Monday, June 5, 2023
Sunday, June 4, 2023
2023 -ಜೂನ್ ತಿಂಗಳ ಪ್ರಮುಖ ದಿನಾಚರಣೆಗಳು
2023 -ಜೂನ್ ತಿಂಗಳ ಪ್ರಮುಖ ದಿನಾಚರಣೆಗಳು
1. ವಿಶ್ವ ಹವಳ ದ್ವೀಪ ದಿನ / ವಿಶ್ವ ಕ್ಷೀರ ದಿನ
5. ವಿಶ್ವ ಪರಿಸರ ದಿನ / ಚಿಟ್ಟೆಗಳ ಬಗ್ಗೆ ಜಾಗೃತಿ ದಿನ
7. ವಿಶ್ವ ಆಹಾರ ಸುರಕ್ಷಾ ದಿನ
8. ವಿಶ್ವ ಸಾಗರ ದಿನ
12. ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ
14. ರಕ್ತ ದಾನಿಗಳ ದಿನ
15. ವಿಶ್ವ ಗಾಳಿ ದಿನ
17. ಮರುಭೂಮೀಕರಣ ಮತ್ತು ಬರಗಾಲ ವಿರುದ್ಧ ಹೋರಾಟ ದಿನ
21. ವಿಶ್ವ ಯೋಗ ದಿನ / ವಿಶ್ವ ಜಿರಾಫೆ ದಿನ
22. ವಿಶ್ವ ಮಳೆಕಾಡು ದಿನ
26 ಮಾದಕ ವಸ್ತು ದುರ್ಬಳಕೆ ವಿರುದ್ಧ ಅಂತರರಾಷ್ಟಿçÃಯ ದಿನ
27. ವಿಶ್ವ ಮಧುಮೇಹ (ಡಯಾಬಿಟಿಸ್) ದಿನ
30. ವಿಶ್ವ ಉಲ್ಕೆ ದಿನ
ಆಗಸದಲ್ಲಿ ನಾವೂ ಹಾರುವ ದಿನ ದೂರವಿಲ್ಲ !!!
ಆಗಸದಲ್ಲಿ ನಾವೂ ಹಾರುವ ದಿನ ದೂರವಿಲ್ಲ !!!
ಲೇಖಕರು : ರಾಮಚಂದ್ರ ಭಟ್ ಬಿ.ಜಿ.
ಸಾರಿಗೆ ಕ್ಷೇತ್ರದಲ್ಲಿ ನವನವೀನ ಆವಿಷ್ಕಾರಗಳು ನಿರಂತರವಾಗಿ ಆಗುತ್ತಲೇ
ಇವೆ. ಈ ನಿಟ್ಟಿನಲ್ಲಿ ಇತ್ತೀಚಿನ ಬೆಳವಣಿಗೆಯೆಂದರೆ ಜೆಟ್‌ಪ್ಯಾಕ್‌ಗಳ ಅವಿಷ್ಕಾರ. ಭವಿಷ್ಯದಲ್ಲಿ ಜನಪ್ರಿಯ ಸಾರಿಗೆ ವಿಧಾನವಾಗಬಹುದಾದ ಜೆಟ್ ಪ್ಯಾಕ್ ನ ಸಾಧಕ, ಬಾಧಕಗಳನ್ನು ಈ ಲೇಖನದಲ್ಲಿ ಚರ್ಚಿಸಿದ್ದಾರೆ, ಶಿಕ್ಷಕ ರಾಮಚಂದ್ರ ಭಟ್ ಅವರು.
ಕೀಲು ಕುದುರೆ
ಏರಿ ಹೊರಟ ರಾಜಕುಮಾರ ಏಳು ಸಮುದ್ರ ದಾಟಿ, ರಾಕ್ಷಸನನ್ನು ಸಂಹರಿಸಿ ಆತನ ಬಂಧಿಯಾಗಿದ್ದ ರಾಜಕುಮಾರಿಯನ್ನು
ಸುರಕ್ಷಿತವಾಗಿ ಕರೆತಂದ ಅದೆಷ್ಟೋ ಕಥೆಗಳು ನಿಮ್ಮ ಸ್ಮೃತಿ ಪಟಲದಲ್ಲೂ ಇರಬಹುದು. ಇಂತಹ ಕಾಲ್ಪನಿಕ,
ರಂಜನೀಯ ಕತೆಗಳಲ್ಲಿನ ಕೀಲುಕುದುರೆ ಬಾಲ್ಯದಿಂದಲೂ ನನ್ನ ಆಸಕ್ತಿ ಕೆರಳಿಸುತ್ತಿತ್ತು ಅದು ಎಂತಹ ಯಂತ್ರವಿರಬೇಕು?
