ಓ ಓಝೋನ್ !! ಏನು ನಿನ್ನ ಮಹಿಮೆ?
ಬಿ.ಎನ್. ರೂಪ
ಶಿಕ್ಷಕರು,
ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢ ಶಾಲೆ
ಗೋರಿಪಾಳ್ಯ,
ಬೆಂಗಳೂರು ದಕ್ಷಿಣ ವಲಯ-2
ಓಝೋನ್ ಏನು ನಿನ್ನ ಮಹಿಮೆ?
ನಿನ್ನ ಉಪಸ್ಥಿತಿ ನಮ್ಮ ಹಿರಿಮೆ,
ಆಕ್ಸಿಜನ್‍ನ ಬಹುರೂಪ ನೀ
ಸಕಲ ಜೀವರಾಶಿಗಳ ರಕ್ಷಕ.
ಸ್ತರಗೋಲದಲ್ಲಿ ನಿನ್ನ ಹಾಜರಿ
ವರ್ಣಿಸಲಸದಳ,
ನೇರಳಾತೀತ ರವಿಕಿರಣಗಳ ಶೋಧಕ
ಆಪತ್ತಿಗೊದಗಿದ ಆಪದ್ಬಾಂಧವ,
ವಸುಂಧರೆಯೊಡಲ ಜೀವರಾಶಿಗಳ ರಕ್ಷಕ.
ಅಂಬರದ ಛತ್ರ ನೀ ಓ ಮಿತ್ರ,
ಆಹುತಿಯಾದೆಯಲ್ಲ CFC, ಏರೋಸಾಲ್‍ಗಳೆಂಬ ಶತ್ರುವಿಗೆ
ನಾವು ಬಳಸುವ ಕೆಲ ವಸ್ತುಗಳೇ ನಿನ್ನ
ಭಕ್ಷಕ,
ಆದರೂ ನೀ ಸಕಲ ಜೀವರಾಶಿಗಳ ರಕ್ಷಕ.
ನಿನ್ನ ಕಾರ್ಯವೈಖರಿಯ ಪ್ರಾಮುಖ್ಯತೆ
ಅರಿತೆವಿಂದು
ನಿನ್ನ ಪುನಶ್ಚೇತನ ಕಾರ್ಯಕ್ಕೆ ನಾವೀಗ
ಮುಂದು,
ನಿನ್ನ ರಕ್ಷಣಾ ಕೈಂಕರ್ಯವೇ ನಮ್ಮ ಆದ್ಯ
ಕರ್ತವ್ಯ
ಸೆಪ್ಟಂಬರ್ 19ರ ‘ವಿಶ್ವ ಓಝೋನ್ ದಿನವೇ’ ನಿನ್ನ ದಿನ
ಹೀಗಾದರೂ ಆಗಲಿ ಜನಜಾಗೃತಿ
ಏನಿದು ಓಝೋನ್?
ಓಝೋನ್ ಎಂಬುದು ಆಕ್ಸಿಜನ್‍ನ ಮೂರು
ಪರಮಾಣುಗಳಿಂದ ರೂಪುಗೊಂಡ ಒಂದು ಅಣು. ಆಕ್ಸಿಜನ್, ಉಸಿರಾಡುವ ಎಲ್ಲಾ ಜೀವಿಗಳ ಜೀವನಕ್ಕೆ
ಅತ್ಯಗತ್ಯವಾದ ಅನಿಲ.
ಓಝೋನ್ ಒಂದು ಪ್ರಾಣಾಂತಿಕ ವಿಷವಾಗಿದೆ ಎನ್ನುವುದು ಅಷ್ಟೇ ಸತ್ಯ. ಆದರೂ
ವಾತಾವರಣದ ಉನ್ನತ ಮಟ್ಟದಲ್ಲಿ ಒಂದು ಅತ್ಯಗತ್ಯ ಕಾರ್ಯವನ್ನು ನಿರ್ವಹಿಸುತ್ತದೆ. ಸೌರ ಬೆಳಕಿನಿಂದ
ಬರುವ ಹಾನಿಕಾರಕ ನೇರಳಾತೀತ ವಿಕಿರಣದಿಂದ ಭೂಮಿಯ ಮೇಲ್ಮೈಯನ್ನು ರಕ್ಷಿಸುತ್ತದೆ.
