ರಕ್ತ ಪರಿಚಲನೆಯನ್ನು ಕಂಡುಹಿಡಿದ ವಿಲಿಯಮ್ ಹಾರ್ವೆ
ಲೇ : ರಾಮಚಂದ್ರ ಭಟ್ ಬಿ.ಜಿ.
ಹಾರ್ವೆ ಮೊದಲ
ಬಾರಿಗೆ ಅಪಧಮನಿಗಳು ಮತ್ತು ಅಭಿದಮನಿ ರಕ್ತನಾಳಗಳು ಇಡೀ
ದೇಹದ ಮೂಲಕ ರಕ್ತವನ್ನು ಪರಿಚಲನೆ ಮಾಡುತ್ತವೆ ಎಂದು ತೋರಿಸಿಕೊಟ್ಟ. ಹೃದಯದ ಬಡಿತವು ಇಡೀ ದೇಹದ ಮೂಲಕ ನಿರಂತರ ರಕ್ತ
ಪರಿಚಲನೆಯನ್ನುಉಂಟುಮಾಡುತ್ತದೆ ಎಂದು ತೋರಿಸಿಕೊಟ್ಟ. ಹೃದಯ ಮತ್ತು ರಕ್ತ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆಎನ್ನುವುದನ್ನು
ಪ್ರಾತ್ಯಕ್ಷಿಕೆಯೊಂದಿಗೆ ಸಾಧಿಸಿಯೇ ಬಿಟ್ಟಿದ್ದ ವಿಲಿಯಂ ಹಾರ್ವೆ. ಅಪಧಮನಿಗಳು ಮತ್ತು ಅಭಿಧಮನಿಗಳಲ್ಲಿ ಹರಿಯುವ ರಕ್ತವು ಒಂದೇ.ಹೃದಯದ ಬಡಿತದಿಂದಲೇ ಏರ್ಪಡುತ್ತದೆ. ಎನ್ನುವುದನ್ನು
ಹಾರ್ವೆಯವರು ತಮ್ಮ ನಿರಂತರ ಸಂಶೋಧನೆಗಳಿಂದ ಕಂಡುಕೊಂಡಿದ್ದ. ಈ ಕಾರಣಕ್ಕಾಗಿ,
ಮಹಾನ್ ಶಸ್ತ್ರಚಿಕಿತ್ಸಾ ತಜ್ಞನಾಗಿದ್ದ ವಿಲಿಯಮ್ ಹಾರ್ವೆಯನ್ನು ಆಧುನಿಕ ಪ್ರಾಯೋಗಿಕ ಶರೀರ ಕ್ರಿಯಾ ವಿಜ್ಞಾನದ ( modern
experimental physiology ) ಜನಕ ಎಂದು ಗುರುತಿಸಲಾಗುತ್ತದೆ.
ವಿಲಿಯಮ್ ಹಾರ್ವೆ ಆಗ್ನೇಯ ಇಂಗ್ಲೆಂಡಿನ ಕೆಂಟ್‍ನಲ್ಲಿ ಯಫೋಕ್ಸ್‍ಸ್ಟನ್ನಿನಲ್ಲಿ
1578 ರ ಏಪ್ರಿಲ್ 1 ರಂದು ಜನಿಸಿದ. ಕೇಂಬ್ರಿಜ್‍ನ ಕಾಲೇಜಿನಲ್ಲಿ, ವೈದ್ಯಕೀಯ ವ್ಯಾಸಂಗಕ್ಕೆ ಅಗತ್ಯವಾಗಿದ್ದ ಗ್ರೀಕ್
ಮತ್ತು ಲ್ಯಾಟಿನ್ಭಾಷೆಗಳನ್ನೂ ಇತರ ವಿಷಯಗಳನ್ನೂ ನಾಲ್ಕು ವರ್ಷಗಳ ಕಾಲ ವ್ಯಾಸಂಗಮಾಡಿ ಹಾರ್ವೆ 1597ರಲ್ಲಿ ಬಿ.ಎ.ಪದವಿ ಗಳಿಸಿದ. ಇಟಲಿಯ ಪ್ರಸಿದ್ಧವಾದ ಪಡುವ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ
ಅಂಗರಚನಾ ಶಾಸ್ತ್ರದ ವ್ಯಾಸಂಗಮಾಡಿದ. ಎಂ.ಡಿ. ಪದವಿಯ ಸಹಿತ ಇಂಗ್ಲೆಂಡಿಗೆ ಮರಳಿ ಲಂಡನ್ನಿನಲ್ಲಿ
ವೈದ್ಯಕೀಯ ವೃತ್ತಿ ಪ್ರಾರಂಭಿಸಿದ. 1607ರಲ್ಲಿ ಲಂಡನ್ನಿನ
ಸೇಂಟ್ ಬಾರ್ಥೋಲೋಮ್ಯು ಆಸ್ಪತ್ರೆಯಲ್ಲಿ ವೈದ್ಯನಾಗಿ ನೇಮಕಗೊಂಡ. ಈ ಹುದ್ದೆಯಲ್ಲಿ 36 ವರ್ಷ ಸೇವೆ ಸಲ್ಲಿಸಿದ. ಪ್ರಸವ ಶಾಸ್ತ್ರದಲ್ಲೂ ಅವನದ್ದು ಎತ್ತಿದ ಕೈ. ರೋಗಶಾಸ್ತ್ರವನ್ನೂ ಅಧ್ಯಯನ ಮಾಡಿದ್ದ. ವೈದ್ಯಶಾಸ್ತ್ರದಲ್ಲಿದ್ದ ಈತನ ಪರಿಣಿತಿ ಇವನನ್ನು ರಾಜಮನೆತನದ ವೈದ್ಯನಾಗಿ ನೇಮಕಗೊಳ್ಳುವಂತೆ ಮಾಡಿತ್ತು.
ಯಾವುದೇ ಅಧ್ಯಯನದಲ್ಲೂ ತನಗೇ ಪೂರ್ಣವಾಗಿ ನಂಬಿಕೆ ಬರುವವರೆಗೆ ಆತುರಾತುರವಾಗಿ ಏನನ್ನೂ ಆತ ಬಹಿರಂಗಗೊಳಿಸುತ್ತಿರಲಿಲ್ಲ. ಮೇಲಿಂದ ಮೇಲೆ ವಿವಿಧ
ರೀತಿಯ ಪ್ರಯೋಗಗಳನ್ನು ಮಾಡಿ ಪರೀಕ್ಷಿಸಿ ಅಂತಿಮವಾಗಿ ತಮ್ಮ ಪ್ರತಿಪಾದನೆಯನ್ನುಪೂರಕ ಸಾಕ್ಷ್ಯಗಳೊಂದಿಗೆ
ವೈದ್ಯಲೋಕದೆ ಎದುರು ಅನಾವರಣಗೊಳಿಸುತ್ತಿದ್ದ. ಅದಕ್ಕೆ ಅವನು ರಚಿಸಿದ ಗ್ರಂಥವೇ ಸಾಕ್ಷಿಯಾಗಿದೆ.ಹಾರ್ವೆ ತನ್ನ ‘ಡಿ ಮೋಟು ಕಾರ್ಡಿಸ್’ ಎಂಬ 72ಪುಟಗಳಗ್ರಂಥದಲ್ಲಿ ಹೇಳಿರುವ
ವಿಷಯವನ್ನು 12 ವರ್ಷಗಳಷ್ಟು ಮುಂಚೆಯೇ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನಲ್ಲಿ ಉಪನ್ಯಾಸವಾಗಿ ತಿಳಿಯಪಡಿಸಿದ್ದರೂ
ಪುಸ್ತಕ ರೂಪದಲ್ಲಿ ಬರೆದು ಪ್ರಚುರಪಡಿಸಿದ್ದು
1628ರಲ್ಲಿ. ಈ ಗ್ರಂಥದ ಮೊದಲ 19 ಪುಟಗಳಲ್ಲಿ ಹೃದಯ ಮತ್ತು ರಕ್ತ ಪರಿಚಲನೆ ವಿಷಯದಲ್ಲಿ
ಅರಿಸ್ಟಾಟಲ್, ಗೇಲನ್ ಮುಂತಾದವರು ತಿಳಿಸಿದ್ದ ವಿಚಾರಗಳನ್ನೂ, 1550ರಿಂದ ಈಚೆಗೆ
