ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, May 4, 2022

ಸಿಡುಬಿಗೊಂದು ಲಸಿಕೆ

ಸಿಡುಬಿಗೊಂದು ಲಸಿಕೆ

ಡಾ.ಎಂ. ಜೆ. ಸುಂದರರಾಮ್

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಹಾಗೂ ವಿಜ್ಞಾನ ಸಂವಹನಕಾರರು



ರೋಮಾಂಚಕವಾಗಿ ವಿಜ್ಞಾನದ ಕತೆಗಳನ್ನು ಹೇಳುವುದರಲ್ಲಿ ಸಿದ್ಧಹಸ್ತರಾದ ಡಾ. ಎಂ.ಜೆ. ಸುಂದರರಾಮ್ ಅವರು ಈ ಲೇಖನದಲ್ಲಿ ಎಡ್ವರ್ಡ್ ಜೆನ್ನರ್ ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದ ಘಟನೆಯನ್ನು ಸ್ವಾರಸ್ಯವಾಗಿ ವಿವರಿಸಿದ್ದಾರೆ.

ಸಿಡುಬು ರೋಗವು ಸಾವಿರಾರು ವರ್ಷಗಳಿಂದ ಮಾನವ ಸಂಕುಲವನ್ನು ಹೊಕ್ಕು, ಸುಮಾರು ೪೦%ಗಿಂತಲೂ ಅಧಿಕ ರೋಗಿಗಳನ್ನು ಬಲಿತೆಗೆದುಕೊಂಡಿರುವ ಒಂದು ಅತ್ಯಂತ ಭಯಾನಕ ರೋಗ. ಇದರಿಂದ ಬದುಕುಳಿದ ಅದೃಷ್ಟವಂತರಲ್ಲಿ ಬಹುಮಂದಿಯ ಮೈಯಲ್ಲಿ ಕಲೆಗಳು ಶಾಶ್ವತವಾಗಿ ನೆಲಸಿ, ನೋಡಲು ಅಸಹ್ಯವಾಗಿ ಕಾಣುವಂತೆ ಮಾಡುತ್ತದೆ. ಹೆಣ್ಣುಮಕ್ಕಳ ಗತಿಯಂತೂ ಅತಿ ಚಿಂತಾಜನಕವಾದುದು.

ಸಿಡುಬಿನಿಂದ ಚೇತರಿಸಿಕೊಂಡ ರೋಗಿಗಳು ಈ ರೋಗದಿಂದ ನಿರೋಧಕ ಶಕ್ತಿಯನ್ನು ಗಳಿಸಿಕೊಳ್ಳು ತ್ತಾರೆ ಎಂಬ ವಿಷಯವನ್ನು ಮೊಟ್ಟಮೊದಲು ಚೀನೀಯರು ಗುರುತಿಸಿದರು. ಆರೋಗ್ಯವಂತನ ಚರ್ಮವನ್ನು ಗೀರಿ, ಅಲ್ಲಿಂದ ಹೊಮ್ಮುವ ರಕ್ತದ ಮೇಲೆ ರೋಗಿಯ ಒಣಗುಳ್ಳೆಯಿಂದ ತೆಗೆದ ಹೊಟ್ಟನ್ನು ಲೇಪಿಸಿ, ಅವನು ಲಘುವಾಗಿ ರೋಗದಿಂದ ನರಳಿ, ಚೇತರಿಸಿಕೊಂಡು, ರೋಗನಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುವಂತೆ ಚೀನೀಯರು ಮಾಡುತ್ತಿದ್ದರು. ಆದರೆ, ಒಣಗುಳ್ಳೆಯಲ್ಲಿ ಕೆಲವೊಮ್ಮೆ ರೋಗಾಣುಗಳು ಉಗ್ರವಾಗಿದ್ದುದರಿಂದ ಕೆಲವರು ಇದನ್ನು ತಡೆಯಲಾರದೆ ರೋಗಕ್ಕೆ ತುತ್ತಾಗಿ ಭೀಕರವಾಗಿ ಸಾಯುತ್ತಿದ್ದರು. ಈ ತಾಂತ್ರಿಕತೆ ಚೀನಾದಿಂದ ಭಾರತಕ್ಕೆ ರವಾನೆಯಾಯಿತು. ಹದಿನೇಳನೆಯ ಶತಮಾನದಲ್ಲಿ ಭಾರತದಿಂದ ಯೂರೋಪನ್ನು ತಲುಪಿತು.

