ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, July 4, 2022

ಸಂಘಟನಾ ಚತುರ, ಹೆಮ್ಮೆಯ ಶಿಕ್ಷಕ ಶ್ರೀ ಸಂಗನ ಶರಣ ಚನ್ನಬಸವ ವೀರಬಸಪ್ಪ ಬುರ್ಲಿ

ಸಂಘಟನಾ ಚತುರ, ಹೆಮ್ಮೆಯ ಶಿಕ್ಷಕ ಶ್ರೀ ಸಂಗನ ಶರಣ ಚನ್ನಬಸವ ವೀರಬಸಪ್ಪ ಬುರ್ಲಿ

                                                                                     ಲೇಖನ: ಶ್ರೀ ರಾಮಚಂದ್ರ ಭಟ್  B.G

ʼಸವಿಜ್ಞಾನʼದ ಕಳೆದ ಸಂಚಿಕೆಯಲ್ಲಿ  ಕಾಬಾಳೆಯ ಬಗ್ಗೆ ಬಂದಿದ್ದ ಲೇಖನ ಓದಿದ ನೆನಪಿರಬಹುದು. ಈ ಲೇಖನದ ಮೂಲಕ ನಮ್ಮ ಬರಹಗಾರರ ಬಳಗ ಸೇರಿರುವ ಶಿಕ್ಷಕ ಶ್ರೀ ಬುರ್ಲಿ ಅವರ ಅಸಾಧಾರಣ ಸಾಧನೆಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ, ಶ್ರೀ ರಾಮಚಂದ್ರ ಭಟ್‌ ಅವರು

ಮೇಲಿನ ಶೀರ್ಷಿಕೆ ನೋಡಿ ಬೇಸ್ತು ಬಿದ್ದುಬಿಟ್ಟೀರಿ!!! ಇದೇನು? ಈ ಬಾರಿ ಎಷ್ಟು ಜನ ಶಿಕ್ಷಕರನ್ನು ಪರಿಚಾಯಿಸುತ್ತಿದ್ದೀರಿ ಎಂಬ ಅನುಮಾನ ಬಂತೆ? ಹಲವು ಶಿಕ್ಷಕರ ಹೆಸರನ್ನು ಬರೆದಿದ್ದೇನೆ ಎಂದು ನಿಮಗೆ ಅನಿಸಿರಬಹುದು. ಎಸ್. ವಿ. ಬುರ್ಲಿ ಎಂದೇ ಪರಿಚಿತರಾದ, ಇವರ ಹೆಸರಿನಂತೆ ಸುದೀರ್ಘ ಕಾಲದ ವೃತ್ತಿ ಜೀವನದಲ್ಲಿ ಬುರ್ಲಿಯವರು ಸಾಧಿಸಿದ್ದೂ ಅಷ್ಟೇ ಮಹತ್ತರವಾದ್ದು. ಇವರ ಕೀರ್ತಿಯು ರಾಷ್ಟ್ರಮಟ್ಟದವರೆಗೆ ವ್ಯಾಪಿಸಿದೆ. ರಾಷ್ಟ್ರಮಟ್ಟದಲ್ಲಿ ಉತ್ತಮ ಸಂಘಟನಾ ಚತುರನಾಗಿ, ಪ್ರಸ್ತುತ NCTS-Indiaದ ದಕ್ಷಿಣ ಭಾರತದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ, ಬಂಜಾರ ಪ್ರೌಢಶಾಲೆ ವಿಜಯಪುರದ ಗಣಿತ-ವಿಜ್ಞಾನ ಶಿಕ್ಷಕರಾದ ಎಸ್. ವಿ. ಬುರ್ಲಿಯವರೆ ಈ ತಿಂಗಳ ಸಾಧಕ ಶಿಕ್ಷಕರು. ಇಂತಹ ಅತ್ಯಂತ ಕ್ರಿಯಾಶೀಲ, ಪಾದರಸವೇ ನಾಚುವಂತಹ ಬತ್ತದ ಅತ್ಯುತ್ಸಾಹದ, ಶಿಕ್ಷಕರಿಗೆ ಸದಾ ಸ್ಪೂರ್ತಿಯ ಸೆಲೆಯಂತಿರುವ ಗಣಿತ-ವಿಜ್ಞಾನ ಶಿಕ್ಷಕರಾದ ಶ್ರೀಯುತ ಬುರ್ಲಿಯವರನ್ನು ಪರಿಚಯಿಸಲು ಸಂತೋಷವಾಗುತ್ತದೆ. ಇವರ ಸಾಧನಾ ಪಥ ಶಿಕ್ಷಕರಿಗೆ ಪ್ರೇರಣೆಯೂ ಹೌದು.


