ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, September 4, 2021

ಸ್ಫೂರ್ತಿಯ ಚಿಲುಮೆ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ನಾಗರಾಜ್‌

ಸ್ಫೂರ್ತಿಯ ಚಿಲುಮೆ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ನಾಗರಾಜ್ 

ಬೆಂಗಳೂರು ದಕ್ಷಿಣ ಜಿಲ್ಲೆ, ವಲಯ -೦೪ (ಬೆಂಗಳೂರು ಪೂರ್ವ ತಾಲ್ಲೂಕು) ದೊಡ್ಡಬನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ನಾಗರಾಜ.ಸಿ.ಎಂ.ರವರು ಪ್ರಸಕ್ತ ಸಾಲಿನ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪರಿಸರ ಸ್ನೇಹಿ ಶಾಲಾ ವಾತಾವರಣ, ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಬೆಳೆಸುವುದು, ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಅನುಷ್ಠಾನ, ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಸಮುದಾಯದ ಸಹಕಾರ ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಇಲಾಖಾ ಕಾರ್ಯಕ್ರಮಗಳ ಅನುಷ್ಠಾನ ಒಳಗೊಂಡಂತೆ ಇವರ ಕಾರ್ಯಕ್ಕೆ ಸಾಲಿನ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿದೆ.

ನಾಗರಾಜ.ಸಿ.ಎಂ ರವರು ಮೂಲತಃ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಚನ್ನಪ್ಪನಹಟ್ಟಿ ಗ್ರಾಮದವರಾಗಿದ್ದು, ತಾಯಿ ಬಸಮ್ಮ..ಎನ್  ತಂದೆ ಸಿ.ಎಂ.ಮಂಜಪ್ಪ ನಿವೃತ್ತ ಶಿಕ್ಷಕರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕಿನ ಜೋಳದಾಳ್ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಪ್ರೌಢ ಮತ್ತು ಪಿ.ಯು.ಸಿ ಶಿಕ್ಷಣವನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ  ಶ್ರೀರಾಘವೇಂದ್ರ ಸ್ವಾಮಿಜೀಯವರ ಅನಾಥಸೇವಾಶ್ರಮದಲ್ಲಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿಯನ್ನು, ಹಾವೇರಿ ಜಿಲ್ಲೆಯ ಹಾನಗಲ್‌ನ ಶ್ರೀಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಯನ್ನು,  ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ರಸಾಯನ ಶಾಸ್ತ್ರ) ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.


೨೦೦೫ರಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ, ವಲಯ-೦೪ರ ಸರ್ಕಾರಿ ಪ್ರೌಢಶಾಲೆ, ಕಾಡುಸೊಣ್ಣಪ್ಪನಹಳ್ಳಿಯಲ್ಲಿ ವಿಜ್ಞಾನ ಶಿಕ್ಷಕರಾಗಿ ನೇಮಕಗೊಂಡು, ವಿಜ್ಞಾನ ವಿಷಯದಲ್ಲಿ ಪ್ರತಿ ವರ್ಷ ಹತ್ತನೇ ತರಗತಿಯಲ್ಲಿ ಉತ್ತಮ ಫಲಿತಾಂಶ ನೀಡುತ್ತಾ ಬಂದಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದು, ಅವರ ವಿದ್ಯಾರ್ಥಿಗಳು ವಿಜ್ಞಾನ ನಾಟಕ, ಪಾಠೋಪಕರಣಗಳ ತಯಾರಿಕೆ, ಇಸ್ಪೈರ್ಅವಾರ್ಡ್‌, ಛದ್ಮವೇಷ ಮುಂತಾದ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿರುತ್ತಾರೆ. ೨೦೧೪ ರಿಂದ ೨೦೧೮ರ ಅಕ್ಟೋಬರ್೦೧ ವರೆಗೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಇಲಾಖೆಯ ಹಲವು ಪ್ರಮುಖ ಯೋಜನೆಗಳು ಮತ್ತು  ಕಾರ್ಯತಂತ್ರಗಳಾದ ..ಎಸ್.ಸಿ.(ಸಮೀಕ್ಷೆ, SBT, -RST, -NRST, ಚಿಣ್ಣರ ಅಂಗಳ, ಮದರಸ ಶಿಕ್ಷಣ , ತಾಯಂದಿರ ಮೇಳ, ಬೀದಿ ನಾಟಕ) ಆರ್.ಟಿ., ಡೈಸ್‌, ಅಲ್ಪಸಂಖ್ಯಾತ ವಿದ್ಯಾರ್ಥಿವೇತನ, ಎನ್‌..ಪಿ. ವಾರ್ಷಿಕ ಪ್ಲಾನಿಂಗ್‌, ಗ್ರಾಮೀಣ .ಟಿ ರಸಪ್ರಶ್ನೆ, ವಿಶ್ವಾಸ ಕಿರಣ, ಎನ್.ಟಿ.ಎಸ್. ಮತ್ತು ಎನ್.ಎಮ್.ಎಮ್.ಎಸ್., ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ, ವಿಜ್ಞಾನ ವಸ್ತು ಪ್ರದರ್ಶನ, ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಾಗೂ ಹಲವು ತರಬೇತಿಗಳಿಗೆ ನೋಡಲ್ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.

