ಗುರು ಪದದ ಅನ್ವರ್ಥ ಈ ಗುರುದತ್ತ ಈಗ ಶಿಕ್ಷಕ ರತ್ನ
ಮಕ್ಕಳ ಜೊತೆ ಮಕ್ಕಳಾಗಿ, ಒಳ್ಳೆಯ ಸ್ನೇಹಿತನಾಗಿ, ಅಕ್ಕರೆಯ ಅನುಕೂಲಕಾರನಾಗಿ, ಇಲಾಖೆಯ ಸಂಪನ್ಮೂಲವ್ಯಕ್ತಿಯಾಗಿ, ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಒಳ್ಳೆಯ ಮನಸ್ಸುಳ್ಳ ಶಿಕ್ಷಕನಾಗಿ ಕಾಣುವ ಆದರ್ಶವ್ಯಕ್ತಿಯ ಪರಿಚಯವೆ ಇಂದಿನ ಈ ಲೇಖನ.
ಗುರುದತ್ತರವರು 22/07/77 ರಂದು ಭದ್ರಾವತಿಯಲ್ಲಿ ಜನಿಸಿ, ದೊಡ್ಡಕಲ್ಲಸಂದ್ರ ಶಾಲೆಯನ್ನು ತನ್ನ ಕರ್ಮಭೂಮಿಯಾಗಿಸಿದ ಪಯಣ ಅತ್ಯಂತ ರೋಚಕ ಮತ್ತು ಪ್ರಶಂಸನೀಯ ಕೂಡ. ಇವರು ಇಲಾಖೆಯ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿದ ಪರಿ ಮತ್ತು ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕ ಏನೆಲ್ಲಾ ಕೆಲಸಗಳನ್ನು ಮಾಡಬಲ್ಲ ಮತ್ತು ತನ್ನ ಜ್ಞಾನವನ್ನು ಹಂಚಬಲ್ಲ ಎಂಬುದು ಅನುಕರಣೀಯ.
ಇವರು 14/2/2007 ರಂದು ಸರ್ಕಾರಿ ಸೇವೆಗೆ ಸೇರಿದರು. ಕಾಕತಾಳಿಯವೆಂಬಂತೆ ಅದು ಪ್ರೇಮಿಗಳ ದಿನ, ಅವರ ಪ್ರೇಮ ಶಾಲೆಯೊಂದಿಗೆ ಪ್ರಾರಂಭವಾದ ದಿನ.
ಅಂದಿನಿಂದ ಇಲ್ಲಿಯವರೆಗೂ ನಿರಂತರವಾಗಿ ಶಾಲೆಯ ಅಭಿವೃದ್ಧಿಗೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಈ ಪಯಣದಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. 2010 ರಲ್ಲಿ ಬ್ರಿಟನ್‌ನಿಂದ ಆಗಮಿಸಿದ ಶಿಕ್ಷಕರ ತಂಡದೊಂದಿಗೆ ನಮ್ಮ ಸರ್ಕಾರಿ ಶಾಲೆಯಲ್ಲಿ ಕಲಿಸುವ ಮಾರ್ಗೋಪಾಯಗಳ ಬಗ್ಗೆ ತಮ್ಮ ಅನುಭವವನ್ನು ಮಂಡಿಸಿ ಎಲ್ಲರ ಪ್ರೀತಿಗೆ ಪಾತ್ರರಾದರು, ಇವರು NCF-2005 ಮತ್ತು RTE-2009 ರ ರಾಜ್ಯಹಂತದ ಸಂಪನ್ಮೂಲವ್ಯಕ್ತಿಯಾಗಿ ಅನೇಕ ಶಿಕ್ಷಕರಿಗೆ ತರಬೇತಿಯನ್ನು ನೀಡಿ ಒಬ್ಬ ಉತ್ತಮ ಸಂವಹನಕಾರನಾಗಿ ಮನೆಮಾತಾದರು. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಸಾಹಿತ್ಯ ರಚನಾ ತಂಡದ ಸದಸ್ಯನಾಗಿ ಉತ್ತಮ ಸಂಪನ್ಮೂಲವ್ಯಕ್ತಿ ಎಂದು ಗುರುತಿಸಿಕೊಂಡರು. ಇವರು ಡಯಟ್ ವತಿಯಿಂದ ಆಯೋಜಿಸುವ ಅನೇಕ ಸೆಮಿನಾರ್ಗಳಲ್ಲಿ ಭಾಗವಹಿಸಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ರೇಡಿಯೋ ಕಾರ್ಯಕ್ರಮ ಕೇಳಿ-ಕಲಿಯಲ್ಲಿ ತಮ್ಮ ಶಾಲೆಯ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಭಾಗವಹಿಸಿ, ಶಾಲೆಯ ಹೆಸರು ರಾಜ್ಯಾದ್ಯಂತ ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲೆಯ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವಿಜ್ಞಾನದ ಕಿಟ್ ಮತ್ತು ಸ್ಮಾರ್ಟ್ ಕ್ಲಾಸ್ ನ್ನು 2012 ರಲ್ಲಿ ಪ್ರಾರಂಭಿಸಿ, ತಮ್ಮಶಾಲೆಯೂ ಡಿ.ಡಿ. ಚಂದನ ವಾಹಿನಿಯಲ್ಲಿ ಉತ್ತಮ ಶಾಲೆಯೆಂದು ಪರಿಗಣಿತವಾಗುವಲ್ಲಿನ ಅವರ ಶ್ರಮ, ದೊಡ್ಡಕಲ್ಲಸಂದ್ರ ಶಾಲೆಯ ಬಗ್ಗೆ documentary ತಯಾರಿಸಿ ಬಿತ್ತರಿಸಿದ್ದು ಇವರ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.
INPIRE AWARD MANAK :
ಇಲಾಖೆಯ ಉತ್ತಮ ಕಾರ್ಯಕ್ರಮಗಳಲ್ಲಿ ಒಂದಾದ inspire award ಕಾರ್ಯಕ್ರಮದಲ್ಲಿ ಗುರುದತ್ತರವರು ತಮ್ಮನ್ನು ತಾವು ತೊಡಗಿಸಿಕೊಂದಿರುವ ಪರಿ ಅನುಸರಣೀಯ. ಇವರ ಶಾಲೆಯೂ ಈ ಕಾರ್ಯಕ್ರಮದಲ್ಲಿ ಎರಡು ಬಾರಿ ರಾಜ್ಯಹಂತದಲ್ಲಿ ಭಾಗವಹಿಸಿದ್ದಾರೆ, ಇವರು ಜಿಲ್ಲಾಹಂತದಲ್ಲಿ ಹೆಚ್ಚು ನಾಮಿನೇಷನ್ ಮಾಡಿಸಲು ಅನೇಕ ವೆಬಿನಾರ್ಗಳನ್ನು ನಡೆಸಿ ಅತ್ಯಂತ ಹೆಚ್ಚು ನಾಮಿನೇಷನ್ ಮಾಡಿಸಲು ಪ್ರಯತ್ನಿಸಿರುವುದು ಇವರ ವೈಜ್ಞಾನಿಕ ಮನೋಭಾವ ಮತ್ತು ಕಾರ್ಯಪ್ರವೃತ್ತಿಯ ಪ್ರತಿಬಿಂಬವಾಗಿದೆ. ಇವರು ದೆಹಲಿಯ IIT ಯಲ್ಲಿ ನಡೆದ ರಾಷ್ಟ್ರಹಂತದ (NLEP-7) ಮಾನಕ್ ಕಾರ್ಯಕ್ರಮದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಿರುತ್ತಾರೆ. ಪ್ರತಿ ವರ್ಷ ನಡೆಯುವ FINE (Festival of innovation) ಕಾರ್ಯಕ್ರಮಕ್ಕೆ NIF (National innovation foundation) ವತಿಯಿಂದ ವಿಶೇಷ ಆಹ್ವಾನ ಪಡೆದಿರುವುದು ಇವರ ಸೇವೆಗೆ ನೀಡಿದ ಗೌರವವಾಗಿದೆ.