    ವೈಜ್ಞಾನಿಕ ಮಾಸ ಪತ್ರಿಕೆಗಳಾದ “ಬಾಲವಿಜ್ಞಾನ”, “ಶಿಕ್ಷಣ ಶಿಲ್ಪಿ” ಹಾಗೂ “ಗುಬ್ಬಚ್ಚಿಗೂಡು” ಹಾಗೂ ನಮ್ಮ ʼಸವಿಜ್ಞಾನʼಗಳಲ್ಲಿ ವೈವಿಧ್ಯಮಯ ಗಣಿತ ಮತ್ತು ವೈಜ್ಞಾನಿಕ ಲೇಖನಗಳು ಹಾಗೂ ಕವನಗಳನ್ನು ಬರೆದಿದ್ದಾರೆ. ಕಳೆದ ೨-೩ ದಶಕಗಳಿಂದ ಪ್ರಾಥಮಿಕ, ಪ್ರೌಢಶಾಲೆ, ಪಿ.ಯುಕಾಲೇಜು, ಬಿ.ಇಡಿ ಹಾಗೂ ಡಿ.ಇಡಿ ಕಾಲೇಜುಗಳಲ್ಲಿ ವಿಜ್ಞಾನ ಜನಪ್ರಿಯಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. Low cost  No cost ವಸ್ತುಗಳಿಂದ ಬೋಧನೋಪಕರಣಗಳನ್ನು ತಯಾರಿಸಿ ಶಿಕ್ಷಕರಿಗೆ ಅನೇಕ ತರಬೇತಿ  ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದ್ದಾರೆ. ದೆಹಲಿ, ನೊಯಿಡಾದ ವಿಜ್ಞಾನ ಪ್ರಸಾರದಿಂದ  ಅಫಿಲಿಯೇಷನ್ ಪಡೆದ (VP-KA0019) ವಿಪ್‌ನೆಟ್‌ನ ಆರ್ಯಭಟ ವಿಜ್ಞಾನ ಕ್ಲಬ್ ಸಂಚಾಲಕನಾಗಿ, ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ಇದರ ಸದಸ್ಯರಾಗಿ, ಕರ್ನಾಟಕ  ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಬೆಳಗಾವಿ ವಿಭಾಗದ  ಜಂಟಿ ಕಾರ್ಯದರ್ಶಿಯಾಗಿ, ಪವಾಡ ರಹಸ್ಯ ಬಯಲುಗಳಂತಹ ಸಾಮಾಜಿಕ ಕಳಕಳಿಯ ವೈಜ್ಞಾನಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿಶೇಷವಾಗಿ ರಾಜ್ಯಮಟ್ಟದ ಡಿಜಿಟಿಲ್ ಸಂಪನ್ಮೂಲ ವ್ಯಕಿಯಾಗಿ (SDRP) KOER ವೆಬ್‌ಸೈಟ್‌ನಲ್ಲಿ ಲೇಖನ ಹಾಗೂ ಪ್ರಯೋಗಗಳ ಕುರಿತಾದ ಸಂಪನ್ಮೂಲ ರಚಿಸಿದ್ದಾರೆ. ಇವರ  YouTube ಚಾನೆಲ್ ನಲ್ಲಿ ವಿಜ್ಞಾನ ಮತ್ತು ಗಣಿತದ ೯೮ ಕ್ಕೂ ಹೆಚ್ಚು ಪ್ರಯೋಗಗಳು ಸಾವಿರಾರು ಜನರ ಮೆಚ್ಚುಗೆಯನ್ನು ಪಡೆದಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಡಿ.ಎಸ್.ಇ.ಆರ್.ಟಿ. ಇವರು ಆಯೋಜಿಸಿದ “ಮಕ್ಕಳ ವಾಣಿ” ಕಾರ್ಯಕ್ರಮದಲ್ಲಿ ಇವರ ವಿಜ್ಞಾನ ಪ್ರಯೋಗ ಹಾಗೂ ಮ್ಯಾಜಿಕ್  ವೀಡಿಯೊಗಳು ‘ಚಂದನ ಟಿವಿ’ಯಲ್ಲಿ ಪ್ರಸಾರಗೊಂಡಿವೆ. ದಿನಾಂಕ: ೨ನೇ ಆಗಸ್ಟ್ ೨೦೨೧ ರಿಂದ ೨೭ನೇ ಆಗಸ್ಟ್ ೨೦೨೧ರ ವರೆಗೆ, ಸಿಟಿಜನ್ ಸೈಂಟಿಸ್ಟ ಆಗಿ ಚುಕ್ಕೆ ಗಾತ್ರದ ಕ್ಷದ್ರಗ್ರಹಗಳ ಆಯ್ಕೆಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ವಿವಿಧ ಸ್ಪರ್ಧೆಗಳಿಗೆ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ೨೦೦೫-ಮಂಡ್ಯ, ೨೦೦೬-ಚಿಕ್ಕಮಗಳೂರ, ೨೦೦೭-ಶಿವಮೊಗ್ಗ, ೨೦೦೮-ಮಂಗಳೂರಿನ ಪಿಲಿಕುಳ, ೨೦೦೯-ರಾಯಚೂರ, ೨೦೧೦-ಮೈಸೂರು, ೨೦೧೨-ಮಡಕೇರಿ, ೨೦೧೬-ಪುತ್ತೂರು (ದ.ಕ.), ೨೦೧೭-ಮೈಸೂರ, ೨೦೧೯-ಭಾಗಮಂಡಲ (ಮಡಿಕೇರಿ)ಗಳಲ್ಲಿ ಜರುಗಿದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆತಮ್ಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿ ಪ್ರಬಂಧ ಮಂಡನೆ ಮಾಡಲು ಮಾರ್ಗದರ್ಶನ ಮಾಡಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿರುವ ವಿಜ್ಞಾನವಸ್ತು ಪ್ರದರ್ಶನದಲ್ಲಿ ಇವರ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯುವಲ್ಲಿ ಶ್ರಮಿಸಿದ್ದಾರೆ. ಪ್ರಬಂಧ ಸ್ಪರ್ಧೆ, ರಸ ಪ್ರಶ್ನೆ, ವಿಜ್ಞಾನ ಗೋಷ್ಠಿಗಳಲ್ಲಿ ಭಾಗವಹಿಸಿದ ಇವರ ವಿದ್ಯಾರ್ಥಿಗಳು ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರಿಗಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಾದ ವಿಜ್ಞಾನ ಗೋಷ್ಠಿ, ಸ್ಥಳದಲ್ಲಿ ವಿಜ್ಞಾನ ಮಾದರಿ ತಯಾರಿಕೆ, ಗಣಿತ ಮಾದರಿಗಳ ತಯಾರಿಕಾ ಸ್ಪರ್ಧೆಗಳಲ್ಲಿ ಜಿಲ್ಲಾಮಟ್ಟ, ರಾಜ್ಯಮಟ್ಟಕ್ಕೆ, ವಿಭಾಗ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ, ೨೦೦೯ರಲ್ಲಿ ಕೇರಳದ ಕಣ್ಣನ್ನೂರಿನಲ್ಲಿ ಜರುಗಿದ  ದಕ್ಷಿಣ ಭಾರತದ ವಿಜ್ಞಾನ ಮೇಳದಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಿ ಪ್ರಶಸ್ತಿ ಪಡೆದಿದ್ದಾರೆ. ಡಿಸೆಂಬರ ೨೦೧೮ರಂದು ಜಿಲ್ಲಾ ವಿಜ್ಞಾನ ಚಟುವಟಿಕಾ ಕೇಂದ್ರದಲ್ಲಿ ಆಯೋಜಿಸಿದ್ದ “ಆಚಾರ್ಯ-ಶಿಕ್ಷಕರಿಗಾಗಿ ಮಾದರಿಗಳ ತಯಾರಿಕಾ ಸ್ಪರ್ಧೆ”ಯಲ್ಲಿ ದ್ವಿತೀಯ ಸ್ಥಾ£ದೊಂದಿಗೆ, ರಾಷ್ಟ್ರಮಟ್ಟದ ಜಿಜ್ಞಾಸಾ ಸ್ಪರ್ಧೆಗೆ ಆಯ್ಕೆಯಾದರು. ಡಿಸೆಂಬರ್-೨೦೧೯ರಲ್ಲಿ ಪುಣೆಯಲ್ಲಿ ಜರುಗಿದ “ಜಿಜ್ಞಾಸಾ-೨೦೧೯, ರಾಷ್ಟçಮಟ್ಟದ ವಿಜ್ಞಾನ ಮಾದರಿಗಳ ತಯಾರಿಕಾ ಸ್ಪರ್ಧೆ ಹಾಗೂ ಪ್ರದರ್ಶನ”ಗಳಿಗೆ ಆಯ್ಕೆಯಾಗಿದ್ದಾರೆ. 