2೦೧೮ರ ಅಕ್ಟೋಬರ್೦೧ ರಿಂದ ಅದೇ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ, ದೊಡ್ಡಬನಹಳ್ಳಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಇಲಾಖಾ ಅನುದಾನದ ಜೊತೆಗೆ ಸಮುದಾಯ ಮತ್ತು ದಾನಿಗಳ ಸಹಾಯ ಪಡೆದು ಶಾಲೆಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಶ್ರಮಿಸಿರುತ್ತಾರೆ. ಶಾಲೆಯಲ್ಲಿ ತಂತ್ರಜ್ಞಾನಾಧಾರಿತ ಬೋಧನೆಯಲ್ಲಿ ಸ್ಮಾರ್ಟ್ಬೋರ್ಡ್‌, ಪ್ರೊಜೆಕ್ಟರ್‌, ಲ್ಯಾಪ್ಟಾಪ್ಗಳೊಂದಿಗೆ  ಸಿಮ್ಯುಲೇಷನ್ಗಳ ಬಳಕೆ, ಆಂಗ್ಲ ವೀಡಿಯೋಗಳನ್ನು ಕನ್ನಡಕ್ಕೆ ಧ್ವನಿ ನೀಡಿ ಬಳಸುವುದು, ಸ್ಟಾಪ್ಮೋಷನ್ಅನಿಮೇಷನ್ಸಿದ್ಧಪಡಿಸುವುದು, ಮೊಬೈಲ್ನಲ್ಲಿರುವ ಆಪ್ಗಳನ್ನು ಪ್ರೊಜೆಕ್ಟರ್ಮೂಲಕ ತೋರಿಸುವುದು ಮುಂತಾದ ತಂತ್ರಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿರುತ್ತಾರೆ

ಪಾಠೋಪಕರಣಗಳ ತಯಾರಿಕೆಯಲ್ಲಿ ಕ್ರಿಯಾಶೀಲರಾಗಿದ್ದು ಮೂಲಕ ರಸಾಯನ ಶಾಸ್ತ್ರದಲ್ಲಿ ಮೈಕ್ರೋಸ್ಕೇಲ್ಪ್ರಯೋಗಗಳು ಎಂಬ ಲ್ಯಾಮಿನೇಟೆಡ್ಶೀಟ್ಗಳ ಮೇಲೆ ಮಾಡುವ ಪ್ರಯೋಗಗಳು ಹೆಚ್ಚು ಗಮನ ಸೆಳೆದಿವೆ. ತಮ್ಮದೇ ಮೈಕ್ರೋಸ್ಕೇಲ್ಕಿಟ್ಅನ್ನು ಅನುಪಯುಕ್ತ ವಸ್ತುಗಳಿಂದ ಸಿದ್ಧಪಡಿಸಿಕೊಂಡಿರುತ್ತಾರೆ. ೨೦೧೯ನೇ ಸಾಲಿನಲ್ಲಿ ಶಿಕ್ಷಕರ ಪಾಠೋಪಕರಣಗಳ ತಯಾರಿಕೆ ವಿಭಾಗದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಟಾರ್ಸಿಯಾಗಳೆಂಬ ಪಾಠೋಪಕರಣಗಳನ್ನು ಬಳಸುತ್ತಾ ಸಂತಸದಾಯಕ ಕಲಿಕೆಯನ್ನು ಉಂಟುಮಾಡಿರುತ್ತಾರೆ.

