ಶಿಕ್ಷಣ ಕ್ಷೇತ್ರದ ಅನರ್ಘ್ಯ ರತ್ನ ಶ್ರೀ ರಾಮಚಂದ್ರ ಭಟ್
ಶ್ರೀಧರಮಯ್ಯ ಎಂ.ಎನ್.
ಮುಖದಲ್ಲಿ ಸದಾ ಮಂದಹಾಸವನ್ನು ತುಂಬಿಕೊಂಡಿರುವ ಕೇಳಿದ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುವ ಸದಾ ಶಿಕ್ಷಕರ ತಂಡವನ್ನು ಕಟ್ಟಿಕೊಂಡು ನಾ ಹುಟ್ಟಿರುವುದೇ ಶಿಕ್ಷಣ ಸೇವೆಗಾಗಿ ಎಂಬಂತೆ ಸದಾ ಒಂದಲ್ಲಾ ಒಂದು ಕಾರ್ಯದಲ್ಲಿ ತೊಡಗಿಸಿಕೊಂಡು ಶಿಕ್ಷಣ ಕಾಯಕವೇ ಮೂರ್ತಿವೆತ್ತಂತಿರುವ ವ್ಯಕ್ತಿಯೇ ರಾಮಚಂದ್ರ ಭಟ್ ಬಿ. ಜಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎಸ್ಸಿ ಓದುತ್ತಿದ್ದ ವಿದ್ಯಾರ್ಥಿ ದೆಸೆಯಿಂದಲೇ ನಾನವರನ್ನು ಚನ್ನಾಗಿಯೇ ಬಲ್ಲೆ. ಜೊತೆಯಾಗಿಯೇ ಹಲವಾರು ತರಬೇತಿಗಳನ್ನು, ಪಠ್ಯಪುಸ್ತಕ ರಚನಾ ಕಾರ್ಯಾಗಾರ, ತರಬೇತಿ ಮಾಡ್ಯೂಲ್ ರಚನೆ ಮೊದಲಾದ ಕಾರ್ಯಗಳಲ್ಲಿ ಪಾಲ್ಗೊಂಡಿದ್ದೇವೆ. ಜೊತೆಯಾಗಿಯೇ ಉದಯಪುರದಲ್ಲಿ CCRT ತರಬೇತಿಯನ್ನೂ ತೆಗೆದುಕೊಂಡದ್ದು ಇನ್ನೂ ಹಸಿರಾಗಿದೆ. ನಾಚಿಕೆ ಸ್ವಭಾವದ, ಗಂಭೀರವೆಂದು ಕಾಣುವ ಅಂತರ್ಮುಖಿ ವ್ಯಕ್ತಿತ್ವದ ಸ್ನೇಹಿತನ ಜೊತೆ ಸೇರಿದಾಗಲೇ ಆತನ ಸ್ನೇಹಪೂರ್ಣ ಉತ್ಸಾಹೀ ವ್ಯಕ್ತಿತ್ವದ ಅನಾವರಣವಾಗುವುದು. ಸದ್ಯ ಬೆಂಗಳೂರಿನ ಬ್ಯಾಟರಾಯನಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ರಾಜ್ಯ ಮಟ್ಟದಲ್ಲಿ ಪ್ರೌಢಶಾಲೆಯ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಹಲವಾರು ವಿಜ್ಞಾನ ತರಬೇತಿಗಳನ್ನು ಇಲಾಖಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅತ್ಯುತ್ತಮ ಚಟುವಟಿಕೆ ಆಧಾರಿತ ಶೈಕ್ಷಣಿಕ ತರಬೇತಿಗಳನ್ನು ಸಂಘಟಿಸಿ ನೀಡಿದ್ದು ಅಷ್ಟೇ ಅಲ್ಲದೇ ಶಿಕ್ಷಕರ ಮನಗೆದ್ದಿದ್ದಾರೆ. ತಮ್ಮ ವಿಷಯ ಪ್ರಭುತ್ವ, ನಾಯಕತ್ವದ ಗುಣಗಳಿಂದ ಶಿಕ್ಷಕರಿಗೆ ಆದರ್ಶಪ್ರಾಯರಾಗಿದ್ದಾರೆ. ಅವರ ಅಭಿಮಾನಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಾಜ್ಯದಾದ್ಯಂತ ಅಪಾರ ಸಂಖ್ಯೆಯಲ್ಲಿದ್ದಾರೆ.
8, 9 ಮತ್ತು 10 ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕ ರಚನಾ ಸಮಿತಿ, ಪರಿಷ್ಕರಣಾ ಸಮಿತಿ, ಭಾಷಾಂತರ ಸಮಿತಿಗಳ ಸದಸ್ಯರಾಗಿ ಅನೇಕ ಖ್ಯಾತ ಶಿಕ್ಷಣ ತಜ್ಞರುಗಳು, ವಿಜ್ಞಾನಿಗಳ ಜೊತೆ ಕಾರ್ಯ ನಿರ್ವಹಿಸಿದ ಅನುಭವ ಅವರದ್ದು. ತದ ನಂತರ 8,9 ಮತ್ತು 10 ನೇ ತರಗತಿಗಳ NCERT ವಿಜ್ಞಾನ ಪಠ್ಯಪುಸ್ತಕ ಭಾಷಾಂತರ ಕಾರ್ಯದ ಜೊತೆಗೆ ರಸಾಯನ ವಿಜ್ಞಾನದ ಪರಿಶೀಲಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಕಳೆದ ಒಂದು ದಶಕದಿಂದ DSERTಯಲ್ಲಿ ಪ್ರೌಢಶಾಲಾ ಶಿಕ್ಷಕರು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ 15 ಕ್ಕೂ ಹೆಚ್ಚಿನ ತರಬೇತಿ ಮಾಡ್ಯೂಲ್ಗಳ ರಚನಾ ಕಾರ್ಯದಲ್ಲಿ ಪಾಲ್ಗೊಂಡು, ರಾಜ್ಯ ಮಟ್ಟದಲ್ಲಿ ವಿಜ್ಞಾನ ಶಿಕ್ಷಕರ ತರಬೇತಿ ಕಾರ್ಯಾಗಾರಗಳನ್ನು ನಡೆಸಿ ಕೊಟ್ಟಿದ್ದಾರೆ.
ಇವರ ಸಾಧನೆಗೆ ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ಸಂದಿವೆ. ಕಳೆದ ಸೆಪ್ಟಂಬರ್ ತಿಂಗಳ 23 ರಂದು JNCASR ಹಾಗೂ ಪ್ರೊ. ಸಿ ಎನ್ ಆರ್ ರಾವ್ ಫೌಂಡೇಶನ್ ನೀಡುತ್ತಿರುವ Outstanding
Science Teacher Award - 2019 ರಾಷ್ಟ್ರೀಯ ಪ್ರಶಸ್ತಿಯನ್ನು ಭಟ್ಟರು ಸ್ವೀಕರಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದ ಭಾರತರತ್ನ ಪ್ರೊ|| ಸಿ.ಎನ್. ಆರ್.ರಾವ್ರವರು ಭಟ್ಟರ ಕಾರ್ಯದ ಬಗ್ಗೆ ತಿಳಿದು ರಾಷ್ಟ್ರಪ್ರಶಸ್ತಿಗೆ ಅತ್ಯಂತ ಸೂಕ್ತವ್ಯಕ್ತಿ ಎಂದು ಹರಸಿದ್ದೇ ಅವರ ಸಾದನೆಯ ಕೈಗನ್ನಡಿಯಾಗಿದೆ.
ಹೀಗೆ ಹಲವು ಪ್ರಶಸ್ತಿಗಳಿಗೆ ಪಾತ್ರರಾದ ಆತ್ಮೀಯ ಗೆಳಯರೂ ಆದ ಶ್ರೀ ರಾಮಚಂದ್ರ ಭಟ್ರವರಿಗೆ ರಾಷ್ಟ್ರ ಪ್ರಶಸ್ತಿ ಸಿಗಲಿ ಎಂಬ ಆಶಯ ನುಡಿಗಳೊಂದಿಗೆ ಇನ್ನೂ ಹಲವು ವರ್ಷ ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಸಿಗಲಿ, ನೂರ್ಕಾಲ ಸುಖವಾಗಿ ಬಾಳಲೆಂದು ಹಾರೈಸಿ ನನ್ನ ನುಡಿಗಳಿಗೆ ವಿರಾಮ ಹೇಳುತ್ತೇನೆ.