ಗುರುಚೇತನ ಕಾರ್ಯಕ್ರಮ;-
ಕರ್ನಾಟಕ ರಾಜ್ಯದ ವಿನೂತನ ಮತ್ತು ವಿಶೇಷ ಕಾರ್ಯಕ್ರಮವಾದ ಗುರುಚೇತನ ಕಾರ್ಯಕ್ರಮದಲ್ಲಿ ಗುರುದತ್ತರವರ ಸೇವೆ ಅವಿಸ್ಮರಣೀಯ. ಇವರು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಿದ್ದಾರೆ. ಇವರು ಸಂಚಲನ, ಸಮ್ಮಿಲನದ ಸಾಹಿತ್ಯರಚನಾ ತಂಡದ ಸದಸ್ಯರಾಗಿ ಮತ್ತು ವಿದ್ಯುತ್ ಶಕ್ತಿ ಮತ್ತು ಗಾಳಿ-ಸಮ್ಮಿಳಿತ ವಿಧಾನ ಮಾಡ್ಯೂಲ್ಗಳ ಮೆಂಟರ್ ಆಗಿ ಸಂವಹನ ನಡೆಸಿದ ಪರಿಯನ್ನು ಎಲ್ಲಾ ವಿಜ್ಞಾನ ಶಿಕ್ಷಕರು ಕೊಂಡಾಡಿದ್ದಾರೆ. ಗುರುಚೇತನಾ ಕಾರ್ಯಕ್ರಮದಲ್ಲಿ ವಿನೂತನ ಚಟುವಟಿಕೆಗಳು ಮತ್ತು ತಂತ್ರಜ್ಞಾನದ ಬಳಕೆ ವಿಶೇಷವಾಗಿ ಎಲ್ಲರಲ್ಲು ಸಂವಹನದ ಹೊಸ ದಿಕ್ಕನ್ನು ತೋರಿಸಿದೆ. ಗುರುಚೇತನಾ ಕಾರ್ಯಕ್ರಮದ ಕಲಿಕಾಸಾಮಗ್ರಿಗಳನ್ನು ತಯಾರಿಸುವಲ್ಲಿ ಮತ್ತು ಸಂಪನ್ಮೂಲವ್ಯಕ್ತಿಗಳ ಆಯ್ಕೆಯ ಪ್ರಕ್ರಿಯಲ್ಲಿ ರಾಜ್ಯದ ವಿವಿಧ ಡಯಟ್ಗಳಿಗೆ ಪ್ರವಾಸ ಮಾಡಿರುವುದು ಒಂದು ವಿಶೇಷವೇ ಆಗಿದೆ. ರಾಜ್ಯದ ವಿವಿಧ ವಿಜ್ಞಾನ ಸಂವಹನಕಾರರ ಸಹಕಾರದೊಂದಿಗೆ ಅನೇಕ ವೆಬಿನಾರ್ಗಳ ಮೂಲಕ ತಮ್ಮ ಅಗಾಧ ಜ್ಞಾನಸಂಪನ್ಮೂಲವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ ಮತ್ತು RBPT (research based pedagogical tool) ರಾಷ್ಟ್ರಹಂತದ ತರಬೇತಿಯಲ್ಲಿ ಕೂಡ ಭಾಗವಹಿಸಿದ್ದಾರೆ.
NISHTHA (National initiative for school heads and teachers holistic advancement)
ಕೋವಿಡ್-19 ರ ವಿಷಮ ಪರಿಸ್ಥಿಯಲ್ಲಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ NCERT ವತಿಯಿಂದ ಪ್ರಾರಂಭವಾದ ವಿಶೇಷ ಕಾರ್ಯಕ್ರಮ ನಿಷ್ಟಾ. ಈ ಕಾರ್ಯಕ್ರಮದ ಮೊದಲ ಮಾಡ್ಯೂಲ್ ಪಠ್ಯಕ್ರಮ ಮತ್ತು ಸಮನ್ವಯ ಶಿಕ್ಷಣವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಮತ್ತು RTTC ಮೈಸೂರಿನಲ್ಲಿ ನಡೆದ ಕೆ.ಆರ್.ಪಿ ಗಳ ತರಬೇತಿಯಲ್ಲಿ ಸಂವಹನಕಾರರಾಗಿ ಭಾಗವಹಿಸಿದ್ದಾರೆ. ಈ ಮಾಡ್ಯೂಲ್ ಅನ್ನು ಆನ್ ಲೈನ್ ಮೋಡ್ ನಲ್ಲಿ ತಂದಾಗ ಇವರು ಈ ಮಾಡ್ಯೂಲ್ ಗೆ ಸಂಬಂಧಿಸಿದ ವಿಡಿಯೋಗಳ ಮೂಲಕ ಅದರಲ್ಲೂ ಪ್ರಾಣಿಶಾಲೆ ಎಂಬ ಕಥಾ ಚಿತ್ರಣ ಎಲ್ಲರಲ್ಲು ಹೊಸ ಅಲೋಚನೆಗಳನ್ನು ಹುಟ್ಟುಹಾಕಿದೆ. ಈ ಮಾಡ್ಯೂಲ್‌ಗೆ ಸಂಬಂಧಿಸಿದಂತೆ ಅನೇಕ ವೆಬಿನಾರ್ಗಳನ್ನು ಕೂಡ ಮಾಡಿದ್ದಾರೆ. ಈ ಮಾಡ್ಯೂಲ್ ಅನ್ನು ಎಲ್ಲಾ ಪ್ರೌಢಶಾಲಾ ಶಿಕ್ಷಕರಿಗೆ ಮತ್ತು ಎಲ್ಲಾ ಅಧಿಕಾರಿಗಳಿಗೆ ತರಬೇತಿಯನ್ನು ನೀಡುವಲ್ಲಿ ಬಳಸಿಕೊಂಡಿದ್ದು ಇದರ ವಿಶೇಷತೆಯನ್ನು ಸೂಚಿಸುತ್ತದೆ.
