ಬೊಂಬೆಯಾಟದ ಮೂಲಕ ವಿಜ್ಞಾನ ಕಲಿಕೆ
ಸಿದ್ದು ಬಿರಾದಾರ, ವಿಜ್ಞಾನ ಶಿಕ್ಷಕ
ಸರಕಾರಿ ಪ್ರೌಢ ಶಾಲೆ ಚಿಬ್ಬಲಗೇರಿ
ತಾ: ಹಳಿಯಾಳ, ಶಿರಿಸಿ ಶೈಕ್ಷಣಿಕ ಜಿಲ್ಲೆ
ಉತ್ತರ ಕನ್ನಡ
ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿರುವ ಪ್ರತಿಯೊಂದು ಮಗು, ತನ್ನ ತರಗತಿಯ ವಿಷಯಗಳನ್ನು ಅರ್ಥೈಸಿಕೊಳ್ಳಬೇಕಾದರೆ, ಕ್ರಮಬದ್ಧವಾದ ಅಧ್ಯಯನ ಹಾಗೂ ಸೂಕ್ತ ಮಾರ್ಗದರ್ಶನ ಅತಿ ಅವಶ್ಯಕ. ಮಕ್ಕಳು ತಮ್ಮ ಪರಿಸರದಲ್ಲಿ ನಡೆಯುವ ವಿವಿಧ ಬದಲಾವಣೆಗಳನ್ನು ಗುರುತಿಸುತ್ತಾರೆ. ಅವರು ವಾತಾವರಣದಲ್ಲಿ ಆಗುವ ವೈವಿಧ್ಯಮಯ ಬದಲಾವಣೆಗಳನ್ನು ಅರಿಯುವ ಅದಮ್ಯ ಕುತೂಹಲಿಗಳಾಗಿರುತ್ತಾರೆ. ಪ್ರಕೃತಿಯಲ್ಲಿನ ಆಗು ಹೋಗುಗಳು ಏಕೆ? ಏನು? ಹೇಗೆ? ಎಲ್ಲಿ? ಯಾವಾಗ? ಮುಂತಾದ ನೂರಾರು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರವನ್ನು ತಿಳಿದುಕೊಳ್ಳುವ ಸಹಜ ಹಂಬಲ ಅವರದು.
ಮಗುವಿನ ಮನದಾಳದಲ್ಲಿ ಹುಟ್ಟಿದ ಅಂಥ
ನೂರಾರು ಪ್ರಶ್ನೆಗಳಿಗೆ ವಿಜ್ಞಾನ ತೃಪ್ತಿಕರ ಉತ್ತರ ನೀಡಬಲ್ಲದು. ಆದ್ದರಿಂದಲೇ, ಮಕ್ಕಳು ಪರಿಸರ ಅಧ್ಯಯನ ಮತ್ತು ವಿಜ್ಞಾನ ವಿಷಯದ ಚಟುವಟಿಕೆಗಳಲ್ಲಿ
ಹೆಚ್ಚು ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ವಿಜ್ಞಾನ ವಿಷಯದಲ್ಲಿನ ಪ್ರಯೋಗಗಳು, ಚಿತ್ರಗಳು, ಪ್ರಾತ್ಯಕ್ಷಿಕೆಗಳು, ಮಾದರಿಗಳು, ಮತ್ತು ಚಟುವಟಿಕಾ
ಯೋಜನೆಗಳು ಅವರ ಕ್ರಿಯಾಶೀಲತೆಯನ್ನು ಹೆಚ್ಚಿಸುವುದಕ್ಕೆ ಪೂರಕವಾಗಿವೆ. ಈ ರೀತಿಯ
ಚಟುವಟಿಕೆಗಳು ಅವರ ಬೌದ್ಧಿಕ ಮಟ್ಟವನ್ನು ವಿಕಸಿಸುವುದರೊಂದಿಗೆ, ಅವರಲ್ಲಿ ಪರಿಸರ ಪ್ರಜ್ಞೆ ಹಾಗೂ ಸುಪ್ತವಾಗಿರುವ ಸಂಶೋಧನಾತ್ಮಕ ಮತ್ತು
ವೈಜ್ಞಾನಿಕ ಮನೋಭಾವಕ್ಕೆ ದಾರಿ ಮಾಡಿಕೊಡುತ್ತದೆ.