ವಾತಾವರಣದ ಉನ್ನತ ಸ್ತರದಲ್ಲಿ ನೇರಳಾತೀತ
ವಿಕಿರಣವು ಆಕ್ಸಿಜನ್ (O2)
ಅಣುವಿನ ಜೊತೆ ವರ್ತಿಸಿ ಉಂಟಾದ ವಸ್ತುವೇ ಓಝೋನ್.
ಹೆಚ್ಚಿನ ತೀವ್ರತೆಯ ನೇರಳಾತೀತ
ವಿಕಿರಣಗಳು ಕೆಲವು ಆಕ್ಸಿಜನ್ ಅಣುಗಳನ್ನು (O2) ಆಕ್ಸಿಜನ್ ಪರಮಾಣು (O) ಗಳಾಗಿ ವಿಭಜಿಸುತ್ತದೆ. ನಂತರ ಈ ಪರಮಾಣುಗಳು ಇತರ ಆಕ್ಸಿಜನ್ ಅಣುಗಳೊಂದಿಗೆ ಸೇರಿ ಈ
ಕೆಳಗೆ ತೋರಿಸಿದಂತೆ ಓಝೋನ್ ರೂಪುಗೊಳ್ಳುತ್ತದೆ.
O2 à O + O
O + O à O2
ಓಝೋನಿನ ಕಾರ್ಯವೇನು?
ಭೂಮಂಡಲವನ್ನು ಆವರಿಸಿರುವ ಓಝೋನ್ ಪದರ
ಭೂಮಿಯನ್ನು ಮತ್ತು ಅಲ್ಲಿರುವ ಜೀವಸಂಕುಲಗಳನ್ನು ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ
ರಕ್ಷಿಸುತ್ತದೆ. ಈ ಪದರದ ಕಾರಣದಿಂದಲೇ ಭೂಮಿ ಮತ್ತು ಅದರಲ್ಲಿರುವ ಜೀವಿಗಳು ಅನಾದಿಕಾಲದಿಂದಲೂ
ಸುರಕ್ಷಿತವಾಗಿದೆ. ಮುಂದಿನ ಪೀಳಿಗೆಯು ಇದೇ ರೀತಿ ಸುರಕ್ಷಿತವಾಗಿರುವ ನಿಟ್ಟಿನಲ್ಲಿ ಓಝೋನ್ ಪದರದ
ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಓಝೋನ್ ಸವಕಳಿ:
ಧ್ರುವ ಪ್ರದೇಶಗಳು ಓಝೋನ್ ಸಾಂದ್ರತೆಯ
ಹೆಚ್ಚಿನ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತವೆ. ಅಂಟಾರ್ಕ್ಟಿಕ್ ಅಳತೆಗಳಿಂದ ಇದನ್ನು
ಗಮನಿಸಲಾಯಿತು. ಓಝೋನ್ ಮಟ್ಟವನ್ನು ಅಳೆಯಲು
ಓಝೋನ್ ರಂಧ್ರವನ್ನು ಡಾಬ್ಸನ್ ಸ್ಪೆಕ್ಟ್ರೋಫೋಟೋಮೀಟರ್ ಮತ್ತು ಲಿಡಾರ್ ಲೈಟ್
ಡಿಟೆಕ್ಷನ್ ಮತ್ತು ರೇಂಜಿಂಗ್ ಉಪಕರಣಗಳನ್ನು ಬಳಸಿ ಅಳೆಯಲಾಗುತ್ತದೆ.
ಓಝೋನ್ ಮಾಲಿನ್ಯಕಾರಕ:-
ನೆಲದ ಮಟ್ಟದಲ್ಲಿ ಓಝೋನ್ ಹಾನಿಕಾರಕ
ವಾಯು ಮಾಲಿನ್ಯಕಾರಕವಾಗಿದೆ, ಏಕೆಂದರೆ ಇದು ಮಾನವ
ಮತ್ತು ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಹೊಗೆ ಮಂಜಿನ ಮುಖ್ಯ ಘಟಕಾಂಶವಾಗಿದೆ.