ಎಡ್‌ವರ್ಡ್ ಜೆನ್ನರ್ (Edward Jenner)  ಇಂಗ್ಲೆಂಡಿನ ಗ್ಲಾಸಸ್ಟರ್‌ಶೈರ್‌ನಲ್ಲ್ಲಿ ಹೆಸರಾಂತ ವೈದರಾಗಿದ್ದರು. ಅನಾರೋಗ್ಯದಿಂದ ನರಳುತ್ತಿದ್ದ ಸಾರಾನೆಲ್‌ಮ್ಸ್ (Sarah Nelms) ಎಂಬ ಗೌಳಿಗಿತ್ತಿ (milkmaid) ಒಬ್ಬಳು ಚಿಕಿತ್ಸೆಗಾಗಿ ಜೆನ್ನರ್ ಅವರನ್ನು ಕಾಣಲು ಬಂದಳು. ವಿವರವಾಗಿ ಪರೀಕ್ಷಿಸಿದ ಜೆನ್ನರ್, ಅವಳು ಸಿಡುಬಿನಿಂದ ನರಳುತ್ತಿರುವಳೆಂದು ಶಂಕಿಸಿದರು. ಅದಕ್ಕೆ, ಆ ಗೌಳಿಗಿತ್ತಿ ‘ನಾನಾಗಲೇ ದನ ಸಿಡುಬಿನಿಂದ ನರಳಿ ಚೇತರಿಸಿಕೊಂಡಿದ್ದೇನೆ. ಆದ್ದರಿಂದ ನನಗೀಗ ಸಿಡುಬು ಸೋಂಕಲಾರದು’ ಎಂದು ಆತ್ಮವಿಶ್ವಾಸದಿಂದ ಹೇಳಿದಳು. ಅವಳ ಉತ್ತರದಿಂದ ಜೆನ್ನರ್ ಅವಾಕ್ಕಾದರು. ತಾವೊಬ್ಬ ಅನುಭವಸ್ಥ ವೈದ್ಯರಾಗಿದ್ದರೂ ಈ ರೀತಿಯ ವಿಚಾರವನ್ನು ಕೇಳಿಯೇ ಇರಲಿಲ್ಲವಲ್ಲ ಎಂದು ಚಿಂತಿಸತೊಡಗಿದರು. ಅವಳ ಉತ್ತರ ಜೆನ್ನರ್‌ರ ಮನದಲ್ಲಿ ಆಳವಾಗಿ ನಾಟಿತು. ಅವಳ ಈ ಅನುಭವ ನಿಜವಿರಬಹುದೆ? ಹಾಗಾದರೆ ಈ ಸತ್ಯಸಂಗತಿ ವೈದ್ಯರಿಗೆ ಏಕೆ ಗೊತ್ತಾಗಿಲ್ಲ ಎಂದೆಲ್ಲ ಯೋಚಿಸಲಾರಂಭಿಸಿದರು. ದಿನಗಳುರುಳಿದವು. ಗೌಳಿಗಿತ್ತಿ ಆಡಿದ ಮಾತು ಜೆನ್ನರ್ ಅವರ ಕಿವಿಯಲ್ಲಿ ಇನ್ನೂ ಮೊಳಗುತ್ತಲೇ ಇತ್ತು. ಕುತೂಹಲದಿಂದ ಇದರ ಬಗ್ಗೆ ಅವರಿವರನ್ನು ಕೇಳಿ ವಿಷಯವನ್ನು ಸಂಗ್ರಹಿಸುತ್ತಲೇ ಇದ್ದರು. ‘ನೀನೇನಾದರೂ ಸಿಡುಬುರೋಗ ಸೋಂಕದಂತಹ ಹೆಣ್ಣನ್ನೇ ಮದುವೆಯಾಗ ಬಯಸಿದರೆ, ಆಗೌಳಿಗಿತ್ತಿಯನ್ನೇ ಮದುವೆಯಾಗಬೇಕಾದೀತು’ ಎಂದು ಜೆನ್ನರ್‌ರ ಸ್ನೇಹಿತರು ಅವರನ್ನು ಹಾಸ್ಯ ಮಾಡಿದರು. ಇವರ ಮಾತುಗಳೆಲ್ಲವನ್ನೂ ಕೇಳಿಸಿಕೊಂಡ ಜೆನ್ನರ್, ಗೌಳಗಿತ್ತಿಯ ಹೇಳಿಕೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸಿ ನೋಡಿಬಿಡಬೇಕೆಂದು ನಿಶ್ಚಯಿಸಿದರು.