ಅದು ಹೇಗೆ ಹಾರುತ್ತೆ? ಮನೋನಂದನದಲ್ಲಿ ಅದೆಷ್ಟು ಬಾರಿ ನಾನೂ ಅಂತಹ ಕೀಲುಕುದುರೆ ಏರಿ, ಮನಸ್ಸಿಗೆ
ಬಂದೆಡೆಗೆ ಸುತ್ತುವ ಖೇಚರನಾಗಿದ್ದೆನೋ?
1896 ರಲ್ಲಿ ಪ್ರಕಟಗೊಂಡ ಕಾದಂಬರಿ ದಿ ಕಂಟ್ರಿ ಆಫ್ ದಿ ಪಾಯಿಂಟೆಡ್ ಫರ್ಸ್ ನಲ್ಲಿ ವ್ಯಕ್ತಿಯೊಬ್ಬ ಬೆನ್ನಿಗೆ ಏನನ್ನೋ ಕಟ್ಟಿಕೊಂಡು ಹಾರುವ ವಿವರಣೆ ಅಂದಿನ ಓದುಗರಲ್ಲಿ ಅನೂಹ್ಯ ಅಚ್ಚರಿಯೊಂದಿಗೆ ದಿಗ್ಭ್ರಮೆ ಉಂಟುಮಾಡಿತ್ತಂತೆ.
ನಂತರ, ಇಂತಹ ಕಥಾವಸ್ತು ಇರುವ ರೋಚಕತೆಯ ಅದೆಷ್ಟೋ ಫ್ಯಾಂಟಸಿ ಕೃತಿಗಳು ಓದುಗರಲ್ಲಿ ಸಂಚಲನವನ್ನು ಉಂಟುಮಾಡಿದವು. ಏರ್ ಶೋದಲ್ಲಿ ಪ್ರದರ್ಶಿಸಲಾದ ಜೆಟ್ ಪ್ಯಾಕ್ ಇಂಥದ್ದೇ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇಂತಹ ಯಂತ್ರ ಬಹಶಃ ಮುಂದಿನ ದಿನಗಳಲ್ಲಿ ಮೊಬೈಲ್, ಕಾರು,ಬೈಕ್‌ಗಳಂತೆ ಪ್ರತಿ ಮನೆಯ ಸದಸ್ಯರಾಗುವ ದಿನಗಳು ದೂರವಿಲ್ಲ ಎನ್ನುವ ಸುದ್ದಿಯೇ ಸಾಕಷ್ಟು ಥ್ರಿಲ್ ಉಂಟುಮಾಡುತ್ತದೆ !
ಜೆಟ್‌ಪ್ಯಾಕ್‌ಗಳು ವ್ಯಕ್ತಿಯೊಬ್ಬ ಧರಿಸಿಕೊಂಡು ಹಾರುವ ಸಾಧನಗಳಾಗಿದ್ದು
ಗಾಳಿಯಲ್ಲಿ ಮೇಲೇರಲು ಜೆಟ್ ಪ್ರೊಪಲ್ಷನ್ಅನ್ನು ಬಳಸುತ್ತವೆ. ಮೊದಲ ಜೆಟ್‌ಪ್ಯಾಕ್ ಅನ್ನು 1956 ರಲ್ಲಿ
ಅಮೆರಿಕದ ಸಂಶೋಧಕರಾದ ಹೆರಾಲ್ಡ್ ಎಫ್. ಸ್ಮಿತ್ ಕಂಡುಹಿಡಿದರು ಅದಕ್ಕೂ ಹಿಂದೆ ನಡೆದ ಇಂತಹ ಅನೇಕ ಸಂಶೋಧನೆಗಳು
ನಡೆದು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದವು. ಸ್ಮಿತ್ ರೂಪಿಸಿದ್ದ ಜೆಟ್‌ಪ್ಯಾಕ್‌ನಲ್ಲಿ ಒಂದು
ಜೋಡಿ ಸಣ್ಣ ಜೆಟ್ ಎಂಜಿನ್‌ಗಳನ್ನು ಬಳಸಲಾಗಿತ್ತು. ಈ ಜೆಟ್‌ಪ್ಯಾಕ್ ಹೆಚ್ಚು ಶಕ್ತಿಶಾಲಿಯಾಗಿರಲಿಲ್ಲ.