ನೆಲದ ಮಟ್ಟವು ಓಝೋನ್ ಬಣ್ಣರಹಿತ ಮತ್ತು ಹೆಚ್ಚು
ಕಿರಿಕಿರಿಯುಂಟು ಮಾಡುವ ಅನಿಲವಾಗಿದ್ದು ಅದು ಭೂಮಿಯ ಮೇಲ್ಮೈಗಿಂತ ಸ್ವಲ್ಪ ಮಟ್ಟಿಗೆ
ರೂಪುಗೊಳ್ಳುತ್ತದೆ. ಇದನ್ನು ದ್ವಿತೀಯ ಮಾಲಿನ್ಯಕಾರಕ ಎಂದು ಕರೆಯಲಾಗುತ್ತದೆ ಏಕೆಂದರೆ ಎರಡು
ಪ್ರಾಥಮಿಕ ಮಾಲಿನ್ಯಕಾರಕಗಳು ನೈಟ್ರೋಜನ್ ಆಕ್ಸೈಡ್ ಗಳು ಮತ್ತು ಬಾಷ್ಪಶೀಲ ಸಾವಯವ ಸಂಯುಕ್ತಗಳು
ಸೂರ್ಯನ ಬೆಳಕು ಮತ್ತು ನಿಂತ ಗಾಳಿಯಲ್ಲಿ ಪ್ರತಿಕ್ರಿಯಿಸುತ್ತಾ ಉಂಟಾಗುತ್ತದೆ.
ಓಝೋನ್ ಮಾಲಿನ್ಯವು ಎದೆ ನೋವು, ಕೆಮ್ಮು, ಗಂಟಲು ಕಿರಿಕಿರಿ, ಬ್ರಾಂಕೈಟಿಸ್, ಶ್ವಾಸಕೋಶದ ಕಾರ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಶ್ವಾಸಕೋಶದ ಒಳಪದರದಲ್ಲಿ ಉರಿಯೂತವನ್ನು
ಉಂಟುಮಾಡುತ್ತದೆ.
ಓಝೋನ್ ದಿನದಆಚರಣೆ ಏಕೆ?
1980ರ ದಶಕದಲ್ಲಿ ಓಝೋನ್ ಪ್ರಮಾಣವೂ ತೀವ್ರವಾಗಿ
ಕುಸಿಯಲಾರಂಭಿಸಿದ್ದು, ಕೆಲವು ವರ್ಷಗಳಿಂದ
ಮಾನವನ ಮಾಡುತ್ತಿರುವ ಅಭಿವೃದ್ಧಿ ಸಂಬಂಧಿ ಯೋಜನೆಗಳು, ತಂತ್ರಜ್ಞಾನ, ಕೈಗಾರಿಕೆ ಮುಂತಾದ ಚಟುವಟಿಕೆಗಳಿಂದ
ಹೊರಹೊಮ್ಮುವ ರಾಸಾಯನಿಕ ಮತ್ತು ವಿಷಕಾರಕ ವಸ್ತುಗಳು ಅದರ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಶೀತಲೀಕರಣ ಮತ್ತು ಅಗ್ನಿಶಾಮಕದಲ್ಲಿ
ಬಳಸಲ್ಪಡುವ ಕ್ಲೋರೋ ಫ್ಲೋರೋಕಾರ್ಬನ್ ಗಳಂತಹ ಸಂಶ್ಲೇಷಿತ ರಾಸಾಯನಿಕಗಳು ಓಝೋನ್ ಪದರ ತೆಳುವಾಗಲು
ಕಾರಣ ಎಂದು ಕಂಡುಕೊಳ್ಳಲಾಗಿದೆ. ಭೂಮಂಡಲದಲ್ಲಿರುವ ಜೀವಿಗಳಿಗೆ ಅಪಾಯ ತಂದೊಡ್ಡುವ
ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತವಾಗಿದೆ. ಆದರಿಂದ ಓಜೋನ್ ಪದರವನ್ನು ರಕ್ಷಿಸುವ ಅಭಿಯಾನವನ್ನು ಜಗತ್ತಿನಾದ್ಯಂತ
ಶುರುವಾಗಿದೆ. ಓಝೋನ್ ಪದರ ಉಳಿವಿನ ಅಭಿಯಾನದ ಒಂದು ಭಾಗವೇ ವಿಶ್ವ ಓಝೋನ್ ದಿನಾಚರಣೆ ಎಂದು ಆಚರಿಸಲಾಗುತ್ತದೆ.