ಶ್ರೀಧರಮಯ್ಯ ಎಂ.ಎನ್.
M.Sc., B.Ed,
ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಗುತ್ತೂರು,
ಹರಿಹರ ತಾ|| ದಾವಣಗೆರೆ ಜಿ!
ನಿಮ್ಮ ಒಡನಾಟವೇ ನಮ್ಮ ಭಾಗ್ಯ ಸರ್. ಲೇಖನ ಚುಟುಕಾಗಿದೆ. ನಿಮ್ಮ ಸಾಧನೆಯ ಪಕ್ಷಿನೋಟ ಮಾತ್ರ ಸಿಕ್ಕಂತಾಗಿದೆ. ಹೇಳಬೇಕಾದ್ದು ಇನ್ನೂ ಇದೆ ಅನ್ನೋ ಭಾವ ಬಂತು. ಶುಭ ಹಾರೈಕೆಗಳು.
ReplyDeleteU deserve the the award higher than the national award.....may God bless you sir...
ReplyDeleteWish you all sucess
ReplyDeleteCongratulations💐 all the best sir.
ReplyDeletecongatulation sir
ReplyDeleteಅಭಿನಂದನೆಗಳು.... ಸರ್
ReplyDeleteರಾಮಚಂದ್ರ ಭಟ್ ಸರ್, ನೀವು ಹುಸ್ಕೂರಿನಲ್ಲಿದ್ದಾಗಿನಿಂದಲೂ ನಿಮ್ಮನ್ನು ಬಲ್ಲೆ. ನಿಮ್ಮದು ಯಾವಾಗಲೂ ಸ್ನೇಹಪರತೆ, ಅಧ್ಯಯನಶೀಲತೆ. ಹೀಗಿದ್ದಾಗ ಇನ್ನೇನು ಕೊರತೆ. ಅರ್ಹ ವ್ಯಕ್ತಿಯಾಗಿ ಹಲವು ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿರುವಿರಿ. ನಾಡಿನಾದ್ಯಂತ ಶಿಕ್ಷಕರನ್ನು ಮತ್ತು ಮಕ್ಕಳನ್ನು ಸಜ್ಜುಗೊಳಿಸುತ್ತಿರುವಿರಿ. SSLC ಮೌಲ್ಯಮಾಪನದ ಸಂದರ್ಭದಲ್ಲಿ , ಯಾವುದಾದರೂ ಕಾರ್ಯಕ್ರಮದಲ್ಲಿ, ತರಬೇತಿಯಲ್ಲಿ ಮತ್ತು ಒಂದು ಸಲ ನಿಮ್ಮ ಶಾಲೆಯಲ್ಲಿ - ಹೀಗೆ ಭೇಟಿಯಾದಾಗ ತುಂಬಾ ಆತ್ಮೀಯತೆಯಿಂದ ಮಾತನಾಡಿಸಿದ್ದೀರಿ. ಕೊನೆಯದಾಗಿ.... ಕಲಿಯಬೇಕೆನ್ನುವ ಮತ್ತು ಕಲಿಸಬೇಕೆನ್ನುವ ನಿಮ್ಮ ಉತ್ಕಟ ಭಾವನೆ ನನಗಿಷ್ಟ ಸರ್. ಮತ್ತಷ್ಟು ಎತ್ತರದಲ್ಲಿ ನಿಮ್ಮನ್ನು ನೋಡುವ ಆಸೆ ನಮ್ಮದು. ಶುಭವಾಗಲಿ.
ReplyDeleteThis comment has been removed by the author.
ReplyDeleteಉತ್ತಮ ಸಂಸ್ಕಾರ, ಆತ್ಮೀಯತೆ, ರಾಜ್ಯದ ಅನೇಕ ಶಿಕ್ಷಕರಿಗೆ ತರಬೇತಿಯ ಜೊತೆಗೆ ಉತ್ತೇಜನ ನೀಡೀ ಶಿಕ್ಷಣ ಕ್ಷೇತ್ರದಲ್ಲಿ ಬೆಳಸುತ್ತಿರುವ ರಾಮಚಂದ್ರ ಭಟ್ ರವರ ಬಗ್ಗೆ ಉತ್ತಮ ಲೇಖನ. ಧನ್ಯವಾದಗಳು ಶ್ರೀಧರ್ ಸರ್.
ReplyDelete