ಶಾಲಾ ವಾತಾವರಣವನ್ನು ಪರಿಸರ ಸ್ನೇಹಿಯನ್ನಾಗಿಸಲು ಮಕ್ಕಳೊಂದಿಗೆ ಹಲವು ಚಟುವಟಿಕೆಗಳನ್ನು ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೈವಿಕ ಕಸದಿಂದ ಎರೆಹುಳು ಗೊಬ್ಬರ ತಯಾರಿಸುವ ಘಟಕ, ಲೀಫ್ಕಂಪೋಸ್ಟರ್ಗಳಲ್ಲಿ ಸೂಕ್ಷ್ಮಜೀವಿಗಳನ್ನು ಬಳಸಿ ಕಸವನ್ನು ಕಡಿಮೆ ಅವಧಿಯಲ್ಲಿ ಕೊಳೆಸುವುದು, ಹಸಿರೆಲೆ ಗೊಬ್ಬರ ತಯಾರಿಕೆ, ಕಾಂಪೋಸ್ಟ್ತಯಾರಿಕೆ ಇತ್ಯಾದಿಗಳನ್ನು ಅನುಷ್ಠಾನಗೊಳಿಸಿ  ಇದೇ ಗೊಬ್ಬರವನ್ನು ಶಾಲಾ ಕೈತೋಟದ ೧೦೦ಕ್ಕೂ ಹೆಚ್ಚು ಗಿಡಗಳಿಗೆ ಬಳಕೆ ಮಾಡಿರುತ್ತಾರೆ.

ಶಾಲಾ ಆವರಣವನ್ನು ಪ್ಲಾಸ್ಟಿಕ್ಮುಕ್ತ ಮಾಡುವಲ್ಲಿ ಮತ್ತು ಶಾಲೆಗೆ ಸರಬರಾಜಾಗುತ್ತಿದ್ದ ಹಾಲಿನ  ಕವರ್ಗಳಿಂದ ಶಾಲೆಯ ಕಂಪ್ಯೂಟರ್ಗಳಿಗೆ ಕವರ್ಗಳನ್ನು ಹೊಲಿಸಿದ್ದು ಹೀಗೆ ಮರುಉದ್ದೇಶಕ್ಕೆ ಬಳಸುವಲ್ಲಿ ಕೈಗೊಂಡ ಕ್ರಮಗಳು ಮೆಚ್ಚುಗೆಗೆ ಪಾತ್ರವಾಗಿವೆ. ಅನುಪಯುಕ್ತವಾಗಿದ್ದ ಮುರಿದ ಕಬ್ಬಿಣದ ಪೀಠೋಪಕರಣಗಳಿಂದ ಶಾಲೆಗೆ ಅಗತ್ಯವಿರುವ ಪ್ರೊಜೆಕ್ಟರ್ಸ್ಕ್ರೀನ್‌, ಪ್ರೊಜೆಕ್ಟರ್ಸ್ಟ್ಯಾಂಡ್‌, ನ್ಯೂಸ್ಪೇಪರ್ರೀಡಿಂಗ್ಸ್ಟ್ಯಾಂಡ್‌, ಪೋಡಿಯಂ, ಡಯಾಸ್‌, ಕೊಠಡಿಗಳಿಗೆ ನಾಮಫಲಕ, ಇತ್ಯಾದಿ ಉಪಯುಕ್ತ ವಸ್ತುಗಳನ್ನಾಗಿ ಮರುಬಳಕೆ ಮಾಡಿರುವುದು ಶಾಲೆಯಲ್ಲಿ ಬಳಕೆಗೆ ಯೋಗ್ಯವಾಗಿಲ್ಲದ ಡೆಸ್ಕ್ಗಳನ್ನು ಮಕ್ಕಳ ಸಹಾಯದಿಂದ ಬಳಕೆಗೆ ಯೋಗ್ಯವನ್ನಾಗಿ ಮಾಡಿರುವುದು. ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.