ಆ ನಿಟ್ಟಿನಲ್ಲಿ, ವಿಜ್ಞಾನ ಬೋಧಿಸುವ ಪ್ರತಿಯೊಬ್ಬ ಶಿಕ್ಷಕರು ತಮ್ಮದೇ ಆದ ವಿಶಿಷ್ಟ
ಬೋಧನಾ ಶೈಲಿಯ ಮೂಲಕ ವಿಜ್ಞಾನ ವಿಷಯವನ್ನು ಮಕ್ಕಳ
ಮನಸ್ಸಿಗೆ ತಲುಪಿಸಲು, ತಮ್ಮದೇ ಆದ
ವೈವಿಧ್ಯಮಯ ತಂತ್ರಗಳನ್ನು ಮತ್ತು ಬೋಧನಾ ಪದ್ಧತಿಗಳನ್ನು
ಅಳವಡಿಸಿಕೊಂಡಿರುವುದು ಅಪೇಕ್ಷಣೀಯ. ಅವರ ಅನುಭವಗಳ ಆಧಾರದ ಮೇಲೆ ಮಕ್ಕಳಿಗೆ ತಮ್ಮ
ಜ್ಞಾನದ ಭಂಡಾರವನ್ನು ತಲುಪಿಸಿ, ಅವರಲ್ಲಿ ಅಡಗಿರುವ
ಸುಪ್ತ ಶಕ್ತಿಯನ್ನು ಹೊರಗೆಳೆಯಲು ಪರಿಶ್ರಮ ಪಡುತ್ತಿದ್ದಾರೆ.
ಕಳೆದ ಇಪ್ಪತೊಂದು ವರ್ಷಗಳಿಂದ ವಿಜ್ಞಾನ
ವಿಷಯದ ಶಿಕ್ಷಕನಾಗಿ ಸೇವೆಯನ್ನು ಸಲ್ಲಿಸುತ್ತಿರುವ ನಾನು, ಮಕ್ಕಳಿಗೆ ವಿಜ್ಞಾನವನ್ನು ಅರ್ಥೈಸಲು ಮತ್ತು ಅವರಲ್ಲಿನ ಸುಪ್ತ ಶಕ್ತಿಯನ್ನು
ಅನಾವರಣಗೊಳಿಸಲು ಹಲವಾರು ನೂತನ ಬೋಧನಾ ಮಾರ್ಗಗಗಳನ್ನು ಹುಡುಕಿದ್ದೇನೆ ಮತ್ತು
ಅನುಸರಿಸುತ್ತಿದ್ದೇನೆ. ಅದರಲ್ಲಿ, ವಿಶೇಷವಾಗಿ, ಗೊಂಬೆಯಾಟ ನನಗೆ
ಆಪ್ಯಾಯಮಾನ ಮತ್ತು ಆಕರ್ಷಣೀಯವೆನಿಸಿದೆ. ಈ ಮೂಲಕ ವಿಜ್ಞಾನದ ಪರಿಕಲ್ಪನೆಗಳನ್ನು ಕಲಿಸುತ್ತ
ಬಂದಿದ್ದೇನೆ. ಅವರಲ್ಲಿರುವ ವಿಶೇಷ ಕೌಶಲ್ಯವನ್ನು ವ್ಯಕ್ತಪಡಿಸಲು ಇದು ಒಂದು ಸುಲಭ ಮಾರ್ಗ ಎಂದು
ಕಂಡುಕೊಂಡಿದ್ದೇನೆ. ಪರಿಣಾಮಕಾರಿಯಾದ ಮತ್ತು ಗುಣಾತ್ಮಕ
ಕಲಿಕೆಗೆ ಗೊಂಬೆಗಳು ತುಂಬಾ ಸಹಾಯಕವಾಗಿವೆ ಎಂಬುದು ನನ್ನ ದೃಢ ಅನುಭವ.