ಅದು ಒಮ್ಮೆ ಮೇಲೇರಿತೆಂದರೆ, ಕೆಲವು ನಿಮಿಷಗಳವರೆಗೆ ಮಾತ್ರ ಹಾರುತ್ತಿತ್ತು. ಈ ನಿಟ್ಟಿನಲ್ಲಿ ನಡೆದ
ನಿರಂತರ ಸಂಶೋಧನೆಗಳು ಇಂದು ಹೆಚ್ಚು ಸುಧಾರಿತ ಜೆಟ್‌ಪ್ಯಾಕ್‌ಗಳ ಅಭಿವೃದ್ಧಿಗೆ ದಾರಿಮಾಡಿಕೊಟ್ಟಿದೆ
.ಸ್ಮಿತ್‌ರ ಆವಿಷ್ಕಾರದ ನಂತರದ ವರ್ಷಗಳಲ್ಲಿ, ಹಲವು ವಿಭಿನ್ನ ಜೆಟ್‌ಪ್ಯಾಕ್ ವಿನ್ಯಾಸಗಳನ್ನು ಅಭಿವೃದ್ಧಿ
ಪಡಿಸಲಾಗಿದೆ. ಕೆಲವು ಜೆಟ್‌ಪ್ಯಾಕ್‌ಗಳು ಜೆಟ್ ಎಂಜಿನ್‌ಗಳನ್ನು ಬಳಸಿದರೆ, ಇನ್ನು ಕೆಲವು ರಾಕೆಟ್
ಎಂಜಿನ್‌ಗಳನ್ನು ಬಳಸಿವೆ. ಕೆಲವು ಜೆಟ್‌ಪ್ಯಾಕ್‌ಗಳು ಚಿಕ್ಕದಾಗಿದ್ದು ಸುಲಭವಾಗಿ ಸಾಗಿಸುವಂತಿವೆ.
ಇನ್ನು ಕೆಲವು ದೊಡ್ಡದಾಗಿರುತ್ತವೆ ಮತ್ತು ಭಾರವಾಗಿರುತ್ತವೆ. ಇಂದು ಮಾರುಕಟ್ಟೆಯಲ್ಲಿ ಅತ್ಯಾಧುನಿಕ
ಜೆಟ್‌ಪ್ಯಾಕ್‌ಗಳು ಲಭ್ಯವಿದ್ದು ಒಂದು ಸಲಕ್ಕೆ30 ನಿಮಿಷಗಳವರೆಗೆ ಹಾರಬಲ್ಲವು ಮತ್ತು ಅವು ತಾಸಿಗೆ
50 ಮೈಲಿಗಳಷ್ಟು ವೇಗವನ್ನು ತಲುಪಬಹುದು. ಸದ್ಯಕ್ಕೆ ಜೆಟ್‌ಪ್ಯಾಕ್‌ಗಳು ತುಂಬಾ ದುಬಾರಿಯಾಗಿದ್ದು,
ಜನಸಾಮಾನ್ಯರ ಕೈಗೆಟುಕವು. ಜೆಟ್‌ಪ್ಯಾಕ್ ತಂತ್ರಜ್ಞಾನವು ಅಭಿವೃದ್ಧಿ ಹೊಂದಿದಂತೆ, ಅವು ಹೆಚ್ಚು
ಸಾಮಾನ್ಯರ ಕೈಗೆಟುಕುವ ಸಾಧ್ಯತೆಯಿದೆ. ಭವಿಷ್ಯದಲ್ಲಿ, ದೈನಂದಿನ ಬಳಕೆಗಾಗಿ ಜೆಟ್‌ಪ್ಯಾಕ್‌ಗಳು ಜನಪ್ರಿಯ
ಸಾರಿಗೆ ವಿಧಾನವಾಗಬಹುದು.
