ಮಾರಕ ರೋಗ - ಕ್ಯಾನ್ಸರ್
ಬಿ.ಎನ್. ರೂಪ
ಸರ್ಕಾರಿ ಉರ್ದು ಮತ್ತು ಆಂಗ್ಲ
ಪ್ರೌಢಶಾಲೆ, ಗೋರಿಪಾಳ್ಯ
ಬೆಂಗಳೂರು ದಕ್ಷಿಣ ವಲಯ ೨.
ಫೆಬ್ರವರಿ ೪ರಂದು ವಿಶ್ವದಾದ್ಯಂತ
‘ಕ್ಯಾನ್ಸರ್ ದಿನ” ಎಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಈ ರೋಗದ ಬಗ್ಗೆ ಅರಿವು ಮೂಡಿಸುವ ಲೇಖನವನ್ನು ವಿಜ್ಞಾನ ಶಿಕ್ಷಕಿ
ಶ್ರೀಮತಿ ಬಿ.ಎನ್. ರೂಪ ಬರೆದಿದ್ದಾರೆ. ರೋಗಕ್ಕೆ ಕಾರಣವಾಗುವ ಅಂಶಗಳ ಜೊತೆಗೆ, ರೋಗವನ್ನು ತಡೆಯಬಹುದಾದ ವಿಧಾನಗಳ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.
ಕ್ಯಾನ್ಸರ್ ಈ ಪದವೇ ಆಘಾತಕಾರಿ,
ಇದು ಎಲ್ಲರನ್ನೂ ಆಲೋಚನೆಗೆ ದೂಡುವ ಮಾರಿ,
ಇದು ರಾಶಿಚಕ್ರದ ಚಿಹ್ನೆಯೋ ಅಥವಾ
ಅನಿಯಂತ್ರಿತ ಕೋಶ ವಿಭಜನೆಯೋ,
ಕ್ಯಾನ್ಸರ್, ನಿಜವಾಗಿ ನೀ ಮಾನವ ಜನಾಂಗಕ್ಕೆ
ಶಾಪ.
ನೀ ಮನುಕುಲಕ್ಕೆ ಮಾರಕ,
ನೀ ನಿನ್ನದೇ ಆದ ಸ್ಥಿತಿಯನ್ನು ಬಿಂಬಿಸುವ
ರಕ್ಕಸ,
ನೀನು ಉತ್ಪರಿವರ್ತನೆಯ, ರೂಪಾಂತರಿಯ, ವಿಕಿರಣದ ಒಡ್ಡುವಿಕೆಯ, ಆಹಾರ ಕಲಬೆರಕೆಯ
ಫಲಿತಾಂಶವೋ ನಾನರಿಯೆ,
ಕ್ಯಾನ್ಸರ್, ನಿಜವಾಗಿ ನೀ ಮಾನವ ಜನಾಂಗಕ್ಕೆ
ಶಾಪ.
ನಿನ್ನಿಂದ ಜಗತ್ತಿನಲ್ಲಿ
ಲಕ್ಷಾಂತರ ಜನ ಬಳಲುತ್ತಿದ್ದಾರೆ,
ಜನರು ನಿನ್ನ ನೋವನ್ನುಅನುಭವಿಸಲಾರದ
ತೊಳಲುತ್ತಿದ್ದಾರೆ,
ಏಕೆಂದರೆ, ನೀನು ಪುನಃ ಪುನಃ ಮರುಕಳಿಸಿ ಜನರ ಜೀವ
ಹಿಂಡುತೀಯಾ,
ಕ್ಯಾನ್ಸರ್, ನಿಜವಾಗಿ ನೀ ಮಾನವಜನಾಂಗದ ಶಾಪ.
ಹೌದು ನೀವು ಹೇಳಿದ್ದು ಸರಿಯೇ.
ಇಲ್ಲಿ ನಾವು ಅನಿಯಂತ್ರಿತ ಕೋಶ
ವಿಭಜನೆಯಿಂದ ರೂಪುಗೊಂಡ, ಜಗತ್ತನ್ನು ಬಹುವಾಗಿ
ಕಾಡಿದ ಗಂತಿಗಳ ಬಗ್ಗೆ ಚರ್ಚಿಸುತ್ತಿದ್ದೇವೆ.