ಮಕ್ಕಳು ಸಾಮಾನ್ಯವಾಗಿ ಗೊಂಬೆಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಗೊಂಬೆಗಳೊಂದಿಗೆ ಅವರು ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾರೆ. ಹೀಗಾಗಿ, ಈ ವಿಧಾನವು ಮಕ್ಕಳ ಅವಧಾನವನ್ನು ಕೇಂದ್ರೀಕರಿಸಲು ಮತ್ತು ಅವರ ಅಭಿವ್ಯಕ್ತಿಯನ್ನು ಪ್ರಕಟಪಡಿಸಲು ಸಹಾಯಕಾಗಿದೆ. ಈ ಕಾರಣಕ್ಕಾಗಿ ಅವರಿಗೆ ಗೊಂಬೆಯಾಟದ ಚಟುವಟಿಕೆಗಳ ಮೂಲಕ ವಿಜ್ಞಾನದ ಕೆಲವು ಪಾಠಗಳನ್ನು ಬೋಧಿಸಲು ಪ್ರಯತ್ನಿಸಿದ್ದೇನೆ. ಆ ಪ್ರಯತ್ನವು ಮಗುವಿನ ಸರ್ವಾಂಗೀಣ ಬೆಳವಣಿಗೆಗ ಪೂರಕವಾಗಿದೆ ಮತ್ತು ಬರಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಎಲ್ಲ ಉದ್ದೇಶಗಳನ್ನು ಕೂಡಾ ಈ ವಿಧಾನದ ಮೂಲಕ ಈಡೇರಿಸಲು ಸಾಧ್ಯವಾಗಿದೆ ಎಂಬುದು ನನ್ನ ನಂಬಿಕೆ.
ವಿಜ್ಞಾನ ಬೋಧನೆಯಲ್ಲಿ ಗೊಂಬೆಯಾಟವು
ಪ್ರಸ್ತುತ ಅಲ್ಲ ಎನಿಸಿದರೂ, ಅದರ ನೋಟ ವಿಜ್ಞಾನದ
ಕಡೆ ತಿರುಗುತ್ತದೆ. ಗೊಂಬೆಯಾಟದ
ಪ್ರತಿಯೊಂದು ಹಂತದಲ್ಲಿ ವೈಜ್ಞಾನಿಕ
ತತ್ವಗಳು ಅಡಗಿವೆ. ಗೊಂಬೆಗಳ ರಚನಾಕ್ರಮದಲ್ಲಿ, ಸಾಹಿತ್ಯರಚನೆಯಲ್ಲಿ, ಅವುಗಳ ವರ್ಣಾಲಂಕಾರಗಳಲ್ಲಿ, ವೇಷಭೂಷಣಗಳಲ್ಲಿ, ಸಲಾಕೆ- ಸೂತ್ರಗಳ ಬಳಕೆಯಲ್ಲಿ. ಗೊಂಬೆಗಳ ಚಲನೆ, ಭಂಗಿ,
ಬೆಳಕು, ಧ್ವನಿ ಮತ್ತು
ವಾಧ್ಯಗಳ ಬಳಕೆ, ಹೀಗೆ ಬಹುುತೇಕ ಎಲ್ಲಾ ಹಂತಗಳಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ಗೊಂಬೆಗಳನ್ನು ಬಳಸಿಕೊಂಡು
ವಿಜ್ಞಾನ ಬೋಧಿಸುವುದರಿಂದ ಪರಿಣಾಮಕಾರಿಯಾದ ಕಲಿಕೆಯಾಗಿರುವುದನ್ನು ಮತ್ತು ಶೈಕ್ಷಣಿಕ ಉದ್ದೇಶಗಳು
ಈಡೇರಿರುವುದನ್ನು ನಾನು ಕಂಡುಕೊಂಡಿದ್ದೇನೆ.
ಕಳೆದ ಹತ್ತು ವರ್ಷದಿಂದ ಈ ಮಾರ್ಗದಲ್ಲಿ
ವಿಜ್ಞಾನ ವಿಷಯದ ಪಾಠ ಬೋಧನೆ ನನಗೆ ಹೆಚ್ಚು ಸುಲಭ ಎನಿಸಿದೆ. ಪ್ರತಿ ವರ್ಷ ಎಸ್‍ಎಸ್‍ಎಲ್‍ಸಿ
ಪರೀಕ್ಷೆಯಲ್ಲಿ ಅತ್ಯತ್ತಮ ಫಲಿತಾಂಶ ಕಾಣುತ್ತಿದ್ದೇನೆ.