ಅಂದರೆ 1987,
ಸೆಪ್ಟೆಂಬರ್ 16 ರಂದು ಕೆನಡಾದ ಮಾಂಟ್ರಿಯಲ್ ನಗರದಲ್ಲಿ ಓಝೋನ್ ಪದರ ಉಳಿಸುವುದಕ್ಕಾಗಿ ಸಂಬಂಧಿಸಿದಂತೆ
ಕೆಲವು ದೇಶಗಳ ನಡುವೆ ಒಪ್ಪಂದವೊಂದು ನಡೆದಿತ್ತು. ಈ ಐತಿಹಾಸಿಕ ಒಪ್ಪಂದದ ನೆನಪಿಗಾಗಿ
ವಿಶ್ವಸಂಸ್ಥೆಯು ಈ ದಿನವನ್ನು ಪ್ರತಿವರ್ಷ
“ವಿಶ್ವಓಝೋನ್ ದಿನ” ಎಂದು ಆಚರಿಸಲು
ನಿರ್ಧರಿಸಿತು.
ಪ್ರಪಂಚಾದ್ಯಂತ CFC ಮುಕ್ತ ರೆಫ್ರಿಜರೇಟರ್ ಗಳನ್ನು ಎಲ್ಲಾ ಉತ್ಪಾದನಾ ಕಂಪನಿಗಳು ತಯಾರಿಸುವುದು ಇದೀಗ
ಕಡ್ಡಾಯವಾಗಿದೆ.
ಇದಲ್ಲದೆ,
ನಾವು ನಮ್ಮ ಭೂಮಿಯನ್ನು ರಕ್ಷಿಸಲು ವಿವಿಧ ವೇದಿಕೆಗಳಲ್ಲಿ ಮಾತನಾಡುವುದು ಅಥವಾ
ಲೇಖನಗಳನ್ನು ಬರೆಯುವುದಲ್ಲ. ನಾವು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು,
ಓಜೋನ್ ಪದರವನ್ನು ರಕ್ಷಿಸಲು ಕೈಗೊಂಡಿರುವ
ಕ್ರಮಗಳೇನು?
ಓಝೋನ್ ಪದರ ಕ್ಷೀಣಿಸುತ್ತಿದೆ ಮತ್ತು ಇದನ್ನು
ಉಳಿಸಿಕೊಳ್ಳಲು ಮಾಡಬೇಕಾದ ಪ್ರಯತ್ನಗಳ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶವಾಗಿದೆ.
ಈ ದಿನದಂದು ಶಾಲಾ-ಕಾಲೇಜು ಸೇರಿದಂತೆ
ವಿವಿಧೆಡೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು O3 ಕುರಿತಂತೆ ಮಾಹಿತಿ
ನೀಡುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಓಝೋನ್ ಪದರದ ಸವಕಳಿಯ ಬಗ್ಗೆ ಜನರಲ್ಲಿ ಜಾಗೃತಿ
ಮೂಡಿಸಲು ಮತ್ತು ಇದನ್ನು ಸಂರಕ್ಷಿಸಲು ಸಂಭವನೀಯ ಪರಿಹಾರಗಳನ್ನು ಹುಡುಕಲು ಇದನ್ನು ಆಚರಿಸಲಾಗುತ್ತದೆ.
ನಾವು ನಮ್ಮ ಭೂಮಿಯನ್ನು ರಕ್ಷಿಸಲು ವಿವಿಧ
ವೇದಿಕೆಗಳಲ್ಲಿ ಮಾತನಾಡುವುದು ಅಥವಾ ಲೇಖನಗಳನ್ನು ಬರೆಯುವುದರೊಂದಿಗೆ ಈ ಕೆಳಗಿನ ಕೆಲವು
ಕ್ರಮಗಳನ್ನು ತೆಗೆದುಕೊಳ್ಳಬೇಕು ,
• ಹೆಚ್ಚು ಹೆಚ್ಚು ಗಿಡ – ಮರಗಳನ್ನು ಬೆಳೆಸುವುದು.
• ಗಿಡಮರಗಳನ್ನು ಪೋಷಿಸುವುದು.
• ನೀರನ್ನು ಸಂರಕ್ಷಿಸಿ.