ಜೆಟ್‌ಪ್ಯಾಕ್‌ಗಳನ್ನು ಆರೋಗ್ಯ, ಮನರಂಜನೆ, ಸಾರಿಗೆ ಮತ್ತು ಮಿಲಿಟರಿ ಕ್ಷೇತ್ರಗಳಲ್ಲಿ ಬಳಸಬಹುದು. ಉದಾಹರಣೆಗೆ, ಅಗ್ನಿ ಅವಘಡ ನಡೆದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯನ್ನು ತ್ವರಿತವಾಗಿ ಸಾಗಿಸಲು, ಆಕಸ್ಮಿಕ ಉಂಟಾದ ಸ್ಥಳದಿಂದ ಸುರಕ್ಷಿತ ಜಾಗಕ್ಕೆ ಗಾಯಾಳುಗಳನ್ನು ಸಾಗಿಸಲು, ಜೆಟ್‌ಪ್ಯಾಕ್‌ಗಳನ್ನು ಬಳಸಬಹುದು ಅಥವಾ ಯುದ್ಧಭೂಮಿಯ ಸುತ್ತಲೂ ತ್ವರಿತವಾಗಿ ಚಲಿಸಲು ಸೈನಿಕರು ಅವುಗಳನ್ನು ಬಳಸಬಹುದು. ಇದು ಜಗತ್ತಿನ ನಿಗೂಢತೆಯನ್ನು ಅನ್ವೇಷಿಸಲು, ತ್ವರಿತ ಪ್ರಪಂಚ ಪರ್ಯಟನವನ್ನೂ ಮುಂದೆ ಸಾಧ್ಯವಾಗಿಸಬಲ್ಲವು. ಅಂಗಾಂಗ ಊನದಿಂದ ನಡೆಯಲು ಅಥವಾ ವಾಹನ ಓಡಿಸಲು ಸಾಧ್ಯವಾಗದ ಜನರಿಗೆ, ತಿರುಗಾಡಲು ಜೆಟ್‌ಪ್ಯಾಕ್‌ಗಳು ಅತ್ಯುಪಕಾರಿ ಎನಿಸುತ್ತವೆ. ಈ ಸಂಶೋಧನಾ ಕ್ಷೇತ್ರದ ವ್ಯಾಪ್ತಿ ಅಪರಿಮಿತ. ಇದು ಸಾರಿಗೆ, ಪ್ರವಾಸೋದ್ಯಮ ಮತ್ತು ಭದ್ರತಾ ಉದ್ಯಮಗಳಲ್ಲಿ ಹೊಸ ವ್ಯವಹಾರಗಳು ಮತ್ತು ಉದ್ಯೋಗಗಳನ್ನು ಸೃಷ್ಟಿಸಬಹುದು.
ಇಂತಹ
ಜೆಟ್‌ಪ್ಯಾಕ್ ತಂತ್ರಜ್ಞಾನದಲ್ಲೂ ಅನೇಕ ಸವಾಲುಗಳಿವೆ. ಜೆಟ್‌ಪ್ಯಾಕ್‌ಗಳು ಸದ್ಯಕ್ಕೆ ತುಂಬಾ ದುಬಾರಿ
ದೂರ ಪ್ರಯಾಣದ ಕ್ಷಮತೆ ಸಾಕಷ್ಟು ಹೆಚ್ಚಬೇಕಿದೆ. ಇದು ಹೊಸ ತಂತ್ರಜ್ಞಾನವಾಗಿದ್ದು, ಸುರಕ್ಷತೆಯ ಸಮಸ್ಯೆಗಳಿವೆ.
ಜೆಟ್‌ಪ್ಯಾಕ್‌ಗಳಿಗಾಗಿ ಪ್ರತ್ಯೇಕ ಕಾನೂನಿನ ರಚನೆಯ ಅಗತ್ಯವಿದೆ.ಭೋರ್ಗರೆವ ಇಂಜಿನ್‌ಗಳು ನಗರಗಳಲ್ಲಿ
ಜೆಟ್‌ಪ್ಯಾಕ್‌ಗಳು ಕಿವಿಗಡಚಿಕ್ಕುವ ಶಬ್ದದಿಂದಾಗಿ ಶಬ್ದಮಾಲಿನ್ಯಕ್ಕೆ ಕಾರಣವಾಗುತ್ತವೆ. ಗದ್ದಲವನ್ನು
ಕಡಿಮೆಮಾಡಲು ನಿಶ್ಯಬ್ದ ಜೆಟ್ ಎಂಜಿನ್‌ಗಳನ್ನು ಬಳಸುವುದು ಅಥವಾ ಹೆಡ್‌ಫೋನ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು.