ನಮ್ಮ ಮಾನವ ದೇಹವುಅದ್ಭುತ ಸೃಷ್ಟಿಯಾಗಿದೆ. ನಮ್ಮಲ್ಲಿ ಟ್ರಿಲಿಯನ್‌ಗಟ್ಟಲೆ ಕೋಶಗಳಿವೆ, ಅವು ವಿವಿಧ ಅಂಗಾಂಶಗಳನ್ನು ರೂಪಿಸುತ್ತವೆೆ, ಅಂಗಾಂಶಗಳು ಅಂಗಗಳನ್ನು ರೂಪಿಸುತ್ತವೆ ಮತ್ತು ಅಂಗಗಳು ಸೇರಿ, ಅಂಗವ್ಯವಸ್ಥೆಗಳನ್ನು ರೂಪಿಸುತ್ತವೆ. ಇವು ನಮ್ಮ ದೇಹದಲ್ಲಿನ ಬಗೆ, ಬಗೆಯ ಕಾರ್ಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು
ವ್ಯವಸ್ಥಿತವಾಗಿ ನಿರ್ವಹಿಸುತ್ತವೆ. ನಮ್ಮ ಜೀವಕೋಶಗಳು ಕೋಶ ವಿಭಜನೆಯ ನಿರ್ದಿಷ್ಟ ಮಾದರಿಯನ್ನು
ಅನುಸರಿಸುತ್ತವೆ, ಜೀವಕೋಶದ ಚಕ್ರವು ಪೂರ್ವನಿರ್ಧಾರಿತ ಕೋಶ
ವಿನಾಶ ಪದ್ಧತಿಯನ್ನು (ಅಪೊಪ್ಟೋಸಿಸ್) ಅನು ಅನುಸರಿಸುತ್ತದೆ
ಕೆಲವು ಕಾರಣಗಳಿಂದ ಈ ಮಾದರಿಯಲ್ಲಿ ಬದಲಾವಣೆ ಉಂಟಾದರೆ, ಜೀವಕೋಶಗಳು ಯಾವುದೇ ನಿಯಂತ್ರಣವಿಲ್ಲದೆ ವಿಭಜನೆಯನ್ನು ಮುಂದುವರೆಸಿಕೊಂಡು ಹೋಗುತ್ತವೆ, ಇದು ಗಂತಿಗಳ ರಚನೆಗೆ ಕಾರಣವಾಗುತ್ತದೆ. ಹಾನಿಕಾರಕವಲ್ಲದ ಗಂತಿಗಳು ಕೇವಲ ಜೀವಕೋಶಗಳ ಉಂಡೆಗಳಾಗಿವೆ ಆದರೆ, ಅವು ಕ್ಯಾನ್ಸರ್ ಗಂತಿಗಳಲ್ಲ. ಅವು ಅಂಗಾಂಶಗಳಲ್ಲಿ ಹರಡುವುದಿಲ್ಲ. ಆದರೆ, ಕಳವಳಕ್ಕೆ ಕಾರಣವಾಗಿದ್ದಲ್ಲಿ, ಅಂಥ ಗಂತಿಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗುತ್ತದೆ.
ನಿರಂತರವಾಗಿ ವಿಭಜನೆಯಾಗುವ ಕ್ಯಾನ್ಸರ್
ಕೋಶಗಳು ಹಾನಿಕಾರಕವಾದ ಗಂತಿಗಳನ್ನು
ಉಂಟುಮಾಡುತ್ತವೆ. ಇವು, ಸಾಮಾನ್ಯವಾಗಿ ಇತರ
ಅಂಗಾಂಶಗಳನ್ನು ಆಕ್ರಮಿಸುತ್ತವೆ ಅಥವಾ ನಮ್ಮ ದೇಹದ ಇತರ ಭಾಗಗಳನ್ನು
ಮಾರಣಾಂತಿಕವಾಗಿಸುತ್ತದೆ.
