ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, July 3, 2023

ವಸ್ತು ಸ್ವಭಾವದ ಗುಣಗಾನ

 ವಸ್ತು ಸ್ವಭಾವದ ಗುಣಗಾನ

                                       



                                                        ಲೇಖಕರು
: ರಮೇಶ, ವಿ,ಬಳ್ಳಾ

                                             ಅಧ್ಯಾಪಕರು

                                ಬಾಲಕಿಯರ ಸರ್ಕಾರಿ ಪೂ ಕಾಲೇಜು 

                               (ಪ್ರೌಢ) ಗುಳೇದಗುಡ್ಡ  ಜಿ: ಬಾಗಲಕೋಟ


ತರಗತಿಯಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವೆ ನಡೆಯುವ ಚರ್ಚೆಯ ರೂಪದಲ್ಲಿರುವ ಈ ಲೇಖನದಲ್ಲಿ ಶಿಕ್ಷಕ ರಮೇಶ್‌ ಬಳ್ಳಾ ಅವರು  ವಸ್ತುಗಳ ಸ್ವಭಾವದ ಗುಣಗಳನ್ನು ಸರಳವಾಗಿ, ಸುಂದರವಾಗಿ ವಿವರಿಸಿದ್ದಾರೆ.

  

ಸುತ್ತಲಿನ ಬಹಳಷ್ಟು ವಸ್ತುಗಳನ್ನು ನಾವೆಲ್ಲಾ ಗಮನಿಸುತ್ತಿರುತ್ತೇವೆÉ. ಕಲ್ಲು, ಮಣ್ಣು, ನೀರು, ಹಾಲು, ಹೊಗೆ, ಧೂಳು ಇತ್ಯಾದಿ. ಎಲ್ಲ್ಲಾ ವಸ್ತುಗಳು ದ್ರವ್ಯದ ಒಂದಲ್ಲ ಒಂದು ಭೌತಿಕ ಸ್ಥಿತಿಯನ್ನು ಪ್ರತಿನಿಧಿಸುತ್ತವೆ. ದ್ರವ್ಯದ ಭೌತಿಕ ಸ್ಥಿತಿಗಳಾದ ಘನ, ದ್ರವ, ಅನಿಲಗಳು ಗೋಚರ ಸ್ಥಿತಿಗಳಾಗಿದ್ದು, ನಮ್ಮ ಅನುಭವಕ್ಕೆ ಸುಲಭ ಸಾಧ್ಯವಾಗಿವೆ. ಅವುಗಳಲ್ಲಿರುವ ಅಣುಗಳ ಜೋಡಣೆಯ ವ್ಯತ್ಯಾಸದಿಂದ ವಿವಿಧ ಸ್ಥಿತಿಗಳು ಉಂಟಾಗಿವೆ. ಇಂತಹ ದ್ರವ್ಯದ ಸ್ಥಿತಿಗಳ ಬಗ್ಗೆ ಪಾಠ ಮಾಡುತ್ತಿದ್ದ ನನಗೆ, ಒಮ್ಮಿಂದೊಮ್ಮೆಲೆ ಪೇಚಿಗೆ ಸಿಲುಕಿಸಿದ್ದು  ಘನವಸ್ತುವಿನ ಸ್ಥಿತಿಸ್ಥಾಪಕ ಗುಣದ ಬಗೆಗಿನ ರಕ್ಷಿತಾ ಎಂಬ ವಿದ್ಯಾರ್ಥಿನಿಯ ಪ್ರಶ್ನೆ. ಸ್ಥಿತಿಸ್ಥಾಪಕದ ಪೀಕಲಾಟದಲ್ಲಿ ಒಂದು ಅವಧಿ ಪೂರ್ತಿ ಚರ್ಚೆಯಲ್ಲೇ ಮುಳುಗಿ ಕೊನೆಗೆ ಎಲ್ಲರೂ ಸಮರ್ಪಕ ಉತ್ತರದೊಂದಿಗೆ ಸಮಾಧಾನಗೊಂಡೆವು.