ಈ ಎಲ್ಲ ದಿಸೆಯಲ್ಲೂ ನಿರಂತರ ಸಂಶೋಧನೆಗಳು ನಡೆಯುತ್ತಲೇ ಇವೆ.
ಅನೇಕ
ಸವಾಲುಗಳನ್ನು ಮೆಟ್ಟಿ ನಿಂತಲ್ಲಿ, ಜೆಟ್‌ಪ್ಯಾಕ್ ತಂತ್ರಜ್ಞಾನವು ಭವಿಷ್ಯದಲ್ಲಿಎಲ್ಲಾಕ್ಷೇತ್ರಗಳಲ್ಲೂ
ಉತ್ಕ್ರಾಂತಿಯನ್ನು ಉಂಟುಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯೋಭವಿಷ್ಯದಲ್ಲಿ, ನಾವು ಈ ಜೆಟ್‌ಪ್ಯಾಕ್‌ಧರಿಸಿ
ಹಕ್ಕಿಗಳಂತೆ ಆಕಾಶದಲ್ಲಿ ಹಾರಾಡುವುದು ಸರ್ವೇ ಸಾಮಾನ್ಯ ದೃಶ್ಯವಾಗಬಹುದು!! ಇದರಿಂದ ಏರ್-ಟ್ರಾಫಿಕ್
ಸಮಸ್ಯೆಗಳೂ ತಲೆದೋರಿಯಾವು. ಆಸೀಮಛಲದ ಮನುಷ್ಯನಿಗೆ
ಇಂಥ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಕಷ್ಟವೇ?
ಕಳೆದ
ಫೆಬ್ರವರಿ ೧೩ ರಿಂದ ೧೭ರವರೆಗೆ ಬೆಂಗಳೂರಿನಲ್ಲಿ ನಡೆದ ಏರೋಇಂಡಿಯಾ 2023 ಕಾರ್ಯಕ್ರಮವನ್ನು ಪ್ರಧಾನಿ
ನರೇಂದ್ರಮೋದಿಯವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲೂ ಹಲವಾರು ದೇಶ ವಿದೇಶಗಳ ಕಂಪನಿಗಳು ತಮ್ಮ
ಜೆಟ್‌ಪ್ಯಾಕ್‌ಗಳನ್ನು ಪ್ರದರ್ಶಿಸಿದವು. ಭಾರತೀಯ ಸ್ಟಾರ್ಟ್‌ಅಲ್ ಸಂಸ್ಥೆಯೊಂದು ಐದು ಜೆಟ್ ಎಂಜಿನ್‌ಗಳಿಂದ
ಚಾಲಿತವಾದ ಜೆಟ್‌ಪ್ಯಾಕ್ಅನ್ನು ಅಭಿವೃದ್ಧಿಪಡಿಸಿದೆ. ಈ ಜೆಟ್‌ಪ್ಯಾಕ್ ಘಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಹಾರಬಲ್ಲದು ಮತ್ತು 80 ಕಿಲೋಗ್ರಾಂಗಳಷ್ಟು
ತೂಕವನ್ನು ಹೊತ್ತೊಯ್ಯಬಲ್ಲದು. ಸುರಕ್ಷತೆಗಾಗಿ ಜೆಟ್ ಪ್ಯಾಕ್ ಪ್ಯಾರಾಚೂಟ್ಅನ್ನು ಸಹ ಹೊಂದಿದೆ.