ಕ್ಯಾನ್ಸರ್ ಮೂಲಭೂತವಾಗಿ ಆಣ್ವಿಕ
ಮಟ್ಟದಲ್ಲಿ ಉಂಟಾಗುವ ಆನುವಂಶಿಕ ಬದಲಾವಣೆಗಳಿಂದ ಉಂಟಾಗುವ ಕಾಯಿಲೆಯಾಗಿದೆ ಮತ್ತು ಡಿಎನ್ಎ ಮತ್ತು
ವಂಶವಾಹಿಗಳಲ್ಲಿನ ರೂಪಾಂತರಗಳಿಂದಾಗಿ ಕ್ರಮೇಣ
ಸಂಗ್ರಹಗೊಳ್ಳುತ್ತದೆ, ವೃದ್ಧಿಯಾಗುತ್ತದೆ
ಮತ್ತು ಗಂಭೀರ ಹಾನಿಯನ್ನುಉಂಟುಮಾಡುತ್ತದೆ.
ಕ್ಯಾನ್ಸರ್ ರೋಗವನ್ನು ೦ ಅಥವಾ ೧, ೨, ೩, ಮತ್ತು ೪ ಹಂತಗಳಲ್ಲಿ ಗುರುತಿಸಲಾಗುತ್ತದೆ,
೦ ಅಥವಾ ೧ನೇ ಹಂತ: ಗುಂಪುಗೂಡದ ಜೀವಕೋಶಗಳ
ಅಸಹಜ ವಿಭಜನೆಗಳಿರುತ್ತವೆ.
೨ ನೇ ಹಂತ: ಕ್ಯಾನ್ಸರ್ ಗಂತಿಯ
ಬೆಳವಣಿಗೆಯು ದೊಡ್ಡದಾಗಿದೆ ಮತ್ತು ಸುತ್ತಮುತ್ತಲಿನ ಅಂಗಾಂಶಗಳಿಗೆ ಹರಡುವುದು ಕಂಡುಬರುತ್ತದೆ.
೩ ನೇ ಹಂತ: ಕ್ಯಾನ್ಸರ್ ಗಂತಿಯ
ಬೆಳವಣಿಗೆಯು ಪೂರ್ಣಪ್ರಮಾಣದಲ್ಲಿದ್ದು, ಅಂಗಾಂಶಗಳ ಮೂಲಕ ಅತಿರೇಕದ ಹರಡುವಿಕೆ ಕಂಡುಬರುತ್ತದೆ. ಅಲ್ಲದೆ, ದುಗ್ಧರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತವೆ.
೪ ನೇ ಹಂತ: ಜೀವಕೋಶಗಳ
ಒಟ್ಟುಗೂಡಿಸುವಿಕೆಯಿಂದ ದೇಹದ ವಿವಿಧ ಅಂಗಗಳಿಗೆ ತೀವ್ರವಾಗಿ ಹರಡುತ್ತದೆ, .
ಇದಕ್ಕೆ ಕಾರಣಗಳೇನು?
೧) ಯಾವುದೇ ರೂಪದಲ್ಲಿ ತಂಬಾಕು
ಜಗಿಯುವುದು ಮತ್ತು ಧೂಮಪಾನ ಮಾಡುವುದು.
೨) ಮದ್ಯಪಾನ.
೩) ಮಾದಕ ವ್ಯಸನ.
೪) ವೈರಸ್, ಬ್ಯಾಕ್ಟೀರಿಯಾದ ಸೋಂಕುಗಳು.
೫) ಆಹಾರ ಮತ್ತು ಜೀವನಶೈಲಿಯ
ಬದಲಾವಣೆಗಳು.
೬) ವಿವಿಧರೀತಿಯ ವಿಕಿರಣಗಳು.
೭) ಪರಿಸರದ ಬದಲಾವಣೆಗಳು.
೮) ವಿವಿಧ ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಕಲಬೆರಕೆ. ರಸಗೊಬ್ಬರಗಳು, ಕಳೆನಾಶಕಗಳು, ಶಿಲೀಂಧ್ರನಾಶಕಗಳು, ಕೀಟನಾಶಕಗಳು ಇತ್ಯಾದಿಗಳ ಅಜಾಗರೂಕ ಬಳಕೆ.
