ಭಾರತೀಯ ಪೌರತ್ವ ಪಡೆದ ಬ್ರಿಟಿಷ್ ವಿಜ್ಞಾನಿ ಜೆ ಬಿ ಎಸ್ ಹಾಲ್ಡೇನ್
ಲೇಖಕರು : ಡಾ..ಟಿ.ಎ.ಬಾಲಕೃಷ್ಣ ಅಡಿಗ
ಮಾನವ ಶರೀರಕ್ರಿಯಾಶಾಸ್ತ್ರ, ತಳಿವಿಜ್ಞಾನ, ಜೀವಮಾಪನಶಾಸ್ತ್ರ ಮುಂತಾದ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿ, ತನ್ನ ಜೀವನದ ಕೊನೆಯ ಭಾಗದಲ್ಲಿ ಭಾರತಕ್ಕೆ ಬಂದು, ಇಲ್ಲಿಯ ಪೌರತ್ವ ಪಡೆದು, ಇಲ್ಲಿಯೇ ಕೊನೆಯುಸಿರೆಳೆದ ಖ್ಯಾತಿವೆತ್ತ ವಿಜ್ಞಾನಿ ಜೆ.ಬಿ.ಎಸ್. ಹಾಲ್ಡೇನ್ ಅವರ ಬಗ್ಗೆ ಈ ಲೇಖನ ಬರೆದವರು ಡಾ.ಟಿ.ಎ. ಬಾಲಕೃಷ್ಣ ಅಡಿಗ ಅವರು.
ವಿಜ್ಞಾನದ ಪ್ರತಿಯೊಂದು ಶಾಖೆಯಲ್ಲಿಯೂ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ನಾವಿಂದು ನೋಡುತ್ತಿದ್ದೇವೆ. ತಮ್ಮ ಅಮೂಲ್ಯ ಕೊಡುಗೆಗಳ ಮೂಲಕ ಅನೇಕ ಭಾರತೀಯ ವಿಜ್ಞಾನಿಗಳು ಭಾರತದ ಸ್ಥಾನವನ್ನು ವಿಜ್ಞಾನದ ಭೂಪಠದಲ್ಲಿ ಉತ್ತುಂಗಕ್ಕೆ ಏರಿಸಿದ್ದಾರೆ. ನಮ್ಮ ದೇಶದ ಸಾಕಷ್ಟು ಮಂದಿ ವಿಜ್ಞಾನಿಗಳು ಬೇರೆ, ಬೇರೆ ದೇಶಗಳಿಗೆ ಹೋಗಿ, ಅಲ್ಲಿಯ ಪೌರತ್ವ ಪಡೆದು, ತಮ್ಮ ಸಂಶೋಧನೆಗಳನ್ನು ಮುಂದುವರೆಸುತ್ತಾ ಹೆಸರು ಗಳಿಸಿರುವ ಚಿತ್ರಣ ಒಂದು ಕಡೆ ಇದ್ದರೆ, ಕೆಲ ವಿದೇಶೀಯ ವಿಜ್ಞಾನಿಗಳು ನಮ್ಮ ದೇಶದ ಸಂಸ್ಕೃತಿಗೆ ಮಾರು ಹೋಗಿ, ಇಲ್ಲಿಯೇ ಬಂದು ನೆಲಸಿ, ಭಾರತೀಯ ಪೌರತ್ವ ಪಡೆದು ತಮ್ಮ ಸಂಶೋಧನೆಗಳನ್ನು ನಡೆಸಿದ ದೃಷ್ಟಾಂತಗಳೂ ನಮ್ಮ ಮುಂದೆ ಇವೆ. ಅಂಥ ಉದಾಹರಣೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹೆಸರೆಂದರೆ, ಹೆಸರಾಂತ ಜೀವವಿಜ್ಞಾನಿ, ಜೆ.ಬಿ.ಎಸ್. ಹಾಲ್ಡೇನ್ ಅವರದ್ದು.
