ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Saturday, February 4, 2023

ಫೆಬ್ರವರಿ ೨೦೨೩ ರ ಒಗಟುಗಳು



ಫೆಬ್ರವರಿ ೨೦೨೩ ರ ಒಗಟುಗಳು 
ಇವರು ಯಾರು ಬಲ್ಲಿರೇನು?
 








ನವಂಬರ್ 26ರಂದು ಜನಿಸಿದ ವಿಶ್ವ ಮಾನ್ಯ ಸಾಧಕ

 ಆನಂದದಿ ಮಹಾನಂದದ ಹಾಲ್ಮಳೆ
 ಅಮೂಲಾಗ್ರ ಬದಲಾವಣೆಯ ಹರಿಕಾರ
 ಕ್ಷೀರಕ್ರಾಂತಿಯ ಧ್ರುವ ತಾರೆ
 "ಐ ಟೂ ಹ್ಯಾಡ್ ಎ ಡ್ರೀಮ್" ನ ಕೃತಿಕಾರ
 ಗುರುತು ಸಿಕ್ಕಿತೆ ಈ ಅಮೃತಪುತ್ರನ?
 
21
 ಫೆಬ್ರವರಿ ಎಂದು ಜನಿಸಿದ ಭರತವರ್ಷಕ್ಕೆ ಹೆಸರು ತಂದ
ಭಾರತೀಯ ಕಲೀಲ ತಜ್ಞನೀತ
ಭಾರತೀಯ ಸಂಶೋಧನಾ ಪ್ರಯೋಗಾಲಯಗಳ ಜನಕನೀತ
 ಯುಜಿಸಿಯ ಮೊದಲ ಅಧ್ಯಕ್ಷ
ಸುಳಿವರಿತು ಹೆಸರಿಸಬಲ್ಲಿರೇ ಭಾರತದ ಈ ಹೆಮ್ಮೆಯ ಪುತ್ರನ
 ?
 
 
ದಾರದ ಸಿಕ್ಕುಗಳಂತಹ ರಚನೆಯಿಂದಾದ ದೇಹ
ಕಣ್ಣಿಗೆ ಕಾಣದ ಬೀಜಕಗಳಿಂದ ವಂಶಾಭಿವೃದ್ಧಿ
 ಬ್ರೆಡ್, ಬಲಿತ ಹಣ್ಣು ತರಕಾರಿ ಸಾವಯವ ವಸ್ತು ಗಳು  ನನಗಿಷ್ಟ
 ಸಸ್ಯಗಳೊಂದಿಗಿದ್ದ ನನ್ನ ಬೇರ್ಪಡಿಸಿ ಪ್ರತ್ಯೇಕ ಗುಂಪಿನಲ್ಲಿ ಇರಿಸಿದ ವಿಟೇಕರ್
 ಸುಳಿಯುವ ಹಿಡಿದು ನನ್ನ ಚರಿತ್ರೆಯ ತಿಳಿಸಬಲ್ಲಿರೆ?

 ಸಾವಯುವ ಸಂಯುಕ್ತಗಳ ಗುಂಪಿನ ಮೊದಲ ಸದಸ್ಯ ನಾ
 ಮೂರು ಕಾರ್ಬನ್‌ ಗಳುಳ್ಳ ರಾಸಾಯನಿಕ ವಸ್ತುನಾ
 ಹೆಂಗಳೆಯರು ಬಳಸುವರು ನನ್ನ
ಎಚ್ಚರ!!!
  ಹೆಚ್ಚು ಬಳಸಿದಿರೋ ಕ್ಯಾನ್ಸರ್ ಬಳುವಳಿ
 ಹಸುರೆಲೆಗಳ ವರ್ಣರೇಖನಕೆ ದ್ರಾವಕವಾಗಿರುವೆ
 ಇಷ್ಟು ಸುಳಿವು ಸಾಕಲ್ಲ?
 ನನ್ನ ಗುರುತು ಹೇಳುವಿರಲ್ಲ?
 
ನಾನೊಬ್ಬನೇ
 ಬೆಳಕನ್ನು ಸೀಳಿ ಬಿಡಬಲ್ಲೆ
ಸ್ನೇಹಿತನಿದ್ದರೆ
 ಬಣ್ಣಗಳ ಸೇರಿಸಿ ಒಗ್ಗಟ್ಟು ತರಬಲ್ಲೆ
 ಕಾಮನ ಬಿಲ್ಲ  ನಾ ಸೃಜಿಸಬಲ್ಲೆ
 ಎಳೆಯರೇ, ಗೆಳೆಯರೇ ನನ್ನೊಡನೆ ಆಡ ಬನ್ನಿ
ನಾನು ನಿಮಗೆ ಪ್ರಿಯ
 ಹಾಗಾದರೆ ಪ್ರಕ್ರಿಯೆಗಳೊಂದಿಗೆ  ನಾನ್ಯಾರೆಂದು ತಿಳಿಸಬಲ್ಲಿರೇ?                                                                                                                                                                                                                                                                                                                                           

ರಚನೆ : ರಾಮಚಂದ್ರ ಭಟ್‌ ಬಿ.ಜಿ. 

     
 






















































































































































x

No comments:

Post a Comment