ವಿಜ್ಞಾನ ಬೋಧನೆಯಲ್ಲಿ ನವೀನತೆ ತಂದಿರುವ ನವೀನ್ ಕುಮಾರ್
ಲೇ : ಶ್ರೀನಿವಾಸ್ ಎ
ವಿಜ್ಞಾನ ಬೋಧನಾ ವಿಧಾನಗಳನ್ನು ಬಿ.ಇಡಿ., ತರಬೇತಿಯಲ್ಲಿ ವಿಜ್ಞಾನ ಶಿಕ್ಷಕರು ಕಲಿತಿರುತ್ತಾರೆ, ಅವುಗಳೆಂದರೆ ಅನುಗಮನ, ನಿಗಮನ, ಸಂಶೋಧನಾ, ಪ್ರಾಯೋಗಿಕ ಹೀಗೆ ಪರಿಕಲ್ಪನೆಗಳಿಗೆ ಅನುಸಾರವಾಗಿ ತರಗತಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲಿಸುವಲ್ಲಿ ಹಲವು ವಿಧಾನಗಳು. ಇಲ್ಲೊಬ್ಬ ಶಿಕ್ಷಕರು ವಿಜ್ಞಾನವನ್ನು ಹಾಡಿನ ಮೂಲಕ ಅನುಕೂಲಿಸುವ ವಿನೂತನ ವಿಧಾನವನ್ನು ಬಳಸುವ ಮೂಲಕ ಎಲ್ಲರ ಗಮನ ಸೆಳೆಯುತ್ತ್ತಿದ್ದಾರೆ. ಯಾರೆಂದು ಯೋಚಿಸುತ್ತಿದ್ದೀರಾ! ಅವರೇ ತಮ್ಮ ಹಾಡಿನ ಮೂಲಕ ಶಿಕ್ಷಣಾಸಕ್ತರನ್ನು ತಮ್ಮತ್ತ ಸೆಳೆದಿರುವ ಡಾ|| ನವೀನ್ ಕುಮಾರ್. ಆರ್. ಯು.
ಶ್ರೀಯುತರು. USA Florida Univiersity ಯಲ್ಲಿ “Science teaching and learning through sing a
song”
ಪ್ರೌಢ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊದಲಿಗೆ ಆರಕ್ಷಕ
ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು, ಶಿಕ್ಷಕನಾಗಬೇಕೆಂಬ ಮಹಾದಾಸೆಯಿಂದ, 2007ರಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಬಿಸಿ ಸ.ಪ್ರೌ.ಶಾಲೆ,
ಅಲೀಪುರ, ಗೌರಿಬಿದನೂರು(ತಾ), ಚಿಕ್ಕಬಳ್ಳಾಪುರ(ಜಿ) ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ
ವಿದ್ಯಾರ್ಥಿಗಳ ಶೈಕ್ಷಣಿಕ ಏಳ್ಗೆಯನ್ನೆ ಧ್ಯೇಯವಾಗಿಟ್ಟುಕೊಂಡು ಹಾಡು ಮತ್ತು ನಾಟಕಗಳ ಮೂಲಕ ವಿಜ್ಞಾನ
ಬೋಧನೆ ಎಂಬ ವಿನೂತನ ಪದ್ಧತಿ ಪ್ರಾರಂಭಿಸಿ ವಿದ್ಯಾರ್ಥಿ ಮತ್ತು ಶಿಕ್ಷಣ ಇಲಾಖೆಯಿಂದ ಮೆಚ್ಚುಗೆ ಪಡೆದಿದ್ದಾರೆ.
ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ನವೀನ್‌ರವರು ವಿದ್ಯಾರ್ಥಿಗಳಿಗಾಗಿ, NEP-2020ರ ಆಶಯದಂತೆ ಕೌಶಲ್ಯ ಅಭಿವೃದ್ಧಿಗಾಗಿ, ಇಟ್ಟಿಗೆ ಮಾಡುವಿಕೆ,
ಚಿತ್ರಕಲೆ, ತೋಟಗಾರಿಕೆ, ಮಾದರಿ ತಯಾರಿಕೆ, ಮಡಿಕೆ ತಯಾರಿಕೆ, ಪೀಠೋಪಕರಣಗಳ ರಿಪೇರಿ, ಪ್ರಯೋಗಾಲಯ
ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಒತ್ತು ನೀಡಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.ವಿಜ್ಞಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಜಿಲ್ಲೆ, ರಾಜ್ಯ ಮತ್ತು ರಾಷ್ರ್ಟ ಮಟ್ಟದಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ. Covid-19 lockdown ಸಮಯದಲ್ಲಿ ಡಾ||. ನವೀನ್ ಕುಮಾರ್ ಸಂವೇದ ವೀಡಿಯೊ ತರಗತಿಗಳನ್ನು ಮಾಡಿರುತ್ತಾರೆ. ಸಂಪನ್ಮೂಲ ವ್ಯಕ್ತಿಯಾಗಿ ಜೆಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಹಲವು ಕಾರ್ಯಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಇವರ ಸಾಧನೆಯ ಪಟ್ಟಿ ದೊಡ್ಡದೆ ಇದೆ. ಹಾಗಾಗಿ ಇವರನ್ನು ಅರಿಸಿ ಬಂದ ಬಹುಮಾನ ಮತ್ತು ಸನ್ಮಾನಗಳ ಪಟ್ಟಿಯೂ ದೊಡ್ಡದೆ ಇದೆ.
ಅದಲ್ಲದೆ ಹಲವು ಸಂಘ ಸಂಸ್ಥೆಗಳೊಂದಿಗೆ ಹಲವು ವಿಜ್ಞಾನ
ಕಾರ್ಯಕ್ರಮಗಳನ್ನು ನಡೆಸಿ ವಿಜ್ಞಾನದ ಪ್ರಚಾರಕ್ಕೆ ಕಂಕಣ ತೊಟ್ಟಿದ್ದಾರೆ.
ಹೃದಯಪೂರ್ವಕ ಧನ್ಯವಾದಗಳು ಸರ್ ಈ ಪಾಮರನ ಪರಿಚಯಿಸದ್ದಕ್ಕೆ..
ReplyDeleteವಿಶೇಷ ಪ್ರತಿಭಾನ್ವಿತ ಶಿಕ್ಷಕರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು ಸರ್. ಸಂವೇದ ವಿಡಿಯೋ ಚಿತ್ರೀಕರಣ ಸಮಯದಲ್ಲಿ ಭೇಟಿ ಆಗಲಿಲ್ಲವಲ್ಲ ಎಂದು ಬೇಸರವಾಯಿತು.
ReplyDeleteThank you sir
DeleteNaveen sir . Nimma PhD caption ಚೆನ್ನಾಗಿದೆ.. may be you are the first person got the PhD scene learning through sing a song..... congratulations sir ..
ReplyDeleteFrom: ಶಶಿಕುಮಾರ್