ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, February 4, 2023

ಫೆಬ್ರವರಿ ತಿಂಗಳ ಪ್ರಮುಖ ದಿನಾಚರಣೆಗಳು

 ಫೆಬ್ರವರಿ ತಿಂಗಳ ಪ್ರಮುಖ ದಿನಾಚರಣೆಗಳು

ಫೆಬ್ರವರಿ 2 : ವಿಶ್ವ ಜೌಗುನೆಲಗಳ ದಿನ

ಪರಿಸರದ ಸಮತೋಲನ ಕಾಪಾಡುವಲ್ಲಿ ಜೌಗುನೆಲಗಳ ಪಾತ್ರವನ್ನು ಬಿಂಬಿಸುವ ಹಿನ್ನೆಲೆಯಲ್ಲಿ.

ಈ ವರ್ಷದ ಘೋಷವಾಕ್ಯ : ‘ಜನರಿಗೆ ಮತ್ತು ನಿಸರ್ಗಕ್ಕಾಗಿ ಕ್ರಿಯೆ’

 


ಫೆಬ್ರವರಿ 4 : ವಿಶ್ವ ಕ್ಯಾನ್ಸರ್ ದಿನ

ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ

 


ಫೆಬ್ರವರಿ 5 : ಡಾ. ಬಿ.ಜಿ.ಎಲ್. ಸ್ವಾಮಿ ಜನ್ಮದಿನ

ಡಾ. ಡಿ.ವಿ. ಗುಂಡಪ್ಪ ಅವರ ಪುತ್ರರತ್ನ, ಬಹುಮುಖ ಪ್ರತಿಭೆಯ ಸಸ್ಯವಿಜ್ಞಾನಿ, ಬರಹಗಾರ ಡಾ. ಬಿ.ಜಿ.ಎಲ್. ಸ್ವಾಮಿ ಅವರ ಜನ್ಮದಿನದ ಸ್ಮರಣೆ

 


ಫೆಬ್ರವರಿ 8 : ಡಿಮಿಟ್ರಿ ಮೆಂಡೆಲೀವ್ ಜನ್ಮ ದಿನ

ರಷ್ಯಾದ ರಸಾಯನ ವಿಜ್ಞಾನಿ. ಆಧುನಿಕ ಆವರ್ತನ ಕೋಷ್ಟಕ ರೂಪಿಸಿದವರು

 


ಫೆಬ್ರವರಿ 10 : ಜಾನ್ ಎಂಡರ್ಸ್ ಜನ್ಮದಿನ

ವೈರಸ್‌ಗಳನ್ನು ಕೃಷಿ ಮಾಡುವ ವಿಧಾನವನ್ನು ರೂಪಿಸಿದ ವಿಜ್ಞಾನಿ.

ದಡಾರಕ್ಕೆ ಲಸಿಕೆಯನ್ನು ಕಂಡುಹಿಡಿದ ಖ್ಯಾತ ವಿಜ್ಞಾನಿ.

 


ಫೆಬ್ರವರಿ 11 : ಥಾಮಸ್ ಆಲ್ವ ಎಡಿಸನ್ ಜನ್ಮದಿನ

ವಿದ್ಯುತ್ ಬಲ್ಬ್ ಕಂಡುಹಿಡಿದ ವಿಜ್ಞಾನಿ

1093 ಪೇಟೆಂಟ್‌ಗಳನ್ನು ಪಡೆದಿದ್ದ ಮೇಧಾವಿ.

 


ಫೆಬ್ರವರಿ 11 : ವಿಜ್ಞಾನ ಕ್ಷೇತ್ರದಲ್ಲಿನ ಸ್ತ್ರೀಯರ ಮತ್ತು ಬಾಲೆಯರ ಅಂತರರಾಷ್ಟ್ರೀಯ

 ದಿನ

 


ಫೆಬ್ರವರಿ 12 : ಚಾರ್ಲ್ಸ್ ಡಾರ್ವಿನ್ ಜನ್ಮದಿನ

ಜೀವವಿಕಾಸದ ‘ನೈಸರ್ಗಿಕ ಆಯ್ಕೆ’ ಸಿದ್ಧಾಂತವನ್ನು ಮಂಡಿಸಿದ ವಿಜ್ಞಾನಿ.

 


 ಫೆಬ್ರವರಿ 13 : ರಾಷ್ಟ್ರೀಯ ಮಹಿಳಾ ದಿನ

ಖ್ಯಾತ ಕವಿಯತ್ರಿ ಡಾ. ಸರೋಜಿನಿ ನಾಯ್ಡು ಅವರ ಜನ್ಮ ದಿನದ ಸ್ಮರಣೆಯಲ್ಲಿ

 


ಫೆಬ್ರವರಿ 15 : ಗೆಲಿಲಿಯೋ ಗೆಲಿಲಿ ಜನ್ಮದಿನ

ದೂರದರ್ಶಕವನ್ನು ರೂಪಿಸಿ, ಬಳಸಿದ ಮೊದಲ ವಿಜ್ಞಾನಿ

 


ಫೆಬ್ರವರಿ 19 : ನಿಕೊಲಾಸ್ ಕೋಪರ್ನಿಕಸ್

ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂಬ ಸಿದ್ಧಾಂತವನ್ನು ಬಲವಾಗಿ ಸಮರ್ಥಿಸಿದ ವಿಜ್ಞಾನಿ. ‘ಆಧುನಿಕ ಖಗೋಳಶಾಸ್ತ್ರ ಪಿತಾಮಹ’ ಎಂದು ಖ್ಯಾತ.

 


ಫೆಬ್ರವರಿ 21 : ಡಾ. ಶಾಂತಿಸ್ವರೂಪ್ ಭಟ್ನಾಗರ್ ಜನ್ಮದಿನ

ಭಾರತೀಯ ರಸಾಯನ ವಿಜ್ಞಾನಿ. ಕಲಾಯ್ಡ್ ಮತ್ತು ದ್ಯುತಿ ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ. ‘ಭಾರತದಲ್ಲಿ ಸಂಶೋಧನಾ ಪ್ರಯೋಗಾಲಯಗಳ ಪಿತಾಮಹ’ ಎಂದೇ ಖ್ಯಾತರು. ವಿಜ್ಞಾನದ ಏಳು ವಿಭಾಗಗಳಲ್ಲಿ ಅಪೂರ್ವ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಇವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದೆ.

 


ಫೆಬ್ರವರಿ 28 : ರಾಷ್ಟ್ರೀಯ ವಿಜ್ಞಾನ ದಿನ

ಸರ್ ಸಿ.ವಿ.ರಾಮನ್ ಅವರು ‘ರಾಮನ್ ಪರಿಣಾಮ’ ಕಂಡುಹಿಡಿದ ದಿನ

 


ಫೆಬ್ರುವರಿ 28 : ಲೈನಸ್ ಪೌಲಿಂಗ್ ಜನ್ಮದಿನ

ಅಮೆರಿಕದ ಖ್ಯಾತ ರಸಾಯನ ವಿಜ್ಞಾನಿ. ಬೇರೊಬ್ಬರೊಡನೆ ಹಂಚಿಕೊಳ್ಳದೆ 2 ವೈಯುಕ್ತಿಕ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ. ರಸಾಯನ ವಿಜ್ಞಾನಕ್ಕೆ 1954ರಲ್ಲಿ, ನೊಬೆಲ್ ಶಾಂತಿ ಪ್ರಶಸ್ತಿ 1962ರಲ್ಲಿ.

 


No comments:

Post a Comment