ವೆಸೇಲಿಯಸ್, ಫ್ಯಾಬ್ರೀಷಿಯಸ್ ಮೊದಲಾದವರ ಸಂಶೋಧನೆಗಳನ್ನುಚರ್ಚಿಸಿದ್ದಾನೆ.ನಂತರ, ತಾನು ಸಂಶೋಧನೆಯಲ್ಲಿ ಕಂಡುಕೊಂಡ ವಿಷಯಗಳನ್ನು ಹಂತ
ಹಂತವಾಗಿ ವಿವರಿಸುತ್ತ, ರಕ್ತ ಪರಿಚಲಿಸುತ್ತಿದೆ ಎಂಬ ನಿರ್ಧಾರಕ್ಕೆ ಏಕೆ ಬರಬೇಕು? ಎನ್ನುವುದನ್ನು
ಶಂಕೆಗೆ ಆಸ್ಪದವಿಲ್ಲದ ರೀತಿಯಲ್ಲಿ ಪ್ರತಿಪಾದಿಸುತ್ತಾನೆ. ಡಿ ಮೋಟು ಕಾರ್ಡಿಸ್ ಮತ್ತು ರಿಯೋಲಾನ್ ಎಂಬವರಿಗೆ ಹಾರ್ವೆ ಬರೆದ ಪತ್ರಗಳಿಂದ
ಪ್ರಯೋಗಾತ್ಮಕ ವ್ಯಾಸಂಗವಿಧಾನ ಬಳಕೆಗೆ ಬಂದಿರುವುದು
ತಿಳಿದು ಬರುತ್ತದೆ.
William Harvey dissecting the body of Thomas Parr
ಈ ವಿಷಯಗಳನ್ನೆಲ್ಲ ವಿವಿಧ ಗ್ರಂಥಗಳ ಅಧ್ಯಯನದಿಂದಲೂ, ನಿರಂತರ ಚಿಂತನೆಯಿಂದಲೂ ಹಾರ್ವೆ ತರ್ಕಿಸಿದ. ನಾಯಿ, ಹಂದಿ, ಹಾವು, ಕಪ್ಪೆ, ಮೀನು, ಏಡಿ, ಮೃದ್ವಂಗಿಗಳು, ಕೀಟ ಮೊದಲಾದ ಜೀವಿಗಳ ಅಧ್ಯಯನದಿಂದ ತಮ್ಮ ಆಲೋಚನೆಗಳು ಸರಿಯಾಗಿವೆ ಎಂಬುದನ್ನು ಕಂಡುಕೊಂಡ.ಮೊಟ್ಟೆಯೊಳಗೆ ಇರುವ ಕೋಳಿಯ ಭ್ರೂಣದ ಹೃದಯ ಮಿಡಿಯುತ್ತಿರುವುದನ್ನು ದೊರೆ ಚಾರ್ಲ್ಸ್ ಗೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದ.
ಹಾರ್ವೆಗೆ ರಕ್ತನಾಳಗಳ ಪರಿಚಯವಿದ್ದರೂ, ಸೂಕ್ಷ್ಮದರ್ಶಕದ ಆವಿಷ್ಕಾರವಾಗಿರದ
ಕಾರಣದಿಂದ ಲೋಮನಾಳಗಳ ರಚನೆಯ ಮಾಹಿತಿ ಇರಲಿಲ್ಲ. ಹಾರ್ವೆಯ ನಿಧನದ ನಂತರ ಪ್ರಖ್ಯಾತ ಅಂಗರಚನಾ ಶಾಸ್ತ್ರಜ್ಞ, ಮಾಲ್ಪೀಜಿ (1628-94) ಸೂಕ್ಷ್ಮದರ್ಶಕ ಬಳಸಿ ರಕ್ತನಾಳಗಳನ್ನು ಅಧ್ಯಯನ
ಮಾಡಿ, ಅಪಧಮನಿ ಮತ್ತು ಅಭಿಧಮನಿಗಳನ್ನು ಸಂಪರ್ಕಿಸುವ ಲೋಮನಾಳಗಳನ್ನು ಕಂಡುಹಿಡಿದರು.
