ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, November 4, 2021

ಪುಸ್ತಕ ಪರಿಚಯ - ಕಲಿಕೆಗೊಂದು ಕೈಪಿಡಿ

ಪುಸ್ತಕ ಪರಿಚಯ 

ಕಲಿಕೆಗೊಂದು ಕೈಪಿಡಿ

ರಾಮಚಂದ್ರ ಭಟ್‌ ಬಿ.ಜಿ.

ನಾಡಿನ ಖ್ಯಾತ ಶಿಕ್ಷಣ ತಜ್ಞರಾದ ಡಾ.ಟಿ.ಎ.ಬಾಲಕೃಷ್ಣ ಅಡಿಗರ ಕಲಿಕೆಗೊಂದು ಕೈಪಿಡಿ ಎಂಬ ಕಿರುಹೊತ್ತಗೆಯನ್ನು ಪರಿಚಯಿಸಲು ಸಂತೋಷವಾಗುತ್ತದೆ. ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಜನಪ್ರಿಯ ಅಂಕಣಬರಹಗಳು ಜ್ಞಾನದೀಪಿಕಾ ಎಜ್ಯುಕೇಷನ್ಟ್ರಸ್ಟ್ನ ಪರಿಶ್ರಮದಿಂದ ಪುಸ್ತಕರೂಪಕ್ಕೆ ಬಂದಿವೆ. ಆಯಾ ಸಂದರ್ಭಗಳಿಗೆ ತಕ್ಕಂತೆ ಶೈಕ್ಷಣಿಕ ದೃಷ್ಟಿಯಿಂದ ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ಬರೆದ ಈ ಲೇಖನಗಳು  ಶಿಕ್ಷಕರು ಹಾಗೂ ಪೋಷಕರಿಗೂ ಮಾರ್ಗದರ್ಶಿಯಾಗಿವೆ. ಅಷ್ಟೇ ಅಲ್ಲದೆ ಶೈಕ್ಷಣಿಕ ಅಧ್ಯಯನಾಸಕ್ತರ ಒಳಗಣ್ಣನ್ನೂ ಪ್ರಚೋದಿಸುವಂತಿವೆ.

ಆರು ಸುಂದರ ಶೀರ್ಷಿಕೆಯಡಿಯಲ್ಲಿ ಒಟ್ಟು 19 ಬಿಡಿ ಲೇಖನಗಳಿವೆ. ಒಂದೊಂದು ಲೇಖನಗಳನ್ನು ಓದುತ್ತ ಹೋದಂತೆ ನಮ್ಮ ಶೈಕ್ಷಣಿಕ ಬದುಕಿನ ಹಾಸುಹೊಕ್ಕಾಗಿರುವ  ಅನೇಕ ಅಂಶಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. NCF-2005, NEP-2020ರ ಅನೇಕ ಮೌಲಿಕ ಚಿಂತನೆಗಳು ಇಲ್ಲಿನ ಲೇಖನಗಳಲ್ಲಿ ಅಲ್ಲಲ್ಲಿ ಇಣುಕಿಣುಕಿ ಚಿಂತನೆಗೆ ಎಡೆ ಮಾಡಿಕೊಡುತ್ತವೆ.

ಕಲಿಯುವುದನ್ನು ಕಲಿಯಿರಿಎನ್ನುವ ಶೀರ್ಷಿಕೆಯಡಿಯಲ್ಲಿ 5 ಲೇಖನಗಳಿದ್ದು ಕಲಿಕೆಯಲ್ಲಿ ವೀಕ್ಷಣೆ, ಅವಲೋಕನಗಳ ಮಹತ್ವ ಒತ್ತಡರಹಿತ ವಾತಾವರಣದ ಪ್ರಾಮುಖ್ಯತೆ, ಪ್ರಾಯೋಗಿಕ ಅನುಭವಗಳ ಮೂಲಕ ಕಲಿಕೆಯನ್ನು ಕಟ್ಟಿಕೊಳ್ಳುವುದಕ್ಕೆ ಸಂಬಂಧಿಸಿವೆ.  

