ಎಣೆ ಇರದ ಜೀವಕೋಶದ ವಿಸ್ಮಯಗಳು
ಸ ಪ್ರೌ ಶಾಲೆ ಸಾಲಗುಂದ
ತಾ : ಸಿಂಧನೂರು
ಕಣ್ಣಿಗೆ ಕಾಣುವ ಜಗತ್ತು ಒಂದೆಡೆ ಆದರೆ , ತಮ್ಮ ಕೆಲಸವನ್ನು ಅದ್ಭುತವಾಗಿ ನಿರ್ವಹಿಸುವ ಜೀವಕೋಶಗಳ ಜಗತ್ತು ಮತ್ತೊಂದೆಡೆ ಹಾಗೂ ಬಹಳ ವಿಸ್ಮಯ.ಸಾಮಾನ್ಯವಾಗಿ ನಾವು ಹೇಳುತ್ತೇವೆ ಜೀವಕೋಶಗಳು ಬಹಳ ಚಿಕ್ಕವು ಅಂತ...ಆದರೆ ಅಸಿಟಬ್ಯುಲೆರಿಯಾ (Acetabularia) ಎಂಬ ಏಕಕೋಶೀಯ ಶೈವಲ 10 ಸೆಂಟಿಮೀಟರ್ ನಷ್ಟು ಉದ್ದವಿದೆ. ಜೀವಕೋಶಗಳು ಸಹಿತ ನಮ್ಮಂತೆ ನೋಡುತ್ತವೆ ಅಲ್ಲದೆ ಆವಕೆಂಪು (IR)ಕಿರಣಗಳನ್ನು ಹೊರ ಸೂಸಿ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸಬಲ್ಲವು.
ಸ್ಟೈಲೊಂಚಿಯಾ (stylonychia ) ಎಂಬ ಜೀವಕೋಶಕ್ಕೆ ಎಡ ಮತ್ತು ಬಲ ದಿಕ್ಕುಗಳ ಪರಿಚಯ ಇದೆ ಎಂಬುದಾಗಿ
ಡಾ|| ವ್ಯಾಲೇಸ್ ಮಾರ್ಷಲ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಪೈಸರಮ್
(physarum) ಎಂಬ ಜೀವಕೋಶಗಳು
ಮೇಝಸ್‌ದಂತಹ ಸಮಸ್ಯೆಗಳನ್ನು ಬಿಡಿಸುತ್ತವೆ ಎಂದರೆ ಅಚ್ಚರಿಯಲ್ಲವೇ? .ಕೆಲವು ಜೀವಕೋಶಗಳು
ನಮ್ಮ ಮೆದುಳನ್ನು ತಮ್ಮ ನಿಯಂತ್ರಣಕ್ಕೆ
ತೆಗೆದುಕೊಳ್ಳಬಲ್ಲವು!!
ಜೀವಕೋಶದೊಳಗಿನ ಡಿಎನ್ಎಗಳು ಯಾರ ಸಹಾಯವಿಲ್ಲದೆ
ದೂರಸ್ಪರ್ಶಿ ಮನನದಂತೆ ಅಂದರೆ ನಿಸ್ತಂತು ವಿದ್ಯುತ್ ನ ಹಾಗೆ, ಕಾಡ್ಲೆಸ್ ಫೋನ್ ತರ ವಿಚಾರಗಳನ್ನ
ವಿನಿಮಯ ಮಾಡಿಕೊಳ್ಳಬಲ್ಲವು.
ಬೆಳಕಿಗೆ ಪ್ರತಿಕ್ರಿಯೆ ನೀಡಬಲ್ಲವು. ಜೀವಕೋಶಗಳ ಜೀವಿತಾವಧಿಯಲ್ಲೂ ವೈವಿಧ್ಯತೆ ಇದೆ. ಕೆಂಪು ರಕ್ತ ಕಣಗಳು 120 ದಿನ, ಅಸ್ತಿ ಕೋಶಗಳು 25
ರಿಂದ 30 ವರ್ಷಗಳವರೆಗೆ ಬದುಕುತ್ತವೆ ಎಂಬುದು ವೈವಿಧ್ಯಮಯ. . . ನಮ್ಮ ಕಣ್ಣಿನ ಅಕ್ಷಿಪಟಲದಲ್ಲಿರುವ ಕಂಬಿ ಮತ್ತು ಶಂಕು..ಕೋಶಗಳು ಬೆಳಕು ಮತ್ತು
ಬಣ್ಣಕ್ಕೆ ಅದೆಷ್ಟು ಸೂಕ್ಷ್ಮವಾಗಿವೆ...? ಇದನ್ನಾಧಾರವಾಗಿಟ್ಟುಕೊಂಡು ಮೊಬೈಲ್ ಫೋನುಗಳು ಮುಂದಿನ ಭವಿಷ್ಯದ ಜೀವಕೋಶ ಆಧರಿತ ಜೈವಿಕ ಎಲೆಕ್ಟಾನಿಕ್ ಸಾಧನಗಳನ್ನು ಯಾರು ತಯಾರಿಸುತ್ತಿರಿ ...?