ಮಕ್ಕಳವಾಣಿ ಕಾರ್ಯಕ್ರಮ;-
ಕೋವಿಡ್-19 ಲಾಕ್ಡೌನ್‌ನಲ್ಲಿ ಯಾವುದೇ ದೂರದರ್ಶನ ಕಾರ್ಯಕ್ರಮಗಳು ಇಲ್ಲದ ಸಂಧರ್ಭದಲ್ಲಿ ಮಕ್ಕಳನ್ನು ನಿರಂತರವಾಗಿ ಒತ್ತಡರಹಿತ ಕಲಿಕೆಯಲ್ಲಿ ಮನೋರಂಜನೆಯೊಂದಿಗೆ ತೊಡಗಿಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾರಂಭಿಸಿದ ಮಹತ್ವಾಕಾಂಕ್ಷೆಯ ಯೂ-ಟ್ಯೂಬ್ ಚಾನೆಲ್ ಮಕ್ಕಳವಾಣಿಯಲ್ಲಿ ವಿಜ್ಞಾನಿಗಳ ಕಥೆಗಾರನಾಗಿ ಮತ್ತು ಕಾರ್ಯಕ್ರಮದ ನಿರೂಪಕನಾಗಿ ಕಾರ್ಯಕ್ರಮದ ಯಶಸ್ವಿಗೆ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಲ್ಲದೆ ಒಂದು ಲಕ್ಷಕ್ಕೂ ಹೆಚ್ಚಿನ ವೀಕ್ಷಕರು ಐವತ್ತು ಸಂಚಿಕೆಗಳನ್ನು ವೀಕ್ಷಿಸಿದ್ದಾರೆ. ಇದಲ್ಲದೆ ಹತ್ತನೇ ತರಗತಿಯ ಮಕ್ಕಳ ಪರೀಕ್ಷಾ ಸಿದ್ದತೆಗೆಂದು ಪ್ರಾರಂಭವಾದ ಪರೀಕ್ಷಾವಾಣಿಯಲ್ಲಿ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು ವಿಶೇಷ. ಇಷ್ಟೇ ಅಲ್ಲದೆ ಡಿ.ಡಿ. ಚಂದನವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವೇದ ಈ ಕ್ಲಾಸ್ ಕಲಿಕಾ ಕಾರ್ಯಕ್ರಮದಲ್ಲಿ ಮತ್ತು ಆಕಾಶವಾಣಿಯ ನಲಿಯೋಣ-ಕಲಿಯೋಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಅನ್ಯ ರಾಜ್ಯ ಭೇಟಿ;-
ರಾಜ್ಯಹಂತದಿಂದ ತಮಿಳುನಾಡಿನ ಕೃಷ್ಣಗಿರಿ ಡಯಟ್ಗೆ ಭೇಟಿ ನೀಡಿದ ತಂಡದ ಸದಸ್ಯರಾಗಿ ಅಲ್ಲಿನ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಿ ಮತ್ತು ನಮ್ಮ ರಾಜ್ಯದಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಅನುಷ್ಠಾನದ ಬಗ್ಗೆ ತಮ್ಮ ಅನುಭವಗಳನ್ನು ಮಂಡಿಸಿ, DSERT ಯ ನಿರ್ದೇಶಕರಿಗೆ ಸಮಗ್ರ ವರದಿಯನ್ನು ತಯಾರಿಸಿ ನೀಡಿರುತ್ತಾರೆ. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಸಾಧನ ಮತ್ತು ಸಾಧನಾ ಪುಷ್ಟಿ ಪರಿಷ್ಕರಣ ಸಾಹಿತ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ವಿಜ್ಞಾನ ವಿಷಯದಲ್ಲಿ ನಡೆದ ಸೆಮಿನಾರ್ ಕಾರ್ಯಕ್ರಮದಲ್ಲಿ ಮರುಭೂಮೀಕರಣ ಎಂಬ ವಿಷಯದಲ್ಲಿ ಪ್ರಥಮ ಬಹುಮಾನ ಪಡೆದಿದ್ದು ಅವರ ಅಧ್ಯಯನಶೀಲತೆಯ ಸಂಕೇತವಾಗಿದೆ.
ಶಾಲೆಯ ಸರ್ವತೋಮುಖ ಬೆಳವಣಿಗೆ;-
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸರ್ವತೋಮುಖ ಬೆಳವಣಿಗೆಗಾಗಿ ಶಾಲೆಯ ಹೊಸ ಕಟ್ಟಡದಲ್ಲಿ ಕಂಪ್ಯೂಟರ್ ಲ್ಯಾಬ್, ಕಾಂಪೌಂಡ್ ಮತ್ತು ರಂಗಪಂಟಪ ಕಟ್ಟಿಸಲು, ಅನೇಕ ಸಂಘ ಸಂಸ್ಥೆಗಳಿಂದ ವಿವಿಧ ಬಗೆಯ ಸಹಕಾರ ಪಡೆದಿದ್ದಾರೆ. ನೋಟ್ ಪುಸ್ತಕ, ಬ್ಯಾಗ್ ಮತ್ತು ಜ್ಯಾಮಿತಿ ಪೆಟ್ಟಿಗೆಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಟ್ಟಿದ್ದಾರೆ. ಇಸ್ಕಾನ್, ಸಿಸ್ಕೋ ಮತ್ತು ಅದಮ್ಯಚೇತನ ಸಹಕಾರದಿಂದ ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಶಾಲಾಪ್ರಾಂಗಣವನ್ನು ಹಸಿರಾಗಿಸಿದ್ದಾರೆ. ಕೋವಿಡ್-೧೯ ರ ವಿಷಮ ಪರಿಸ್ಥಿತಿಯಲ್ಲಿ ಯಶಸ್ವಿಯಾಗಿ ಆನ್ ಲೈನ್ ತರಗತಿಗಳನ್ನು ಆಯೋಜಿಸಿದ್ದಾರೆ. ಗ್ರಂಥಾಲಯಕ್ಕಾಗಿ ಪ್ರಥಮ್ ಮತ್ತು ಅವಿರತ ಸಂಸ್ಥೆಯವರಿಂದ ಓದುವ ಮೂಲೆಯನ್ನು ಸೃಜನಾತ್ಮಕವಾಗಿ ಸೃಜಿಸಿದ್ದಾರೆ. ಶಾಲೆಯ ಶಿಕ್ಷಕನಾಗಿ ದಾಖಲಾತಿ ಆಂದೋಲನದಂತಹ ಅನೇಕ ಕಾರ್ಯಕ್ರಮಗಳಲ್ಲಿ ಮತ್ತು ಜನಗಣತಿಯ ಮೇಲ್ವಿಚಾರಕನಾಗಿ ತೊಡಗಿಸಿಕೊಂಡು ಶಾಲೆಯ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಗುರುದತ್ತರ ಈ ಎಲ್ಲಾ ಕೆಲಸಗಳನ್ನು ಪರಿಗಣಿಸಿ ಅನೇಕ ಸಂಘ ಸಂಸ್ಥೆಗಳು
ಗೌರವಿಸಿವೆ. ಇತ್ತೀಚೆಗೆ ಜ್ಞಾನದೀಪಿಕ ಸಂಸ್ಥೆಯು ಶಿಕ್ಷಕರತ್ನ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿತು. ಮಾನ್ಯ ಶಿಕ್ಷಣ ಸಚಿವರು ಗುರುದತ್ತರಿಗೆ
ಶಿಕ್ಷಕರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಗುರು ಪದಕ್ಕೆ ಅನ್ವರ್ಥವಾಗಿರುವ ಗುರುದತ್ತರ ಸೇವೆ ಸದಾ ಹೀಗೆ ಮುಂದುವರೆಯಲಿ. ರಾಜ್ಯ, ರಾಷ್ಟ್ರ
ಹೀಗೆ ಇನ್ನೂ ಹಲವು ಪ್ರಶಸ್ತಿಗೆ ಭಾಜನರಾಗಲಿ ಎಂದು ನಮ್ಮ ತಂಡದ ಸ್ನೇಹಿತ ಗುರುದತ್ತರಿಗೆ ಸವಿಜ್ಞಾನದ
ಪರವಾಗಿ ಶುಭ ಹಾರೈಸುತ್ತಾ ನನ್ನ ಲೇಖನವನ್ನು ಪರಿಸಮಾಪ್ತಿಗೊಳಿಸುತ್ತೇನೆ.