ಎರಡನೇ ಭಾಗವು ಓದು ಮತ್ತು ರಜೆಗೆ ಸಂಬಂಧಿಸಿದಂತೆ ನಾಲ್ಕು ಲೇಖನಗಳನ್ನು ಒಳಗೊಂಡಿದೆ. ಇಲ್ಲಿ ರಜೆಯಲ್ಲಿ ಮಾಡಬಹುದಾದ ರಚನಾತ್ಮಕ ಕಾರ್ಯಗಳನ್ನು ವಿವರಿಸಲಾಗಿದೆ.

ಮೂರನೇ ಭಾಗದ ಶಿಕ್ಷಕರೇ ನಿಮ್ಮ ಆಪ್ತ ಸಮಾಲೋಚಕರು ಶೀರ್ಷಿಕೆಯಡಿ ಎರಡು ಲೇಖನಗಳಿವೆ. ಇಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಣ ಬಾಂಧವ್ಯವನ್ನು ವೃದ್ಧಿಗೊಳಿಸುವ ಕುರಿತ ಮಾಹಿತಿ ಇದೆ.   4ನೇ ಭಾಗದಲ್ಲಿರುವ ಪರೀಕ್ಷೆ ಫಲಿತಾಂಶ ಶೀರ್ಷಿಕೆಯಡಿ 4 ಲೇಖನಗಳಿವೆ. ಪರೀಕ್ಷೆಗಳು ಶೈಕ್ಷಣಿಕ ಬದುಕಿನ ಅವಿಭಾಜ್ಯ ಅಂಗಗಳಾಗಿವೆ ನಾವು Marksವಾದಿಗಳು ಆಗುತ್ತಿರುವ ಸಂದರ್ಭದಲ್ಲಿ ಪರೀಕ್ಷೆಯೆಂಬ ಅಗ್ನಿದಿವ್ಯವನ್ನು ಎದುರಿಸಲು ಬೇಕಾದ ಪರೀಕ್ಷಾ-ಸಿದ್ಧತೆ, ಸಮಯದ ಸದುಪಯೋಗ, ಸುಲಭ ಅಂಕಗಳಿಕೆಗೆ ಅಷ್ಟ ಸೂತ್ರಗಳು ಹಾಗೂ ಫಲಿತಾಂಶದ ಕುರಿತು ಸಮಚಿತ್ತದ ಸ್ಪಂದನೆಗಳು ಹಾಗೂ ಇಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರವನ್ನು ಕುರಿತಂತೆ  ಇಲ್ಲಿ ಚರ್ಚಿಸಲಾಗಿದೆ.

ಐದನೆಯ ಭಾಗ ಪೋಷಕರ ಪಾತ್ರ ಹಿರಿದು! ” ಶೀರ್ಷಿಕೆಯಡಿ ಎರಡು ಲೇಖನಗಳಿವೆ.  ಪೋಷಕರು ಸಮಚಿತ್ತದಿಂದ ಇದ್ದರೆ ತಮ್ಮ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಸುಲಭ. ಶಿಕ್ಷಕರಾಗಿ ಪೋಷಕರಾದ ನಮಗೆ ಇಲ್ಲಿರುವ ಲೇಖನಗಳು ಮಗುವಿನ ಅಭಿವೃದ್ಧಿಯ ಹಲವಾರು ಮಗ್ಗುಲುಗಳನ್ನು ಪರಿಚಯಿಸುತ್ತವೆ. ತಮ್ಮ ಮಕ್ಕಳನ್ನು ಇತರರ ಜೊತೆ ಹೋಲಿಸಿ ಮಾತನಾಡುವುದು ಸರ್ವೇಸಾಮಾನ್ಯ. ಈ  ಅಂಟುಜಾಡ್ಯ ನಮ್ಮ ತರಗತಿಗಳನ್ನೂ ಬಿಟ್ಟಿಲ್ಲ. ಈ ಹಿನ್ನಲೆಯಲ್ಲಿ ಒಂದಷ್ಟು ಕಿವಿಮಾತುಗಳನ್ನು ಹೇಳುವ ಲೇಖನವಿದೆ.