ಕಳೆದ ಏಳೆಂಟು ವರ್ಷಗಳಲ್ಲಿ ಬಂದಿರುವ ಫಲಿತಾಂಶ ನನಗೆ ತೃಪ್ತಿಯನ್ನು ತಂದಿದೆ. ಜೊತೆಗೆ, ಪ್ರತಿ ವರ್ಷ ಪಿಯುಸಿಯಲ್ಲಿ ವಿಜ್ಞಾನ ವಿಷಯದ ಆಯ್ಕೆ ಮಾಡಿಕೊಳ್ಳುವ
ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ, ಇತರೆ ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕøತಿ, ಪರಂಪರೆಯ ಕುರಿತಾದ
ಅಭಿರುಚಿ ಹೆಚ್ಚುತ್ತಿದೆ. ಮಕ್ಕಳಲ್ಲಿ ಉತ್ತಮ ಚಾರಿತ್ರ್ಯ ನಿರ್ಮಾಣ ಮತ್ತು ಒಳ್ಳೆಯ
ಮೌಲ್ಯಗಳನ್ನು ಬೆಳೆಸುವಲ್ಲಿ ಮತ್ತು ಅವರ ವ್ಯಕ್ತಿತ್ವ ವಿಕಸನದಲ್ಲಿ ಗೊಂಬೆಯಾಟವು
ಸಹಾಯಕವಾಗಿದೆ. ವಿದ್ಯಾರ್ಥಿಗಳನ್ನು ರಾಜ್ಯ, ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ
ಪ್ರೇರೇಪಿಸಿದೆ. ರಾಜ್ಯದ ವಿಜ್ಞಾನ ಶಿಕ್ಷಕರು ಈ ನಿಟ್ಟಿನಲ್ಲಿ ತಾವೂ ಯೋಚಿಸಬಹುದು ಎಂಬ
ಅಭಿಪ್ರಾಯ ನನ್ನದು. ನನ್ನ ಗೀಳು -ಆಸಕ್ತಿಯನ್ನು ನಿಮಗೂ ವರ್ಗಾಯಿಸುವ ಹಂಬಲ ನನ್ನದು !!!
ಗೊಂಬೆಯಾಟದ ಇತಿಹಾಸ
ನಮ್ಮ ಜನಪದ ಕಲೆಗಳು ಹುಟ್ಟಿದ್ದು
ಜನಸಾಮಾನ್ಯರ ಅಂಗಳದಲ್ಲಿ. ಅವರು ಅಕ್ಷರ ಕಲಿತವರಲ್ಲ. ವಿಶ್ವವಿದ್ಯಾಲಯವನ್ನು ಕಂಡವರಲ್ಲ. ಆದರೆ, ಅವರ ಜ್ಞಾನ ಮಾತ್ರ
ಅಪಾರವಾದದ್ದು. ಅವರ ಕಲೆಯಲ್ಲಿ ವೈಜ್ಞಾನಿಕ ತತ್ವ ಮತ್ತು ನಿಯಮಗಳು ಹಾಸು ಹೊಕ್ಕಾಗಿದೆ. ಅವರೆಲ್ಲ
ಬಡವ ಬಲ್ಲಿದರೆಂಬ ತಾರತಮ್ಯವಿಲ್ಲದೇ, ಜಾತಿ ಮತಗಳ ಬೇಧs ಭಾವಗಳಿಲ್ಲದೇ, ಶಾಸ್ತ್ರೀಯ ಕಟ್ಟು ಕಟ್ಟಳೆಗಳಿಲ್ಲದೇ ಬದುಕಿ, ಕಲೆಯನ್ನು ಬೆಳೆಸಿದವರು. ಅಂಥ ಅನೇಕ ಜನಪದ
ಕಲೆಗಳಲ್ಲಿ ಗೊಂಬೆಯಾಟವೂ ಒಂದಾಗಿದೆ. ನಾಟಕ ಮತ್ತು ರಂಗಭೂಮಿಯ ಉಗಮ ಮತ್ತು ವಿಕಾಸದ ಕುರಿತು
ಮಾತನಾಡುವ ಪ್ರತಿಯೊಬ್ಬ ವಿಮರ್ಶಕನೂ ಗೊಂಬೆಯಾಟದ ಕಡೆ ಗಮನ ಹರಿಸುತ್ತಾನೆ. ಗೊಂಬೆಯಾಟವು ಯಾವುದೇ
ವಯಸ್ಸಿನ ಪರಿಮಿತಿ ಇಲ್ಲದೇ ಎಲ್ಲರನ್ನು ಆಕರ್ಷಿಸುವ ಒಂದು ವಿಶಿಷ್ಟ ಕಲೆಯಾಗಿದೆ.
