರೆ ದೂರದಿಂದಲೇ ಪಕ್ಷಿಗಳನ್ನು ಗುರುತಿಸಬಹುದು.
ಹಲವಾರು ದರಗಳಲ್ಲಿ ಮಾರುಕಟ್ಟೆಯಲ್ಲಿ ಅಥವಾ ಆನ್‌ಲೈನನಲ್ಲಿ ಸಿಗುತ್ತವೆ. ವಿದ್ಯಾರ್ಥಿಗಳಾದರೆ
ಇದಕ್ಕಾಗಿ ತಂದೆ ತಾಯಿಗೆ ದಯಮಾಡಿ ತೊಂದರೆ ಕೊಡಬೇಡಿ. (ಆನ್‌ಲೈನನಲ್ಲಿ ೧೫೦೦ ರೂನಿಂದ ಸಿಗುತ್ತದೆ).
6.ಸಮಯ:
ಪಕ್ಷಿಗಳನ್ನು ವೀಕ್ಷಿಸಲು ಬೆಳಗಿನ 6 ರಿಂದ 10ರ
ಸಮಯ ಮತ್ತು ಸಂಜೆ 4 ರಿಂದ 6ರ ಸಮಯ ಸೂಕ್ತವಾದುದ್ದು. ನಿಧಾನವಾಗಿ ಒಂದೆರಡು ಕಿ.ಮೀ ಶಬ್ದವಾಗದಂತೆ
ನಡೆದು ಪಕ್ಷಿವೀಕ್ಷಣೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
7.ಕ್ಯಾಮರ: ಇದು
ಅತ್ಯವಶ್ಯಕವಲ್ಲದಿದ್ದರೂ, ಕೆಲವು ವೇಳೆ
ದಾಖಲಾತಿಗಾಗಿ ಬೇಕಾಗುತ್ತದೆ. ಉದ್ಯೋಗಿಗಳಾಗಿದ್ದರೆ, ಒಂದು ಕ್ಯಾಮರವನ್ನು ಖರೀದಿಸಬಹುದು. ಸಣ್ಣ-ಪುಟ್ಟ ಕ್ಯಾಮರಾಗಳನ್ನು
ತೆಗೆದುಕೊಂಡು ಹಣ ವ್ಯಯ ಮಾಡುವುದರ ಬದಲು, ಸ್ವಲ್ಪ ತಡವಾದರೂ ಪರವಾಗಿಲ್ಲ, 30,000 ಅಥವಾ
ಅದಕ್ಕಿಂತ ಹೆಚ್ಚು(ಶಕ್ತ್ಯಾನುಸಾರ) ಬೆಲೆಯ ಕ್ಯಾಮರಾಗಳನ್ನು ತೆಗೆದುಕೊಳ್ಳುವುದು ಒಳಿತು. ಪಿ-1000
(ಆಟೊ-ಫೋಕಸ್) ಇಲ್ಲವೇ, ಡಿ.ಎಸ್.ಎಲ್.ಆರ್
ಇವು ಸ್ವಲ್ಪ ದುಬಾರಿಯಾದವು. ಒಂದೆರಡು ವರ್ಷ ಬೈನಾಕ್ಯುಲರ್‌ಗಳಲ್ಲೇ ಅಭ್ಯಾಸ ಮಾಡುವುದು ಅತ್ಯುತ್ತಮ.
ಈ ಹವ್ಯಾಸ ಹೆಚ್ಚು
ತಾಳ್ಮೆಯನ್ನು ಬೆಳೆಸುತ್ತದೆ. ನಿವೃತ್ತಿಯ ನಂತರ ಎಲ್ಲೋ ಕುಳಿತುಕೊಂಡು ಹಾಳು ಹರಟೆ
ಹೊಡೆಯುವುದಕ್ಕಿಂತ ಅವರನ್ನೂ ಸೇರಿಸಿಕೊಂಡು, ಸಮೀಪದ ತಾಣಗಳಿಗೆ ಭೇಟಿಕೊಡುತ್ತಾ ಪಕ್ಷಿಗಳ ಬಗ್ಗೆ ಜ್ಞಾನ ಸಂಪಾದಿಸಿಕೊಳ್ಳುವುದು ಎಷ್ಟು
ಉತ್ತಮ ಅಲ್ಲವೇ?