    ೨೦೦೭ರಿಂದಲೂ ಕೂಡಲಸಂಗಮ, ಬೆಂಗಳೂರು, ಮಂಡ್ಯ, ಗುಲಬರ್ಗಾ, ಹಂಪಿ ಮೊದಲಾದ ಸ್ಥಳಗಳಲ್ಲಿ ನಡೆದ  ‘ಅಖಿಲ ಕರ್ನಾಟಕ ಉದಯೋನ್ಮುಖ ಕನ್ನಡ ವಿಜ್ಞಾನ ಲೇಖಕರ ಶಿಬಿರ’ದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಬೆಳಗಾವಿಯಲ್ಲಿ ನಡೆದ ‘State level Resource Persons Training Workshop on Model Rocketry’ ಯಲ್ಲಿ, “ಸಂಪ್ರತಿ-ಸಂವಹನ ಪ್ರಯೋಗ ತರಬೇತಿ” ‘ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ಪಠ್ಯಪೂರಕ ವಿಜ್ಞಾನ ಉಪನ್ಯಾಸಮಾಲೆ’ಯಲ್ಲಿ ಪಾಲ್ಗೊಂಡಿದ್ದಾರೆ. ‘‘ರಾಜ್ಯಮಟ್ಟದ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದಕಾರ್ಯಕ್ರಮ’ದಲ್ಲಿ ತಮ್ಮ ವಿದ್ಯಾರ್ಥಿಗಳೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಲೇ ಬಂದಿದ್ದಾರೆ.  