ಭಾರತೀಯ ಸಂಸ್ಕøತಿಯಲ್ಲಿ ಗೊಂಬೆಗಳಿಗೆ
ಸುಧೀರ್ಗ ಇತಿಹಾಸವಿದೆ. ನಾಗರೀಕತೆಯ ಪ್ರಾರಂಭದ ಕಾಲದಿಂದಲೂ ಗೊಂಬೆಗಳ ಬಳಕೆ ಇತ್ತು ಎಂಬುದನ್ನು
ನೋಡುತ್ತೇವೆ. ಪ್ರಾರಂಭದಲ್ಲಿ ಗೊಂಬೆಗಳು ಮಕ್ಕಳ ಮನರಂಜನೆಯ ಆಟಿಕೆಯ ವಸ್ತುಗಳಾಗಿದ್ದವು. ಪ್ರಕೃತಿಯ
ಆರಾಧಕಾರಾದ ಭಾರತೀಯರು ಗೊಂಬೆಗಳನ್ನು ದೇವಿಯ ವಿಗ್ರಹಗಳ ಪ್ರತಿರೂಪವಾಗಿ ಆರಾಧಿಸುತ್ತಾ ಬಳಕೆಗೆ
ತಂದರು. ವೇದಗಳ ಕಾಲದಲ್ಲಿ, ರಾಮಾಯಣ ಮತ್ತು ಮಹಾಭಾರತ, ಪುರಾಣ ಶಾಸ್ತ್ರಗಳಲ್ಲೂ ಕೂಡಾ
ಗೊಂಬೆಗಳ ಬಳಕೆಯನ್ನು ಗಮನಿಸುತ್ತೇವೆ. ಇಂದು
ಒಂದು ಕಲಾಪ್ರಕಾರವಾಗಿ ಬೊಂಬೆಗಳನ್ನು ಪ್ರದರ್ಶಿಸುವುದನ್ನು ನೋಢುತ್ತಿದ್ದೇವೆ. ಆರಂಭದಲ್ಲಿ
ದೇವತೆಗಳ ಪಾತ್ರಗಳನ್ನು ಮನುಷ್ಯರು ಮಾಡದೇ ಗೊಂಬೆಗಳನ್ನು ಬಳಸಿದ ಉಲ್ಲೇಖವನ್ನು ಗಮನಿಸಿದ್ದೇವೆ.
ಅಂಗ್ಲ ಭಾಷೆಯ puppet ಶಬ್ದವು, ಸಂಸ್ಕೃತದಲ್ಲಿ ಬಳಕೆಯಲ್ಲಿರುವ `ಪುತ್ರಿಕಾ `ದುಹಿತರಿಕಾ` ‘ಪುತ್ತಳಿ’ `ಪುತ್ತಲಿಕಾ’ ಈ ಎಲ್ಲ ಪದಗಳು. `ಕಿರಿಮಗಳು/ಕಿರಿಯ ಪುತ್ರಿ’ (Little Daughter)
ಎಂಬ ಅರ್ಥ ಸೂಚಿಸುವ ಪದಗಳಾಗಿವೆ. ಸಂಸ್ಕøತದಲ್ಲಿ ಗೊಂಬೆಯಾಟಕ್ಕೆ `ಪುತ್ತಲಿ ಕ್ರೀಡೆ’ ಎಂದು ಕರೆಯಲಾಗಿದೆ. `ಪುತ್ತಲಿಕ ಅಥವಾ ಪುತ್ತಿಕ' ಎಂದರೆ ಜೀವ ಇರುವ ಬಾಲಕ. ಈ ಪದ ಬಳಕೆ ಮಹಾಭಾರತ
ಕಾವ್ಯದಲ್ಲಿ ಬರುವ ಚಿತ್ರಾಂಗದ-ಅರ್ಜುನ ಪ್ರಸಂಗದಲ್ಲಿ ಉಲ್ಲೇಖವಾಗಿದೆ. ಬಾಣಭಟ್ಟನ
‘ಕಾದಂಬರಿ’ಯಲ್ಲಿ `ಪಾಂಚಾಲಿ’ ಎಂಬ ಪದ
ಬಳಕೆಯಾಗಿದ್ದು ಈ ಪದವೂ ಗೊಂಬೆಯನ್ನು ಕುರಿತಾಗಿ ಹೇಳಲಾಗಿದೆ ಎನ್ನುವ ಅಭಿಪ್ರಾಯವಿದೆ.