ಧನ್ಯವಾದಗಳು.
ಗೋಪಾಲ ರಾವ್ ಸಿ.ಕೆ.
ಸಹಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ತೊರಲಕ್ಕಿ.
ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ.
Wow..wow..so much of hard and good work done by Gurudath..It's truly heartening to see a dedicated teacher making a mark to the advancement of education and children's accademic growth and in large to be better individuals..Truly Inspiring 🙏🙏
ReplyDeleteVery nicely written by Gopal Rao also..
ReplyDeleteಧನ್ಯವಾದಗಳು saar
Deleteಸಿ ಕೆ ಗೋಪಾಲ್ ರಾವ್ ರವರು ಗುರುದತ್ ರವರ ಬಗ್ಗೆ ಬರೆದ ಲೇಖನ ತುಂಬಾ ಚೆನ್ನಾಗಿದೆ. ಗುರುದತ್ ರವರು ನಮ್ಮ ಆತ್ಮೀಯರಾಗಿದ್ದರೂ ಕೆಲವೊಂದು ವಿಷಯಗಳು ನಮಗೆ ತಿಳಿದಿರಲಿಲ್ಲ.ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿ ಕೊಟ್ಟ ಗೋಪಾಲ್ ಸರ್ ಅವರಿಗೆ ಧನ್ಯವಾದಗಳು. ಗುರುದತ್ ರವರು ಇದೇ ಸಾಧನ ಪಥದಲ್ಲಿ ಮುಂದುವರಿದು ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸುತ್ತೇನೆ ನಮಸ್ಕಾರ.
Deleteಅದ್ಭುತ ವ್ಯಕ್ತಿ, ಅತ್ಯದ್ಭುತ ಶಿಕ್ಷಕ, ಅದ್ವಿತೀಯ ಸಂಪನ್ಮೂಲ ವ್ಯಕ್ತಿ ಗುರುದತ್ತ ಅವರದು ಅನನ್ಯ ಸಾಧನೆ. ಅವರ ಒಡನಾಟ ಹಾಗೂ ಮಾರ್ಗದರ್ಶನ ನಮಗೆ ದೊರೆಯುತ್ತಿರುವುದು ನಮ್ಮ ಭಾಗ್ಯ.
ReplyDeleteSuper
ReplyDeletewe are all lucky person's
Congratulations sir very proud to call you my teacher
ReplyDeleteಗುರುದತ್ತ ಸರ್ ಅವರದು ಅದ್ಭುತ ಪ್ರತಿಭೆ. ನಿಮ್ಮ ಲೇಖನ ಚೆನ್ನಾಗಿ ಮೂಡಿ ಬಂದಿದೆ. ಗುರುದತ್ತ ಸರ್ ಇನ್ನೂ ಹೆಚ್ಚಿನ ಸಾಧನೆ ಮಾಡಲೆಂದು ಹಾರೈಸುತ್ತೇನೆ
ReplyDeleteಧನ್ಯವಾದಗಳು
Deleteನೋಡಲೇಬೇಕೆಂಬ ಹಂಬಲದಿಂದ ಇರುವಾಗ ನಿಷ್ಠಾ ತರಬೇತಿಯಲ್ಲಿ ಮೈಸೂರಿನಲ್ಲಿ ಇವರನ್ನು ಭೇಟಿ ಮಾಡಿದಾಗ ನನಗಾದ ಆನಂದ ಅವಿಸ್ಮರಣೀಯ. ಇವರ ಜೊತೆಗೆ ಒಡನಾಟ ಬೆಳೆಸಿದಾಗ ನನ್ನ ಚಿಂತನೆಗಳು ಇನ್ನಷ್ಟು ಉತ್ತಮವಾದುದು. ಇವರೊಬ್ಬ ಮಾನವ ಪ್ರೇಮಿ, ಸದಭಿರುಚಿಯ, ಉದಾತ್ತ ಚಿಂತಕ.ಆಗಾಗ ಇವರ ಜೊತೆಗೆ ಶೈಕ್ಷಣಿಕ ವಿಚಾರ ವಿನಿಮಯ ಮಾಡಿಕೊಳ್ಳಲು ನನಗೆ ದೊರಕಿದ್ದು ನನಗೆ ಖುಷಿಯಾಯಿತು. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.ಇವರ ಮಾರ್ಗದರ್ಶನ ಇನ್ನಷ್ಟು ಮಕ್ಕಳಿಗೆ ಮತ್ತು ನಮ್ಮಂಥ ಶಿಕ್ಷಕರಿಗೆ ದೊರೆಯಲಿ.
Deleteಪದಗಳಲ್ಲಿ ವರ್ಣಿಸಲಾಗದ ಗುರು ನಮ್ಮ ಗುರುದತ್ ರವರು . ಆದರೂ ಗೋಪಾಲ್ ರಾವ್ ರವರು ಉತ್ತಮ ಪ್ರಯತ್ನ ಮಾಡಿದ್ದಾರೆ. ಗುರುದತ್ ರವರ ಕಾರ್ಯವು ಹೀಗೆ ಮುಂದುವರಿದು ಅವರು ರಾಷ್ಟ್ರ ಮೆಚ್ಚಿದ ಶಿಕ್ಷಕರಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆಯುವ ದಿನಗಳು ದೂರವಿಲ್ಲ . ಹಾಗೆಯೇ ಗೋಪಾಲ್ ರಾವ್ ರವರು ವಿಜ್ಞಾನ ಶಿಕ್ಷಕರಾಗಿ ನಮಗೆಲ್ಲಾ ತಂತ್ರಜ್ಞಾನದ ಗುರುವಾಗಿ ಪ್ರಖ್ಯಾತರಾದವರು ಲೇಖನ ಬರವಣಿಗೆಯಲ್ಲೂ ಉತ್ತಮ ಛಾಪನ್ನು ಮೂಡಿಸಿರುವುದು ಎಲ್ಲರಿಗೂ ಅನುಕರಣೀಯ. ಇವರಿಬ್ಬರೂ ನನ್ನ ಆತ್ಮೀಯ ಸ್ನೇಹಿತರೆಂಬುದೇ ಶಿಕ್ಷಣ ಕ್ಷೇತ್ರದಲ್ಲಿ ನನ್ನನ್ನು ಗೌರವದಿಂದ ಕಾಣಲು ಕಾರಣವಾಗಿದೆ . ಧನ್ಯವಾದಗಳು
ReplyDeleteಕೆಲವೊಂದು ಮಾಹಿತಿಯನ್ನು ನೀವೂ ನೀಡಿರುತ್ತೀರಿ
Deleteತಮಗೂ ಧನ್ಯವಾದಗಳು ಸರ್
ಲೇಖನ ತುಂಬಾ ಉತ್ತಮವಾಗಿ ಮೂಡಿಬಂದಿದೆ ಲೇಖನಕ್ಕಾಗಿ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು ಶ್ರೀ ಗುರುದತ್ತ ಅವರ ಅವರ ಸಾಧನೆ ಅದ್ಭುತವಾಗಿದೆ.
ReplyDeleteಧನ್ಯವಾದಗಳು
DeleteProud of you Guru.You truly deserve this..Keep doing all the good work you are doing..Wish you a great years ahead and wish you all success..