೯) ನಮ್ಮ ಇಂದಿನ ಜೀವನದಲ್ಲಿ ಬಳಸುವ ಟಾಯ್ಲೆಟ್ ಕ್ಲೀನರ್‌ಗಳು, ಡಿಟರ್ಜೆಂಟ್‌ಗಳು, ಡಿಶ್ ವಾಷರ್‌ಗಳಂಥ ಶುಚಿಗೊಳಿಸುವ ರಾಸಾಯನಿಕಗಳು ಮತ್ತು ಅವುಗಳ ಉಳಿಕೆಗಳು.
೧೦) ಕೂದಲಿನ ಬಣ್ಣಗಳು, ಸೌಂದರ್ಯವರ್ಧಕಗಳಲ್ಲಿ ಬಳಸುವ ವಿವಿಧ ರಾಸಾಯನಿಕಗಳು.
೧೧) ಆನುವಂಶಿಕ ಕಾರಣಗಳು, ವರ್ಣತಂತುಗಳಲ್ಲಿನ ಅಸಹಜತೆಗಳು. ಯಾವುದೇ ನಿರ್ದಿಷ್ಟ ಜನಸಂಖ್ಯೆಯಲ್ಲಿ ಕೆಲವು ಜನ ಇತರರಿಗಿಂತ ಹೆಚ್ಚು ಒಳಗಾಗುವಂತೆ ಮಾಡುತ್ತದೆ.
ಕ್ಯಾನ್ಸರ್ ಬಾರದಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತೆ ಕ್ರಮಗಳು
ನಾವು ಅನುಸರಿಸಬೇಕಾದ ಕೆಲವು ಕ್ರಮಗಳು
ಹೀಗಿವೆ :
೧) ಸಾವಯವವನ್ನು ಅನುಸರಿಸಿ: ಸಾವಯವ ಫಾರ್ಮ್ಗಳಿಂದ ಆಯ್ಕೆ ಮಾಡಲು ಪ್ರಯತ್ನಿಸಿ ಅಥವಾ ಲಭ್ಯವಿರುವ ಜಾಗದಲ್ಲಿ ನೀವೇ ಸ್ವಂತ ತರಕಾರಿಗಳನ್ನು ಬೆಳೆಯಲು ಪ್ರಯತ್ನಿಸಿ, ಅಡುಗೆಮನೆಯಲ್ಲಿ ಉತ್ಪತ್ತಿಯಾಗುವ ಸಾವಯವ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಬಳಸಿ.
೨) ಯಾವುದೇ ರೂಪದಲ್ಲಿ ತಂಬಾಕು
ಸೇವನೆಯನ್ನು ನಿಲ್ಲಿಸಿ.
೩) ಮದ್ಯಪಾನ ಮಾಡುವುದನ್ನು ತಪ್ಪಿಸಿ.
೪) ವಿವಿಧರೀತಿಯ ವಿಕಿರಣಗಳಿಗೆ
ಒಡ್ಡಿಕೊಳ್ಳುವುದನ್ನು ತಪ್ಪಿಸಿ.
೫) ನೈಸರ್ಗಿಕವಾಗಿ ಇರುವುದಕ್ಕೆ ಹೆಚ್ಚು ಮನ್ನಣೆಕೊಡಿ - ಸೌಂದರ್ಯವರ್ಧಕಗಳು ಅಥವಾ ಕೂದಲ ಬಣ್ಣಗಳು. ನಿಮ್ಮ ಚರ್ಮದ ಮೇಲೆ ಪ್ಯಾಚ್ ಪರೀಕ್ಷೆಗೆ ಒಳಗಾದ ನಂತರ ಕಡಿಮೆ ರಾಸಾಯನಿಕಗಳೊಂದಿಗೆ ಕಡಿಮೆ ಕಠಿಣವಾದದನ್ನು ಆರಿಸಿ.
೬) ಹೆಚ್ಚು ಆಕ್ಸಿಜನ್ ಒದಗುವಂಥ ಯಾವುದೇ
ರೀತಿಯ ದೈಹಿಕ ಚಟುವಟಿಕೆಯನ್ನು ರೂಢಿಸಿಕೊಳ್ಳಿ.