ಘನ ವಸ್ತುಗಳಲ್ಲಿನ ಅಣುಗಳು ಸಮೀಪದ ಅಣುಗಳೊಂದಿಗೆ ಅತ್ಯಂತ ಒತ್ತೊತ್ತಾಗಿ ಬಂಧಿತವಾಗಿರುವುದು ಕಂಡುಬರುತ್ತದೆ. ಅಂತರಾಣ್ವಿಕ (iಟಿಣeಡಿmoeಛಿuಟಚಿಡಿ) ಬಲದ ಕಾರಣದಿಂದಲೇ ಇವು ಸ್ಥಿರವಾದ ಸಮತೋಲಿತ ಸ್ಥಿತಿಯಲ್ಲಿವೆ. ಘನ ವಸ್ತುಗಳ ಮೇಲೆ ಬಲಪ್ರಯೋಗ ಮಾಡಿದಾಗ ಅವು ವಿಕೃತಗೊಳ್ಳುತ್ತವೆ. ವಿಕೃತಿಯಿಂದ ಸಮತೋಲನ ಸ್ಥಿತಿಯಲ್ಲಿ ಅಸ್ತವ್ಯಸ್ತವಾಗಿ ಕಣಗಳು ಸ್ಥಾನಪಲ್ಲಟಗೊಳ್ಳುತ್ತವೆ. ಮೂಲಕ ತಮ್ಮ ಗಾತ್ರ, ಆಕಾರ ಎರಡರಲ್ಲೂ ವ್ಯತ್ಯಾಸ ಹೊಂದುತ್ತವೆ. ಅಂದರೆ, ಬಹುತೇಕ ಒಡೆದು ಹೋಗುತ್ತವೆಸಂಪೀಡನ ಗುಣ ಘನವಸ್ತುಗಳಲ್ಲಿ ಅಸಾಧ್ಯ. ಉದಾಹರಣೆಗೆ, ಚಾಕ್ ಪೀಸ್, ಇಟ್ಟಿಗೆ, ಲಾಡು ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡÀರೆ, ಇವುಗಳÀ ಮೇಲೆ ಬಲ ಪ್ರೇರಿತವಾದದ್ದೇ ತಡ ಒಡೆದು ವಿಕೃತವಾಗುತ್ತವೆ. ಕಾರಣ, ಅವುಗಳಲ್ಲಿನ ಅಂತರಾಣ್ವಿಕ ಜೋಡಣೆಯ ರೀತಿ ಎಂದು ವಿವರಣೆ ಕೊಟ್ಟೆ. ಅಷ್ಟರಲ್ಲೆ ರಕ್ಷಿತಾ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾ ಉತ್ತರಕ್ಕಾಗಿ ಮುಗಿಬಿದ್ದಳು.

ಸರ್, ಘನ ವಸ್ತುಗಳ ಮೇಲೆ ಬಲ ಪ್ರಯೋಗಿಸಿದರೆ ಒಡೆಯುತ್ತವೆ ಎಂದಿರಿ ಅಲ್ಲವೇ ?

ಹೌದು, ಖಂಡಿತಾ ಎಂದೆ.

ಹಾಗಾದರೆ ಕಾಗದ ಘನ ವಸ್ತುವಲ್ಲವೇ ಸರ್ ? ಎಂದಳು.

ಹೌದು ಎನ್ನುತ್ತಲೇ ಅವಳ ಪ್ರಶ್ನೆಯ ತುಡಿತ ಅರ್ಥ ಮಾಡಿಕೊಂಡೆ.

ಕೇಳು ನಿನ್ನ ಪ್ರಶ್ನೆ ಎಂದೆ.

ಘನವಸ್ತುಗಳೆಲ್ಲವೂ ಒಡೆಯುವುದಾದರೆ ಕಾಗದದ ಮೇಲೆ ಬಲ ಪ್ರಯೋಗಸಿದಾಗ ಅಂದರೆ ಹಿಚುಕಿದಾಗ ಅದು ಮಡಚಿಕೊಂಡು ಉಂಡೆಯಂತಾಗುತ್ತದಲ್ಲವೇ, ಏಕೆ ? ಎಂದು ಕೇಳಿದಳು.

ಹೌದು ನಿಜ, ನಿನ್ನ ಪ್ರಶ್ನೆ ಸರಿಯಾಗಿದೆ.