ಪಕ್ಷಿಗಳ ಬಗ್ಗೆ ಮಾತನಾಡಿ
ಅಥವಾ ಒಂದು ಪ್ರಬಂಧ ಬರೆಯಿರಿ ಎಂದರೆ ತಿಣುಕಾಡುವ ನಾವು ಇಂತಹ ಹವ್ಯಾಸದಿಂದ ನಿರರ್ಗಳವಾಗಿ ಒಂದುಗAಟೆ ಬೇಕಾದರೂ ಅವುಗಳ ಬಗ್ಗೆ ಮಾತನಾಡುವುದನ್ನು
ಕಲಿಯಬಹುದು. ವಿದ್ಯಾರ್ಥಿಗಳಿಗಂತೂ ಮೊಬೈಲ್ ಮತ್ತು ಟಿ.ವಿ.ಗಳಿಂದ ದೂರವಿರಿಸಲು ಇರುವ ಉತ್ತಮ
ಹವ್ಯಾಸ. ಅಷ್ಟೇ ಅಲ್ಲ. ಚಿಕ್ಕಂದಿನಿAದಲೇ
ಹಕ್ಕಿಗಳಿಂದಾಗುವ ಪ್ರಯೋಜನಗಳನ್ನು ಅರಿತು ಅವುಗಳ ಸಂರಕ್ಷಣೆ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಲು
ಸಹಕಾರಿಯಾಗುತ್ತದೆ. ಇಂದು ನಿಸರ್ಗದಲ್ಲಿ ನಾವು ನೋಡುತ್ತಿರುವ ಆಕ್ಸಿಜನ್‌ಖಜಾನೆ, ಕಾಡುಗಳು ಪಕ್ಷಿಗಳಿಂದ ನಮಗೆ ಸಿಕ್ಕಿರುವ
ಬಳುವಳಿಯಾಗಿದೆ. ನೀವು ಕಾಡನ್ನು ಸಂರಕ್ಷಿಸಲು ಹೊರಟರೆ ಪಕ್ಷಿಗಳು ಸಂರಕ್ಷಣೆಯಾಗುತ್ತದೆ! ಅಥವಾ
ಪಕ್ಷಿಗಳನ್ನು ಸಂರಕ್ಷಿಸಲು ಹೊರಟರೆ, ಅಲ್ಲಿ
ಗಿಡ-ಮರಗಳನ್ನು, ಕಾಡುಗಳನ್ನು
ಸಂರಕ್ಷಿಸಬೇಕಾಗುತ್ತದೆ! ಇವೆರಡನ್ನೂ ಸಂರಕ್ಷಿಸಿದರೆ ಅಲ್ಲಿ ಮನುಕುಲ ಉಳಿಯುತ್ತದೆ.
ಇಲ್ಲದಿದ್ದಲ್ಲಿ ನಮ್ಮಗಳ ಸರ್ವನಾಶಕ್ಕೆ, ಅದೇ
ಮುನ್ನುಡಿಯಾಗುತ್ತದೆ. ಅಂತಹ ಉಪಯುಕ್ತ ಪಕ್ಷಿಗಳ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ
ತಿಳಿದುಕೊಳ್ಳೋಣ.
ಹಾಗಾದರೆ, ನೀವೀಗ ಪಕ್ಷಿ ವೀಕ್ಷಣೆಗೆ ಸಿದ್ಧವೇ? ಮೊದಲಿಗೆ, ನಿಮಗೆ ನಾವು ವೀಕ್ಷಿಸಲು ಹೊರಡುವ ಪಕ್ಷಿಗಳ ಚಿತ್ರಗಳನ್ನು
ತೋರಿಸುತ್ತೇನೆ. ಗುರುತಿಸಲು ಪ್ರಯತ್ನಿಸಿ.
Super sir
ReplyDeleteVery nice sir
ReplyDeleteತುಂಬಾ ಆಪ್ತವಾದ ಬರಹ, ನಿಮ್ಮ ಅನುಭವ ಲೇಖನದ ಘನತೆಯನ್ನ ಹೆಚ್ಚಿಸಿದೆ. ಒಳ್ಳೆ
ReplyDeleteಹವ್ಯಾಸದ ಕಡೆ ಓದುಗರನ್ನು ಪ್ರೇರೇಪಿಸುತ್ತದೆ.ಮಾಹಿತಿಗಳು ಸೂಕ್ತವಾಗಿವೆ.ಧನ್ಯವಾದಗಳು.
ತುಂಬಾ ಉಪಯುಕ್ತವಾದ ಮಾಹಿತಿ
ReplyDeletevery useful information sir.your experiences are wonderful.
ReplyDelete