ReplyDeleteSuper sir
ReplyDeleteಕೆಲವು ವರ್ಷಗಳ ಹಿಂದೆ ಗುರುದತ್ ಸರ್ ಸಂಪನ್ಮೂಲ ವ್ಯಕ್ತಿ ಆಗಿದ್ದ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಅವರು ತಾನು ಹೇಳುವ ವಿಚಾರಗಳ ಬಗ್ಗೆ ಅದೆಷ್ಟು ಪ್ಯಾಶನೇಟ್ ಆಗಿ ಮಾತನಾಡುತ್ತಿದ್ದಾರೆಂದರೆ ಅವರ ಬಗ್ಗೆ ಹೆಮ್ಮೆ ಮೂಡುತ್ತಿತ್ತು. ತಾನು ವಿವರಿಸುತ್ತಿದ್ದ ವಿಷಯ ಶಿಕ್ಷಕರಿಗೆ ಅರ್ಥವಾಗಲೇಬೇಕು ಮತ್ತು ಅದನ್ನು ಅವರು ಶಾಲೆಯಲ್ಲಿ implementಮಾಡಲೇಬೇಕು ಹಾಗಿತ್ತು ಅವರು ವಿಷಯವನ್ನು ವಿವರಿಸುತ್ತಿದ್ದ ರೀತಿ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿದಾಗಲೂ ಅದೇ ಪ್ರೀತಿಯಿಂದ ಮಾತನಾಡಿ ಅನುಮಾನ ಬಗೆಹರಿಸುತ್ತಿದ್ದರು. ಯಾವುದೇ ಜವಾಬ್ದಾರಿ ಕೈಗೆತ್ತಿಕೊಂಡರೂ ತಮ್ಮ ಛಾಪು ಮೂಡಿಸಿಬಿಡುತ್ತಾರೆ. ಇಷ್ಟೆಲ್ಲಾ ದೊಡ್ಡ ಹೆಸರು ಮಾಡಿದರೂ ಕೂಡ ಹಮ್ಮು ಬಿಮ್ಮು ತಮ್ಮ ಬಳಿ ನುಸುಳಲೂ ಅವಕಾಶ ಕೊಟ್ಟಿಲ್ಲ. ವೃತ್ತಿ ಜೀವನದಲ್ಲಿ ಮತ್ತಷ್ಟು ಎತ್ತರಕ್ಕೇರಿ ಲಕ್ಷಾಂತರ ಜೀವನಗಳಿಗೆ ಬೆಳಕಾಗಿ ಎಂದು ಹಾರೈಸುತ್ತೇನೆ.ಇಂತಹ ಉತ್ತಮ ವ್ಯಕ್ತಿಯ ಬಗ್ಗೆ ಲೇಖನ ಬರೆದಿದ್ದಕ್ಕಾಗಿ ಕಂಪ್ಯೂಟರ್ ಮಾಹಿತಿ ಕಣಜ ಗೂಗಲ್ ಗೋಪಾಲ್ ಸರ್ ನಿಮಗೆ ಅಭಿನಂದನೆಗಳು. ಸವಿಜ್ಞಾನದ ಎಲ್ಲ ಬಂಧುಗಳಿಗೂ ವಂದನೆಗಳು.
ReplyDeleteSuper achievement sir. Congrats
ReplyDeleteWe are very proud to have a great person with us. Congratulations guru sir. Continue your work like this.
ReplyDeleteಗುರುದತ್ತ ಸರ್ ಅವರ ಸಾಧನೆಗಳನ್ನು ಪರಿಚಯಿಸುವುದರ ಜೊತೆಗೆ ತಮ್ಮ ಬರವಣಿಗೆಯ ಸೊಬಗನ್ನು ಪರಿಚಯಿಸಿರುವ ಗೋಪಾಲ ರಾವ್ ಸರ್ ಅವರಿಗೆ ಅಭಿನಂದನೆಗಳು.
ReplyDeleteಧನ್ಯವಾದಗಳು
DeleteCongratulations sir, proud to tell that you are my friend, keep growing
ReplyDeleteFull of knowledge with resource teacher,mankind and friendly nature,lot of patience to help other teachers valuable award given to him.God bless ever
ReplyDeleteCongratulations Sir
ReplyDeleteA testament to the achievements of Gurudatta. It's no surprise for those who see his growth and follow him in the last decade. He deserves many more accolades. Wishing you always the very best.
ReplyDeletecongrts sir je
ReplyDeleteಗುರುದತ್ತ ಸರ್ ಅವರ ಸಾಧನೆಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಿಕ್ಕರೆ, ಪ್ರಶಸ್ತಿಯ ಮೌಲ್ಯವೆ ಹೆಚ್ಚುತ್ತದೆ.
ReplyDeleteಮೇರು ವ್ಯಕ್ತಿತ್ವ ಹಾಗೂ ಗುರು ಎಂಬ ಪದಕ್ಕೆ ಅತ್ಯಂತ ಅರ್ಥಪೂರ್ಣ ಸಮಾನಾರ್ಥಕ ವ್ಯಕ್ತಿ ಹೆಚ್ಚಿನ ಯಶಸ್ಸು, ಸಾಧನೆ ನಿಮ್ಮದಾಗಲಿ ನಿಮ್ಮ ದಾರಿ ಹೀಗೆಯೇ ಸಾಗಲಿ.
ReplyDeleteಅದ್ಭುತ ಲೇಖನ ಗೋಪಾಲರಾವ್ ಸರ್.
ಅವರ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕವಳು. ಆದರೆ ಗುರುದತ್ ಸರ್ ಅವರ ವಿದ್ಯಾರ್ಥಿನಿ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಆಗುತ್ತಿದೆ.ಸರ್ ಅವರನ್ನು ಜ್ಞಾನ ಮತ್ತು ವಿವೇಕದ ಸಂಕೇತ ಹೇಳಬಹುದು.ಅವರು ಪಾಠ ಮಾಡುವ ರೀತಿ ಅಷ್ಟೇ ಅಲ್ಲ ಲೋಕ ಜ್ಞಾನ, ಸಾಮಾನ್ಯ ಜ್ಞಾನ ತಿಳಿಸಿ ಕೊಡುವ ರೀತಿ ಅತ್ಯದ್ಭತವಾಗಿ.ನಾನು ಕಂಡ ಶಿಕ್ಷಕರಲ್ಲಿ ಅತ್ಯುತ್ತಮ ಶಿಕ್ಷಕರು. ನೀವು ನನ್ನ ಶಿಕ್ಷಕರಾಗಿದ್ದು ನಿಜಕ್ಕೂ ನನ್ನ ಸೌಭಗ್ಯವೇ ಸರಿ.ನೀವು ಹೇಳಿಕೊಟ್ಟ ಎಲ್ಲ ಒಳ್ಳೆಯ ಅಭ್ಯಾಸಗಳನ್ನು ನಾನು ಜೀವನ ಪರಿಯಂತ ಮರಿಯುವುದಿಲ್ಲ.ಹಾಗೆ ತಿಳಿದೋ ತಿಳಿಯದೆಯೋ ನನ್ನಿಂದ ಏನಾದರು ತಪ್ಪಾಗಿದ್ದಲ್ಲಿ ಕ್ಷಮಿಸಿ ಸರ್ ��very kind hearted person n humble person n wonderful human being ☺️ thank you so much sir��for being a very wonderful teacher.