ಬಹುತೇಕ ಎಲ್ಲಾ ಘನವಸ್ತುಗಳು ಬಾಹ್ಯ ಬಲದ ಕಾರಣದಿಂದ ವಿಕೃತಿ ಹೊಂದುತ್ತವೆಯಾದರೂ, ಕೆಲ ಘನ ವಸ್ತುಗಳು ಹಾಗಾಗುವುದಿಲ್ಲ. ಘನ ವಸ್ತುಗಳಲ್ಲಿ ಕೆಲವು ನಯ, ಮೃದುತ್ವ ಗುಣ ಹೊಂದಿದವುಗಳೂ ಇವೆ. ಹಾಗೇ ಕೆಲವು ಗಟ್ಟಿಯಾಗಿಯೂ ಇವೆ. ಕಾಗದದ ವಿಚಾರಕ್ಕೆ ಬಂದಾಗ ಕಾಗದದ ಮೇಲ್ಮೈನ ಮೇಲಿರುವ ಸಣ್ಣ ಸಣ್ಣ ಅಗೋಚರ ರಂಧ್ರಗಳ ರಚನಾ ವಿನ್ಯಾಸವು ಕಾಗದದ ವಿಕೃತ ಸ್ಥಿತಿಯನ್ನು ವಿವರಿಸುತ್ತದೆ. ಅಂದರೆ, ಅವುಗಳ ಮೇಲೆ ಒತ್ತಡ ಹಾಕಿದಾಗ ರಂಧ್ರಗಳು ಗಾತ್ರದಲ್ಲಿ ಚಿಕ್ಕದಾಗಿ ಕಾಗದ ಮಡಚಿಕೊಳ್ಳುವಂತೆ ಮಾಡುತ್ತದೆ. ಹಾಗೇ ಪುನಃ ತೆರೆದುಕೊಳ್ಳುತ್ತವೆಯಾದರೂ ಗಾತ್ರದಲ್ಲಿ ಮೊದಲಿನ ಸ್ಥಿತಿಗೆ  ಬರಲಾರವು. ರಂಧ್ರಗಳ ಗಾತ್ರ ಸ್ವಲ್ಪ ಕ್ಷೀಣಿಸುತ್ತದೆ. ಹಾಗಾಗಿ ಕಾಗದ ಮೊದಲಿನಂತೆ ಸಪೇತಾಗಿ ಕಾಣುವುದಿಲ್ಲ ಎಂದು ಉತ್ತರಿಸಿದೆ.

ಹೌದಾ ಸರ್, ನನ್ನ ಪ್ರಶ್ನೆಗೆ ಈಗ ಸ್ಪಷ್ಟ ಉತ್ತರ ಸಿಕ್ಕಿತುಎಂದಳು ರಕ್ಷಿತಾ. ಹಾಗೇ ಎಲ್ಲ ಮಕ್ಕಳು ಖುಷಿ ಪಟ್ಟರು.

ಹಾಂ ! ಇಷ್ಟಕ್ಕೆ ಖುಷಿ ಪಡಬೇಡಿ ನಿನ್ನ ಸ್ಥಿತಿಸ್ಥಾಪಕ ಕುರಿತ ಪ್ರಶ್ನೆ ಹುಟ್ಟು ಹಾಕಿದ ಚರ್ಚೆ ಇನ್ನೂ ಮುಗಿದಿಲ್ಲ, ಕೇಳಿರಿ,,,,

ನೀವು ರಬ್ಬರ್ ಬ್ಯಾಂಡ್ ನೋಡಿದ್ದೀರಲ್ಲ, ಅದು ಕೂಡಾ ಘನವಸ್ತುವೇ ಆದರೂ ಅದು ಎಳೆದಾಗ ಹಿಗ್ಗಿ, ಬಿಟ್ಟಾಗ ಮೊದಲಿನ ಸ್ಥಿತಿಗೆ ಬರುತ್ತದೆ. ಯಾಕೆ ಹೀಗೆ ಗೊತ್ತಾ ? ಎನ್ನುತ್ತಿದ್ದಂತೆ ರವಿ ಉತ್ತರಿಸಲು ಮುಂದಾದ,

ಸರ್, ಅದು ರಬ್ಬರ್ ಹಾಗಾಗಿ ಮೊದಲಿನ ಸ್ಥಿತಿಗೆ ಬರುತ್ತದೆ ಎಂದ. ಎಲ್ಲರೂ ಗೊಳ್ಳೆಂದು ನಗುತ್ತಾ

ಅದರಲ್ಲಿರುವ ವಿಜ್ಞಾನ ಸಂಗತಿ ಹೇಳಪ್ಪಎಂದು ನಗಾಡಿದರು. ರವಿ ಸುಮ್ಮನಾದ.