ಶಾಲೆಯ ಕೈತೋಟದಲ್ಲಿರುವ ನೂರಾರು ಗಿಡಗಳಿಗೆ ಶಾಲೆಯ ಕೈತೊಳೆಯುವ ಘಟಕದಲ್ಲಿ ಬಳಸಿದ ನೀರನ್ನು ಬಳಸಲು ಯೋಚಿಸಿ ಬಳಸಿದ ನೀರು ಸೋಸುವ ಘಟಕವನ್ನು ನಿರ್ಮಿಸಿ ಆವರಣದಲ್ಲಿ ಅನುಪಯುಕ್ತವಾಗಿದ್ದ ಮೂರು ಸಾವಿರ ಲೀಟರ್ಸಾಮರ್ಥ್ಯದ ಸಿಮೆಂಟ್ ಟ್ಯಾಂಕ್ನಲ್ಲಿ ಸಂಗ್ರಹಿಸಿ ನೀರನ್ನು ಶಾಲಾ ಕೈತೋಟಕ್ಕೆ ಮಕ್ಕಳಿಂದಲೇ ಜೋಡಿಸಿದ್ದ ಡ್ರಿಪ್ಮತ್ತು ಸ್ಪ್ರಿಂಕ್ಲರ್ಮೂಲಕ ಒದಗಿಸುತ್ತಿದ್ದಾರೆ.

ಕಾರ್ಯವು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಶಾಲಾ ಕಟ್ಟಡಕ್ಕೆ ಮಳೆನೀರು ಕೊಯ್ಲು ಅಳವಡಿಸಿ ಮಳೆ ನೀರನ್ನು ಹತ್ತು ಸಾವಿರ ಲೀಟರ್ಸಾಮರ್ಥ್ಯದ ಓವರ್ಹೆಡ್ಟ್ಯಾಂಕ್ನಲ್ಲಿ ಸಂಗ್ರಹಿಸಿ ದಿನನಿತ್ಯದ ಬಳಕೆಗೆ ಉಪಯೋಗಿಸುತ್ತಿದ್ದಾರೆ.

ಮಕ್ಕಳಿಗೆ ಕೌಶಲ್ಯಾಧಾರಿತ ಚಟುವಟಿಕೆಗಳಾದ ಗಿಡಗಳ ಸುತ್ತಲೂ ಗೋಡೆ ಕಟ್ಟಿ ಪ್ಲಾಸ್ಟರಿಂಗ್ಮಾಡುವುದು, ವರ್ಲಿ ಪೇಂಟಿಂಗ್‌, ಶಾಲಾ ಕಾಂಪೌಂಡ್ಗೆ ಬಣ್ಣ ಬಳಿದು ಚಿತ್ರಗಳಿಂದ ಆಕರ್ಷಕವಾಗಿಸುವುದು, ಸೋಪು ಮತ್ತು ಫೀನಾಯಿಲ್ತಯಾರಿಕೆ, ಪೇಪರ್ಬ್ಯಾಗ್‌, ಬಾಕ್ಸ್‌, ಪೇಪರ್ಪೆನ್‌, ಕ್ಯಾಪ್ತಯಾರಿಕೆಯಂತಹ ಚಟುವಟಿಕೆಗಳನ್ನು ಹಮ್ಮಿಕೊಂಡಿರುತ್ತಾರೆ.