1892ರಲ್ಲಿ ಜನಿಸಿದ ಜಾನ್ ಬರ್ಡೋಸ್ ಸ್ಯಾಂಡರ್ಸನ್ ಹಾಲ್ಡೇನ್ (John Burdos Sanderson
Haldane )
ಇದಲ್ಲದೆ, ಆಕ್ಸಿಜನ್‌ನ ಹೆಚ್ಚು ಒತ್ತಡ ಇರುವ ಪರಿಸರಗಳಲ್ಲಿ ಮಾನವನ ರಕ್ತದ ಒತ್ತಡದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಸಿದ ಹಾಲ್ಡೇನ್, ಅಂಥಾ ಸಂದರ್ಭಗಳಲ್ಲಿ ನೀಡಬಹುದಾದ ಸೂಕ್ತ ಚಿಕಿತ್ಸೆಗಳ ಬಗ್ಗೆಯೂ ತಿಳಿಸಿಕೊಟ್ಟ. ಅದೇ ರೀತಿ, ಧನುರ್ವಾಯು ಚಿಕಿತ್ಸೆಯಲ್ಲಿ ಬಳಸಬಹುದಾದ ಕೆಲವು ಸರಳ ವಿಧಾನಗಳನ್ನೂ ಸೂಚಿಸಿದ. ಕೃತಕ ಹೃದಯ-ಶ್ವಾಸಕೋಶ ಯಂತ್ರದ (Heart-lung machine) ಕಾರ್ಯತಂತ್ರಗಳನ್ನು ಸೂತ್ರದ ರೂಪದಲ್ಲಿ ತೋರಿಸಿಕೊಟ್ಟಿದ್ದು, ಹಾಲ್ಡೇನ್‌ನ ಮತ್ತೊಂದು ಪ್ರಮುಖ ಕೊಡುಗೆ.
ಹಾಲ್ಡೇನ್‌ನಲ್ಲಿ ಅಪಾರ ಆಸಕ್ತಿ ಮೂಡಿಸಿದ ಇನ್ನೊಂದು ಅಧ್ಯಯನ ಕ್ಷೇತ್ರ ಎಂದರೆ ತಳಿವಿಜ್ಞಾನ. ಆನುವಂಶೀಯತೆಗೆ ಸಂಬಂಧಿಸಿದಂತೆ ಮನುಷ್ಯರ ನಡುವೆ ಇರುವ ಭಿನ್ನತೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಹಾಲ್ಡೇನ್, ಈ ವ್ಯತ್ಯಾಸಗಳ ಆಧಾರದ ಮೇಲೆ ರಚಿತವಾದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ ಮಾತ್ರ ಸಮರ್ಪಕವಾಗಿರಬಲ್ಲುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದ !
ಪೋಷಕ
ಜೀವಿಗಳಲ್ಲಿರುವ ವಂಶವಾಹಿ ಸಮೂಹಗಳ ಅಭಿವ್ಯಕ್ತಿಯಿಂದ ಹುಟ್ಟುವ ಸಂತತಿ ಎಂತಹುದು ? ಅದು, ಮಾತಾಪಿತೃಗಳ
ಯಾವ ಗುಣಗಳನ್ನ ಪಡೆಯಬಹುದು? ಯಾವುದನ್ನು
ಪಡೆಯಲಾರದು? ಎಂದು ಮುಂತಾದ ಲಿಂಗ ನಿರ್ಧಾರಕ ಸೂತ್ರಗಳಿಗೆ ಸಂಬಂಧಿಸಿದ
ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಳ್ಳುವಲ್ಲಿ ಹಾಲ್ಡೇನ್ ಯಶಸ್ವಿಯಾಗಿದ್ದ. ಇದಲ್ಲದೆ, 1920ರಲ್ಲಿ
ಆರ್.ಎ.ಫಿಶರ್ ಮತ್ತು ಸೀವಾಲ್ ರೈಟ್ (R.A.Fisher and Sewall Wright)
ಹಾಲ್ಡೇನ್‌ನ ಮತ್ತೊಂದು ಪ್ರಮುಖ ಕೊಡುಗೆ ಎಂದರೆ ಜೀವಿಗಳ ಉಗಮಕ್ಕೆ ಸಂಬAಧಿಸಿದAತೆ ಆತ ಪ್ರ‍್ರತಿಪಾದಿಸಿರುವ ‘ ಜೀವದ ರಾಸಾಯನಿಕ ಉಗಮ ಸಿದ್ಧಾಂತ’. ಈ ಭೂಮಿಯ ಮೇಲೆ ಜೀವ ಹೇಗೆ ಹುಟ್ಟಿತು? ಮೊದಲಿನಿಂದಲೇ ಅದು ಸಸ್ಯ ಹಾಗೂ ಪ್ರಾಣಿಗಳ ರೂಪದಲ್ಲಿಯೇ ಇದ್ದಿತೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಬಂದ ಈ ಸಿದ್ಧಾಂತದಲ್ಲಿ ಭೂಮಿಯ ಮೇಲೆ ಜೀವದ ಹುಟ್ಟಿಗೆ ಕಾರಣವಾಗಿರಬಹುದಾದ ಪ್ರಾಚೀನ ಸ್ಥಿತಿಯನ್ನು ಹಾಲ್ಡೇನ್ ಕಲ್ಪಿಸಿಕೊಟ್ಟಿದ್ದಾರೆ.