೭) ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸಿ. ಉದಾಹರಣೆಗೆ, ಸಾವಯವ ಅಥವಾ ನೈಸರ್ಗಿಕಎಂದು ಹೇಳಿಕೊಳ್ಳುವ ಅಂಗಡಿಗಳಲ್ಲಿ ನೀವು ಪಡೆಯುವ ಅರಿಶಿನವನ್ನು ಬಳಸುವ ಮೊದಲು ನಮಗೆ ಪ್ರಬಲವಾದ ಕ್ಯಾನ್ಸರ್ ಕಾರಕ ಆಗಿರುವ ಮೆಟಾನಿಲ್ ಹಳದಿಯಂತಹ ಪದಾರ್ಥಗಳ ಬಗ್ಗೆ ನಮಗೆ ತಿಳಿದಿರಲಿ. ಆದ್ದರಿಂದ ಅರಿಶಿನದ ಬೇರುಗಳನ್ನು ಖರೀದಿಸಿ ಮತ್ತು ಅದನ್ನು ಪುಡಿಮಾಡಿ ಬಳಸಿ.
ಅರಿಶಿನದಲ್ಲಿರುವ ಅದ್ಭುತವಾದ ಫೀನಾಲಿಕ್ ಸಂಯುಕ್ತವಾದಕರ್ಕ್ಯುಮಿನ್‌ಉರಿಯೂತವನ್ನುಕಡಿಮೆ ಮಾಡಲು ಬಳಸಲಾಗುತ್ತದೆ, ಇದು ನಮ್ಮ ದೇಹದಲ್ಲಿನ ಆಕ್ಸಿಡೀಕರಣ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಅಪಾಯಗಳನ್ನು ಕಡಿಮೆ ಮಾಡುತ್ತದೆ.
೮) ಕ್ಯಾನ್ಸರ್ ಕೋಶಗಳು ಆಮ್ಲೀಯ ಮಾಧ್ಯಮದಲ್ಲಿ ಚೆನ್ನಾಗಿ ಬೆಳೆಯುವುದರಿಂದ, ನಿಮ್ಮ ದೇಹದ ಸಂಯೋಜನೆ ಆಲ್ಕಲೈನ್ ಅಥವಾ ಪ್ರತ್ಯಾಮ್ಲ ಇರುವಂತೆ ನೋಡಿಕೊಳ್ಳಿ ನಮ್ಮ ದೇಹದ ಸಂಯೋಜನೆಯನ್ನು ಕ್ಷಾರೀಯವಾಗಿ ನಿರ್ವಹಿಸುವ ಸಮೃದ್ಧ ಆಹಾರಗಳನ್ನು ಹೆಚ್ಚು ಸೇವಿಸಿ.
ಈ ಕೆಳಕಂಡ ಆಹಾರ ಪದ್ಧತಿಯನ್ನು ಅನುಸರಿಸುವುದು ಒಳಿತು,
ರಾಸಾಯನಿಕ ಮುಕ್ತ, ತರಕಾರಿಗಳು, ಸಿಟ್ರಸ್ ಹಣ್ಣುಗಳು. ಬೀಜಗಳು ಬೂದು ಕುಂಬಳಕಾಯಿ ನಿಮ್ಮ ಕರುಳಿನ ಆರೋಗ್ಯಕ್ಕಾಗಿ Probiotics ಮಜ್ಜಿಗೆ, ಕೆಫೀರ್, ಮೊಸರು, ಕೊಂಬುಚಾ. ಕ್ಯಾನ್ಸರ್ ಕೋಶಗಳು ಸಿಹಿಯ ಮಾಧ್ಯಮದಲ್ಲಿ ಚೆನ್ನಾಗಿ ಬೆಳೆಯುವುದರಿಂದ, ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಆಗಾಗ್ಗ ಪರಿಕ್ಷಿಸಿಕೊಳ್ಳಿ. ಈ ಭಯಾನಕ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು, ಪ್ರತಿ ವರ್ಷ ಫೆಬ್ರವರಿ ೪ ರಂದು ವಿಶ್ವದಾದ್ಯಂತ ‘ಕ್ಯಾನ್ಸರ್ ದಿನ’ ಎಂದು ಆಚರಿಸಲಾಗುತ್ತದೆ. ಆರೋಗ್ಯಕರ ಆಹಾರ ಪದ್ಧತಿ ಮತ್ತು ಉತ್ತಮ ಜೀವನಶೈಲಿಯನ್ನು ರೂಢಿಸಿಕೊಂಡು, ತಡೆಗಟ್ಟುವ ವಿಧಾನಗಳನ್ನು ಅಳವಡಿಸಿಕೊಂಡು ಬಾಳುವುದೊಂದೇ ಸದ್ಯಕ್ಕಿರುವ ದಾರಿ. "ಚಿಕಿತ್ಸೆಗಿಂತ ತಡೆಗಟ್ಟುವಿಕೆಯೇ ಸೂಕ್ತ ಪರಿಹಾರ".