ದನಸಿಡುಬು ರೋಗ ಹೆಚ್ಚುಕಡಿಮೆ ಸಿಡುಬು ರೋಗವನ್ನು ಹೋಲುತ್ತಿದ್ದರೂ, ಸಿಡುಬಿನಷ್ಟು ಜೆನ್ನರ್ ತೀವ್ರವಲ್ಲ. ಜೆನ್ನರ್ ಸ್ಥಳೀಯ ರೈತನೊಬ್ಬನನ್ನು ಕಂಡು, ಸಿಡುಬು ಸೋಂಕುವ ರೀತಿಯನ್ನೂ, ಅದು ಬರದಂತೆ ತಡೆಯಬಹುದಾದ ಸಾಧ್ಯತೆಗಳನ್ನೂ ಅವನಿಗೆ ವಿವರಿಸಿ, ತಮ್ಮ ಸಿದ್ಧಾಂತವನ್ನು ಸಂಶೋಧಿಸಲು ಅವನ ಎಂಟು ವಯಸ್ಸಿನ ಮಗ ಜೇಮ್ಸ್ನನ್ನು ಬಳಸಿಕೊಳ್ಳಲು ಆ ರೈತನ ಅನುಮತಿ ಕೋರಿದರು. ರೈತನು ಜೆನ್ನರ್‌ರ ಬೇಡಿಕೆಗೆ ತನ್ನ ಸಮ್ಮತಿಯನ್ನು ಸೂಚಿಸಿದನು.

ಜೇಮ್ಸ್ನನ್ನು ತನ್ನ ಆಸ್ಪತ್ರೆಗೆ ಕರೆತಂದು, ಜೆನ್ನರ್ ಅವನ ಎಡಗೈ ಮೇಲೆ ಚಾಕುವಿನಿಂದ ಎರಡು ಗೆರೆಗಳನ್ನು ಗೀರಿದರು. ಆ ಗೆರೆಗಳಿಂದಾದ ಗಾಯದಿಂದ ರಕ್ತವು ಜಿನುಗಿ ಸೋರಲಾರಂಭಿಸಿತು. ದನ ಸಿಡುಬಿನಿಂದ ನರಳುತ್ತಿದ್ದ ರೋಗಿಯ ಸಿಡುಬಿನ ಗುಳ್ಳೆಯಿಂದ ಜೆನ್ನರ್ ಸ್ವಲ್ಪ ಕೀವನ್ನು ಹೊರತೆಗೆದು ಅದನ್ನು ರಕ್ತ ಜಿನುಗುತ್ತಿದ್ದ ಜೇಮ್ಸ್ನ ಕೈ ಗಾಯದ ಮೇಲೆ ಲೇಪಿಸಿದರು. ಜೇಮ್ಸ್ಗೆ ೨-೩ ದಿನಗಳಲ್ಲಿ ದನಸಿಡುಬು ಸೋಂಕಿತು. ಸೋಂಕಿನಿಂದ ಅವನ ಚರ್ಮ ಕೆಂಪಾಗಿ ರಕ್ತ ಮತ್ತು ಕೀವಿನಿಂದ ತುಂಬಿದ ಗುಳ್ಳೆಗಳಾದವು. ಕ್ರಮೇಣ ಗುಳ್ಳೆಗಳು ಪೊರೆಬಿಟ್ಟು, ಚರ್ಮ ಒಣಗಿ ಗಾಯದ ಕಲೆಗಳಾದವು. ಸುಮಾರು ೧೦-೧೫ ದಿನಗಳಲ್ಲಿ ಗಾಯದ ಕಲೆಗಳು ಮಂಕಾಗುತ್ತ ಬಂದು ಮಾಸಿಹೋದವು.