ಭಾರತೀಯ
ಮಿಲಿಟರಿ- ಕಣ್ಗಾವಲು, ವಿಚಕ್ಷಣ, ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ
ಜೆಟ್‌ಪ್ಯಾಕ್‌ಗಳನ್ನು ಬಳಸುವ ಆಸಕ್ತಿ ತೋರಿಸಿದೆ. ಇದು ಭಾರತದಲ್ಲಿ ಜೆಟ್ ಪ್ಯಾಕ್ ತಂತ್ರಜ್ಞಾನ
ಅತಿವೇಗದೊಂದಿಗೆ ಅಭಿವೃದ್ಧಿ ಹೊಂದಲು ಕಾರಣವಾದೀತು. ಭವಿಷ್ಯದಲ್ಲಿ ಭಾರತ ಸರ್ಕಾರದ ಸ್ಕಿಲ್ ಇಂಡಿಯಾ,
ಮೇಕ್ ಇನ್ ಇಂಡಿಯಾ ಮುಂತಾದ ಉಪಕ್ರಮಗಳಿಗೆ ಈ ತಂತ್ರಜ್ಞಾನ ಪುಷ್ಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ನಕ್ಷತ್ರಗಳ ರಾಜ - ಟೈಕೋ ಬ್ರಾಹೆ
ನಕ್ಷತ್ರಗಳ ರಾಜ - ಟೈಕೋ ಬ್ರಾಹೆ
ಲೇಖಕರು ಸುರೇಶ ಸಂಕೃತಿ
ಟೈಕೋ ಬ್ರಾಹೆಯನ್ನು ದೂರದರ್ಶಕವನ್ನು ಕಂಡು ಹಿಡಿಯುವುದಕ್ಕೂ ಮುಂಚಿನ ಅತ್ಯಂತ ಪ್ರಮುಖ ಖಗೋಳಶಾಸ್ತ್ರಜ್ಞ ಎಂದು ಗುರುತಿಸಲಾಗುತ್ತದೆ. ನಿರಂತರವಾಗಿ ಮತ್ತು ವಿಸ್ತಾರವಾಗಿ ಆಕಾಶ ವೀಕ್ಷಣೆ ಮಾಡಿ ಅತ್ಯಂತ ನಿಖರವಾದ ಮಾಹಿತಿಯನ್ನು ಮೊದಲ ಬಾರಿಗೆ ದಾಖಲಿಸಿದ ಕೀರ್ತಿ ಅವನಿಗೆ ಸಲ್ಲಬೇಕು. ಟೈಕೋನ ಕುರಿತು ಅನೇಕ ಕೌತುಕಗಳು ಹಾಗೂ ವಿವಾದಗಳು ಜನಜನಿತವಾಗಿವೆ. ಆಕಾಶ ವೀಕ್ಷಣೆಯನ್ನು ಕರಾರುವಕ್ಕಾಗಿ ಮಾಡಿ, ವಿವಿಧ ಅಳತೆಗಳನ್ನು ನಿಖರವಾಗಿ ದಾಖಲೆ ಮಾಡಿದ್ದು ಅಷ್ಟೇ ಅಲ್ಲ ಈ ಅಳತೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಮಾಡಲು ಅಗತ್ಯವಾದ ಕಂಪಾಸು ಮುಂತಾದ ವೀಕ್ಷಣಾ ಸಾಮಗ್ರಿಗಳನ್ನು ನಿರ್ಮಿಸಿಕೊಂಡ ಕೀರ್ತಿಯೂ ಸಹ ಅವನಿಗೆ ಸಲ್ಲಬೇಕಾಗುತ್ತದೆ. ಸಮುದ್ರದ ನಡುವೆ ತನ್ನದೇ ಸ್ವಂತ ದ್ವೀಪದಲ್ಲಿ ನಕ್ಷತ್ರ ವೀಕ್ಷಣಾಲಯವನ್ನು ನಿರ್ಮಿಸಿಕೊಂಡಿದ್ದ ಟೈಕೋನನ್ನು "ನಕ್ಷತ್ರಗಳ ರಾಜ" ಎ೦ದೂ ಕರೆಯುವುದುಂಟು.