ಗೊಂಬೆ ಆಟವನ್ನು ಆಡಲು ನಿರ್ದಿಷ್ಟ
ಶುಭದಿನ,
ಶುಭ ಘಳಿಗೆ, ಶುಭ ತಿಥಿಯೇ
ಆಗಿರಬೇಕೆಂದೇನೂ ಇಲ್ಲ. ನೋಡಬೇಕೆಂಬ ಆಸೆ ಉಂಟಾದಾಗ ಕೆಲವರು ಸೇರಿಕೊಂಡು ಗೊಂಬೆ ಆಟದವರನ್ನು
ಕರೆಸಿ ಊರಿನ ಬಯಲಿನಲ್ಲಿ ಪ್ರದರ್ಶನ ಏರ್ಪಡಿಸುತ್ತಾರೆ. ಕೆಲವು ವಿಶೇಷ ಹಬ್ಬ ಹುಣ್ಣಿಮೆಗಳಲ್ಲಿಯೂ
ಆಟ ಆಡಿಸುತ್ತಾರೆ. ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಯಾವೂದೇ ಹಬ್ಬ ಅಥವಾ ಜಾತ್ರೆಯಂಥ ವಿಶೇಷ
ಕಾರ್ಯಕ್ರಮಗಳಲ್ಲಿ ಗೊಂಬೆಯಾಟದ ಪ್ರದರ್ಶನವಿಲ್ಲದೆ, ಅದು ಪೂರ್ಣಗೊಳ್ಳುತ್ತಿರಲಿಲ್ಲ. ಇಷ್ಟೊಂದು
ಜನಪ್ರಿಯತೆಯನ್ನು ಗಳಿಸಿಕೊಂಡ ಗೊಂಬೆಯಾಟ ಇಂದು ಅವಸಾನದ ಅಂಚಿನಲ್ಲಿದ್ದರೂ ಕೆಲವು ಆಸಕ್ತರಿಂದಾಗಿ
ತನ್ನ ಅಸ್ತಿತ್ವ ಉಳಿಸಿಕೊಂಡುಬಂದಿದೆ.
ಭಾರತದಲ್ಲಿ ಗೊಂಬೆಯಾಟ ಪ್ರಾರಂಭದಿಂದಲೂ
ಪ್ರಧಾನವಾಗಿ ಜನಪದ ಕಥೆಗಳನ್ನು ಹಾಗೂ ರಾಮಾಯಣ, ಮಹಾಭಾರತ, ಪುರಾಣ ಮತ್ತು ಭಾಗವತದ ಕಥೆಗಳನ್ನೇ
ಪ್ರಮುಖವಾಗಿ ಆಧರಿಸಿ ಒಂದೇ ಜಾಡಿನಲ್ಲಿ ಬೆಳೆದು ಬಂದಿದೆ. ರಾಜಸ್ಥಾನದ “ಕಟಪುತಲಿ”, ಪಶ್ಚಿಮ ಬಂಗಾಳದ “ಪುತಲಾ ನಾಚ್”, ಆಂಧ್ರ ಪ್ರದೇಶದ “ಬೊಂಬಲಾಟಂ” ಕರ್ನಾಟಕದ “ಸೂತ್ರದ ಗೊಂಬೆಯಾಟ” ಮತ್ತು “ತೊಗಲು ಗೊಂಬೆಯಾಟಗಳು
ಬಹಳ ಹಿಂದಿನಿಂದಲೂ ಅತ್ಯಂತ ಹೆಚ್ಚಿನ ಮನ್ನಣೆಯ ಸ್ಥಾನವನ್ನು ಪಡೆದುಕೊಂಡಿವೆÉ. ಕರ್ನಾಟಕದ
ಗೊಂಬೆಯಾಟದಲ್ಲಿ ಅನೇಕ ಪ್ರಕಾರಗಳಿವೆ, ಅವುಗಳಲ್ಲಿ ಕೆಲವ
ಹೀಗಿವೆ :
• ಸೂತ್ರದಗೊಂಬೆಯಾಟ,
• ತೊಗಲುಗೊಂಬೆಯಾಟ.