ಈ ಮಧ್ಯೆ ಅರಿಸ್ಟಾಟಲ್,
ಗೇಲೆನ್ ಅವರ ಬೋಧನೆಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತ ಮಾಡಿದ್ದರಿಂದ ಸಾಕಷ್ಟು ರೋಗಿಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೂ ಒಳಗಾಗಬೇಕಾಯಿತು. ಸ್ನೇಹಿತನಂತೆ ಇದ್ದ ಚಾರ್ಲ್ಸ್ ದೊರೆಯ ಕೊಲೆಯೂ ಹಾರ್ವೆಗೆ
ಆಘಾತವನ್ನು ಉಂಟು ಮಾಡಿತ್ತು. .ಕೀಟಗಳ ಪ್ರಜನನ ಕ್ರಿಯೆ ಕುರಿತು ಹಾರ್ವೆ ಸಂಶೋಧನೆ
ನಡೆಸಿ, ಗ್ರಂಥವೊಂದನ್ನು ರಚಿಸಿದ್ದರು. ಇಂಗ್ಲೆಂಡಿನ ಪ್ರಕ್ಷುಬ್ದ ರಾಜಕೀಯ ಪರಿಸ್ಥಿತಿಯ
ಸಂದರ್ಭದಲ್ಲಿ ಹಾರ್ವೆ ದೊರೆಯ ಒಡನಾಡಿ ಎಂದು ತಿಳಿದು ಕ್ರುದ್ಧರಾದ ಜನ 1642ರಲ್ಲಿ ಲಂಡನ್ನಿನ ಇವನ ಮನೆಯನ್ನು ಲೂಟಿ ಮಾಡಿದರು. ಆ ದಾಳಿಯಲ್ಲಿ ಸಂಶೋಧನೆಯ ಹಸ್ತಪ್ರತಿಗಳು ಪೂರ್ಣವಾಗಿ ನಾಶವಾದುವು. ಇದು ಕೇವಲ ಹಾರ್ವೆಗೆ ಅಷ್ಟೇ ಅಲ್ಲ, ಇಡೀ ಸಂಶೋಧನಾ ಕ್ಷೇತ್ರಕ್ಕೆ ಆದ ತುಂಬಲಾರದ ನಷ್ಟವೇ ಸರಿ. ಆದರೂ, ಹಾರ್ವೆ ತನ್ನ ಸಂಶೋಧನಾ ಪ್ರವೃತ್ತಿಯಿಂದ ವಿಮುಖನಾಗಲಿಲ್ಲ. ಹಾಗೆಯೇ ಅವನನ್ನು ಹಿಂಬಾಲಿಸುತ್ತಿದ್ದ ದುರಾದೃಷ್ಟವೂ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಶ್ವಾಸಕ್ರಿಯೆ,ರೋಗಶಾಸ್ತ್ರ ಮೊದಲಾದ
ಹಲವು ವಿಷಯಗಳ ಮೇಲೆ ಸುಧೀರ್ಘ ಸಂಶೋಧನೆ ನಡೆಸಿ
ಆತ ಗ್ರಂಥಗಳನ್ನುರಚಿಸಿದ್ದ. ಇವೆಲ್ಲವೂ ಲಂಡನ್ನಿನ
ಭೀಕರ ಅಗ್ನಿ ದುರಂತದಲ್ಲಿ ನಾಶವಾಗಿ ಹೋದವು. ಹೀಗೆ, ಸಾಲು ಸಾಲು ದುರಂತಗಳು, ಅವನನ್ನು ತೀವ್ರವಾಗಿ ಘಾಸಿಗೊಳಪಡಿಸಿರಬೇಕು. ಇವೆಲ್ಲದರ ಫಲವೋ ಎಂಬಂತೆ ಸಮಾಜಕ್ಕೆ ತನ್ನ ಬದುಕನ್ನು ಸಮರ್ಪಿಸಿದ ವಿಲಿಯಂ ಹಾರ್ವೆ 1657 ಜೂನ್
3ರಂದು ಲಂಡನ್ನಿನಲ್ಲಿ ನಿಧನನಾದ.
Informative sir👍
ReplyDeleteಉತ್ತಮವಾದ ಲೇಖನ ಸರ್. 👏🏽👏🏽👏🏽💐 ಗ್ರೂಪ್ನಲ್ಲಿ ಹಂಚಿಕೊಂಡದ್ದಕ್ಕೆ ಧನ್ಯವಾದಗಳು
ReplyDeleteNice information
ReplyDelete