ಕೇಳಿ ಮಕ್ಕಳೇ, ರಬ್ಬರ್ ಬ್ಯಾಂಡ್ ಎಳೆದಾಗ ಅದರಲ್ಲಿರುವ ಅಂತರಾಣ್ವಿಕ ಸ್ಥಿತಿ ಪಲ್ಲಟಗೊಂಡು ಪ್ರಚ್ಛನ್ನ ಶಕ್ತಿ ಪಡೆದುಕೊಳ್ಳುತ್ತದೆ. ಪುನಃ ಬಿಟ್ಟಾಗ ಅದೇ ಸಂಗ್ರಹಿತ ಶಕ್ತಿ ವ್ಯವಸ್ಥೆಯು ಸ್ವಸ್ಥಾನಕ್ಕೆ ಮರಳಲು ಕಾರಣವಾಗುತ್ತದೆ. ಘನವಸ್ತುಗಳ ಇಂತಹ ಗುಣಕ್ಕೆ ಸ್ಥಿತಿಸ್ಥಾಪಕತ್ವ ಎನ್ನಲಾಗುತ್ತದೆ ಎಂದು ತಿಳಿಸಿದೆ. ಅಷ್ಟೋತ್ತಿಗೆ ಮಂಜುವಿನ ತಲೆಯಲ್ಲಿ ಇನ್ನು ಏನೋ ಪ್ರಶ್ನೆ ಮೂಡಿದಂತೆ ಕಂಡವು.

ಮಂಜು ನೀನು ಏನೋ ಕೇಳಲು ಹವಣಿಸುತ್ತೀದ್ದಿಯಾ ? ಎಂದೆ.

ಹೌದು ಸರ್, ಮನೆ ಕಟ್ಟಡದ ಕೆಲಸಗಾರರು ಸಿಮೆಂಟ್ ಪ್ಲಾಸ್ಟರ್ ಮಾಡುವಾಗ ಬಳಸುವ ಸ್ಪಂಜು ನೋಡಿದೆ. ಅದನ್ನು ಒತ್ತಿ ಹಿಚುಕಿದಾಗ ಒಳಹೋಗುತ್ತದೆ ಆದರೆ ಬಿಟ್ಟಾಗ ಮೊದಲಿನಂತೆ ಮೂಲ ಸ್ಥಿತಿಗೆ ಬರುತ್ತದೆ. ಇದು ಕೂಡ ರಬ್ಬರ್ ಹಾಗೆಯಾ ಸರ್ ? ಪ್ರಶ್ನಿಸಿದ.