ಈಗ ಜೆನ್ನರ್ ಅತಿ ಭಯಾನಕವಾದ ಪ್ರಯೋಗವನ್ನು ಮಾಡಲು ಸಜ್ಜಾದರು. ಆ ಹುಡುಗನ ಜೀವ ಮತ್ತು ಭವಿಷ್ಯದೊಡನೆ ಜೆನ್ನರ್ ಚೆಲ್ಲಾಟವಾಡುವ ದುಸ್ಸಾಹಸ ಮಾಡಿದರು. ಜೆನ್ನರ್ ಅವರ ವೈದ್ಯಕೀಯ ಭವಿಷ್ಯವೂ ಈ ದುಸ್ಸಾಹಸzಲ್ಲಿ ಅಡಗಿತ್ತು. ಸಿಡುಬಿನಿಂದ ಚೇತರಿಸಿಕೊಂಡು ಆರು ವಾರಗಳಾದ ನಂತರ ಸಿಡುಬು ರೋಗಿಯೊಬ್ಬನ ಮೈಗುಳ್ಳೆ (blister)ಯಿಂದ ಕೀವನ್ನು ತೆಗೆದು ಅದನ್ನು ಜೇಮ್ಸ್ನ ಗಾಯದ ಮೇಲೆ ಲೇಪಿಸಿದರು.

ಜೆನ್ನರ್‌ರ ಮೈಯೆಲ್ಲ ನಡುಗತೊಡಗಿತು. ಮುಖದಿಂದ ಬೆವರಿಳಿಯತೊಡಗಿತು. ಎದೆ ಡವಡವ ಹೊಡೆದು ಕೊಳ್ಳಲಾರಂಭಿಸಿತು. ಆ ಹುಡುಗನನ್ನು ಅನ್ಯಾಯವಾಗಿ ಬಲಿಪಶು ಮಾಡಿಬಿಟ್ಟೆನಲ್ಲ ಎಂದು ಮರುಗಿದರು.

ಭಯ ಭೀತಿಯಿಂದ ಕೊಠಡಿಯೊಳಗೆ ಶಥಪಥ ಓಡಾಡಲಾರಂಭಿಸಿದರು. ಊಟ, ನಿದ್ರೆ, ತೊರೆದು, ಆ ಹುಡುಗನನ್ನೇ ನೋಡುತ್ತ ನಿಂತರು. ದಿನಗಳು ಉರುಳಿದವು. ಆ ಹುಡುಗನ ದೇಹದಲ್ಲಿ ರೋಗದ ಯಾವುದೇ ಕುರುಹು ಕಾಣಲಿಲ್ಲ. ಅವನು ಆರೋಗ್ಯವಾಗಿಯೇ ಓಡಾಡಿಕೊಂಡಿದ್ದ! ಆನಂದಾಶ್ಚರ್ಯ ಗಳಿಂದ ಜೆನ್ನರ್ ಉದ್ರಿಕ್ತರಾದರು. ‘ಕಂಡುಹಿಡಿದೆ, ಕಂಡುಹಿಡಿದೆ’ ಎಂದು ಕೂಗುತ್ತಾ ನೀರಿನ ತೊಟ್ಟಿಯಿಂ ದೆದ್ದು ಬೆತ್ತಲÉಯಾಗಿ ಬೀದಿಗಳಲ್ಲಿ ಓಡಿಹೋದ ಆರ್ಕಿಮಿಡೀಸ್‌ಗಿಂತಲೂ ಷಿÉಚ್ಚು ಸಂತೋಷವಾಗಿರಬೇಕು ಜೆನ್ನರ್‌ಗೆ. ಕುಣಿದು ಕುಪ್ಪಳಿಸಿದರು. ಜನ ಹೆಸರು ಹೇಳಲೂ ಹಿಂಜರಿದು ನಡುಗುತ್ತಿದ್ದ ಭೀಕರ ಸಿಡುಬು ರೋಗವನ್ನು ಬಗ್ಗುಬಡಿಯುವ ವೈಜ್ಞಾನಿಕ ವಿಧಾನವನ್ನು ಕಂಡುಹಿಡಿದಾಗ ಯಾರಿಗೆ ತಾನೆ ಸುಮ್ಮನಿರಲು ಸಾಧ್ಯ?

