ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Tuesday, April 4, 2023

2023 ಏಪ್ರಿಲ್‌ ತಿಂಗಳ ವಿಶೇಷ ದಿನಗಳು

 2023 ಏಪ್ರಿಲ್‌ ತಿಂಗಳ ವಿಶೇಷ ದಿನಗಳು

ಏಪ್ರಿಲ್ ೨ : ವಿಶ್ವ ಆಟಿಸಮ್‌ ದಿನ‌.
           ಮಕ್ಕಳಲ್ಲಿ ಕಂಡುಬರುವ ಸ್ವಲೀನತೆ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ದಿನ

           ವಿಶ್ವ ಮಕ್ಕಳ ಪುಸ್ತಕ ದಿನ

 ಏಪ್ರಿಲ್‌ ೩ : ವಿಶ್ವ ಜಲಚರ ಪ್ರಾಣಿಗಳ ದಿನ

 ಏಪ್ರಿಲ್‌ ೪ : ಸರ್‌ ವಿಲಿಯಮ್ಸ್‌ ಸೀಮೆನ್ಸ್‌ ಜನ್ಮದಿನ

           ನಿರುಪಯುಕ್ತ ಅನಿಲಗಳನ್ನು ಇಂಧನ ಅನಿಲಗಳಾಗಿ ಮಾರ್ಪಡಿಸುವ ಯಂತ್ರ ರೂಪಿಸಿದ ವಿಜ್ಞಾನಿ

           ಜಾನ್‌ ಹಗ್ಲಿಂಗ್‌ ಜಾಕ್ಸನ್‌ ಜನ್ಮದಿನ
           ನರ ರೋಗಗಳ ಬಗ್ಗೆ ಅಧ್ಯಯನ ಮಾಡಿದ ಇಂಗ್ಲಂಡ್ ವಿಜ್ಞಾನಿ

           ಆನಂದ್‌ ಮೋಹನ್‌ ಚಕ್ರವರ್ತಿ ಜನ್ಮದಿನ
ತಳಿ ತಂತ್ರಜ್ಞಾನದ ಮೂಲಕ ಸೂಡೋಮಾನಾಸ್‌ ಎಂಬ ಜಾತಿಯ ತೈಲ ಭಕ್ಷಕ ಬ್ಯಾಕ್ಟೀರಿಯಾ  ರೂಪಿಸಿ ಪೇಟೆಂಟ್‌ ಪಡೆದ ಮೊದಲ ವಿಜ್ಞಾನಿ. ಹ್ಯೂಮನ್‌ ಜೀನೋಮ್‌ ಪ್ರಾಜೆಕ್ಟ್‌ ತಂಡದ ಮುಖ್ಯಸ್ಥ

ಏಪ್ರಿಲ್‌ ೫ : ವಿಶ್ವ ಸಾಗರಯಾನ ದಿನ

          ವೆಂಕಟರಾಮನ್‌ ರಾಮಕೃಷ್ಣನ್‌ ಜನ್ಮದಿನ
ರೈಬೋಸೋಮ್‌ ಗಳ ರಚನೆ ಮತ್ತು ಕಾರ್ಯಗಳ ಬಗ್ಗೆ ಸಂಶೋಧನೆಗಾಗಿ ನೊಬೆಲ್‌ ಪ್ರಶಸ್ತಿ ಪಡೆದ ಭಾರತೀಯ ಸಂಜಾತ ಅಮೆರಿಕನ್‌ ವಿಜ್ಞಾನಿ


ಏಪ್ರಿಲ್‌ ೬ : ಜೇಮ್ಸ್‌ ವ್ಯಾಟ್ಸನ್‌ ಜನ್ಮದಿನ
ಫ್ರಾನ್ಸಿಸ್‌ ಕ್ರಿಕ್‌ ಎಂಬ ವಿಜ್ಞಾನಿಯ ಜೊತೆಗೆ, ಡಿ.ಎನ್‌.ಎ. ಅಣುವಿನ ರಚನೆಯನ್ನು ಕಂಡು ಹಿಡಿದು ನೊಬೆಲ್‌ ಪ್ರಶಸ್ತಿ ಪಡೆದ ವಿಜ್ಞಾನಿ.

ಏಪ್ರಿಲ್‌ : ೭   ವಿಶ್ವ ಆರೋಗ್ಯ ದಿನ
            ವಿಶ್ವ ಆರೋಗ್ಯ ಸಂಸ್ಥೆಯ ಸ್ಥಾಪನಾ ದಿನ

            ವಿಶ್ವ ಬೀವರ್‌ ಪ್ರಾಣಿಗಳ ದಿನ

ಏಪ್ರಿಲ್‌ ೮ :  ವಿಶ್ವ ಪ್ರಾಣಿ ಸಂಗ್ರಹಾಲಯ ಪ್ರೇಮಿಗಳ ದಿನ

ಏಪ್ರಿಲ್‌ ೧೩ : ಸಸ್ಯಗಳ ಬಗ್ಗೆ ಪ್ರಶಂಸೆಯ ಅಂತರರಾಷ್ಟ್ರೀಯ ದಿನ

ಏಪ್ರಿಲ್‌ ೧೫ : ಲಿಯೋನಾರ್ಡೋ ಡಾವಿನ್‌ಚಿ  ಜನ್ಮದಿನ

             ಕಲೆ, ಗಣಿತ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಇಟಲಿಯ ವ್ಯಕ್ತಿ

ಏಪ್ರಿಲ್‌ ೧೭ : ವಿಶ್ವ ಹೀಮೋಫೀಲಿಯಾ ದಿನ
               ಹೀಮೋಫೀಲಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ದಿನ
               ಬಾವಲಿಗಳ ಪ್ರಶಂಸಾ ದಿನ

ಏಪ್ರಿಲ್ ೧೯ : ವಿಶ್ವ ಯಕೃತ್‌ ದಿನ
            
ಪಿತ್ತ ಕೋಶದ ಖಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ದಿನ

ಏಪ್ರಿಲ್‌ ೨೨ : ವಿಶ್ವ ಭೂಮಿ ದಿನ
            
ಭೂಮಿಯು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ದಿನ

ಏಪ್ರಿಲ್‌ ೨೫ : ವಿಶ್ವ ಮಲೇರಿಯಾ ದಿನ
            
ಮಲೇರಿಯಾ ರೋಗ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ದಿನ

ಏಪ್ರಿಲ್‌ ೨೯ : ರಾಸಾಯನಿಕ ಯುದ್ಧಗಳ ಹುತಾತ್ಮರ ಸ್ಮರಣೆಯ ದಿನ

ಏಪ್ರಿಲ್ ೩೦ :  ಕಾರ್ಲ್‌ ಫ್ರೆಡ್ರಿಕ್‌ ಗಾಸ್‌ ಜನ್ಮದಿನ
            
ಕಾಂತತ್ವದ ನಿಯಮಗಳನ್ನು ರೂಪಿಸಿದ ಜರ್ಮನ್‌ ವಿಜ್ಞಾನಿ

No comments:

Post a Comment