ಈ ಭಯಾನಕ ಕಾಯಿಲೆಯಿಂದ ಬಳಲುತ್ತಿರುವವರನ್ನು ನೋಯಿಸದೆ, ನಿಂದಿಸದೆ, ಅವಮಾನಿಸಿದೆ, ಅತ್ಯುತ್ತಮ ಭಾವನಾತ್ಮಕ ಬೆಂಬಲವನ್ನು ನೀಡಬೇಕು. ಜೀವನದ ಈ ಹಂತದಲ್ಲಿ ಈ ರೋಗದ ವಿರುದ್ಧ ಹೋರಾಡಲು ಬೇಕಾಗಿರುವ ಮಾನಸಿಕ ಸ್ಥೈರ್ಯ, ಮಾನಸಿಕ ಬೆಂಬಲ, ಆರ್ಥಿಕ ಬೆಂಬಲ, ಹಾಗೂ ಜೀವನದ ಈ ಹಂತವನ್ನು ಹಾದು ಹೋಗಲು ಅಗತ್ಯವಾದ ಅವರ ಇಚ್ಛಾಶಕ್ತಿಯನ್ನು ಜಾಗೃತಗೊಳಿಬೇಕು. ಪ್ರಪಂಚದಾದ್ಯಂತದ ಅನೇಕ ಜನರು ತಮ್ಮ ಇಚ್ಛಾಶಕ್ತಿಯನ್ನು ಬಳಸಿಕೊಂಡು, ಕ್ಯಾನ್ಸರ್ ವಿರುದ್ಧ ಹೋರಾಡಿ, ಜಯಿಸಿ ಇತರ ರೋಗಿಗಳಿಗೆ ಮಾದರಿಯಾಗಿದ್ದಾರೆ. ‘ಎಲ್ಲಿ ಇಚ್ಛೆ ಇರುತ್ತದೋ ಅಲ್ಲಿ ದಾರಿ ಇರುತ್ತದೆ.’
ಕ್ಯಾನ್ಸರ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆಗಳು ನಡೆದಿದ್ದರೂ, ಈ ರೋಗವು ಮಾನವ ಜನಾಂಗಕ್ಕೆ ಸವಾಲಾಗಿಯೇ. ಉಳಿದಿದೆ. ಇದುವರೆಗೆ, ಕ್ಯಾನ್ಸರ್ ಉಂಟಾಗದಂತೆ ತಡೆಯುವ ಯಾವುದೇ ರೀತಿಯ ಔಷದಿಗಳನ್ನು ಇಲ್ಲಿಯವರೆಗೂ ಆವಿಷ್ಕಾರ ಮಾಡಲು ಸಾಧ್ಯವಾಗಿಲ್ಲ.
ಮೇಡಂ, ಲೇಖನ ಮಾಹಿತಿ ಪೂರ್ಣವಾಗಿದೆ ಹಾಗೂ ಕವಿತೆಯ ಮೂಲಕ ರೋಗದ ಭಯನಕತೆ ಅದ್ಬುತವಾಗಿ ಮೂಡಿಬಂದಿದೆ.ಗಂತಿ ಪದ ಪ್ರಯೋಗ ಇಷ್ಟವಾಯಿತು, ಅಭಿನಂದನೆಗಳು ಮೇಡಂ
ReplyDeleteನಿಮ್ಮ ವೈಯಕ್ತಿಕ ದುರಂತಮಯ ಸ್ವಾನುಭವ ನನ್ನದೂ ಹೌದು. ಜನರಲ್ಲಿ ಅರಿವು ಮೂಡಿಸುವ ಲೇಖನ
ReplyDelete