ಆದರೆ, ಜೆನ್ನರ್ ಇಷ್ಟಕ್ಕೇ  ಸುಮ್ಮನಾಗಲಿಲ್ಲ. ತಾವು ಜೇಮ್ಸ್ಗೆ ಲೇಪಿಸಿದ್ದ ಸಿಡುಬು ರೋಗಿಯ ಕೀವಿನಲ್ಲಿದ್ದ ರೋಗಾಣುಗಳು ಸೌಮ್ಯವಾಗಿದ್ದವೇನೋ? ಅದರಿಂದಲೇ ಅವನಿಗೆ ಯಾವ ರೀತಿಯ ಜ್ವರದ

ಲಕ್ಷಣಗಳೂ ಕಂಡುಬರದಿರಬಹುದು ಎಂದು ಅವರಿಗೆ ಅನ್ನಿಸಿತ್ತು. ಕೆಲ ದಿನಗಳ ಬಳಿಕ ಮತ್ತೊಬ್ಬ ಸಿಡುಬು 

ರೋಗಿಯ ಕೀವನ್ನು ಹೊರತೆಗೆದು ಜೇಮ್ಸ್ನ ಗಾಯದ ಮೇಲೆ ಮತ್ತೆ ಲೇಪಿಸಿದರು. ಈಗಲೂ ಆ ಹುಡುಗ ಜಗ್ಗಲಿಲ್ಲ ! ಗೌಳಗಿತ್ತಿಯಲ್ಲಿ ಆಳವಾಗಿ ಬೇರೂರಿದ್ದ ಗಾಢನಂಬಿಕೆ ಅಂದು ಅಕ್ಷರಶಃ ನಿಜವಾಗಿತ್ತು.

ಈ ನಂಬಿಕೆಯ ಹಿನ್ನೆಲೆಯೇನು? ನಮ್ಮ ದೇಹವನ್ನು ಪ್ರವೇಶಿಸುವ ಪರವಸ್ತುವಿಗೆ ಪ್ರತಿಜನಕ (Antigen) ಎಂದು ಹೆಸರು. ಹಾಗಾದರೆ ನಮ್ಮ ದೇಹವನ್ನು ಪ್ರವೇಶಿಸುವ ರೋಗಾಣುಗಳು ಪ್ರತಿಜನಕಗಳೇ ಅಲ್ಲವೆ? ಇವು, ನಮ್ಮ ದೇಹದಲ್ಲಿ ಬಲುಬೇಗ ವೃದ್ಧಿಯಾಗಿ ನಂಜನ್ನು ವಿಸರ್ಜಿಸುವುದರಿಂದ ನಮಗೆ ರೋಗ ತಗಲುತ್ತದೆ. ಈ ಪ್ರತಿಜನಕಗಳು ನಮ್ಮ ಶರೀರÀವನ್ನು ಪ್ರವೇಶಿಸಿದಾಗ ಇವುಗಳ ವಿರುದ್ಧ ಹೋರಾಡಲು

ನಮ್ಮ ದೇಹ ಸಿದ್ಧವಾಗುತ್ತದೆ. ನಮ್ಮ ರಕ್ತದಲ್ಲಿರುವ ಬಿಳಿ ರಕ್ತಕಣಗಳು ಪ್ರತಿಕಾಯ (Antibody) ಎಂಬ ಅಂಶವನ್ನು ತಯಾರಿಸುತ್ತವೆ. ಇವು ಒಳನುಸುಳಿರುವ ರೋಗಾಣುಗಳೊಡನೆ ಹೋರಾಡಿ, ಅವನ್ನು

