ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Saturday, March 4, 2023

ಸಂಪಾದಕರ ಡೈರಿಯಿಂದ

 

ಸಂಪಾದಕರ ಡೈರಿಯಿಂದ ,

ಪ್ರಕಟಣೆಯ ಮೂರನೆಯ ವರ್ಷದ ಹೊಸ್ತಿಲಲ್ಲಿರುವ ನಾಡಿನ ವಿಜ್ಞಾನ ಶಿಕ್ಷಕರ ಹಾಗೂ ವಿಜ್ಞಾನಾಸಕ್ತರ ಗಮನ ಸೆಳೆದಿರುವ ‘ಸವಿಜ್ಞಾನ’ ಇ – ಮಾಸ ಪತ್ರಿಕೆಯ 2023ರ ಮಾರ್ಚ್ ಸಂಚಿಕೆ ಈಗ ನಿಮ್ಮನ್ನು ತಲುಪಿದೆ.

ಕಳೆದ ತಿಂಗಳ ಕೊನೆಯ ದಿನ ಆಚರಿಸಲಾದ “ರಾಷ್ಟ್ರೀಯ ವಿಜ್ಞಾನ ದಿನ” ಹಾಗೂ ಈ ತಿಂಗಳ ೮ನೇ ತಾರೀಕಿನಂದು ಬರುವ “ವಿಶ್ವ ಮಹಿಳಾ ದಿನಾಚರಣೆ”ಯ ಹಿನ್ನೆಲೆಯಲ್ಲಿ ಈ ಬಾರಿ ಎರಡು ವಿಶೇಷ ಲೇಖನಗಳನ್ನು ಪ್ರಕಟಿಸಲಾಗಿದೆ. 

ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿಯೂ ತೆರೆ ಮರೆಯಲ್ಲಿಯೇ ಉಳಿದು ಹೋದ 11 ಮಂದಿ ಭಾರತೀಯ ಮಹಿಳಾ ವಿಜ್ಞಾನಿಗಳ ಸ್ಮರಣೆಯಲ್ಲಿ ಕೇಂದ್ರ ಸರ್ಕಾರ ನಾಡಿನ ವಿವಿಧೆಡೆ ವಿಶೇಷ ಪೀಠ ರಚಿಸುವ ನಿರ್ಧಾರವನ್ನು ಇತ್ತೀಚೆಗೆ ಪ್ರಕಟಿಸಿದೆ. ಆ 11 ಮಹಿಳಾ ವಿಜ್ಞಾನಿಗಳ ಕಿರು ಪರಿಚಯವನ್ನು ತಮ್ಮ ಲೇಖನದಲ್ಲಿ ಮಾಡಿಕೊಟ್ಟಿದ್ದಾರೆ, ಶಿಕ್ಷಕಿ ಶ್ರೀಮತಿ ಬಿ.ಎನ್ ರೂಪ ಅವರು. 

39ರ ಕಿರಿ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಮನ್ನಣೆ ಗಳಿಸಿರುವ ಭಾರತೀಯ ಗಣಿತಜ್ಞೆ ಶ್ರೀಮತಿ ನೀನಾ ಗುಪ್ತ ಅವರ ಸಾಧನೆಯನ್ನು ಪರಿಚಯಿಸುವ ಲೇಖನವನ್ನು ಶಿಕ್ಷಕಿ ಶ್ರೀಮತಿ ಚಂದ್ರಕಲಾ ಬರೆದಿದ್ದಾರೆ. 

ಈಗ ಎಲ್ಲೆಡೆ ಚರ್ಚಿತವಾಗುತ್ತಿರುವ ಚಾಟ್ ಜಿಪಿಟಿ ಬಗ್ಗೆ ಶಿಕ್ಷಕ ಶ್ರೀ ರಾಮಚಂದ್ರ ಭಟ್ ಬರೆದ ಲೇಖನವಿದೆ. 

‘ಕಾಡಿನ ಬೆಂಕಿ’ ಎಂದು ಕರೆಯಲಾಗುವ ಮುತ್ತುಗದ ಸಸ್ಯದ ಬಗ್ಗೆ ಶಿಕ್ಷಕ ಶ್ರೀ ರಮೇಶ್ ಬಳ್ಳಾ ಬರೆದ ಲೇಖನವಿದೆ. 

ತಮ್ಮ ಅಂಡಮಾನ್ ದ್ವೀಪಗಳ ಪ್ರವಾಸದ ಸುಂದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ, ಶಿಕ್ಷಕಿ ಶ್ರೀಮತಿ ನಾಗವೇಣಿ.ಬಿ. ಅವರು ,  

ಈ ತಿಂಗಳಿಂದಲೇ ಆರಂಭಗೊಳ್ಳುವ SSLC ಪರೀಕ್ಷೆಗಳ ಹಿನ್ನಲೆಯಲ್ಲಿ ವಿಜ್ಞಾನ ಪರೀಕ್ಷಾ ಸಿದ್ಧತೆ ಬಗ್ಗೆ  ಮಾಹಿತಿ ನೀಡಿದ್ದಾರೆ ಶ್ರೀ ಶಶಿಕುಮಾರ್‌ ರವರು.

ಇವೆಲ್ಲದರ ಜೊತೆಗೆ, ಎಂದಿನಂತೆ ಮಾರ್ಚ್ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ, ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣಗಳಾದ, ‘ವಿಜ್ಞಾನ ವಿಶೇಷ’, ವಿಜ್ಞಾನಕ್ಕೆ ಸಂಬಂಧಿಸಿದ ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿ. ನಿಮ್ಮ ಸಹೋದ್ಯೋಗಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ‘ಸವಿಜ್ಞಾನ’ ಓದುವಂತೆ ಪ್ರೇರೇಪಿಸಿ.

 ಪ್ರಧಾನ ಸಂಪಾದಕರು


No comments:

Post a Comment