  • ೨೦೧೮ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಜರುಗಿದ “ಜಿಜ್ಞಾಸಾ-೨೦೧೮, ರಾಷ್ಟ್ರಮಟ್ಟದ ವಿಜ್ಞಾನ ಹಾಗೂ ಗಣಿತ ಮಾದರಿಗಳ ತಯಾರಿಕಾ ಸ್ಪರ್ಧೆ ಹಾಗೂ ಪ್ರದರ್ಶನದಲ್ಲಿ” ಇವರ ವಿದ್ಯಾರ್ಥಿಗಳು  ಪ್ರಥಮ ಸ್ಥಾನಗಳಿಸಿದ್ದಾರೆ.
  • ೨೦೧೮ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಜರುಗಿದ “ಜಿಜ್ಞಾಸಾ-೨೦೧೮, ರಾಷ್ಟçಮಟ್ಟದ ವಿಜ್ಞಾನ ಹಾಗೂ ಗಣಿತ ಮಾದರಿಗಳ ತಯಾರಿಕಾ ಸ್ಪರ್ಧೆ ಹಾಗೂ ಪ್ರದರ್ಶನದಲ್ಲಿ” ಇವರ ವಿದ್ಯಾರ್ಥಿಗಳು  ಪ್ರಥಮ ಸ್ಥಾನಗಳಿಸಿದ್ದಾರೆ, 
  • ೨೦೦೫ರಲ್ಲಿ ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಕ ವಿಜ್ಞಾನ ಸಮಾವೇಶದಲ್ಲಿ “Physics for everyone & Physics in daily life” ಕುರಿತು ವಿಷಯ ಮಂಡನೆ ,
  • ೨೦೦೬ ರ ಫೆಬ್ರುವರಿ ೦೨-೧೫ರವರೆಗೆ  - ಗ್ಯಾಂಗ್‌ಟಾಕ್ (ಸಿಕ್ಕಿಂ)ನಲ್ಲಿ ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರ “Creative approach towards education” ನಲ್ಲಿ ಭಾಗಿಯಾಗಿರುವುದು, 
  • ೨೨-೨೫ ಸೆಪ್ಟೆಂಬರ್ ೨೦೦೭-ಉತ್ತರಖಂಡದ ಡೆಹ್ರಾಡೂನ್‌ನಲ್ಲಿ Environmental Education for better life ವಿಷಯ ಮಂಡನೆ.
  • ೨೦೧೧- ವಾರಣಾಸಿಯಲ್ಲಿ Different waste management and innovative methods to control pollution ವಿಷಯ ಮಂಡನೆ.
  • ಡಿಸೆಂಬರ್ ೨೦೧೫ - ಪುಣೆಯ ISER ನಲ್ಲಿಜರುಗಿದ ಸಮಾವೇಶದಲ್ಲಿ “Innovative use of low cost/no cost Teaching- learning materials” ಕುರಿತು ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡಿಕೆ. 
  • ೨೦೧೧ ಫೆಬ್ರವರಿ ೭ ರಿಂದ ೧೦ ರವರೆಗೆ ತಿರುಪತಿಯಲ್ಲಿ ನಡೆದ 'ಭೌತಶಾಸ್ತ್ರದಲ್ಲಿ ನವೀನ ಪ್ರಯೋಗಗಳು' ಕುರಿತು ಕಾರ್ಯಾಗಾರ (ಎ.ಪಿ), ನವೆಂಬರ್-೨೦೧೪ ರಂದು ತಮಿಳುನಾಡಿನ ಚೆನ್ನೈನಲ್ಲಿ 'ಮಾದರಿ ರಾಕೆಟ್ರಿ ಕಾರ್ಯಾಗಾರ',
  • ಫೆಬ್ರವರಿ -೨೦೧೫ ರಂದು ಕೇರಳದ ಪಾಲಕ್ಕಾಡ್‌ನಲ್ಲಿ 'ಬಹು-ಶಿಸ್ತಿನ ಕಾರ್ಯಾಗಾರ'. ಅಕ್ಟೋಬರ್ ೧೩-೧೪, ೨೦೧೭ ರಂದು ಚೆನ್ನೈ ನಲ್ಲಿ ೩ನೇ ಭಾರತ ಅಂತರಾಷ್ಟ್ರೀಯ ವಿಜ್ಞಾನ ಮೇಳ-೨೦೧೭ (IISC) ‘ವರ್ಕ್ಶಾಪ್ ಫಾರ್‌ಟೀಚರ್’ ಗೆ ಆಯ್ಕೆ,  
  • ೨೭-೨೮ ಫೆಬ್ರವರಿ ೨೦೧೮ ರಂದು VIPNET  ಕ್ಲಬ್ ಪ್ರಶಸ್ತಿ ಕಾರ್ಯದಲ್ಲಿ ಭಾಗಿ ಮತ್ತು. NCERT ದೆಹಲಿಯಲ್ಲಿ ನಡೆದಕಾರ್ಯಕ್ರಮದಲ್ಲಿ ಸೈನ್ಸ್ಕ್ಲBRONZE CLUB AWARD-೨೦೧೭' ಕ್ಕೆ ಆಯ್ಕೆ. 
  • ಅಕ್ಟೋಬರ್ ೦೫-೦೮, ೨೦೧೮ ರಂದು ಲಕ್ನೋದಲ್ಲಿ ಶಿಕ್ಷಕರಿಗಾಗಿ ೪ ನೇ ಭಾರತ ಅಂತರಾಷ್ಟ್ರೀಯ ವಿಜ್ಞಾನ ಮೇಳ -೨೦೧೮ (IISC) ಕಾರ್ಯಾಗಾರಕ್ಕೆ ನಾಮ ನಿರ್ದೇಶನಗೊಂಡಿರುವುದು, 
  • ೨೦೧೯ ಆಗಸ್ಟ್ ೧೨-೧೩ ರವರೆಗೆ ರಾಜ್‌ಕೋಟ್ (ಗುಜರಾತ್) ನಲ್ಲಿ 'ಗೋಲ್ಡ್ಕ್ಲಬ್ ಪ್ರಶಸ್ತಿ -೨೦೧೮' ಕ್ಕೆ ಆಯ್ಕೆ.
  • ೨೦೧೯ ನವೆಂಬರ್ ೧೦ -೧೧, ರಂದು ಪುಣೆಯ  (ಮಹಾರಾಷ್ಟ್ರ) ರಾಷ್ಟ್ರೀಯ ಮಟ್ಟದ ಆನ್ಯುಲರ್ ಸೌರಗ್ರಹಣ ಕಾರ್ಯಾಗಾರದಲ್ಲಿ ಭಾಗಿ, 
  • ಕೊಯಮತ್ತೂರಿನ (ತಮಿಳುನಾಡು) ಜಾನ್ಸನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ೨೫ನೇ ಮತ್ತು ೨೬ನೇ ಡಿಸೆಂಬರ್ ೨೦೧೯ ರಂದು ನಡೆದ “ಆನ್ಯುಲಾರ್ ಸೌರಗ್ರಹಣ” ಕುರಿತು ಎರಡು ದಿನಗಳ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆ,  
  • ೨೦೨೨ ರಏಪ್ರಿಲ್ ೧೬ ಮತ್ತು ೧೭ರಂದು ಚೆನ್ನೈ ರಾಜಲಕ್ಷ್ಮಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ “ವಿಜ್ಞಾನ ಶಿಕ್ಷಕರ ಪುನರ್ಮನನ ರಾಷ್ಟ್ರೀಯಕಾರ್ಯಕ್ರಮ”ದಲ್ಲಿ ಪಾಲ್ಗೊಂಡಿರುವುದು, 
  • ೯ನೇ ಮತ್ತು ೧೦ನೇ ಜೂನ್ ೨೦೨೨ ರಂದು ವಾಪಿ (ಗುಜರಾತ್)ನ ಜ್ಞಾನ್‌ಧಾಮ್ ಶಾಲೆಯಲ್ಲಿ ನಡೆಸಲಾದ ರಾಷ್ಟ್ರೀಯ ಶಿಕ್ಷಕರ ತರಬೇತಿ ಸೆಮಿನಾರ್‌ನಲ್ಲಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿಕೆ.