ಹೆರೆವಾಡ್ಅಬ್ಬೆ ವೀಕ್ಷಣಾಲಯದಲ್ಲಿ ಕುಳಿತು 1572 ನವೆಂಬರ್ 11ರಂದು ಕ್ಯಾಸಿಯೋಪಿಯಾ ನಕ್ಷತ್ರ ಮಂಡಲದಲ್ಲಿ ಒಂದು ಹೊಸ ನಕ್ಷತ್ರವನ್ನು ಟೈಕೋ ಕಂಡು ಹಿಡಿಯುತ್ತಾನೆ.. ಅದನ್ನು ಸ್ಟೆಲ್ಲಾ ನೋವಾ ಎ೦ದು ಹೆಸರಿಸುತ್ತಾನೆ. ತಾನೇ ನಿರ್ಮಿಸಿದ್ದ ಸೆಕ್ಸ್ಟೆಂಟ್ ಎ೦ಬ ವೀಕ್ಷಣಾ ಸಾಧನದಿಂದ ಈ ನಕ್ಷತ್ರವನ್ನು ತುಂಬಾ ಆಳವಾಗಿ ಅಧ್ಯಯನ ಮಾಡಿ 1೫73ರಲ್ಲಿ De nova et nullius aevi memoria prius visa
stella(ಈ ವರೆಗೆ ಯಾರೂ ಕಂಡಿರದ ಕೇಳಿರದ ಒಂದು ಹೊಸ ನಕ್ಷತ್ರದ ಕುರಿತು) ಎ೦ಬ ಒಂದು ವರದಿಯನ್ನು ಸಿದ್ಧಪಡಿಸುತ್ತಾನೆ. ವಿಶ್ವದಾದ್ಯಂತ ಅನೇಕ ಖಗೋಳ ಶಾಸ್ತ್ರಜ್ಞರು ಈ ವಿದ್ಯಮಾನವನ್ನು ವೀಕ್ಷಿಸಿ ವರದಿ ಮಾಡಿದರಾದರೂ ಟೈಕೋನ ವರದಿಯಲ್ಲಿದ್ದ ವಿವರಗಳು, ಮತ್ತು ಮಾಹಿತಿಯ ನಿಖರತೆ ಅವನನ್ನು ವಿಶ್ವವಿಖ್ಯಾತನನ್ನಾಗಿ ಮಾಡುತ್ತದೆ. 1573 ರ ಡಿಸೆಂಬರ್ 8 ರಂದು ಸಂಭವಿಸಲಿದ್ದ ಚಂದ್ರ ಗ್ರಹಣವನ್ನು ಮುಂಚಿತವಾಗಿ ಅವನು ಅತ್ಯಂತ ನಿಖರವಾಗಿ ಊಹೆ ಮಾಡಿದನು. ಟೈಕೋನ ಈ ಸಂಶೋಧನೆಗಳಿಗೆಲ್ಲ ಅವನ ಸಹೋದರಿ ಸೋಫಿಯ ಸಹಾಯಕಿಯಾಗಿರುತ್ತಾಳೆ.
|
ಕ್ಯಾಸಿಯೋಪಿಯ ನಕ್ಷತ್ರ ಪುಂಜದಲ್ಲಿನ ಟೈಕೋ ಮಹಾನವ್ಯ (ಚಿತ್ರ ಕೃಪೆ : ನಾಸಾ ಎಚ್ ಎಸ್ ಟಿ ) ಟೈಕೋ ಅಂದು ವೀಕ್ಷಿಸಿದ ಹೊಸ ನಕ್ಷತ್ರ ವಾಸ್ತವದಲ್ಲಿ ನಕ್ಷತ್ರವು ಸಿಡಿದು ಸಂಭವಿಸಿದ ಮಹಾನವ್ಯವಾಗಿದ್ದಿತು. ಇಂದು ಇದನ್ನು SN 1572 ಅಥವಾ ಟೈಕೋ ಸೂಪರ್ ನೋವಾ ಎ೦ದು ಕರೆಯಲಾಗುತ್ತದೆ ಇಂದಿಗೂ ಇದು ಖಗೋಳ ಶಾಸ್ತ್ರಜ್ಞರ ಸಂಶೋಧನೆಗೆ ಅತ್ಯಂತ ಆಸಕ್ತ ಕ್ಷೇತ್ರವಾಗಿದೆ.. ರೇಡಿಯೋ ಮತ್ತು ಕ್ಷ-ಕಿರಣಗಳನ್ನು ಹೊರಸೂಸುತ್ತಿರುವ ಈ ಮಹಾನವ್ಯವು ಜೋಡಿ ನಕ್ಷತ್ರಗಳಿಂದ ಉಂಟಾದ 1A ಮಾದರಿಯದು. ಇದರಲ್ಲಿ ಒಂದು ಸಾಧಾರಣ ನಕ್ಷತ್ರ ಮತ್ತು ಒಂದು