• ಕಡಿಮೆ ಬಳಕೆ ಮಾಡಿ, ಮರುಬಳಿಕೆ ಮಾಡಿ, ಮರುಚಕ್ರೀಕರಣ ಮಾಡೋಣ.
• ವಿದ್ಯುತ್ ಶಕ್ತಿಯನ್ನು ಮಿತವಾಗಿ ಬಳಸಿ
• ಪಳೆಯುಳಿಕೆ ಇಂಧನಗಳನ್ನು ಜಾಗರೂಕತೆಯಿಂದ ಬಳಸಿ
• ಕಸವನ್ನು ಹಸಿ ಕಸ ಮತ್ತು ಒಣ ಕಸವನ್ನಾಗಿ ವಿಂಗಡಿಸಿ...
ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ. ನಮ್ಮ ಕೈಲಾಗುವ ಸಂರಕ್ಷಣಾ ವಿಧಾನಗಳನ್ನು ಪಾಲಿಸಿ ನಮ್ಮ ಭೂಮಾತೆಯನ್ನು ಸುರಕ್ಷಿತವಾಗಿ ಸಂರಕ್ಷಿಸೋಣ.
ಓಝೋನ್ ಮಹಿಮೆ, ನಿಮ್ಮ ಲೇಖನ ಬಹಳ ಚೆನ್ನಾಗಿದೆ, ಸಮಗ್ರ ಮಾಹಿತಿಯನ್ನು ಉಣಬಡಿಸಿದ್ದೀರಿ ಅಭಿನಂದನೆಗಳು ಮೇಡಂ
ReplyDeleteThank u sir
Deleteಅಚ್ಚುಕಟ್ಟಾಗಿ ಮಾಹಿತಿ ನೀಡಿರುವ ಲೇಖನ, ಲೇಖಕಿಯವರ ಪ್ರತಿಭೆಯ ಕೈಗನ್ನಡಿ!
ReplyDeleteThank u Mam🙏
ReplyDeleteಓಝೋನ್ ಮಹತ್ವವನ್ನು ಕವನದೊಂದಿಗೆ ವಿವರಿಸಿ,ತುಂಬಾ ಚೆನ್ನಾಗಿ ಬರೆದಿದ್ದೀರಿ.ಅಭಿನಂದನೆಗಳು.
ReplyDeleteVery nice mam
ReplyDeleteತುಂಬಾ ಚನ್ನಾಗಿದೆ ಮತ್ತು ಉಪಯುಕ್ತ ಮಾಹಿತಿ ಕೊಟ್ಟ ತಮಗೆ ಧನ್ಯವಾದಗಳು.......
ReplyDeleteV. Good information mm
ReplyDeleteಬರವಣಿಗೆ, ಕವನ ಉತ್ತಮವಾಗಿದೆ 🙏🙏
ReplyDeleteಅತ್ತ್ಯುತ್ತಮ ಮಾಹಿತಿ madam Very informative and useful article. Thank you for sharing.
ReplyDeleteGood 👍
ReplyDeleteVery informative & meaningful article. Well explained with poem. Keep it up
ReplyDeleteThank you mam
ReplyDeleteArt Integrated Learning with a nice poem
ReplyDeleteAwesome information roopa
ReplyDeleteIt is good
ReplyDeleteVery informative...thank u mam
ReplyDeleteGood mam
ReplyDeleteInformative mam
ReplyDeleteVery informative article Roopa,keep it up
ReplyDeleteVery nice work on the useful topic hearty congratulations mam
ReplyDeleteThe ozone layer or ozone shield is a region of Earth's stratosphere that absorbs most of the Sun's ultraviolet radiation. It contains a high concentration of ozone in relation to other parts of the atmosphere, although still small in relation to other gases in the stratosphere.
ReplyDeleteIt's one of the best information about ozone layer, thank you madam
ReplyDeleteವಿದ್ಯಾರ್ಥಿಗಳಿಗೆ ಬೋಧಕರಿಗೆ ಉಪಯುಕ್ತ..
ReplyDeleteಬಹಳ ಉಪಕಾರವಾಯಿತು .. ಧನ್ಯವಾದಗಳು
Its best information for ozone layer thank u mam
ReplyDeleteRoopa madam ,very informative one
ReplyDeleteSuuuuuuper Roopa
ReplyDeleteNice information madam about Ozone..
ReplyDeletevery informative Madam.
ReplyDelete