ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, April 4, 2023

ವಿಜ್ಞಾನ ಒಗಟುಗಳು - ಏಪ್ರಿಲ್ 2023

 ವಿಜ್ಞಾನ ಒಗಟುಗಳು

1) ಕಡಿಮೆ ಕರಗುವ ಬಿಂದುವನ್ನು ಹೊಂದಿರುವ ಈ ಮಿಶ್ರಲೋಹವನ್ನು

ವಿದ್ಯುತ್ ತಂತಿಗಳನ್ನು ಬೆಸೆಯಲು ಉಪಯೋಗಿಸುವರು

ಹಾಗಿದ್ದಲ್ಲಿ, ಈ ಮಿಶ್ರಲೋಹದ ಹೆಸರೇನು ?

 2) ನಾವು ಲೋಹದ ಆಕ್ಸೈಡ್ಗಳು ಆದರೂ

ಆಮ್ಲ ಪ್ರತ್ಯಾಮ್ಲ ದೊಂದಿಗೆ ವರ್ತಿಸಿ   

ಲವಣ ಮತ್ತು ನೀರನ್ನು ಉಂಟು ಮಾಡುತ್ತೇವೆ .

ನಮ್ಮನ್ನು ಏನೆಂದು ಕರೆಯುವರು ಎಂದು ಊಹಿಸಬಲ್ಲಿರಾ ?

 3) ನಾನು ಒಂದು ಅಲೋಹ ಆದರೂ,

ಲೋಹದ  ಭೌತ  ಗುಣಲಕ್ಷಣದ ತರಹ

ಮೇಲ್ಮೈ ಹೊಳಪನ್ನು ಹೊಂದಿದ್ದೇನೆ.

ನಾನು ಆವರ್ತ ಕೋಷ್ಟಕದ 17ನೇ ಗುಂಪಿನಲ್ಲಿ ಕಂಡು ಬಂದು

ನನ್ನನ್ನು ಹ್ಯಾಲೊಜೆನ್ಸ್ ಎಂದು ಕರೆಯುವರು.

ಹಾಗಾದರೆ  ನನ್ನ ಹೆಸರೇನೆಂದು ಹೇಳಬಲ್ಲಿರಾ ?

  4) ಈ ಚಿತ್ರದಲ್ಲಿ ತೋರಿಸಿರುವಂತೆ ರೈಲ್ವೆ ಹಳಿಗಳನ್ನು

ಅಥವಾ ಮುರಿದ ಯಂತ್ರಗಳ ಜೋಡಣೆಯಲ್ಲಿ

ಈ ಕ್ರಿಯೆಯನ್ನು ಬಳಸುವರು.

    ಹಾಗಾದರೆ  ಈ ಪ್ರಕ್ರಿಯೆಯ ಹೆಸರೇನು ?

 5) ಬೆಳ್ಳಿಯ ಪಾತ್ರೆಯು ತನ್ನ ಹೊಳಪನ್ನು ಕಳೆದುಕೊಂಡು ಕಪ್ಪಾಗಿದೆ.

 ಈ ಸಂದರ್ಭದಲ್ಲಿ ಉಂಟಾಗುವ ಪದರ ಯಾವುದು ಕಂಡುಹಿಡಿಯಿರಿ ? 

ರಚನೆ :

ಬಿ. ಎನ್. ರೂಪ

ಸಹಶಿಕ್ಷಕರು

ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢ ಶಾಲೆ ಗೋರಿಪಾಳ್ಯ

ಬೆಂಗಳೂರು ದಕ್ಷಿಣ ವಲಯ-2

 

                                                                               

 

No comments:

Post a Comment