1928ರಲ್ಲಿ ಹಾಲ್ಡೇನ್ ಪ್ರತಿಪಾದಿಸಿದ ‘ಜೀವದ ರಾಸಾಯನಿಕ ಉಗಮ’ ಸಿದ್ಧಾಂತವು, ಅದಕ್ಕೆ ಕೆಲ ವರ್ಷಗಳ ಹಿಂದೆ, 1922ರಲ್ಲಿ ರಷ್ಯಾದ ಎ.ಐ.ಒಪಾರಿನ್ (A.I.Oparin) ಎಂಬ ವಿಜ್ಞಾನಿ ಪ್ರತಿಪಾದಿಸಿದ ಸಿದ್ಧಾಂತಕ್ಕೆ ಬಹಳಷ್ಟು ಪೂರಕವಾಗಿದೆ. ಈ ಸಿದ್ಧಾಂತದ ಪ್ರಕಾರ, ಭೂಮಿಯ ಮೇಲೆ ಜೀವದ ಉಗಮವಾಗಿದ್ದು ಸುಮಾರು 400 ಕೋಟಿೆ ವರ್ಷಗಳ ಹಿಂದೆ. ಆಗಿನ ಭೂಮಿಯು ಒಂದು ತೀವ್ರ ತಾಪಮಾನವಿದ್ದ ಬೆಂಕಿಯ ಚೆಂಡಿನAತಿತ್ತು. ಭೂಮಿಯ ತಾಪಮಾನ ಕ್ರಮೇಣ ಕಡಿಮೆಯಾದಂತೆ, ಅದರಲ್ಲಿದ್ದ ಮೂಲವಸ್ತುಗಳು ಒಂದನ್ನೊಂದು ಸೇರಿಕೊಳ್ಳತೊಡಗಿದವು. ಜೀವಿಗಳಿಗೆಲ್ಲ ಮೂಲವಾದ ವಸ್ತುವಿಶೇಷಗಳಾದ ಹೈಡ್ರೋಜನ್, ಆಕ್ಸಿಜನ್, ಕಾರ್ಬನ್, ಹಾಗೂ ನೈಟ್ರೋಜನ್, ಇವುಗಳ ವಿಶಿಷ್ಟ ಸಂಯೋಜನೆಯೇ ಮೊಟ್ಟಮೊದಲ ಆದಿ ಜೀವಕೋಶದ ಉಗಮಕ್ಕೆ ಕಾರಣ ಎಂಬುದು ಈ ಸಿದ್ಧಾಂತದ ವಿವರಣೆ.
ಈ
ಸಿದ್ಧಾಂತದ ಪ್ರಕಾರ, ಜೀವಿಗಳ ಉಗಮವಾದಾಗ ಭೂಮಿಯ ವಾತಾವರಣದಲ್ಲಿ ಮೀಥೇನ್, ಅಮೋನಿಯ, ಕಾರ್ಬನ್
ಡೈಆಕ್ಸೈಡ್, ನೀರಾವಿ ಮುಂತಾದ ಅನಿಲಗಳು ಮಾತ್ರ ಇದ್ದವು. ಆಕ್ಸಿಜನ್ ಮುಕ್ತ
ರೀತಿಯಲ್ಲಿ ಇರಲಿಲ್ಲ. ಮುಂದೆ ಭೂಮಿಯ ವಾತಾವರಣದಲ್ಲಿ ಕ್ರಮೇಣ ಉಂಟಾದ ಬದಲಾವಣೆಗಳ ಫಲವಾಗಿ ಅನೇಕ
ರೀತಿಯ ರಾಸಾಯನಿಕ ಸಂಯೋಜನೆಗಳು ನಡೆದು, ಅಂತಿಮವಾಗಿ ಮೊದಲ ಜೀವಕೋಶ ಭೂಮಿಯ ಮೇಲೆ ಕಾಣಿಸಿಕೊಂಡಿತು
ಎಂಬುದು ಈ ಸಿದ್ಧಾಂತದ ಸಾರಾಂಶ. ಮುಂದೆ, ಹೆರಾಲ್ಡ್ ಯೂರಿ ಮತ್ತು ಸ್ಟ್ಯಾನ್ಲಿ ಮಿಲ್ಲರ್ (Harold Yuri and Stanley
Miller), ಸಿಡ್ನಿ
ಫಾಕ್ಸ್ (Sydney Fox), ಷೆರಾರ್ಡ್(Sherard)