ವೃತ್ತಿ ಮಾರ್ಗದರ್ಶನ ಶೀರ್ಷಿಕೆಯಡಿ ವೃತ್ತಿ ಶಿಕ್ಷಣದಲ್ಲಿರುವ ವೈವಿಧ್ಯಮಯ ಆಯ್ಕೆಗಳು, ಪದವಿಪೂರ್ವ ಶಿಕ್ಷಣದ ನಂತರದ ಆಯ್ಕೆಗಳನ್ನು ಕುರಿತ ಎರಡು ಲೇಖನಗಳಿವೆ.

ಆಕರ್ಷಕ ಮುಖಪುಟ ಗುಣಮಟ್ಟದ ಮುದ್ರಣದೊಂದಿಗೆ ಜ್ಞಾನದೀಪಿಕಾ ಸಂಸ್ಥೆ ಹೊರತಂದಿರುವ ಈ ಕೃತಿಗೆ ಖ್ಯಾತ ಶಿಕ್ಷಣ ತಜ್ಞ ಡಾ. ಎಚ್.ಎಸ್.ಗಣೇಶ ಭಟ್ಟರು ಮುನ್ನುಡಿ ಬರೆದಿದ್ದಾರೆ. ಕಲಿಕೆಗೆ ಸಂಬಂಧಿಸಿದ ಹಲವು ಮಜಲುಗಳನ್ನು ಪರಿಚಯಿಸುವ ಈ ಹೊತ್ತಗೆಯು ಪ್ರತಿ ಶಾಲೆಯ ಗ್ರಂಥಾಲಯದಲ್ಲಿರಲೇಬೇಕಾದ, ಪ್ರತಿಯೊಬ್ಬರಿಗೂ ಮಾರ್ಗದರ್ಶಿ ಕೈಪಿಡಿಯಾಗಿದೆ.

ಈ ಕೃತಿಗಾಗಿ ಅಥವಾ ಹೆಚ್ಚಿನ ವಿವರಗಳಿಗಾಗಿ ಲೇಖಕರನ್ನು ಅಥವಾ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.

ಜ್ಞಾನದೀಪಿಕಾ ಎಜ್ಯುಕೇಶನ್ ಟ್ರಸ್ಟ್

ನಂಬರ್ 43, ಸಂಸ್ಕೃತಿ, ಮೂರನೇ ಅಡ್ಡರಸ್ತೆ,

ಕುರುಬರಹಳ್ಳಿ, ಬೆಂಗಳೂರು-86

ದೂರವಾಣಿ 9987365393


ಪುಸ್ತಕ ಬಿಡುಗಡೆ ಸಮಾರಂಭ

5 comments:

  1. good introduction.thank you bhattare

    ReplyDelete
  2. 'ಕಲಿಕೆಗೊಂದು ಕೈಪಿಡಿ' ಪುಸ್ತಕ‌ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಉತ್ತಮಮಾರ್ಗದರ್ಶಿ. ಡಾ.ಟಿ.ಎ.ಬಾಲಕೃಷ್ಣ ಅಡಿಗರ ಭೋಧನ ಅನುಭವ ಹಂಚಿಕೆಗಾಗಿ ನಮನಗಳು.
    ಮಾದಿಹಳ್ಳಿ ಕೋದಂಡರಾಮ.

    ReplyDelete
  3. ಪುಸ್ತಕ ದೊರಕಿದೆ. ಕತೆ, ಕಾದಂಬರಿಯಂತೆ ಒಮ್ಮೆ ಓದಿ ಮುಗಿಸುವ ಪುಸ್ತಕವಲ್ಲ. ಶ್ರೀಯುತರ ಅನುಭವ ಜನ್ಯ ಲೇಖನಗಳನ್ನು ಓದುತ್ತಾ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾ ಹೋದರೆ ಇಡೀ ಜೀವನಕ್ಕಾಗುತ್ತದೆ. ಪರಿಚಯ ಉತ್ತಮವಾಗಿ ಮೂಡಿಬಂದಿದೆ. ಧನ್ಯವಾದಗಳು.

    ReplyDelete
  4. Article shows the deep knowledge and the concern shown by T A Balakrishna Adiga Sir to share with the science fraternity with humility is great. A detailed explanation of this in a poetic, unique manner by Ramachandra Bhat Sir is savouring the already savoured.😊

    ReplyDelete
  5. Thank you sir for this article. Great to know about this book.

    ReplyDelete