ಹೀಗೆ ಒಂದೇ? ಎರಡೇ? ನೂರಾರು ಕಾರ್ಯಕ್ರಮಗಳು. ಬರೆಯುತ್ತಾ ಹೋದರೆ, ಅದೇ ದೊಡ್ಡ ಗ್ರಂಥವಾದೀತು!!! ಇವರ ಅನುಭವದ ಕ್ಷಿತಿಜ ವಿಸ್ತಾರಗೊಳ್ಳುತ್ತಲೇ ಇದೆ. ದಣಿವರಿಯದ ಸಫಲ ಪಯಣ ಸಾಗುತ್ತಲೇ ಇದೆ.

ಬುರ್ಲಿಯವರಿಗೆ ಬಂದಿರುವ ಪ್ರಶಸ್ತಿಗಳು

  • ೨೦೦೪ ರಲ್ಲಿ ಪುಟಾಣಿ ವಿಜ್ಞಾನ, ಚಿತ್ರದುರ್ಗಇವರು ನೀಡುವ “ಸೃಜನಾತ್ಮಕ ವಿಜ್ಞಾನ ಶಿಕ್ಷಕ” ಪ್ರಶಸ್ತಿ. 
  • ೨೦೦೬ ರಲ್ಲಿ ಸಾ.ಶಿ. ಇಲಾಖೆ, ಕರ್ನಾಟಕ ಸರ್ಕಾರ ನೀಡುವ ರಾಜ್ಯಮಟ್ಟದ ‘ಶ್ರೀರಾಜೀವಗಾಂಧಿ ಸ್ಮಾರಕ  ಅತ್ಯುತ್ತಮ ವಿಜ್ಞಾನ ಶಿಕ್ಷಕ’ ಪ್ರಶಸ್ತಿ ಬೆಳಗಾವಿ.
  • ೨೦೦೬ರಲ್ಲಿ ರಾಜ್ಯಮಟ್ಟದ ‘ಆದರ್ಶಶಿಕ್ಷಕರತ್ನ  ಪ್ರಶಸ್ತಿ ಬೆಂಗಳೂರು.
  • ೨೦೦೯ರಲ್ಲಿ ಡಾ|| ಸ.ಜ. ನಾಗಲೋಟಿಮಠ “ಜಿಲ್ಲಾಮಟ್ಟದ ಅತ್ಯುತ್ತಮ ವಿಜ್ಞಾನ ಶಿಕ್ಷಕ” ಪ್ರಶಸ್ತಿ ಜಮಖಂಡಿ,
  • ೨೦೧೦ರಲ್ಲಿ ರಾಜ್ಯಮಟ್ಟದ ‘ಸಧ್ಬಾವನಾಪ್ರಶಸ್ತಿ’ ವಿಜಯಪುರ.
  • ೨೦೧೧ರಲ್ಲಿ  ರಾಜ್ಯಮಟ್ಟದ ಭಾವೈಕ್ಯತಾ ಪ್ರಶಸ್ತಿ’ ವಿಜಯಪುರ.
  • ಸೆಪ್ಟಂಬರ ೫-೨೦೧೧ರಂದು ಸಾ.ಶಿ.ಇಲಾಖೆ, ಕರ್ನಾಟಕ  ಸರ್ಕಾರ ನೀಡುವ “ರಾಜ್ಯಮಟ್ಟದ ಉತ್ತಮ ಶಿಕ್ಷಕ  ಪ್ರಶಸ್ತಿ” ಹುಬ್ಬಳ್ಳಿ.
  • ಜೂನ್ ೨೯-೨೦೧೨ ರಂದು C.N.R. Rao Education Foundation, Bangalore ಇವರು ನೀಡುವ ರಾಷ್ಟ್ರಮಟ್ಟದ “Outstanding Science Teacher Award-೨೦೧೨” ಬೆಂಗಳೂರು.
  • ಅಕ್ಟೋಬರ ೦೭-೨೦೧೨ರಂದು ಡಾ|| ಸ.ಜ.ನಾಗಲೋಟಿಮಠ ಇವರ“ ರಾಜ್ಯ ಮಟ್ಟದ ಅತ್ಯುತ್ತಮ ವಿಜ್ಞಾನ  ಶಿಕ್ಷಕ ಪ್ರಶಸ್ತಿ” ಬೆಳಗಾವಿ.
  • ಮಾರ್ಚ ೦೨-೨೦೧೫ ರಾಷ್ಟ್ರ ಮಟ್ಟದ  “ಸಂಗೊಳ್ಳಿರಾಯಣ್ಣರತ್ನ” ಪ್ರಶಸ್ತಿ ವಿಜಯಪುರ.
  • ನವೆಂಬರ ೦೬-೨೦೧೬ ಕನ್ನಡ ಸಾಹಿತ್ಯ ಪರಿಷತ್ತು ಇವರು ದಯಪಾಲಿಸಿದ “ಆದರ್ಶ ಶಿಕ್ಷಕ” ಪ್ರಶಸ್ತಿ ವಿಜಯಪುರ.
  • ನವೆಂಬರ ೩೦-೨೦೧೬ ರಾಷ್ಟ್ರ ಮಟ್ಟದ “Global Teacher Role Model Award-೨೦೧೬” ಹೈದರಾಬಾದ.
  • ಪೆಬ್ರವರಿ ೨೮ – ೨೦೧೭ ಕರ್ನಾಟಕ ರಾಜ್ಯ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರು, ಇವರು ನೀಡುವ ರಾಜ್ಯಮಟ್ಟದ “ಅತ್ಯುತ್ತಮ ಶಿಕ್ಷಣ ಶಿಲ್ಪಿ-೨೦೧೭”ಪ್ರಶಸ್ತಿ. ಹಳೆಯಂಗಡಿ (ದ.ಕ.).
  • ಡಿಸೆಂಬರ ೨೩-೨೦೧೭ ಆಲ್ ಇಂಡಿಯಾ ರಾಮಾನುಜನ್ ಮ್ಯಾಥ್ಸ ಕ್ಲಬ್, ಗುಜರಾತ ಇವರು ನೀಡುವ ರಾಷ್ಟ್ರ ಮಟ್ಟದ “AWARD FOR PROMOTING MATHEMATICAL ACTIVITIES” ಇಂದೋರ (ಮಧ್ಯಪ್ರದೇಶ).
  • ಆಗಷ್ಟ ೧೨-೧೩, ೨೦೧೯ ರಾಷ್ಟ್ರ  ಮಟ್ಟದ “Felicitation to Upgraded VIPNET CLUB Coordinator 2019”“CERTIFICATE OF ACHIVEMENT” ಪ್ರಶಸ್ತಿ ರಾಜಕೋಟ (ಗುಜರಾತ).
  • ಅಕ್ಟೋಬರ ೨೭, ೨೦೧೯ ಶರಣು ವಿಶ್ವವಚನ ಪೌಂಡೇಷನ್ ಮೈಸೂರು ಇವರು ಕೊಡುವ ರಾಜ್ಯಮಟ್ಟದ “ಚಿನ್ಮಯಜ್ಞಾನಿ-೨೦೧೯”ಪ್ರಶಸ್ತಿ ಬೆಂಗಳೂರು.
  • ಸೆಪ್ಟೆಂಬರ್ ೫, ೨೦೨೦ Institute of Science (InSc) ಬೆಂಗಳೂರು ಇವರು ಕೊಡುವ ರಾಜ್ಯಮಟ್ಟದ  "Best Teacher Award - 2020” ಬೆಂಗಳೂರು. 
  • ಸೆಪ್ಟೆಂಬರ ೫, ೨೦೨೧ NCTS India ಇವರು ಕೊಡುವ ರಾಷ್ಟ್ರ ಮಟ್ಟದ “Vikram Sarabhai Teacher Scientist National Award-೨೦೨೧”ಗುಜರಾತ್ . 
  • ಡಿಸೆಂಬರ ೨೯, ೨೦೨೧ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ,  ಬೆಂಗಳೂರು ಇವರು ಕೊಡುವ “ಎಚ್. ಎನ್ (ಎಚ್. ನರಸಿಂಹಯ್ಯ) ರಾಜ್ಯ ಪ್ರಶಸ್ತಿ – ೨೦೨೧” ಕುವೆಂಪು ರಂಗಮಂದಿರ, ಶಿವಮೊಗ್ಗ.