ReplyDeleteಧನ್ಯವಾದಗಳು ಸರ್
ReplyDeleteಅಭಿನಂದನೆಗಳು ಸರ್, ಸದಾ ನಗು ನಗುತ್ತಾ ಕಲಿಸುವ ಬಗೆ, ಇನ್ನೊಬ್ಬರಿಗೆ ಅದನ್ನು ಕಲಿಸುವ ರೀತಿ ಹೀಗೇ ಮುಂದುವರೆಯುತ್ತಿರಲಿ. ಹಾಗೇ ನಿಮ್ಮ ಜೀವನದಲ್ಲಿ ಸದಾ ಸಂತೋಷವೇ ತುಂಬಿರಲಿ. ಶಿಕ್ಷಕರತ್ನ ನಿಮಗೊಂದು ಗರಿಯಾಗಿ ಇನ್ನೂ ಅನೇಕ ಗರಿಗಳು ನಿಮ್ಮ ಸಾಧನೆಗೆ ಬರಲಿ.
ReplyDeleteReally great sir knows so many subjects but sir several times gave suggestions for me
ReplyDeleteGurudath sir is one of my the best teacher..well knowledged and cultured teacher..
ReplyDeleteVery happy to be your student sir!!
ReplyDeleteGreat article sir! Thanks for sharing all the milestones that Guru sir has crossed as he is hesitant to share his achievements with people around him.
ReplyDeleteI wish him more and more success stories add to his bag pack.
He has added a lot of value to our education system through his creativity resulting in developing capable resources to our society. His contribution in transforming the new generation mindset for new India is invaluable 🙏
ನಾನು ಶಿಕ್ಷಕನ್ನಲ್ಲದ್ದಿದ್ದರೂ ಸಹ ಇವರೊಂದಗಿನ ಒಡನಾಟ ಇವರತ್ತ ನನ್ನನ್ನು ಸದಾ ಸೆಳೆಯುತ್ತಿರುತ್ತದೆ ಕಾರಣ ಇವರೊಬ್ಬ ಸ್ನೇಹಜೀವಿ. ಇವರು ನೋಡಲು ಎಷ್ಟು ಎತ್ತರವಾಗಿದ್ದರೋ ಅಷ್ಟೇ ಎತ್ತರವಾಗಿದೆ ಇವರ ಜ್ಞಾನ ಭಂಡಾರ ಮತ್ತು ವ್ಯಕ್ತಿತ್ವ. ಇವರು ಶಿಕ್ಷಣಕ್ಕೆ ಮಾತ್ರವಲ್ಲ ಸಮಾಜಕ್ಕೂ ಅತ್ಯಂತ ಅವಶ್ಯಕ ವ್ಯಕ್ತಿಯೆಂದರೆ ತಪ್ಪಾಗಲಾರದು. ಯಾರೇ ತೊಂದರೆಯಲ್ಲಿದ್ದರೂ ತಮ್ಮ ಸಮಯವನ್ನು ಲೆಕ್ಕಿಸದೆ ಓಡಿ ಬರುವ ಪರೋಪಕಾರಿ.ಇವರ ಬಗ್ಗೆ ಎಷ್ಟು ಹೇಳಿದರೂ ಅದು ಕಡಿಮೆಯೇ. ಇವರಿಗೆ ದೇವರು ಹೆಚ್ಚಿನ ಆಯಸ್ಸು ಮತ್ತು ಆರೋಗ್ಯವನ್ನು ನೀಡಿ ಇನ್ನೂ ಅನೇಕ ಶ್ಯಕ್ಷಣಿಕ ಕಾರ್ಯಕ್ರಮಗಳನ್ನು ಮತ್ತು ಸಾಮಾಜಿಕ ಕೆಲಸಗಳನ್ನು ಮಾಡುವಂತಗಲಿ ಎಂದು ಹಾರೈಸುತ್ತೇನೆ. ರಮೇಶ್ (ಸರಸ್ವತಿ)
ReplyDeleteGood article sir, very proud of you Guru. Wishing you to get awards both from state & central government as Best teacher. God bless you
ReplyDeleteತುಂಬಾ ಖುಷಿಯಾಯ್ತು ಲೇಖನ ಓದಿ, ಆತ್ಮೀಯವಾದ ಬರಹ, ಗುರುದತ್ತರ ಸಾಧನೆ ಅನುಕರಣೀಯ. ಗುಣಗಳ ಗಣಿ ಗುರುದತ್. " ಬೆಳೆಯಿರಿ ಬೆಳೆಸಿರಿ " ತತ್ವದಲ್ಲಿ ಉತ್ತಮ ಕೆಲಸ ಮಾಡುತ್ತಿರುವಿರಿ. ನಾಡಿಗೆ ನೀವೊಂದು ನಿಧಿ.
ReplyDeleteಶುಭವಾಗಲಿ.
ಅತ್ಯುತ್ತಮವಾಗಿ ನಮ್ಮ ಶಾಲೆಯ ಗುರುಗಳ ಯಶೋಗಾಥೆಯನ್ನು ವರ್ಣಿಸಿದ್ದಾರೆ ಇವರಿಗೆ ಹೃದಯಪೂರ್ವಕ ಧನ್ಯವಾದಗಳು
ReplyDeleteಧನ್ಯವಾದಗಳು ಸರ್
DeleteVery nice article. Thanks for putting this together Gopal sir.
ReplyDeleteAmazing to know more about you Guru sir. Blessed to be associated with you. Teachers like you are much needed in today's education system.
Thank You Very Much Madam
Deleteಈ ಲೇಖನದ ಶೀರ್ಷಿಕೆ ತುಂಬಾ ಉತ್ತಮವಾಗಿದೆ.
ReplyDelete(ಸವಿಜ್ಞಾನ)ಸಕ್ಕರೆ ಸವಿ ವಿತರಿಸುವಸಂತೆ ಜ್ಞಾನವನ್ನು ಮತ್ತು ಜ್ಞಾನದ ದೀಪದ ಬೆಳಕನ್ನು ಶಿಕ್ಷಣ ಇಲಾಖೆಯಲ್ಲಿ ಎಲ್ಲಾ ಕಡೆ ಹರಡುವಂತೆ, (ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ಶಾಲೆಯಲ್ಲಿ ಶಿಕ್ಷಕನಾಗಿ)ಗುರುದತ್ತ ಸರ್ ಯಶೋಗಾಥೆಯನ್ನು ವರ್ಣಿಸಿ ಅತ್ಯುತ್ತಮವಾದ ಲೇಖನ ಬರೆದಿರುವ ಶ್ರೀಯುತ ಗೋಪಾಲ ರಾವ್ ಸರ್ ಅವರಿಗೆ ನಮ್ಮ ಶಾಲೆಯ ಶಿಕ್ಷಕರ ಮತ್ತು ಮಕ್ಕಳ ಪರವಾಗಿ ಹೃದಯ ಪೂರ್ವಕವಾದ ಧನ್ಯವಾದಗಳು
ಧನ್ಯವಾದಗಳು ಸರ್
Deleteಗುರು ಅವರ ಪ್ರತಿ ಔನ್ಸಿನಲ್ಲೂ ಮನುಷ್ಯ ಕಾಳಜಿ ಮತ್ತು ಪ್ರೀತಿ ಇದೆ. ಅವರ ಪ್ರೀತಿಗೆ, ಮಾನವೀಯ ಸ್ಪಂದನೆಗೆ ಪಾತ್ರನಾಗಿರುವುದು ಖುಷಿ.