ಖಂಡಿತ, ಆದರೆ ಸ್ಪಂಜು ನೋಡಿ, ಕಣ್ಣಿಗೆ ಕಾಣಬಹುದಾದ ಸಣ್ಣ ಸಣ್ಣ ರಂಧ್ರಗಳನ್ನು ಹೊಂದಿರುತ್ತದೆ. ರಂಧ್ರಗಳಲ್ಲಿ ಗಾಳಿ ತುಂಬಿಕೊಂಡಿರುತ್ತದೆ. ಹಿಚುಕಿದಾಗ ಗಾಳಿ ಹೊರಬಂದು ಸ್ಪಂಜು ಸಂಕುಚನೆಗೊಳ್ಳುತ್ತದೆ. ಪುನಃ ಬಿಟ್ಟಾಗ ಮತ್ತೆ ಗಾಳಿ ರಂಧ್ರಗಳ ಒಳ ಸೇರುತ್ತದೆ. ಆಗ ಸ್ಪಂಜು ಮೊದಲಿನ ಸ್ಥಿತಿಗೆ ಬಂದು ಬಿಡುತ್ತದೆ. ಇದರಲ್ಲಿ ವಿಕೃತಿ ಎಲ್ಲಿ ಸಾಧ್ಯ ? ಬಾಹ್ಯ ಬಲ ಹಿಂತೆಗೆದಾಗ ವಿಕೃತಿಯನ್ನು ಪ್ರತಿರೋಧಿಸಿ ಮೂಲ ಸ್ಥಿತಿಗೆ ಬರುವ ವಸ್ತುಗಳ ಗುಣ, ಅದರ ಸ್ಥಿತಿಸ್ಥಾಪಕತ್ವ ತಿಳಿಸುತ್ತದೆ. ಹಾಗೇ ಇಂತಹ ಕೆಲ ಘನ ವಸ್ತುಗಳು ಅವುಗಳ ಸ್ವಭಾವದ ಆಧಾರದ ಮೇಲೆ ವಿಕೃತಗೊಳ್ಳುವಿಕೆ ಯಾವ ಸ್ವರೂಪದ್ದು ಎಂದು ಹೇಳಬಹುದು. ಹಾಗಂತ ಎಲ್ಲ ಘನವಸ್ತುಗಳು ವಿಕೃತಗೊಂಡು ಒಡೆಯುತ್ತವೆ ಅಂತಲ್ಲ. ಬಾಹ್ಯ ಬಲ ವರ್ತಿಸಿದಾಗಲೂ ಕಾಯ ವಿಕೃತಿಗೊಳ್ಳದೆ ಇದ್ದರೆ ಅಂಥ ವಸ್ತುಗಳನ್ನು ಅನಮ್ಯ ಕಾಯಗಳು() ಎನ್ನಲಾಗುತ್ತದೆ. ಎಂದು ವಿವರಣೆ ಮುಂದುವರೆಸಿದೆ. ಎಲ್ಲರೂ ಸಾವದಾನದಿಂದ ಕೇಳುತ್ತಲೇ ಇದ್ದರು.

ಬಹುತೇಕ ಎಲ್ಲಾ ಕಾಯಗಳು ತಮ್ಮ ಆಕಾರ, ಗಾತ್ರಕ್ಕೆ ಅನುಗುಣವಾಗಿ ಸ್ಥಿತಿಸ್ಥಾಪಕ ಗುಣವನ್ನು ಪ್ರದರ್ಶಿಸುತ್ತವೆ. ಯಾವ ವಸ್ತುವೂ ಸ್ಥಿತಿಸ್ಥಾಪಕ ಗುಣದಿಂದ ಹೊರತಲ್ಲ. ಹೆಚ್ಚು ಗೋಚರತೆಗೆ ಒಳಪಡದಿದ್ದರೂ ಅಲ್ಪಮಟ್ಟಿನ ಸ್ಥಿತಿ ವ್ಯತ್ಯಾಸವನ್ನು ಆಂತರಿಕವಾಗಿಯಾದರೂ ಅನುಭವಿಸುತ್ತವೆ. ಸಿಲಿಂಡರ್ ಆಕೃತಿಯ ಘನವಸ್ತುಗಳ ಮೇಲೆ ಎರಡೂ ಬದಿಗೆ ಬಾಹ್ಯಬಲ ಆರೋಪಿಸಿದಾಗ ವರ್ತಿಸುವ ಬಲಕ್ಕೆ ಲಂಬವಾಗಿ ಅಂದರೆ ಉದ್ದಕ್ಕೆ ವಿಸ್ತಾರಗೊಳ್ಳುತ್ತವೆ. ಹೀಗೆ ವರ್ತಿಸಿದ ಬಲವು ಪೀಡನ(sಣಡಿess) ಹಾಗೂ ಪೀಡನದಿಂದ ಉಂಟಾದ ಭಿನ್ನಾಂಕ ಬದಲಾವಣೆ ಎಳೆತ(sಣಡಿಚಿiಟಿ) ಎಂದು ಕರೆಸಿಕೊಳ್ಳುತ್ತದೆ. ರೀತಿಯ ಬದಲಾವಣೆಯು ಕರ್ಷಕ ಪೀಡನ(ಖಿeಟಿsie sಣಡಿess)ಕ್ಕೆ ಉದಾಹರಣೆಯಾದರೆ, ಅದೇ ರೀತಿ ವಪನ ಪೀಡನ, ಜಲ ಪೀಡನಗಳಂತಹ ಮೂರು ವಿಧಗಳಲ್ಲಿ ಕಾಯಗಳು ತಮ್ಮ ಆಯಾಮಗಳನ್ನು ಬದಲಿಸಿಕೊಳ್ಳುತ್ತವೆ.