ಜೈವಿಕ ತಂತ್ರಜ್ಞಾನ ಬುದ್ಧಿವಂತ ಶಾಖೆ ಎಂದಾದರೆ ಇಂಧನ ಔಷಧಿ ಜೀವಸತ್ವ ಎ ತಯಾರಿಕೆ
ಎಲ್ಲವೂ ಜೀವಕೋಶದ ಡಿಎನ್ಎ
ರಿಪೇರಿ ಯಿಂದಲೇ ಎಂಬುದು ವಿಸ್ಮಯ ಅಲ್ಲವೇ ? ಅವುಗಳನ್ನು ಬಳಸಿ ಜೈವಿಕ ಅಸ್ತ್ರ ತಯಾರಿಸಬಹುದು. ಎಡ್ವರ್ಡ್ ಜೆನ್ನರ್ ದನದ ಹುಣ್ಣುಗಳಿರುವ ವೈರಸ್‌ಗಳನ್ನೇ ಬಳಸಿ ಸಿಡುಬು ರೋಗಕ್ಕೆ ಲಸಿಕೆಗಳನ್ನು
ಕಂಡುಹಿಡಿದದ್ದು ಇತಿಹಾಸ.
ಜೀವಕೋಶಗಳು ಇಲಿಗಳಲ್ಲಿ Est – 2 ಎಂಬ ವಂಶವಾಹಿ ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ. ಈ ದಿಸೆಯಲ್ಲಿ ಸಂಶೋಧನೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಅರ್ಬುದವನ್ನು
ದೂರಕ್ಕೆ ಅಟ್ಟಬಲ್ಲೆವು.
ಈ ಶತಮಾನದ ಮಹಾಮಾರಿ ಕೋವಿಡ್‌ಗೆ ಕಾರಣವಾದ ಕರೋನ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು , ಜೀವಕೋಶ, ಅಂಗಾಂಶಗಳ ಅಧ್ಯಯನದಿಂದ ರೋಗಕ್ಕೆ ತಕ್ಕಮಟ್ಟಿನ ಪರಿಣಾಮಕಾರಿ ಲಸಿಕೆ ಕಂಡುಹಿಡಿದದ್ದು ಎಲ್ಲರಿಗೂ ತಿಳಿದೇ ಇದೆ. ನಮ್ಮದೇಹದಲ್ಲಿ ಅಂದಾಜು ನೂರು ಟ್ರಿಲಿಯನ್ ಜೀವಕೋಶಗಳನ್ನು ಅಕ್ಕಪಕ್ಕ ಜೋಡಿಸಿದರೆ ಭೂಮಿಯಿಂದ ಮಂಗಳ ಗ್ರಹಕ್ಕೆ ಹೋಗಿ ಬರುವ ದೂರಕ್ಕೆ ಸಮನಾಗಿರುತ್ತವೆಯಂತೆ .
ಜೀವಕೋಶಗಳು ಹಾನಿಯಾದರೆ ಲೈಸೋಸೋಮ್ ಗಳು ಜೀರ್ಣಿಸುತ್ತವೆ. ಅದಕ್ಕೇ ಅವುಗಳನ್ನು ಆತ್ಮಹತ್ಯಾ ಸಂಚಿಗಳು ಎನ್ನುವುದು ಮಾಡಿಕೊಳ್ಳುತ್ತವೆ. ನಮ್ಮ ಮೆದುಳಿನ ಜೀವಕೋಶಗಳು ನಿರ್ದಿಷ್ಟ ವಯಸ್ಸಿನ ನಂತರ ಬೆಳವಣಿಗೆಯನ್ನೇ ಮರೆತು ಬಿಡುತ್ತವೆ. ಬಹುಶಃ ಇದರಿಂದಲೇ ವಯಸ್ಸಾದಂತೆ ನಮ್ಮ ಅರಳು ಮರಳಿಗೆ ಕಾರಣವಾಗಿವೆ. ಕೆಲವು ಏಕಕೋಶೀಯ ಪ್ರೊಕ್ಯಾರಿಯಟ್ ಜೀವಕೋಶಗಳು ಬಿಸಿ ನೀರಿನಬುಗ್ಗೆಗಳಲ್ಲಿ ವಾಸಿಸುತ್ತವೆ. ಅಂದರೆ ಅವುಗಳ ದೇಹದ ರಚನೆ ಎಷ್ಟು ಗಟ್ಟಿಯಾಗಿರಬೇಡ ? ಪ್ಲನೇರಿಯ ಎಂಬ ಜೀವಿಯನ್ನು ಕತ್ತರಿಸಿದಾಗ ಹೊಸಜೀವಿಯಾಗಿ ರೂಪುಗೊಳ್ಳುವುದು ಅದರ ಪ್ರತಿ ಜೀವಕೋಶಕ್ಕೆ ...ಹಿಂದೆ ತಾನು ಹೇಗಿದ್ದೆ ಎಂಬ ನೆನಪಿನ ಶಕ್ತಿ ಇರುವುದರಿಂದಲೇ ಅಲ್ವೇ? ಮಾನವರಲ್ಲಿ ಕಂಡುಬರುವ ಕಾಂಡಕೋಶಗಳು ತಮ್ಮಷ್ಟಕ್ಕೆ ತಾವೇ ಪುನರುತ್ಪತ್ತಿ ಸಾಮರ್ಥ್ಯವನ್ನು ಪಡೆದಿವೆ. ಈ ಕೋಶಗಳಿಂದ ನಮ್ಮ ಯಾವ ಅಂಗವನ್ನಾದರೂ ರೂಪಿಸಬಹುದು.