• ಕೈಗವುಸು ಗೊಂಬೆಯಾಟ,
• ಸಲಾಕೆ ಗೊಂಬೆಯಾಟ.
• ಕೀಲು ಗೊಂಬೆಯಾಟ
• ಮುಖವಾಡ ಗೊಂಬೆಯಾಟ
• ಬೆರಳು ಗೊಂಬೆಯಾಟ
• ಗಾರುಡಿ ಗೊಂಬೆಯಾಟ,
• ನೆರಳು ಗೊಂಬೆಯಾಟ
• ಕೈ ಮುಸುಕಿನ ಗೊಂಬೆಯಾಟ
• ಪ್ರತಿಕೃತಿ ಗೊಂಬೆಯಾಟ
ಇವುಗಳಲ್ಲಿ ಕೆಲವು ಪ್ರಕಾರದ
ಗೊಂಬೆಯಾಟಗಳು ಕಣ್ಮರೆಯಾಗಿವೆ. ಕೆಲವು ಬದಲಾವಣೆಗಳನ್ನು ಕಂಡಿವೆ, ಇನ್ನುಳಿದುವು ಆಧುನಿಕತೆಗೆ ಒಳಪಟ್ಟಿವೆ. ಇದರಲ್ಲಿ ಕೆಲವು
ಪ್ರಕಾರಕ್ಕೆ ಸಂಬಂಧಿಸಿದ ಗೊಂಬೆಗಳನ್ನು ಸುಲಭವಾಗಿ ತಯಾರಿಸಿ, ತರಗತಿಯ ಕೊಠಡಿಯಲ್ಲಿ ವಿಜ್ಞಾನ ಬೋಧಿಸಲು ಪ್ರಯತ್ನಿಸಿದ್ದೇನೆ. ಇನ್ನೂ ಕೆಲವೊಂದಿಷ್ಟು
ಗೊಂಬೆಗಳನ್ನು ಮಕ್ಕಳೇ ತಯಾರಿಸಿ ಅವರೇ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದ್ದೇನೆ. ಕೆಲವು ಗೊಂಬೆಗಳನ್ನು ಪರಿಣಿತರಿಂದ ತಯಾರಿಸಿಕೊಂಡಿದ್ದೇನೆ.