ನಿರ್ಮೂಲ ಮಾಡುತ್ತವೆ. ಆದರೆ ಪ್ರತಿಕಾಯಗಳ ಉತ್ಪತ್ತಿ ಒಂದು ನಿಧಾನ ಪ್ರಕ್ರಿಯೆ. ದೇಹದಲ್ಲಿರುವ ಪ್ರತಿ ಜನಕಗಳ ವಿರುದ್ಧ ಹೋರಾಡಲು ಲಕ್ಷಾಂತರ ಪ್ರತಿಕಾಯಗಳು ಬೇಕು. ಅವನ್ನು ತಯಾರಿಸಲು ಸಮಯ

ಬೇಕು. ಅಷ್ಟರಲ್ಲಿ ದೇಹದೊಳಗೆ ರೋಗಾಣುಗಳು ನೆಲೆಯೂರಿ, ವೃದ್ಧಿಸಿ, ರೋಗವನ್ನುಂಟುಮಾಡುತ್ತವೆ.

ಪ್ರತಿಜನಕಗಳೆಲ್ಲವನ್ನೂ ನಾಶಪಡಿಸಿದ ಮೇಲೂ ಪ್ರತಿಕಾಯಗಳು ನಮ್ಮ ರಕ್ತದಲ್ಲಿ ಹಾಗೆಯೇ ಉಳಿಯು ತ್ತವೆ. ಅನೇಕ ವರ್ಷಗಳ ನಂತರ ಮತ್ತೊಮ್ಮೆ ಅದೇ ಪ್ರತಿಜನಕಗಳು ನಮ್ಮ ದೇಹವನ್ನು ಹೊಕ್ಕು ವೃದ್ಧಿ ಯಾಗತೊಡಗಿದಾಗ ಈಗಾಗಲೇ ರಕ್ತದಲ್ಲಿ ಬೀಡುಬಿಟ್ಟಿರುವ ಪ್ರತಿಕಾಯಗಳು ಈ ಹೊಸ ಪ್ರತಿಜನಕಗಳನ್ನು ಗುರುತಿಸಿ ಕ್ಷಣಮಾತ್ರದಲ್ಲಿ ಅವನ್ನು ಧ್ವಂಸಮಾಡಿಬಿಡುತ್ತವೆ. ಇದರಿಂದ, ನಾವು ಮತ್ತೊಮ್ಮೆ ಅದೇ ರೋಗದಿಂದ ನರಳುವುದಿಲ್ಲ. ಅಂದರೆ, ನಾವೀಗ ಆ ರೋಗದ ವಿರುದ್ಧ ನಿರೋಧಕ ಶಕ್ತಿಯನ್ನು ಗಳಿಸಿಕೊಂಡಿದ್ದೇವೆ. ಈ ರೀತಿಯ ಪ್ರತಿಜನಕ-ಪ್ರತಿಕಾಯಗಳ ಕಾಳಗದ ಅಧ್ಯಯನಕ್ಕೆ ರೋಗರಕ್ಷಾಶಾಸ್ತç (Immuಟಿoogಥಿ) ಎಂದು ಹೆಸರು.

ಒಮ್ಮೆ ಒಂದು ರೋಗದಿಂದ ನರಳಿ ಚೇತರಿಸಿಕೊಂಡರೆ ಸಾಮಾನ್ಯವಾಗಿ ನಾವು ಮತ್ತೊಮ್ಮೆ ಆ ರೋಗ

ದಿಂದ ಏಕೆ ನರಳುವುದಿಲ್ಲವೆಂದು ತಿಳಿದುಕೊಂಡೆವು. ಇದೊಂದು ಸಹಜ ಕ್ರಿಯೆ. ಆದರೆ, ಜೆನ್ನರ್

ನಡೆಸಿದ ಪ್ರಯೋಗ ಭಿನ್ನವಾಗಿತ್ತು. ಬಾಲಕ ಜೇಮ್ಸ್ ಸಿಡುಬು ರೋಗದಿಂದ ಸಹಜವಾಗಿ ನರಳಲಿಲ್ಲ. ಆದರೆ, ಅವನ ದೇಹಕ್ಕೆ ರೋಗಾಣುಗಳನ್ನು ಉದ್ದೇಶಪೂರ್ವಕವಾಗಿ ಚುಚ್ಚಲಾಗಿ, ಅವನಿಗೆ ರೋಗ ಬರಿಸಲಾಗಿತ್ತು. ಹೀಗೆ. ಉದ್ದೇಶಪೂರ್ವಕವಾಗಿ ಪ್ರತಿಜನಕಗಳನ್ನು ಕೃತಕವಾಗಿ ದೇಹದಲ್ಲಿ ಸೇರಿಸಿ ನಿರೋಧಕತೆಯುಂಟು ಮಾಡುವ ಕ್ರಿಯೆಗೆ ಕೃತಕ ರೋಗನಿರೋಧತೆ (Artificial immunity) ಎಂದು ಹೆಸರು.