ನಾವು ಹುಟ್ಟಿದಾಗಿನಿಂದ ಸಾಯುವವರೆಗೆ ನಿರಂತರವಾಗಿ ಯಾವುದೇ ಕ್ಷಣವೂ ವಿಶ್ರಾಂತಿ ತೆಗೆದುಕೊಳ್ಳದೇ ಮಿಡಿಯುವ ನಮ್ಮ ಹೃದಯದ ಸ್ನಾಯುಕೋಶಗಳ ಸಾಮರ್ಥ್ಯ ಯಾವ ಯಂತ್ರಕ್ಕೂ ಇರದು ಎನ್ನುವುದು ಅಷ್ಟೇ ವಿಸ್ಮಯಕಾರಿ ವಿಷಯ. ನಮ್ಮ ಮಿದುಳಿನ ಜೀವಕೋಶಗಳು ಸುಮಾರು 2.5 ಪೆಟಾಬೈಟ್‌ಗಳಷ್ಟು ಅಂದರೆ ೨.೫ ಮಿಲಿಯನ್ ಗಿಗಾಬೈಟ್‌ಗಳಷ್ಟು ಮಾಹಿತಿ ಸಂಗ್ರಹಿಸಬಲ್ಲುದು!!! ಇದನ್ನು ನೋಡಲು ನಮಗೆ ನಮ್ಮ ಅರ್ಧಾಯುಷ್ಯವೂ ಸಾಲದು!!!. adder's tongue fern (Ophioglossum reticulatum) ಎಂಬ ಜರಿ ಗಿಡದ ಜೀವಕೋಶದಲ್ಲಿ ೧೪೪೦ ವರ್ಣತಂತುಗಳಿವೆ ಎನ್ನುವುದೇ ಒಂದು ಅಚ್ಚರಿ!!
ಜೀವಕೋಶಗಳ ಪ್ರಪಂಚವೇ ಅದ್ಭುತ. ಅವು ನಮ್ಮ ಜೊತೆಗೆ ಒಂದೊಂದು ಸಲ ಮಾತನಾಡಿದ ಹಾಗೆ ಅನಿಸುತ್ತದೆ. ಪ್ರತಿದಿನ ಅವುಗಳು ಏನುಮಾಡುತ್ತವೆ ಅವುಗಳ ಬಗ್ಗೆ ಹುಡುಕಬೇಕೆನಿಸುತ್ತದೆ. ಮನುಷ್ಯನಂತೆ ನಡೆಯುವ ಜೀವಕೋಶಗಳು ಇರಬಹುದೇ? ಅವು ಪರಸ್ಪರ ಯಾವರೀತಿ ಸಂಭಾಷಿಸುತ್ತವೋ? ಅವುಗಳ ವಿಶ್ರಾಂತಿ ಕ್ರಮ ಹೇಗೋ? ಸಲ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯಾವರೀತಿ ಹೋರಾಡುತ್ತವೋ? ನಮಗೆ ಅನಾರೋಗ್ಯ ಉಂಟಾದಾಗ ಅದ್ಯಾವ ಬಗೆಯ ಸಂಜ್ಞೆಗಳನ್ನು ನೀಡುತ್ತವೆಯೋ? ಹೀಗೆ ನೂರಾರು ಕುತೂಹಲದ ಪ್ರಶೆಗಳು ನನ್ನಂತೆ ನಿಮ್ಮನ್ನೂ ಕಾಡುತ್ತಿರಬಹುದು. ಜೀವಕೋಶದ ಒಳಹೊಕ್ಕು ನೋಡಿದರೆ ಅದೆಂತಹ ರೋಚಕ ಜ್ಞಾನನಿಧಿ ದೊರೆಯಬಹುದೋ ಎಂಬ ಕಾತುರತೆ ನನ್ನದು ಕಾಲಗರ್ಭದಲ್ಲಿ ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಅದೆಷ್ಟು ಆಳದಲ್ಲಿ ಹೂತುಹೋಗಿದೆಯೋ? ಅದನ್ನು ಹೊರತೆಗೆಯುವಂತೆ ನಮ್ಮ ವಿದ್ಯಾರ್ಥಿಗಳನ್ನು ಪ್ರೇರೇಪಿಸೋಣ.
ಹೆಚ್ಚಿನ ವಿವರಗಳಿಗೆ : https://youtu.be/ooA0J6DWWTM?si=6Nxd_knQOCdzmP-e
TQ sir .. actually I think its not published. Super
ReplyDelete