ಹೀಗೆ, ಜೀವವಿಜ್ಞಾನದ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿ, ಪ್ರಖ್ಯಾತಿ ಪಡೆದ ಹಾಲ್ಡೇನ್ ಅನೇಕ ಉತ್ತಮ ಕೃತಿಗಳನ್ನು ರಚಿಸಿ, ಅವುಗಳ ಮೂಲಕವೂ ವಿಜ್ಞಾನ ಕ್ಷೇತ್ರಕ್ಕೆ ಚಿರಪರಿಚಿತನಾಗಿದ್ದಾನೆ. ಕಿಣ್ವಗಳ ಕಾರ್ಯವೈವಿಧ್ಯವನ್ನು ತಿಳಿಸುವ ‘Enzymes‘ ಎಂಬ ಕೃತಿ ಅವನಿಗೆ ಅಪಾರ ಜನಮನ್ನಣೆಯನ್ನು ತಂದಿತ್ತಿದೆ. ಜೂಲಿಯನ್ ಹಕ್‌ಸ್ಲೀ() ಎಂಬ ವಿಜ್ಞಾನಿಯ ಜೊತೆಗೂಡಿ ರಚಿಸಿದ ‘Animal Biology‘ ಎಂಬ ಕೃತಿ ಪ್ರಾಣಿ ಪ್ರಪಂಚದ ವೈವಿಧ್ಯತೆ ಮತ್ತು ಅಚ್ಚರಿಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಹಾಲ್ಡೇನ್ ರಚಿಸಿದ ಇತರ ಜನಪ್ರಿಯ ಕೃತಿಗಳೆಂದರೆ,‘ ‘Possible Words‘(1927), ‘Science and Ethics‘(1928),‘The Causes of Evolution’ (1938), ‘Science In War and Peace ‘ (1940) ಹಾಗೂ ‘New Paths in Genetics‘ (1941).
ಮಹಾನ್
ಮಾನವತಾವಾದಿಯಾಗಿದ್ದ ಹಾಲ್ಡೇನ್ 1930g
ದಶಕದಲ್ಲಿ ಕಮ್ಯೂನಿಸಮ್‌ನ ತತ್ವಗಳಿಗೆ ಮಾರುಹೋಗಿ, ತನ್ನನ್ನು
ಒಬ್ಬ ಮಾರ್ಕ್ಸ್ವಾದಿಯಾಗಿ ಗುರುತಿಸಿಕೊಳ್ಳಲು ಪ್ರಾರಂಭಿಸಿದ. ಕಮ್ಮುನಿಷ್ಟರ ಮುಖವಾಣಿಯಾಗಿದ್ದ ‘Daily Mirror‘ ಪತ್ರಿಕೆಯ
ಸಂಪಾದಕನಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ. ಅಲ್ಲಿ ಅವನಿಗೆ ಕ್ರಮೇಣ ಭರಮನಿರಸನ
ಉಂಟಾಗತೊಡಗಿತು. ತನ್ನ ಸಮಕಾಲೀನನಾಗಿದ್ದ ರಷ್ಯಾದ ಖ್ಯಾತ ವಿಜ್ಞಾನಿ ಲೈಸೆಂಕೋ (Lysenko)
ಭಾರತಕ್ಕೆ ಬಂದು ನೆಲಸಿದ ಮೇಲೆ ಹಾಲ್ಡೇನ್ ಭಾರತೀಯ ಜೀವನ ಶೈಲಿಗೆ ಮಾರು ಹೋದ. ತಾನೂ ಭಾರತೀಯ ಜೀವನಶೈಲಿಯನ್ನೇ ಅಳವಡಿಸಿಕೊಂಡ. ಭಾರತೀಯ ಉಡುಗೆಗಳನ್ನೇ ಧರಿಸುತ್ತಿದ್ದ. 1961ರಲ್ಲಿ ಭಾರತೀಯ ಪೌರತ್ವವನ್ನೂ ಪಡೆದುಕೊಂಡ.
No comments:
Post a Comment