ಸಂಪಾದಕರ ಡೈರಿಯಿಂದ
‘ಸವಿಜ್ಞಾನ’ ಇ-ಪತ್ರಿಕೆಯ ಎರಡನೆಯ ವರ್ಷದ
ಎರಡನೆಯ ಸಂಚಿಕೆ. ಸಂತೋಷದ ಒಂದು ಸುದ್ದಿಯೊಂದಿಗೆ ಸಂಪಾದಕೀಯ ಪ್ರಾರಂಭಿಸುತ್ತೇನೆ.
ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ನಮ್ಮ ‘ಸವಿಜ್ಞಾನ’ ಇ-ಪತ್ರಿಕೆಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದ, ಕರ್ನಾಟಕ ವಿಜ್ಞಾನ ಮತ್ತು
ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರಾದ ಖ್ಯಾತ ಕೃಷಿ ವಿಜ್ಞಾನಿ ಡಾ. ಅಯ್ಯಪ್ಪನ್ ಅವರಿಗೆ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ಪ್ರಶಸ್ತಿ ಘೋಷಣೆಯಾಗಿದೆ. ಈ
ಸಂದರ್ಭದಲ್ಲಿ ಅವರಿಗೆ ‘ಸವಿಜ್ಞಾನ’ದ ಹಾರ್ದಿಕ ಅಭಿನಂದನೆಗಳು.
ಈ ಸಂಚಿಕೆಯಲ್ಲಿ ಡಾ.ಅಯ್ಯಪ್ಪನ್ ಅವರಿಗೆ
ಅಭಿನಂದನಾ ಸಂದೇಶದ ಜೊತೆಗೆ, ಅವರ ಕಿರು ಪರಿಚಯ
ನೀಡಲಾಗಿದೆ. ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಿಲ್ಲಿ ವಿಜ್ಞಾನ ಶಿಕ್ಷಕಿ ರೂಪಾ ಅವರು ಬರೆದ
ಒಂದು ಸಾಂದರ್ಭಿಕ ಲೇಖನವಿದೆ. ವಿಜ್ಞಾನ ಬೋಧನೆಯಿಲ್ಲಿ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ
ನಿಟ್ಟಿನಲ್ಲಿ ಪ್ರಯೋಗಗಳ ಮಹತ್ವವನ್ನು ಸಾರುವ ಒಂದು ಲೇಖನದ ಜೊತೆಗೆ ಕಡ್ಡಿ ಗೊಂಬೆಗಳನ್ನು ತಯಾರಿಸುವ ವಿಧಾನವನ್ನು ವಿವರಿಸುವ ಲೇಖನಗಳಿವೆ. ಅತ್ಯಂತ ಹಗುರ ಲೋಹವಾವ ಲಿಥಿಯಂ ಬಗ್ಗೆ ಮಾಹಿತಿ ನೀಡುವ ಲೇಖನವೊಂದಿದೆ. ೨೦೨೧ರಲ್ಲಿ ವಿಶ್ವದ ವಿವಿಧೆಡೆ ದಾಖಲಾದ ವೈದ್ಯಕೀಯ ವಿಸ್ಮಯಗಳನ್ನು ನಿಮ್ಮ ಮುಂದೆ
ತೆರೆದಿಟ್ಟಿದ್ದಾರೆ, ಜನಪ್ರಿಯ ವೈದ್ಯ
ಸಾಹಿತಿ, ಡಾ. ಹೆಚ್.ಎಸ. ಮೋಹನ್. ಅಲ್ಲದೆ, ನಿಮ್ಮ
ಮೆಚ್ಚುಗೆಗೆ ಪಾತ್ರವಾಗಿರುವ ವಿಜ್ಞಾನದ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳ ಜೊತೆಗೆ, ಈ ಬಾರಿಯೂ ವಿಜ್ಞಾನ ಪದಬಂಧವನ್ನು ನೀಡಲಾಗಿದೆ. ಕೆಲ ಕಾಲ ವಿಜ್ಙಾನ ಶಿಕ್ಷಕರಾಗಿದ್ದು,
ಈಗ ಚಿತ್ರಕಲೆಯತ್ತ ಹೊರಳಿರುವ, ‘ಸವಿಜ್ಞಾನ’ಕ್ಕೆಂದೇ
ಪ್ರಾರಂಭದಿಂದಲೂ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿರುವ ಶ್ರೀಮತಿ
ಜಯಶ್ರೀ ಶರ್ಮ ಅವರ ಸಾಧನೆಯನ್ನು ಪರಿಚಯಿಸುವ ಲೇಖನವೂ ಇದೆ.