ದೀಕ್ಷಾ ಪೋರ್ಟಲ್ನಲ್ಲಿ ವಿಜ್ಞಾನ ವಿಷಯದಲ್ಲಿ ಅಭ್ಯಾಸದ ಸಂಪನ್ಮೂಲಗಳನ್ನು ರಚಿಸಿ ಕಂಟೆಂಟ್ರಿವ್ಯೂವರ್ಆಗಿ ಕಾರ್ಯನಿರ್ವಹಿಸಿರುತ್ತಾರೆ. ಸಂವೇದ -ಕ್ಲಾಸ್ನಲ್ಲಿ ವೀಡಿಯೋ ಪಾಠಗಳನ್ನು ನೀಡಿರುತ್ತಾರೆ. ಇವರ ಪಾಠಬೋಧನೆಗೆ ಪ್ರಶಂಸೆಗಳು ವ್ಯಕ್ತವಾಗಿವೆ. ಜಿಲ್ಲಾಹಂತದಲ್ಲಿ ಹಲವು ಪುಸ್ತಕಗಳ ರಚನೆಯಲ್ಲಿ ಭಾಗವಹಿಸಿರುತ್ತಾರೆ.  

ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗಲ್ಲದೇ ಲಿಪಿಕ ನೌಕರರಿಗೆ, ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ, ಮುಖ್ಯ ಶಿಕ್ಷಕರಿಗೆ, ಮಕ್ಕಳ ವಿಜ್ಞಾನ ಹಬ್ಬ, ವಿದ್ಯಾಗಮ, ದೀಕ್ಷಾ, TALP , E̲- vidya ಹೀಗೆ ಸುಮಾರು ೧೭ ವಿವಿಧ ಮಾಡ್ಯೂಲ್ಗಳ ತರಬೇತಿಗಳಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.

ಕೋವಿಡ್ಸಂಕಷ್ಟದಲ್ಲಿ ಮಕ್ಕಳಿಗೆ ಆನ್ಲೈನ್ತರಗತಿಗಳನ್ನು ರೋಟರಿ & ಎಸ್‌.ಆರ್‌.ಫ್ ಸಂಸ್ಥೆಯವರ ಸಹಕಾರದೊಂದಿಗೆ ರಾಜ್ಯಾದ್ಯಂತ ಮಕ್ಕಳಿಗೆ ತಲುಪಿಸಲು ಪ್ರಯತ್ನಿಸಿದ್ದಾರೆ.

ಇವರು ಪ್ರಾಥಮಿಕ ಶಿಕ್ಷಣ ಪಡೆದ ಚನ್ನಗಿರಿ ತಾಲ್ಲೂಕಿನ ಜೋಳದಾಳ್ಗ್ರಾಮದ ಸರ್ಕಾರಿ ಶಾಲೆ ಹಾಗೂ ಸುತ್ತಮುತ್ತಲಿನ ೦೯ ಶಾಲೆಗಳಿಗೆ ರೀಚಿಂಗ್ಹ್ಯಾಂಡ್ಸಂಸ್ಥೆಯವರನ್ನು ಕರೆತಂದು ಗರ್ಲ್ಸ್ಗ್ಲೋರಿ ಹೆಸರಿನಲ್ಲಿ ಹೈಟೆಕ್ಶೌಚಾಲಯಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೀಗೆ ಇಲಾಖೆಯ ಅನುದಾನ ಮತ್ತು ದಾನಿಗಳ ಸಂಘ ಸಂಸ್ಥೆಗಳ ಸಹಕಾರದಿಂದ(TIDE, CELCO Foundation, HOPE Foundation, CIPLA, IDREAM, BRILLIO, SRF Foundation, AVASAR Foundation ಇತ್ಯಾದಿ) ತಮ್ಮ ಶಾಲೆಗಲ್ಲದೇ ಇತರೆ ಶಾಲೆಗಳಿಗೆ ಅಂದಾಜು ೬೦ ಲಕ್ಷ ರೂ ಮೊತ್ತದ ವಸ್ತುಗಳನ್ನು ಒದಗಿಸುವಲ್ಲಿ ಇವರು ಕೈಗೊಂಡ ಕಾರ್ಯ ಪ್ರಶಂಸಾರ್ಹವಾದುದು.