ReplyDeleteAll the best sir
ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕ ಇಷ್ಟೊಂದು ಸಾಧನೆಯನ್ನು ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ.ಇವರೊಬ್ಬ ಉತ್ತಮ ವಾಗ್ಮಿ ಮತ್ತು ಜ್ಞಾನ ಪಸರಿಸುವ ವ್ಯಕ್ತಿಯಾಗಿದ್ದಾರೆ.
ReplyDeleteಗೋಪಾಲ್ ರಾವ್ ಸರ್ ಅಭಿನಂದನೆಗಳು. ಉತ್ತಮ ಪ್ರತಿಭಾವತರನ್ನು ಅಷ್ಟೇ ಉತ್ತಮವಾಗಿ ಪರಿಚಯಿಸಿದ್ದೀರ. ಗುರುದತ್ ಸರ್ ಅವರ ಅಪಾರ ಜ್ಞಾನ, ಸೃಜನಶೀಲ ಚಿಂತನೆ, ಬದ್ಧತೆ, ಶೈಕ್ಷಣಿಕ ಕಾಳಜಿ, ಸರಳತೆ ಎಲ್ಲವೂ ಅನುಕರಣೀಯ.ಎಲ್ಲವೂ ಇದ್ದು ಏನೂ ಇಲ್ಲದಂತೆ ಇರುವ ಅವರ ಸರಳತೆ ಎಲ್ಲೆರಿಗೂ ಮಾದರಿ ಸರ್
ReplyDeleteರವೀಂದ್ರ ಸರ್, ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್
Deleteಸರಳ ಜೀವನ ಉತ್ತಮ ಚಿಂತನೆಯನ್ನು ಮಾಡುವಂತಹ ವ್ಯಕ್ತಿ ಗುರುದತ್ತ ಸರ್ ಇವರ ಬಗ್ಗೆ ವಾಸ್ತವ ಚಿತ್ರಣವನ್ನು ಚಿತ್ರಿಸಿದ ಗೋಪಾಲ್ ರಾವ್ ಸರ್ ರವರಿಗೆ ಧನ್ಯವಾದಗಳು.
ReplyDeleteಧನ್ಯವಾದಗಳು ಸರ್
Deleteಸರಳ ಜೀವನ ಉತ್ತಮ ಚಿಂತನೆ ಎನ್ನುವ ಮಹಾತ್ಮ ಗಾಂಧೀಜಿಯವರ ಚಿಂತನೆಯಂತೆ ಗುರುದತ್ತ ಸರ್ ಸಹ ಸರಳ ಜೀವನ ಉತ್ತಮ ಚಿಂತನೆಯನ್ನು ನಡೆಸುವಂತಹ ಒಬ್ಬ ವ್ಯಕ್ತಿ ಇವರ ಬಗ್ಗೆ ವಾಸ್ತವ ಚಿತ್ರಣವನ್ನು ನೀಡಿದಂತಹ ಗೋಪಾಲ್ ರಾವ್ ಸರ್ ಅವರಿಗೆ ಧನ್ಯವಾದಗಳು.
ReplyDeleteಧನ್ಯವಾದಗಳು ಸರ್
Deleteಸರಳ ಜೀವನ ಶೈಲಿ.
ReplyDeleteಅತ್ಯುತ್ತಮ ಚಿಂತನೆ.
ನಿಮ್ಮಂತಹ ಸೃಜನಶೀಲ ವ್ಯಕ್ತಿ ನಮ್ಮ ಸ್ನೇಹಿತರಾಗಿವುದು ನಮ್ಮ ಹೆಮ್ಮೆ.
Gurudutt sir ನಿಮಗೆ ನೀವೇ ಸಾಟಿ ನಿಮ್ಮ ಸಾಧನೆ ಹೀಗೆ ಮುಂದುವರಿಯಲಿ ನಿಮ್ಮ ಜ್ಞಾನ ಧಾರೆ ಇಡೀ ರಾಷ್ಟ್ರಕ್ಕೆ ಮಾದರಿಯಾಗಿ ಮೂಡಿಬರಲಿ
ReplyDeleteಗುರುದತ್ತ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಓದಿ ತಿಳಿದು ಬಹಳ ಹೆಮ್ಮೆಯಾಗಿದೆ . ಆ ಭಗವಂತನ ಆಶೀರ್ವಾದದಿಂದ ಅವರು ಇದೇ ರೀತಿ ಯಶಸ್ಸಿನ ಮೆಟ್ಟಲನ್ನು ಏರಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾಗಿ ಆಗಲಿ ಎಂದು ಹಾರೈಸುತ್ತೇನೆ .
ReplyDeleteಗುರುದತ್ತರ ಎಲ್ಲಾ ಸಾಧನೆಗಳನ್ನು ಲೇಖನದಲ್ಲಿ ಬಹು ಅಚ್ಚುಕಟ್ಟಾಗಿ ಸಾದರ ಪಡಿಸಿರುವ ಶ್ರೀಯುತ ಗೋಪಾಲ್ ರಾವ್ ರವರಿಗೆ ತುಂಬಾ
ಧನ್ಯವಾದಗಳು.
ಧನ್ಯವಾದಗಳು ಸರ್
Delete👍🙏 very apt and you are a true 'Guru'-Shashidhara SG
ReplyDeleteಗುರುದತ್ತ ಸರ್ ನೀವು ನಮಗೆ inspiration,ನೀವು ಜ್ಞಾನದ ಕಣಜ ಅಂದರೆ ತಪ್ಪಾಗಲಾರದು,ನೀವು ನಮ್ಮ ಇಲಾಖೆಯಲ್ಲಿರುವ ಒಂದು ರತ್ನ.ನಿಮಗೆ ಶಿಕ್ಷಕ ರತ್ನ ಪ್ರಶಸ್ತಿ ಸಿಕ್ಕಿರುವುದರಿಂದ ಆ ಪ್ರಶಸ್ತಿಯ ಬೆಲೆ ಇನ್ನೂ ಹೆಚ್ಚಾಗಿದೆ ಅಂತ ಹೇಳಬಹುದು. ಲೇಖನ ಅತ್ಯುತ್ತಮವಾಗಿ ಮೂಡಿಬಂದಿದೆ.
ReplyDeleteVery happy to learn about Sri Gurudatt sir. It is his very true passion and interest in igniting young minds to encouraging them to learn by experience.
ReplyDeleteIt is our good fortune of US to have search a dynamic teacher amidst us.
I wish him good health and cheers in all his endeavours.
ಗುರುವನ್ನೇ ದತ್ತುವಾಗಿ ಪಡೆದುಕೊಂಡಂತಿರುವ ಗುರುದತ್ತ ಸರ್ ರವರ ಜ್ಞಾನ ವಿಶಾಲತೆಯ ಕುರಿತು ಬರೆದ ಲೇಖನ ಉತ್ತಮವಾಗಿದೆ. ಅವರ ಎಲ್ಲರೂ ಕಲಿಯೋಣ ಎಲ್ಲರೂ ಬೆಳೆಯೋಣ ಎನ್ನುವ ಗುಣ ಅವರನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ. ಅವರಿಂದ ಶಿಕ್ಷಣ ಇಲಾಖೆಗೆ ಇನ್ನೂ ಹೆಚ್ಚಿನ ಪ್ರಯೋಜನ ಆಗಲಿ ಎನ್ನುವ ಮಹದಾಸೆ ನಮ್ಮದು
ReplyDelete"ಗುರು" ಅವರ ಕುರಿತ "googleಗುರು" ಅವರ ಲೇಖನ ಉತ್ತಮವಾಗಿ ಮೂಡಿ ಬಂದಿದೆ, ನಿಮ್ಮ ಮಾತುಗಳಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ, ಗುರು ಅವರು ಹೆಸರಿಂದಷ್ಟೇ ಅಲ್ಲ ಆಚರಣೆಯಲ್ಲಿ ಅನೇಕರಿಗೆ ಮಾದರಿ ಗುರುವೇ ಆಗಿದ್ದಾರೆ. ಲೇಖನಕ್ಕಾಗಿ ಧನ್ಯವಾದಗಳು.
