ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, January 4, 2023

ಒಗಟುಗಳು ಜನವರಿ ೨೦೨೩

 ಜನವರಿ ತಿಂಗಳ ಒಗಟುಗಳು 

೧.  ಬದುಕಿದ್ದಾಗ  ಮಣ್ಣಲ್ಲಿ ಹೂಳುವರು ನನ್ನ 

ನಂತರ  ಅಗೆದು ಹೊರ ತೆಗೆಯುವರು ನನ್ನ 

ಆಹಾರ ಸಂಗ್ರಹಿಸಬಲ್ಲೆ 

ಬುದ್ದಿವಂತರು ಸುಳಿವ ಬಿಡಿಸಿ ಹೇಳಿ  ನನ್ನ ಗುರುತನ್ನು.


೨. ಪಂಜಾಬಿನ ರಾಯ್ ಪುರ್ ನಲಿ  ಜನವರಿಯಲಿ ಜನನ

ಬಡತನದ ಬೇಗೆಯಲೂ ಶಿಕ್ಷಕ ರತನಲಾಲರೇ  ಸ್ಫೂರ್ತಿ 

ವಂಶವಾಹಿಯ ರಹಸ್ಯ ಹೊರಗಡವಿದ ಸಂಶೋಧಕ 

ಹುಟ್ಟು ಸಾವಿನಲಿ ಬಿಡದ ಒಂಭತ್ತರ ನಂಟು 

ಗುರುತು ಸಿಕ್ಕಿತೇ? ಹೇಳಬಲ್ಲಿರೇ ವಿಶ್ವಮಾನ್ಯ ಹೆಮ್ಮೆಯ ಭಾರತೀಯನ?

 ೩.  ಒತ್ತಡ ಉಂಟು ಮಾಡಬಲ್ಲೆ ನಾ 

ವೇಗದಿ ಚಲಿಸಬಲ್ಲೆ 

ಉಷ್ಣಶಕ್ತಿಯು ಹೆಚ್ಚಿದಂತೆ ನನ್ನ ಚಲನೆಯೂ ಹೆಚ್ಚು

ತಂಪಾದಂತೆ ಆಕರ್ಷಣೆಯೂ ಹೆಚ್ಚು

ಅತಿ ಹೆಚ್ಚು ಗೊಂದಲದ ಸ್ಥಿತಿಯಂತೆ ನನ್ನದು

ಸುಳಿವ ಹಿಡಿದು ಜಾಣ ಜಾಣೆಯರೇ ಹೇಳಿರಿ ನನ್ನ ಕಥೆಯನ್ನು


೪. ನಾನೊಬ್ಬ  ಕಲನಶಾಸ್ತ್ರಪ್ರಿಯ  ವಿಜ್ಞಾನಿಯ ಹೆಸರಿನವ 

ನಾನಿಲ್ಲದೇ ಯಾವ ಚಲನೆಯೂ ಇಲ್ಲ

ರಾಶಿಯೊಂದಿಗೆ  ನಾ ನೇರಾನುಪಾತಿ

ವಿಸ್ತೀರ್ಣದ ಜೊತೆ ಗುಣಿಸಿದಿರೋ ನಾನವನಲ್ಲ!!

ಗುರುತು ಬದಲಿಸಿ ಹೆಸರನೂ ಬದಲಿಸಿ ಪ್ಯಾಸ್ಕಲನಾಗಬಲ್ಲೆ !!!

ಈ ಸವಾಲನು ಬಿಡಿಸಿ ಹೇಳಬಲ್ಲಿರೇ ನನ್ನ ಗುರುತು ?

    

    ರಚನೆ : ರಾಮಚಂದ್ರ ಭಟ್‌ ಬಿ.ಜಿ. 
















1 comment:

  1. ಒಗಟುಗಳು ಬಿಡಿಸಲಾಗದಷ್ಟು ಕಠಿಣವಾಗಿದೆ, ಯೋಚನೆ, ಅಧ್ಯಯನ ಅಗತ್ಯ. ಅಭಿನಂದನೆಗಳು ಸರ್. ಉತ್ತರಿಸಲು ಪ್ರಯತ್ನಿಸುತ್ತೇನೆ.

    ReplyDelete