ದಿನಾಂಕ ೦೫-೦೯-೨೦೧೧ರಂದು ಹುಬ್ಬಳ್ಳಿಯಲ್ಲಿ ಜರುಗಿದ “ಶಿಕ್ಷಕರ ದಿನಾಚರಣೆ”ಯಂದು ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎಸ್.ಡಿ.ಸದಾನಂದಗೌಡ (ಕರ್ನಾಟಕ ಸರಕಾರ) ಹಾಗೂ ಶಿಕ್ಷಣ ಮಂತ್ರಿಗಳಾಗಿದ್ದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶ್ರೀಬಸವರಾಜ ಹೊರಟ್ಟಿ, ಶ್ರೀ ಜಗದೀಶ ಶೆಟ್ಟರ ಇವರು ಶ್ರೀ ಎಸ್. ವ್ಹಿ. ಬುರ್ಲಿ ಇವರಿಗೆ “ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ನೀಡಿ ಗೌರವಿಸಿದರು.



ದಿನಾಂಕ : ೨೯-೬-೨೦೧೨ರಂದು ಬೆಂಗಳೂರಿನ C.N.R.RAO HALL OF SCIENCE, JNCASR, ಜರುಗಿದಕಾರ್ಯಕ್ರಮದಲ್ಲಿ  “C.N.R.RAO EDUCATION FOUNDATION” ಇವರು ನೀಡುವ “ರಾಜ್ಯಮಟ್ಟದ ಕ್ರೀಯಾಶೀಲ ವಿಜ್ಞಾನ ಶಿಕ್ಷಕ” ಪ್ರಶಸ್ತಿ ಪಡೆಯುತ್ತಿರುವುದು, ವಿಜ್ಞಾನಿ ಪ್ರೋ.ಸಿ.ಎನ್.ಆರ್.ರಾವ್ ಇವರೊಂದಿಗಿನ ಕ್ಷಣಗಳು




  • ದಿನಾಂಕ: ೦೭-೧೦-೨೦೧೨ ರಂದು ಬೆಳಗಾವಿಯ ಎಸ್.ಜೆ.ಬಾಳೆಕುಂದ್ರಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ “ನಾಡೋಜ ಡಾ.ಸ.ಜ.ನಾಗಲೋಟಿಮಠ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ-೨೦೧೨” ಪಡೆಯುತ್ತಿರುವುದು.


  • ಜಿಜ್ಞಾಸಾ -೨೦೧೩ ರ ೨೦೧೨-೨೦೧೩ ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಾಗೂ ಶಿಕ್ಷಕರಿಗಾಗಿ ಏರ್ಪಡಿಸಿದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದ್ವಿತಿಯ ಸ್ಥಾನದ ಪ್ರಶಸ್ತಿಯನ್ನು ಇಂಡಿಯನ್ ಇನಿಸ್ಟಿಟ್ಯುಟ್ ಆಫ್ ಸೈನ್ಸದ ವಿಜ್ಞಾನಿಯಾದಡಾ.ಹರಿಶ್ ಭಟ್, ದೇಶಪಾಂಡೆ ಪೌಂಢೇಷನದ ಸಿ.ಇ.ಒ.  ಶ್ರೀ ನವೀನ್‌ಝಾ, ಶ್ರೀ ಮೋಹಿತ್ ಮೆಹತಾ, ಇವರು ಕೊಡಮಾಡುತ್ತಿರುವುದು


  • ದಿನಾಂಕ:೩೦-೧೧-೨೦೧೬ ರಂದು ಹೈದರಾಬಾದ ರವೀಂದ್ರಭಾರತಿಯಲ್ಲಿ ಜರುಗಿದ ಸಮಾರಂಭದಲ್ಲಿ ಎಮ್. ವಿ. ಎಲ್. ಎ.  ಟ್ರಸ್ಟ ಮುಂಬಯಿ ಇವರು ನೀಡುವ “ಗ್ಲೋಬಲ್ ಟೀಚರ ರೋಲ್ ಮಾಡೆಲ್ ಅವಾರ್ಡ-೨೦೧೬” ಪ್ರಸಸ್ತಿ ಪಡೆಯುತ್ತಿರುವುದು.


  • Received National level “AWARD FOR PROMOTING MATHEMATICS ACTIVITIES – 2017”, By All India Ramanujan Maths Club Gujrat. Function held at The Emarald Height International School, INDORE (M.P.) On 21, DECEMBER 2017



  • ವಿಪ್ ನೆಟ್ ವಿಜ್ಞಾನ ಸಂಘದ “ರಾಷ್ಟçಮಟ್ಟದಉತ್ತಮ ಸಂಚಾಲಕ-೨೦೧೯” ಪ್ರಶಸ್ತಿ ಮತ್ತು ಆರ್ಯಭಟ ವಿಜ್ಞಾನ ಸಂಘವು ಸಿಲ್ವರ ಮತ್ತು ಗೋಲ್ಡ ಕ್ಲಭ್ ಪ್ರಶಸ್ತಿಯನ್ನು ಡಾ. ಅರವಿಂದ ರಾನಡೆ, ವಿಜ್ಞಾನಿಗಳು  ದಯಪಾಲಿಸುತ್ತಿರುವುದು.(ಈ ಪ್ರಶಸ್ತಿಯು ಪ್ರಮಾಣ ಪತ್ರ, ರೂ ೧೫೦೦೦/-ಗಳ ವಿಜ್ಞಾನಚಟುವಟಿಕಾ ಸಾಮಗ್ರಿಗಳು ಒಳಗೊಂಡಿದೆ.) ದಿನಾಂಕ : ೧೨-೧೩, ಆಗಷ್ಟ ೨೦೧೯ ರಾಜಕೋಟ (ಗುಜರಾತ)