ReplyDeleteಧನ್ಯವಾದಗಳು ಸರ್
DeleteVery nice to see article on you sir.and your work speaks about you. 🙏🙏🙏
ReplyDeleteನನಗೆ ಗುರು ಸರ್ ಪರಿಚಯ ಆಗಿದ್ದು ಮಕ್ಕಳವಾಣಿ ಕಾರ್ಯಕ್ರಮದ ಮೂಲಕ.
ReplyDelete"ಬನ್ನಿ ಸಾರ್ ಮಾಡನ" - ಇದು ಅವ್ರ standard dialogue. ಏನಾದ್ರೂ idea suggest ಮಾಡಿದ್ರೆ ಅವ್ರ ಬಾಯಲ್ಲಿ ಬರ್ತಾ ಇದ್ದಿದ್ದು ಮೊದಲು ಇದು. ಅಥವಾ ಅವರಿಗೆ ಮುಂಚೆನೆ ಅದರ ಬಗ್ಗೆ ಅನುಭವ/ ಮಾಹಿತಿ ಇದ್ರೆ, "ಬೇಡ ಸಾರ್" ಅಂತಾನೂ ಅಷ್ಟೇ ನೇರವಾಗಿ, ಕಾರಣ ಕೊಟ್ಟು ಹೇಳ್ತಿದ್ರು. ಆದ್ರೂ ಒಂದು suggestionನ pros and cons ಚರ್ಚೆ ಮಾಡಿ ಮಾಡಬೇಕೋ ಬೇಡವೋ ಅನ್ನೋ ನಿರ್ಧಾರ ತಗೋತಾ ಇದ್ವಿ. ಇನ್ನೊಬ್ರ ಮಾತನ್ನ, viewsನ ಕೇಳಿಸಿಕೊಳ್ಳುವ, ಅಕಸ್ಮಾತ್ difference of opinion ಇದ್ದರೂ ಅದನ್ನ ಗೌರವಿಸಿ, ಎಲ್ಲರ ಜೊತೆ ಹೊಂದಿಕೊಂಡು ಕೆಲಸ ಮಾಡುವ ಗುಣ ಇವರದ್ದು. ಈಗ ಸುಮಾರು 2 ವರ್ಷ ಆಗಿದೆ ಅವರ ಪರಿಚಯ ಆಗಿ, ಆದ್ರೆ ಒಂದೇ ಒಂದ್ ದಿನ ಕೂಡ ಅವ್ರ energy level ಕಮ್ಮಿ ಆಗಿದ್ದಾಗಲಿ ಅಥವಾ attitudeನಲ್ಲಿ ಬದಲಾವಣೆ ಆಗಲಿ ನಾನು ಕಂಡಿಲ್ಲ.
ನನಗೆ ಇಷ್ಟ ಆದ ಅವ್ರ ಇನ್ನೊಂದು ಗುಣ ಅಂದ್ರೆ ಯಾವುದೇ ರೀತಿಯ sugar-coating ಇಲ್ದೇ ಮಾತಾಡೋದು. ಇದು ಉಪಯೋಗ ಆಗುತ್ತೆ, ಇದು ಆಗಲ್ಲ. ಇದರ ಅವಶ್ಯಕತೆ ಇದೆ/ ಇಲ್ಲ. ನನಗೆ ಇದು ಸರಿ ಅನಿಸ್ತಾ ಇಲ್ಲ, ಯೋಚನೆ ಮಾಡಿ ನೋಡಿ... ಹೀಗೆ clear ಆಗಿ ಹೇಳ್ತಾರೆ.
ಅವಿರತ ಪ್ರತಿಷ್ಠಾನದ ಮೂಲಕ ಅವರ ಶಾಲೆಗೆ ಹೋದಾಗ ನಾನು ಮತ್ತು ನಮ್ಮ ತಂಡ ಇವರ ಕಾರ್ಯವೈಖರಿ, ಮತ್ತೆ ಇವರು ಶಾಲೇಲಿ ಪ್ರತಿಯೊಬ್ಬರ ಜೊತೆ ನಡೆದುಕೊಳ್ತಾ ಇದ್ದ ರೀತಿ, ಅವರೆಲ್ಲ ಇವರಿಗೆ ತೋರಿಸ್ತಾ ಇದ್ದ ಪ್ರೀತಿ, ಗೌರವ ನಮಗೆಲ್ಲ ಇಂಥಾ ಶಾಲೆ ಜೊತೆ ನಾವು ಕೈ ಜೋಡಿಸಿದ್ದು ಒಳ್ಳೇದಾಯ್ತು, ಇನ್ನಷ್ಟು ಕೆಲಸಗಳನ್ನ ಮಾಡಬೇಕು ಅನ್ನಿಸಿತ್ತು. ಇವತ್ತು ನಾನು ಈ articleನ ನಮ್ಮ ಗುಂಪಲ್ಲಿ share ಮಾಡಿದಾಗ ನನಗೆ ಬಂದ ಮೊದಲ ಪ್ರತಿಕ್ರಿಯೆ "Thanks for the opportunity to interact with him".
ಥ್ಯಾಂಕ್ಸ್ ಗೋಪಾಲ್ ಸರ್ ಇವರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ.
ಗಕಾರೋ ಆಂಧಕಾರಸ್ಯಾತ್ ರಕಾರೋ ತನ್ನಿರೋಧಕ:/
ReplyDeleteಅಂಧಕಾರ ನಿರೋಧತ್ತ್ವಾತ್ ಗುರುರತ್ಯಭಿದೀಯತೇ //
ಗುರು ಎಂದು ನಾಮಾಂಕಿತರಾದ ನೀವು ಗುರು ಶಬ್ದಕ್ಕೆ ಸಾರ್ಥಕತೆಯನ್ನು ನೀಡಿದ್ದಾರೆ. ಶುಭಂ ಭೂಯಾತ್. ಇನ್ನೂ ಎತ್ತರಕ್ಕೆ ಬೆಳೆಯುವ ಶಕ್ತಿಯನ್ನು ಭಗವಂತ ನೀಡಲಿ. ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಭಗವಂತ ಆಯುರಾರೋಗ್ಯ ನೀಡಿ ತಮ್ಮ ಜ್ಞಾನಜ್ಯೋತಿಯನ್ನ್ನು ಬೆಳೆಸಲಿ , ಎಂದು ಹಾರೈಸುತ್ತೇನೆ. ಸನ್ಮಿತ್ರ.
ಗುರುದತ್ sir ನಮ್ಮ ಹೆಮ್ಮೆ. ನಾನು ಅವರ ವಿದ್ಯಾರ್ಥಿ ಅಂತ ಹೆಲ್ಕೊಳೋಕೆ ಹೆಮ್ಮೆ ಆಗುತ್ತೆ
ReplyDelete