ವಿಜ್ಞಾನಕ್ಕೆ ಸಂಬಂಧಿಸಿದಂತೆ ಮಾಹಿತಿಪೂರ್ಣ ಹಾಗೂ ವೈವಿಧ್ಯಮಯ
ಲೇಖನಗಳನ್ನು ನೀಡುವ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೇ ಸ್ಪೂರ್ತಿ. ಸಂಚಿಕೆಯ ಲೇಖನಗಳ
ಬಗ್ಗೆ ನಿಮ್ಮ ವಿದ್ಯಾರ್ಥಿಗಳಿಗೂ, ಸಹೋದ್ಯೋಗಿಗಳಿಗೂ, ಬಂಧು, ಮಿತ್ರರಿಗೂ ತಿಳಿಸಿ. ಅವರೂ ಓದುವಂತೆ ಪ್ರೇರೇಪಿಸಿ. ನಮ್ಮ ಓದುಗ ಬಳಗವನ್ನು ಇನ್ನಷ್ಟು ವಿಸ್ತಾರಗೊಳಿಸಿ..
ಡಾ. ಟಿ. ಎ. ಬಾಲಕೃಷ್ಣ ಅಡಿಗ
ಪ್ರಧಾನ ಸಂಪಾದಕರು
ಸರ್ ನಮಸ್ಕಾರ, ತಮ್ಮ ಹಾಗೂ ತಮ್ಮ ತಂಡದ ಲೇಖನಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ ಸರ್ ನನ್ನದೊಂದು ಸಣ್ಣ ಕೋರಿಕೆ ತಮ್ಮಲ್ಲಿ ಏನೆಂದರೆ ತಮ್ಮ ಬ್ಲಾಗ್ ಅನ್ನು (ಲೇಖನಗಳನ್ನು) ನನ್ನ ಬ್ಲಾಗ್ ನೊಂದಿಗೆ ಟ್ಯಾಗ್ ಮಾಡಬಹುದಾ ಸರ್.ತಮ್ಮ ಅಭ್ಯಂತರ ಇಲ್ಲದೆ ಇದ್ದರೆ. ಇಂದ - ದಿನೇಶರೆಡ್ಡಿ ವಿಜ್ಞಾನ ಶಿಕ್ಷಕ ಸ.ಪ್ರೌ.ಶಾಲೆ ಹಳ್ಳಿಸಲಗರ ತಾ.ಆಳಂದ ಜಿ.ಕಲಬುರ್ಗಿ.
ReplyDeleteಮಾಡಿ ಹಾಗೆಯೇ ನಮ್ಮ ಬ್ಲಾಗ್ ಗೂ ಬರೆಯಿರಿ
Deleteಖಂಡಿತ ಮಾಡಿ ಸರ್.
ReplyDeleteಅಗತ್ಯವಾಗಿ, ದಿನೇಶ್. ನಿಮ್ಮ ಲೇಖನಗಳಿಗೂ ಸ್ವಾಗತ !
ReplyDeleteಎರಡನೆಯ ವರ್ಷದ ಎರಡನೆಯ ಸಂಚಿಕೆಗೆ ಹೃದಯಪೂರ್ವಕ ಸ್ವಾಗತ ಮತ್ತು ಉತ್ಕೃಷ್ಟ ಗುಣಮಟ್ಟದ ಲೇಖನಗಳನ್ನೇ ಹೆಕ್ಕಿ, ಶುದ್ಧೀಕರಿಸಿ, ಸಂಸ್ಕರಿಸಿ ಎಲ್ಲರೂ ಜ್ನಾಭಂಡಾರದ ದೀವಿಗೆಯನ್ನು ಬೆಳಗಿಸುತ್ತಿರುವ ಅಡಿಗೆ ಸರ್ ರವರಿಗೆ ಅನಂತ ವಂದನೆಗಳು
ReplyDelete