  • ದಿನಾಂಕ: ೨೯-೧೨-೨೦೨೧ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿಜರುಗಿದ ‘ವೈಜ್ಞಾನಿಕ ಸಮ್ಮೇಳನ-೨೦೨೧’ರಲ್ಲಿ, ಕರ್ನಾಟಕರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ) ದೊಡ್ಡಬಳ್ಳಾಪುರ, ಬೆಂಗಳೂರು ಇವರು ಕೊಡುವ “ರಾಜ್ಯಮಟ್ಟದ ಎಚ್. ನರಸಿಂಹಯ್ಯ ಪ್ರಶಸ್ತಿ-೨೦೨೧”ಯನ್ನು ಡಾ. ಎ.ಎಸ್. ಕಿರಣ್‌ಕುಮಾರ ವಿಜ್ಞಾನಿಗಳು, ಮಾಜಿ ಅಧ್ಯಕ್ಷರು ಇಸ್ರೋ, ಭಾರತ ಸರರ್ಕಾರ, ಡಾ.ಶಿವಮೂರ್ತಿ ಮುರಘಾ ಶರಣರು, ಮುರಘಾಮಠ, ಚಿತ್ರದುರ್ಗ ಇವರು ದಯಪಾಲಿಸುತ್ತಿರುವುದು.


ಸವಿಜ್ಞಾನದ ಲೇಖಕರೂ ಆಗಿರುವ, ಬುರ್ಲಿಯವರು ಪ್ರಸ್ತುತ NCTS- Indiaದ ದಕ್ಷಿಣ ಭಾರತ ವಲಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ  ಹಲವಾರು ವೈಜ್ಞಾನಿಕ  ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡು ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಪ್ರೋತ್ಸಾಹದಾಯಕ ಕಾರ್ಯಗಳನ್ನು ನಡೆಸುತ್ತಾ ವಿಜ್ಞಾನರಂಗಕ್ಕೆ ಕೊಡುಗೆ ನೀಡುತ್ತಿರುವ  ಬುರ್ಲಿಯವರ ಜೈತ್ರಯಾತ್ರೆ ಇನ್ನಷ್ಟು ಮೆರುಗನ್ನು ಪಡೆಯಲಿ ಎಂದು ʼಸವಿಜ್ಜಾನʼ ತಂಡ ಹಾರೈಸುತ್ತದೆ.  




2 comments:

  1. ಬಹಳ ವರ್ಷಗಳ ತನಕ ಆನ್ಲೈನ್ ನಲ್ಲಿ ಶ್ರೀ ಸಂಗಮೇಶ ಬುರ್ಲಿ ಅವರ ಗಣಿತ ಹಾಗೂ ವಿಜ್ಞಾನ ವಿಷಯಗಳ ಪಾಠಗಳನ್ನು ಹಾಗೂ ಪ್ರಯೋಗಗಳನ್ನು ನೋಡುತ್ತಾ ಕಲಿಯುತ್ತಿದ್ದೇನೆ... ಅದರ ಜ್ಯೋತೆಗೆ.. ಮಾರ್ಗದರ್ಶನ ಕೂಡಾ ಪಡೆಯುತ್ತಿದ್ದೇನೆ...2 ವರ್ಷ lockdown ನಲ್ಲಿ ನಿರಂತರ ಆನ್ಲೈನ್ ಪಾಠಗಳು..ತುಂಬಾ ಸರ ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ..ಅದರಲ್ಲಿ ಬೀಜಗಣಿತ ಕನ್ನಡದಲ್ಲಿ ಅನುವಾದಿಸಿ ..ಸಂಗಮೇಶ ಬೂರ್ಲಿ ಅವರೇ ಮೊದಲಿಗರು...ಸೃಜನಾತ್ಮಕ ಶೈಲಿಯಲ್ಲಿ ಪಾಠಗಳನ್ನು..ಚಿಕ್ಕ ಚಿಕ್ಕ ವಿಷಯಗಳ ನ್ನಾಗಿಸಿ ..ಹೇಳುವ ಶೈಲಿ ತುಂಬ ತುಂಬ ಈಶ್ಟದಾಯಕ್ವಾಗಿದೆ...🌸🙏🙏 ..ನಮಗೂ ಕೂಡಾ ಅವರ ಮಾರ್ಗದರ್ಶನ ಸೀಗಳಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ...ಅವರ ಸೃಜನ್ ಶೀಲತೆ ಹಾಗೂ ಶ್ರಮ ಕರ್ನಾಟಕ ಸರಕಾರ ಅವರನ್ನು ಗೂರುತಿಸಿ ಸನ್ಮನಿಸಬೇಕು..ಆದೆ ನನ್ನ ಆಸೆಯ...🌸🙏🌸

    ReplyDelete
  2. ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸರ್‌ ನಮಗೆ ಸ್ಪೂರ್ತಿ. ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಸರ್‌ ಅವರ ಮಾರ್ಗದರ್ಶನ ಸವಿಜ್ಞಾನದ ಓದುಗರಿಗೆ ನಿರಂತರ ಸಿಗಲಿ.

    ReplyDelete