ದುರ್ಬಲ ಅಥವ ಸತ್ತ ರೋಗಾಣುಗಳನ್ನು ನಮ್ಮ ದೇಹದೊಳಗೆ ಸೇರಿಸಿದಾಗ ಅವು ರೋಗವನ್ನುಂಟು ಮಾಡಲಾರವು. ಆದರೆ. ನಮ್ಮ ರಕ್ಷಾವ್ಯವಸ್ಥೆ ಪ್ರತಿಜನಕಗಳ ವಿರುದ್ಧ ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿಯೇ ತೀರುತ್ತದೆ. ಇಂತಹ ದುರ್ಬಲ ಅಥವ ಸತ್ತ ರೋಗಾಣುಗಳಿಗೆ ಲಸಿಕೆ (Vaccine) ಎಂದು ಹೆಸರು. ಲಸಿಕೆಗಳನ್ನು ಕೃತಕವಾಗಿ ಚುಚ್ಚಿ ನಿರೋಧತೆಯನ್ನುಂಟುಮಾಡುವ ತಾಂತ್ರಿಕತೆಗೆ ಲಸಿಕೆ ಹಾಕುವಿಕೆ ಅಥವ ದೇವಿಹಾಕುವಿಕೆ (Vaccination) ಎಂದು ಹೆಸರು. ಜೆನ್ನರ್ ಪ್ರಯೋಗದಿಂದ ಹೊರಬಂದ ಈ ಸತ್ಯವೇ ರೋಗರಕ್ಷಾಶಾಸ್ತçದ ಬುನಾದಿಯಾಗಿದೆ. ತಾವು ಮಾಡಿದ ಪ್ರಯೋಗವನ್ನೂ, ಅದರಿಂದ ದೊರೆತ ಮಾಹಿತಿಯನ್ನು ಜೆನ್ನರ್ ೧೭೯೭ರಲ್ಲಿ ರಾಯಲ್ ಸೊಸೈಟಿಗೆ ಸಂಶೋಧನಾ ಪತ್ರದಲ್ಲಿ ತಿಳಿಸಿದರು. ಆದರೆ ಸೊಸೈಟಿ ಇದನ್ನು ಒಪ್ಪದೆ ತಿರಸ್ಕರಿಸಿತು.

 

ಪ್ರತಿ ಪ್ರತಿಜನಕಕ್ಕೂ ಒಂದು ನಿಖರ (specific) ಪ್ರತಿಕಾಯವಿದೆ. ಕೆಲವು ಪ್ರತಿಕಾಯಗಳು ಒಬ್ಬ ವ್ಯಕ್ತಿಯ ದೇಹದಲ್ಲಿ ಜೀವನಪೂರ್ತಿ ಉಳಿದು, ಅವುಗಳಿಂದಾಗುವ ರೋಗವನ್ನು ತಡೆಗಟ್ಟುತ್ತವೆ. ಆ ವ್ಯಕ್ತಿ ತನ್ನ ಜೀವನದಲ್ಲಿ ಮತ್ತೊಮ್ಮೆ ಆ ರೋಗದಿಂದ ನರಳುವುದಿಲ್ಲ. ಮತ್ತೆ ಕೆಲವು ಪ್ರತಿಕಾಯಗಳು ತಾತ್ಕಾಲಿಕವಾಗಿ ಚುರುಕಾಗಿದ್ದು ಶೀಘ್ರ ನಶಿಸಿಹೋಗುತ್ತವೆ. ಆಗ ಆ ವ್ಯಕ್ತಿ ಪದೇ ಪದೇ ಆ ರೋಗದಿಂದ ನರಳುತ್ತಾನೆ.

No comments:

Post a Comment