ನನ್ನ ಈ ಪ್ರಯತ್ನಗಳಿಗೆ, ನಾನು ಕಲಿಕೆಯಲ್ಲಿ
ಹಿಂದುಳಿದ ಮಕ್ಕಳನ್ನೇ ಹೆಚ್ಚಾಗಿ ಆಯ್ಕೆಮಾಡಿಕೊಳ್ಳುತ್ತೇನೆ. ಅಂಥ ವಿದ್ಯಾರ್ಥಿಗಳ ಕ್ರಿಯಾಶೀಲತೆ ಮತ್ತು ಅವರು
ಆಸಕ್ತಿಯಿಂದ ಭಾಗವಹಿಸುವ ಗುಣ ನನಗೆ ತುಂಬಾ ಇಷ್ಟವಾಗಿದೆ. ಮಕ್ಕಳಿಂದಲೇ ನಾನು ಕಲಿತಿರುವುದು
ಬಹಳಷ್ಟಿದೆ. ಗೊಂಬೆಯಾಟದ ಮೂಲಕ ಬೋಧನೆಯ ಈ
ಪಯಣದಲ್ಲಿ ನಾನು ಪಡೆದುಕೊಂಡಿರುವ ಅನುಭವ ಮತ್ತು ಶಾಲೆಯಲ್ಲಿ ತಯಾರಿಸಿದ ಕೆಲವು ಗೊಂಬೆಗಳ
ಪ್ರಕಾರಗಳನ್ನು ತಿಳಿದುಕೊಳ್ಳುವ ಉತ್ಸಾಹದಲ್ಲಿದ್ದೀರಲ್ವಾ? ಮುಂದಿನ ಲೇಖನಗಳಲ್ಲಿ ಈ ಎಲ್ಲ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಸಿದ್ದು ಬಿರಾದಾರ್ ಸರ್. ನಿಮ್ಮ ಪರಿಶ್ರಮ ಪ್ರಶಂಸನೀಯ. ಹೊಸಮಾರ್ಗ ಅನುಕರಣೀಯ. ಬೊಂಬೆ ರಚನೆ ಜೊತೆಗೆ. ಯಾವ ಕಲಿಕಾಂಶಗಳಿಗೆ ಹೇಗೆ ಬೊಂಬೆಯಾಟ ಬಳಸುತ್ತಿದ್ದೀರ ತಿಳಿಸಿದರೆ ತುಂಬಾ ಉಪಯೋಗವಾಗುತ್ತದೆ. ನಿರೀಕ್ಷೆಯಲ್ಲಿದ್ದೇವೆ.
ReplyDeleteOk sir ನಿಮ್ಮ ಮಾರ್ಗದರ್ಶನದಲ್ಲಿ ಪ್ರಯತ್ನ ಮಾಡ್ತೇನೆ ನಿಮ್ಮನ್ನು ಸಂಪರ್ಕಿಸುತ್ತೇವೆ. ನನ್ನ ಮೊಬೈಲ್ ನಂ 9480268131 ಇದಕ್ಕೆ ನಿಮ್ಮ ಮೋಬೈಲ್ ನಂಬರ್ ಕಳಿಸಿ
DeleteSiddu Sir, hatsoff to your commitment and dedication. I have seen some of your shows and everytime I see new theme, concept and message. As you have mentioned, truly your shows kindle the thoughts in all age group. Artists like you should be recognised and supported for your selfless service in taking forward these creative art to the generations to come.
ReplyDeletetq sir
DeleteSuper sir. Our motto is to bring scientific attitude in children. If this is achieved by puppets it is super. I am very impressed by this article sir.
ReplyDeleteThank you sir.
Narasimha Prasad S
GHS, Magadipalya cross,
Kunigal taluk.
Tq Sir
Deleteನೈಸ್ .ಯೂ ಆರ್ ಸೋ ಟಾಲೆಂಟೆಡ್
ReplyDeleteಸರ್, ತಾವು ನಿಜವಾಗಿ ಆಧರಣೀಯ ಹಾಗು ಅನುಕರಣೀಯ.
ReplyDeleteತಮಗೆ ಧನ್ಯವಾದಗಳು.
Tq
DeleteWell Done Sir...!! Appreciate your creativity towards science..!! Keep going..
ReplyDeleteYes Sir tqv
Deleteಸರ್ ಗೊಂಬೆಯಾಟದ ಮೂಲಕ ವಿಜ್ಞಾನ ಕಲಿಕೆ ಈ ಚಟುವಟಿಕೆಯನ್ನು ನೀವು ಹೇಗೆ ನಿರ್ವಹಿಸುತ್ತಿದ್ದೀರಿ? ಗೊಂಬೆಗಳ ತಯಾರಿಕೆಯ ಬಗ್ಗೆ ನಿಮ್ಮ ಮಾರ್ಗದರ್ಶನದ ಅವಶ್ಯಕತೆ ನಮಗೆ ಇದೆ. ದಯವಿಟ್ಟು ತಿಳಿಸಿ ಕೊಡಿ ಸರ್
ReplyDeleteಪ್ರಯತ್ನಿಸುತ್ತೇನೆ sir
DeleteCan I get his contact details?
ReplyDeleteHats off to your creativity sir. Students will understand the concepts clearly and they will enjoy learning.
ReplyDeleteYe mdm tq
DeleteI proud of you to choose different method to teach science sir.good luck.
ReplyDeleteTq u Sir
ReplyDelete