ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, May 4, 2022

ಸಂಪಾದಕರ ಡೈರಿಯಿಂದ

 ಸಂಪಾದಕರ ಡೈರಿಯಿಂದ

ಸವಿಜ್ಞಾನ’ ಇ-ಪತ್ರಿಕೆಯ ಎರಡನೆಯ ವರ್ಷದ ಐದನೇ ಸಂಚಿಕೆ. ಎಂದಿನಂತೆ, ಮಾಹಿತಿಪೂರ್ಣ, ವೈವಿಧ್ಯಮಯ ಲೇಖನಗಳೊಂದಿಗೆ ಸಂಚಿಕೆ ಪ್ರಕಟವಾಗಿದೆ. ವಿಜ್ಞಾನದಲ್ಲಿ ಸೆರೆಪಿಂಡಿಟಿಯ ಬಗ್ಗೆ ಈ ಹಿಂದೆ ಪ್ರಕಟವಾಗಿದ್ದ ಲೇಖನಗಳ ಜೊತೆಗೆ, ಈ ಬಾರಿ ಎಡ್ವರ್ಡ್ ಜೆನ್ನರ್‌ಸಿಡುಬು ರೋಗಕ್ಕೆ ಲಸಿಕೆಯನ್ನು ಕಂಡು ಹಿಡಿದ ಸಂದರ್ಭವನ್ನು ನವಿರಾಗಿ ವಿವರಿಸಿದ್ದಾರೆ ಡಾ.ಎಂ.ಜೆ. ಸುಂದರರಾಮ್. ಹಕ್ಕಿಗಳ ಹಾಗೂ ವನ್ಯಜೀವಿಗಳ ಜೀವನ ಶೈಲಿಯನ್ನು ಪರಿಚಯ ಮಾಡಿಕೊಡುತ್ತಿರುವ ಕೃಷ್ಣ ಚೈತನ್ಯ ಈ ಬಾರಿ ಹಾವುಗಳ ಸಂರಕ್ಷಣೆಯ ಅವಶ್ಯಕತೆ ಕುರಿತು ಲೇಖನ ಬರೆದಿದ್ದಾರೆ. ಶ್ರೀನಿವಾಸ ಬರೆದಿರುವ ಲೇಖನ ನಿದ್ರೆಯ ಪ್ರಾಮುಖ್ಯತೆಯ ಮೇಲೆ ಬೆಳಕು ಚೆಲ್ಲಿದೆ. ಸೂಕ್ಷ್ಮ ಜೀವಿಗಳಿಗೆ ಸಂಬಂಧಿಸಿದಂತೆ ಲೂಯಿ ಪಾಶ್ಚರನ ನಡೆಸಿದ ಸಂಶೋಧನೆಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ, ರಾಮಚಂದ್ರ ಭಟ್. ಸರ್ಕಾರಿ ಪ್ರಾಥಮಿಕ ಶಾಲೆಯ ಕ್ರಿಯಾಶೀಲ ಶಿಕ್ಷಕರಾದ ಮುನಿರಾಜು ಅವರನ್ನು ಪರಿಚಯಿಸಿದ್ದಾರೆ, ಗುರುದತ್ ಅವರು. ಇವೆಲ್ಲದರ ಜೊತೆಗೆ, ಸ್ಥಿರ ಶೀರ್ಷಿಕೆಗಳಾದ ಪದಬಂಧ, ಒಗಟುಗಳು, ವ್ಯಂಗ್ಯ ಚಿತ್ರಗಳು, ಹಾಗೂ ಈ ತಿಂಗಳ ಪ್ರಮುಖ ದಿನಾಚರಣೆಗಳ ಪರಿಚಯ ಎಲ್ಲವನ್ನೂ ಸಂಚಿಕೆ ಒಳಗೊಂಡಿದೆ.

ಸವಿಜ್ಞಾನ’ವನ್ನು ಇನ್ನಷ್ಟು ಸವಿಯಾಗಿ ಉಣಬಡಿಸುವ ಸಂಕಲ್ಪ ನಮ್ಮದು. ಈ ನಿಟ್ಟಿನಲ್ಲಿ ಇನ್ನಷ್ಟು ಹೊಸ ಬರಹಗಾರರನ್ನು ಪರಿಚಯಿಸುವ ಇಚ್ಛೆ ನಮಗಿದೆ.. ನೀವೂ ಸಹ ಲೇಖನಗಳನ್ನು, ಒಗಟುಗಳನ್ನು, ಪದಬಂಧಗಳನ್ನು ರಚಿಸಿ ಕಳಿಸುವಿರಾದರೆ, ಅದಕ್ಕೆ ನಮ್ಮ ಸ್ವಾಗತವಿದೆ. ಈ ರಜೆಯ ಅವಧಿಯಲ್ಲಿ ಪ್ರಯತ್ನಿಸಬಾರದೇಕೆ? ಈ ಸಂಚಿಕೆಯ ಬಗ್ಗೆ ನಿಮ್ಮ ವಿದ್ಯಾರ್ಥಿಗಳಿಗೂ, ಸಹೋದ್ಯೋಗಿಗಳಿಗೂ, ಬಂಧು, ಮಿತ್ರರಿಗೂ ತಿಳಿಸಿ. ಅªರೂ ಓದುವಂತೆ ಪ್ರೇರೇಪಿಸಿ.

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

No comments:

Post a Comment