ಶ್ವೇತಕುಬ್ಜ, ಹೀಗೆ ಎರಡು ನಕ್ಷತ್ರಗಳು ಒಂದರ ಸುತ್ತ ಮತ್ತೊಂದು ಗಿರಕಿ ಹೊಡೆಯುತ್ತಿರುತ್ತವೆ. ಚಂದ್ರಶೇಖರ ಮಿತಿಯನ್ನು ಮೀರಿದ ಶ್ವೇತಕುಬ್ಜವು ಜೊತೆಗಾರ ನಕ್ಷತ್ರದ ರಾಶಿಯನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ, ಇಲ್ಲವೇ ತಾನೇ ಸಿಡಿದು ದ್ರವ್ಯವನ್ನು ಹೊರಚೆಲ್ಲಿ ಮಹಾನವ್ಯಕ್ಕೆ ಕಾರಣವಾಗತ್ತದೆ. |
ಟೈಕೋ 1571ರಲ್ಲಿ ಕಿರಿಸ್ಟೆನ್ ಎ೦ಬ ಯುವತಿಯನ್ನು ಪ್ರೀತಿಸುತ್ತಾನೆ. ಆಕೆ ಸಾಮಾನ್ಯ ಮನೆತನದವಳಾದ್ದರಿಂದ ಟೈಕೋನ ಕುಟುಂಬದವರು ಮತ್ತು ಚರ್ಚ್ ಅವರ ಮದುವೆಗೆ ಸಮ್ಮತಿ ನೀಡುವುದಿಲ್ಲ. ಹೀಗಿದ್ದರೂ ಕಿರಿಸ್ಟೆನ್ ಟೈಕೋ ಬದುಕಿರುವವರೆಗೂ ಅವನ ಜೊತೆಯಾಗಿಯೇ ಮುವತ್ತು ವರ್ಷಗಳಷ್ಟು ಸುಧೀರ್ಘ ಕಾಲ ಕಷ್ಟ ಸುಖಗಳಲ್ಲಿ ಪಾಲುಗೊಳ್ಳತ್ತಾ ಒಟ್ಟಿಗೇ ಜೀವನವನ್ನು ಸವೆಸುತ್ತಾರೆ. ಟೈಕೋನ ಮುಂಗೋಪ ಅವನ ಮೂಗಿಗೂ ಕುತ್ತು ತಂದಿದ್ದು ಒಂದು ರೋಚಕ ಘಟನೆ. ಟೈಕೋಗೆ ಇಪ್ಪತ್ತು ವರ್ಷವಿದ್ದಾಗ ನಡೆದ ವಿಲಕ್ಷಣ ಘಟನೆಯಿಂದ ಟೈಕೋ ಶಾಶ್ವತವಾಗಿ ತನ್ನ ಮೂಗನ್ನು ಕಳೆದುಕೊಳ್ಳಬೇಕಾಯಿತು. ಯಾರು ಶ್ರೇಷ್ಟ ಗಣಿತಜ್ಞರು ಎ೦ಬ ವಿಚಾರಕ್ಕೆ ಸಂಬಂಧಿಸಿದಂತೆ ಅವನಿಗೂ ಅವನ ದಾಯಾದಿಯೊಬ್ಬನಿಗೂ ನಡುವೆ ಆರಂಭವಾದ ವಾಗ್ವಾದ ಇಬ್ಬರೂ ಕತ್ತಿ ಹಿಡಿದು ಕಾದಾಡುವ ಮಟ್ಟಕ್ಕೆ ತಲುಪಿತು. ಆಗ ಎದುರಾಳಿ ಬೀಸಿದ ಕತ್ತಿಯು ಟೈಕೋನ ಮೂಗನ್ನು ಕೊಚ್ಚಿ ಹಾರಿಸಿ ಬಿಟ್ಟಿತು. ಅದಾದ ನಂತರದ ದಿನಗಳಲ್ಲಿ ಈ ಅಂಗವೈಕಲ್ಯವನ್ನು ಮರೆ ಮಾಡಲು ಟೈಕೋ ಲೋಹದಿಂದ ತಯಾರಿಸಿದ ಮೂಗನ್ನು ಧರಿಸುತ್ತಿದ್ದ! ನಿತ್ಯ ಬಳಕೆಗೆ ಇತ್ತಾಳೆಯ ಮೂಗು, ವಿಶೇಷ ಸಂದರ್ಭದಲ್ಲಿ ಬಳಸಲು ಚಿನ್ನ ಲೇಪಿತ ಬೆಳ್ಳಿಯ ಮೂಗು!!
|
ಚಂದ್ರನ ದಕ್ಷಿಣ ಭಾಗದಲ್ಲಿ ಟೈಕೋ ಕುಳಿ (ಚಿತ್ರ ಕೃಪೆ : ನಾಸಾ ಎಚ್ ಎಸ್ ಟಿ ) |