ತಮ್ಮ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಕ್ರಿಯಾಶೀಲ ಚಿಂತನೆಯೊಂದಿಗೆ ಸದಾ ಹೊಸತನವನ್ನು ಹುಡುಕುವ ವ್ಯಕ್ತಿತ್ವ ಹೊಂದಿರುವ  ನಾಗರಾಜ ಸಿ. ಎಂ ರವರು ಅನೇಕ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಇವರ ವಿಶಿಷ್ಟ ಸಾಧನೆಯನ್ನು ಗುರುತಿಸಿದ ಭಾರತ ಸರ್ಕಾರ ೨೦೨೧ರ ರಾಷ್ಟ್ರದ ಅತ್ಯುತ್ತಮ ಶಿಕ್ಷಕಪ್ರಶಸ್ತಿ ನೀಡಿ ಗೌರವಿಸಿರುವುದು ಸಾಧಕರಿಗೆ ಸಂದ ಗೌರವವಾಗಿದೆ

9 comments:

  1. K.N ನಾಗರಾಜ್ ಸರ್ ಅಭಿನಂದನೆಗಳು, ನೀವು ಕೈಗೊಂಡ ಕಾರ್ಯಗಳು ನಿಮ್ಮನ್ನು ಉತ್ತಮ ಶಿಕ್ಷಕರನ್ನಾಗಿ ಗುರುತಿಸುವಂತೆ‌ ಮಾಡಿದೆ.ನೀವು ನಮ್ಮ ರಾಜ್ಯದ ಹೆಮ್ಮೆ. ನೀವು ಹಾಗೂ ನಿಮ್ಮ ಚಟುವಟಿಕೆಗಳು ನಮಗೆ ಸ್ಪೂರ್ತಿ, ಮತ್ತೊಮ್ಮೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.

    ReplyDelete
  2. ರಾಷ್ಟ್ರದ ಹೆಮ್ಮಿಯ ಪುತ್ರ ನಿಮಗೆ ತುಂಬಾ ಹೃದಯದ ಧನ್ಯವಾದಗಳು

    ReplyDelete
  3. ನಾಗರಾಜ್‌ ಸರ್‌ ಗೆ ಹಾರ್ದಿಕ ಅಭಿನಂದನೆಗಳು, ಅವರ ವೃತ್ತಿಜೀವನ ನಮಗೆಲ್ಲಾ ಸ್ಪೂರ್ತಿದಾಯಕ,ಉತ್ತಮವಾಗಿ
    ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಸರ್

    ReplyDelete
  4. Congratulations sir ..you deserve it💐💐💐

    ReplyDelete
  5. Very proud of you sir and you are role model for teachers god bless you sir thank you sir

    ReplyDelete
  6. ನಾಗರಾಜ್ ಸರ್ ಸಾಧನೆಗಳು ಎಲ್ಲಾ ಶಿಕ್ಷರಿಗೆ ಮಾದರಿ. ತುಂಬಾ ಚೆನ್ನಾಗಿ ಅವರ ಸಾಧನೆಗಳನ್ನು ಬಣ್ಣಿಸಿದ್ದೀರಿ.ಧನ್ಯವಾದಗಳು.

    ReplyDelete
  7. ನಾಗರಾಜ್ ಸರ್‌ರವರು ನಮಗೆ ಆತ್ಮೀಯ ಮಿತ್ರರಾಗಿರುವುದು ನಮಗೆ ಹೆಮ್ಮೆಯ ವಿಷಯ. Congratulations Sir.

    ReplyDelete
  8. ಉತ್ತಮ ಲೇಖನ ಸೂಪರ್ sir

    ReplyDelete