ಕಾಯಗಳ ಸ್ಥಿತಿಸ್ಥಾಪಕತ್ವ ಗುಣವನ್ನು ನಮ್ಮ ನಿತ್ಯ ಜೀವನದ ಅನೇಕ ಸಂದರ್ಭಗಳಲ್ಲಿ ಕಾಣಬಹುದು. ಅವುಗಳ ಬಗ್ಗೆ ನಮಗೆ ಜ್ಞಾನವಿರಲೇಬೇಕು. ಹಾಗಿದ್ದಾಗÉ, ಕೆಲ ಅಪಾಯಗಳು, ತೊಂದರೆಗಳಿಂದ ಪಾರಾಗಬಹುದು. ಅಷ್ಟೇ ಅಲ್ಲದೇ ಜ್ಞಾನದಿಂದ ರೂಪಿಸಿದ ಕಾರ್ಯಗಳು ನಮಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತವೆ. ಎನ್ನುತ್ತಿದ್ದಂತೆ ರಮ್ಯಾ ಮಧ್ಯೆ ಪ್ರವೇಶಿಸಿ,

ಅಂತಹ ಕೆಲ ಉದಾಹರಣೆ ಕೊಡಿ ಸರ್ಎಂದಳು. ಹಾಂ ! ಕೊಡುವೆಎನ್ನುತ್ತಾ ಮತ್ತೆ ಮುಂದುವರೆಸಿದೆ.

ಸೇತುವೆಗಳಂಥ ವಿನ್ಯಾಸ ರೂಪಿಸುವಾಗ, ಬೃಹತ್ ಕಟ್ಟಡಗಳನ್ನು ಕಟ್ಟುವಾಗ, ಕಟ್ಟಡದ ಕಂಬಗಳನ್ನು ಸಿದ್ದಪಡಿಸುವಾಗ, ಕಾಂಕ್ರೀಟ್ ಹಾಕುವಾಗ ಒತ್ತಡ, ಬಲಗಳ ಪ್ರಮಾಣ ಆಧರಿಸಿ ಭಾರ ಹೊರುವ, ತಡೆಯುವ ರೀತಿಯಲ್ಲಿ ಅವುಗಳ ಸ್ಥಿತಿಸ್ಥಾಪಕ ಗುಣದ ಅರಿವಿನೊಂದಿಗೆ ನಾವು ಹೆಜ್ಜೆ ಇಡಬೇಕಾಗುತ್ತದೆ. ಜ್ಞಾನದ ಕೊರತೆಯಿದ್ದರೆ ಅಥವಾ ಅದರಲ್ಲಿ ಏನಾದರೂ ವ್ಯತ್ಯಾಸವಾದದ್ದಾದರೆ ಅಪಾಯಗಳು ಕಟ್ಟಿಟ್ಟ ಬುತ್ತಿ. ಆದ್ದರಿಂದ ದ್ರವ್ಯದ ಘನವಸ್ತುವಿನ ಸ್ಥಿತಿಸ್ಥಾಪಕತೆ ಒಂದು ವಿಶಿಷ್ಟ ಗುಣ ಎನಿಸಿಕೊಂಡಿದೆ.

ರಕ್ಷಿತಾ ಪ್ರಾರಂಭಿಸಿದ ಸ್ಥಿತಿಸ್ಥಾಪಕ ಗುಣದ ಚರ್ಚೆ ಎಷ್ಟೆಲ್ಲಾ ವಸ್ತು ಸ್ವಭಾವದ ಗುಣಗಾನ ಮಾಡಿತೆಂದು ತಿಳಿಯಿತಲ್ಲವೇ.ಎಂದೆ. ಎಲ್ಲರೂ ಖುಷಿಪಟ್ಟರು.





                      

ಆಕರಗಳು :

-     ವಿಜ್ಞಾನ ಪಠ್ಯಗಳು

-     ಜಾಲತಾಣಗಳು

1 comment:

  1. lekhana channagide sir. mahithi. shaili eradoo channigide.

    ReplyDelete